ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಚಳಿಗೆ ಮನಸ್ಸು ಬಯಸೋದು ಈ ಬಜ್ಜಿ

|
Google Oneindia Kannada News

ಮಳೆ ಬರ್ತಾಯಿದೆ. ಬೆಳಿಗ್ಗೆಯಿಂದ ಚಳಿ ಇದೆ. ಈಗೊಂದು ಪ್ಲೇಟ್ ಬಿಸಿ ಬಿಸಿ ಮಿರ್ಚಿ ಬಜ್ಜಿ ಒಂದು ಕಪ್ ಚಹಾ ಇದ್ದರೆ ಅದರ ಮಜಾನೇ ಬೇರೆ. ಹೀಗಾಗಿ ಬೆಳಿಗ್ಗೆಯಿಂದಲೂ ಈ ಮಳೆ ಚಳಿಗೆ ಜನ ಮಿರ್ಚಿ ಬಜ್ಜಿ ಸ್ಟಾಲ್‌ಗಳಲ್ಲಿ ಮುಕ್ಕರಿಸಿದ್ದಾರೆ. ಯಾವ ಬಜ್ಜಿ ಸ್ಟಾಲ್‌ ಮುಂದೆ ಕಿವಿಗೊಟ್ಟರೂ 'ಅಣ್ಣಾ ಒಂದು ಪ್ಲೇಟ್ ಬಜ್ಜಿ ಕೊಡಣ್ಣ' ಅನ್ನೋ ಮಾತೇ ಕೇಳಿಬರುತ್ತಿದೆ. ವೆರಾಯಿಟಿ ಬಜ್ಜಿಗಳಿಗೆ ಬೇಡಿಕೆ ಇಂದು ಎಂದಿಗಿಂತ ಅಧಿಕವಾಗಿರೋದಂತು ಸುಳ್ಳಲ್ಲ.

ಬಜ್ಜಿ ಕರಿದು ತಿಂಡಿಗಳಲ್ಲಿ ನೆಚ್ಚಿನ ಖಾದ್ಯ. ಇದಕ್ಕೆ ಅಧಿಕ ಬೇಡಿಕೆ ಇದೆ. ಬಜ್ಜಿಯಲ್ಲೂ ನಾನಾ ಬಗೆಯ ಬಜ್ಜಿಗಳಿವೆ. ಜನರು ತಮ್ಮ ಇಷ್ಟಕ್ಕನುಗುಣವಾಗಿ ಬಜ್ಜಿಗಳನ್ನು ಖರೀದಿಸಿ ಆನಂದಿಸುತ್ತಾರೆ. ಕೆಲವರು ಮನೆಯಲ್ಲೇ ಮಾಡುವ ಕರಿದ ತಿಂಡಿಗಳನ್ನು ಸೇವಿಸುತ್ತಾರೆ. ಅಂದಹಾಗೆ ಬಜ್ಜಿಯಲ್ಲಿ ಮೆಣಸಿನಕಾಯಿಗೆ ಇರುವಷ್ಟು ಪ್ರಾಮುಖ್ಯತೆ ಉಳಿದ ಬಜ್ಜಿಗಳಿಗೆಲ್ಲ ಅಂದರೆ ತಪ್ಪಾಗಲ್ಲ. ಬಿಸಿ ಬಿಸಿ ಬಜ್ಜಿಯಲ್ಲಿ ಮೆಣಸಿನ ಖಾರ ನಾಲಿಗೆಗೆ ತಾಗಿದೆ ಅದ್ರಲ್ಲೇನೋ ಮಜಾ. ಎಷ್ಟು ತಿಂದರೂ ಅದು ಸಾಕೆನಿಸುವುದಿಲ್ಲ.

ಮಳೆಗಾಲಕ್ಕೂ ಮಜಬೂತು ಜಾಗ ಶಿವಮೊಗ್ಗದ ಶೆಟ್ಟರ ಗೋಲಿ ಬಜ್ಜಿ ಕಾರ್ನರ್ಮಳೆಗಾಲಕ್ಕೂ ಮಜಬೂತು ಜಾಗ ಶಿವಮೊಗ್ಗದ ಶೆಟ್ಟರ ಗೋಲಿ ಬಜ್ಜಿ ಕಾರ್ನರ್

ಹೆಚ್ಚು ಬೇಡಿಕೆಯ ಕರಿದ ತಿಂಡಿ

ಹೆಚ್ಚು ಬೇಡಿಕೆಯ ಕರಿದ ತಿಂಡಿ

ಮಳೆ ಬಂದರೆ, ಸಂಜೆ ಆದರೆ ಮೊದಲು ನೆನಪಿಗೆ ಬರೋದು ಅದು ಮೆಣಸಿನ ಕಾಯಿ ಬಜ್ಜಿ. ಬಹುತೇಕ ಜನ ಇದನ್ನು ತಿನ್ನಲು ಆಸೆ ಪಡುತ್ತಾರೆ. ಕೆಲವರು ದಿನಾ ಊಟದೊಂದಿಗೆ ಸೇವಿಸುವವರು ಇದ್ದಾರೆ. ಇತ್ತೀಚೆಗೆ ಎಷ್ಟೇ ಬಗೆಯ ಬಜ್ಜಿಗಳು ಮಾರಾಟಕ್ಕಿದ್ದರೂ ಮೆಣಸಿನ ಕಾಯಿ ಬಜ್ಜಿ ಮಾತ್ರ ತನ್ನ ಬೇಡಿಕೆಯನ್ನು ಕಡಿಮೆ ಮಾಡಿಸಿಕೊಂಡಿಲ್ಲ. ಎಲ್ಲಾ ಸಮಯಕ್ಕೂ ಮನಸ್ಸು ಬಯಸುವ ಬಜ್ಜಿ ಇದಾಗಿದೆ.

ನಾಲಿಗೆಗೆ ಸವಿ ನೀಡುವ ಬಜ್ಜಿ

ನಾಲಿಗೆಗೆ ಸವಿ ನೀಡುವ ಬಜ್ಜಿ

ಖಾರವನ್ನು ತಿನ್ನಲು ಇಷ್ಟಪಡದವರು ಬಹುತೇಕ ಈರುಳ್ಳಿ ಬೊಂಡಾಕ್ಕೆ ಮಾರು ಹೋಗುತ್ತಾರೆ. ಈರುಳ್ಳಿ ಕರಿದಾಗ ಸಿಗುವ ಸ್ವಾದವನ್ನು ಆನಂದಿಸಲು ಬಹುತೇಕರಿಗೆ ಇಷ್ಟವಾಗುತ್ತದೆ. ಹೀಗಾಗಿ ಈರುಳ್ಳಿ ಬೊಂಡಾ ಅಥವಾ ಬಜ್ಜಿ ಕೂಡ ಮಳೆ ಚಳಿಗಾಲದಲ್ಲಿ ತಿನ್ನಲು ಮನಸ್ಸಾಗುತ್ತದೆ. ಹೀಗಾಗಿ ಮೆಣಸಿಕಾಯಿಗೆ ಇರುವಷ್ಟು ಬೇಡಿಕೆ ಇದಕ್ಕೂ ಇದೆ.

ಸ್ವಾದಿಷ್ಟದ ಬಜ್ಜಿ

ಸ್ವಾದಿಷ್ಟದ ಬಜ್ಜಿ

ಸಾಮಾನ್ಯವಾಗಿ ಆಲೂಗಡ್ಡೆಯಲ್ಲಿ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಅನ್ನು ತಿನ್ನುವವರ ಸಂಖ್ಯೆ ಅಧಿಕ. ಆದರೆ ಮಳೆ ಚಳಿ ಇದ್ದಾಗ ಕಡಲೇ ಹಿಟ್ಟಿನಲ್ಲಿ ಆಲೂ ಸ್ಲೈಸ್‌ ಅನ್ನ ಅದ್ದಿ ಕರಿದ ಮಾಡುವ ಆಲೂ ಬಜ್ಜಿಯಲ್ಲಿರುವ ರುಚಿ ಮತ್ತೊಂದರಲಿಲ್ಲ. ರುಚಿಗೆ ತಕ್ಕಷ್ಟು ಖಾರ ಉಪ್ಪು ಇದ್ದರೆ ಸಾಕು ಈ ಆಲೂ ಬಜ್ಜಿ ತಿನ್ನಲು ತುಂಬಾನೇ ಟೇಸ್ಟ್. ಹೀಗಾಗಿ ಆಲೂಬಜ್ಜಿ ಕೂಡ ಜನರ ಅಚ್ಚುಮೆಚ್ಚಿನ ಕರದ ಖಾದ್ಯವಾಗಿದೆ.

ತರಕಾರಿ ಬಜ್ಜಿಗಳು ಯಾವವರು

ತರಕಾರಿ ಬಜ್ಜಿಗಳು ಯಾವವರು

ಸಾಮಾನ್ಯವಾಗಿ ಹಲವಾರು ಬಗೆಯ ಬಜ್ಜಿಗಳನ್ನು ತಯಾರಿಸಲಾಗುತ್ತದೆ. ಕ್ಯಾಪ್ಸಿಕಂ್ ಬಜ್ಜಿ, ಬಾಳೆಕಾಯಿ ಬಜ್ಜಿ, ಬದನೇಕಾಯಿ ಬಜ್ಜಿ, ಹೀರೇಕಾಯಿ ಬಜ್ಜಿ, ಹಲಸಿನ ಕಾಯಿ ಬಜ್ಜಿ, ಹಗಲಕಾಯಿ ಬಜ್ಜಿ ಹೀಗೆ ಹೇಳ್ತಾ ಹೋದರೆ ಒಂದು ದೊಡ್ಡ ಪಟ್ಟಿ ಮಾಡಬಹುದು. ಒಟ್ಟಾರೆಯಾಗಿ ಕಾಲ ಕಾಲಕ್ಕೆ ತಕ್ಕಂತೆ ವಿವಿಧ ತರಹದ ಬಜ್ಜಿಗಳನ್ನ ಮಾಡಲಾಗುತ್ತದೆ. ರುಚಿಗೆ ಆಸಕ್ತಿಗೆ ಅನುಗುಣವಾಗಿ ಜನ ಬಜ್ಜಿಗಳನ್ನು ಆನಂದಿಸುತ್ತಾರೆ. ನೀವು ಕೂಡ ಈ ಮಳಿಗೆ ಚಳಿಗೆ ಬಜ್ಜಿ ಬೊಂಡವನ್ನು ಆನಂದಿಸಿ.

English summary
Enjoy hot hot fried snacks bajji for rainy season. Know how many types of bajjis you can taste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X