ಇತಿಹಾಸದಲ್ಲಿ ಸ್ಥಾನ ಪಡೆದ ಭಾರತದ ಟಾಪ್ 5 ರಾಣಿಯರು ಇವರೇ... ಏನ್ ಮಾಡಿದ್ದಾರೆ ಗೊತ್ತಾ?
ಅನೇಕ ಭಾರತೀಯ ರಾಜರು ತಮ್ಮ ಶೌರ್ಯಕ್ಕಾಗಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಆದರೆ ಭಾರತದ ಇತಿಹಾಸದ ಮಟ್ಟಿಗೆ ಮಹಿಳೆಯರೂ ಕೂಡ ಪುರುಷರಿಗಿಂತ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇಂತಹ ಮಹಿಳೆಯರನ್ನು ಮೆಲುಕು ಹಾಕಿದರೆ ನಮಗೆ ಮೊದಲು ನೆನಪಿಗೆ ಬರುವುದು ಝಾನ್ಸಿ ರಾಣಿ ಲಕ್ಷ್ಮಿ ಬಾಯಿ. ಆದರೆ ದುರದೃಷ್ಟವಶಾತ್ ಅವರನ್ನು ಕೆಲವರು ಮಾತ್ರ ನೆನಪಿಸಿಕೊಳ್ಳುತ್ತಾರೆ. ನಮ್ಮ ಭಾರತೀಯ ಇತಿಹಾಸದಲ್ಲಿ ಅವರನ್ನು ಸರಿಗಟ್ಟುವ ಮತ್ತು ಕೆಲವೊಮ್ಮೆ ಅವರನ್ನು ಮೀರಿಸಿದ ಕೆಲವು ರಾಣಿಯರಿದ್ದಾರೆ. ಅವರ ಹೆಸರುಗಳು ಮತ್ತು ಇತಿಹಾಸವನ್ನು ತಿಳಿದೋ ತಿಳಿಯದೆಯೋ ಮಸುಕುಗೊಳಿಸಲಾಗಿದೆ. ಹಾಗಾದರೆ ಭಾರತೀಯ ಇತಿಹಾಸದ ವೀರ ರಾಣಿಯರ ಬಗ್ಗೆ ತಿಳಿಯೋಣ.

ರಾಣಿ ಅಬ್ಬಕ್ಕ
16 ನೇ ಶತಮಾನದ ಯೋಧ ರಾಣಿ ಅಬ್ಬಕ್ಕ ಅವರು ಹಿಂದೂ ಮಹಾಸಾಗರದ ಸಮೀಪವಿರುವ ಪ್ರದೇಶವನ್ನು ವಸಾಹತು ಮಾಡಲು ಪ್ರಾರಂಭಿಸಿದಾಗ ಪೋರ್ಚುಗೀಸರ ವಿರುದ್ಧ ವೀರಾವೇಶದಿಂದ ಹೋರಾಡಿದರು. ಅಬ್ಬಕ್ಕ ರಾಣಿ ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶ ವನ್ನಾಳಿದ ಚೌಟ ವಂಶಕ್ಕೆ ಸೇರಿದವರು. ಪೋರ್ಚುಗೀಸರು ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ನಾಲ್ಕು ದಶಕಗಳ ಕಾಲ ಅಬ್ಬಕ್ಕ ಅವರನ್ನು ಹಿಮ್ಮೆಟ್ಟಿಸಿದರು. ಅವರ ಈ ಧೈರ್ಯದಿಂದಾಗಿ ಅಭಯ ರಾಣಿ ಎಂದು ಕರೆಯಲಾಗಿದೆ. ಇವರು ವಸಾಹತುಶಾಹಿಗಳ ವಿರುದ್ಧ ಹೋರಾಡಿದ ಮೊದಲ ಧೈರ್ಯಶಾಲಿ ಭಾರತೀಯರಲ್ಲಿ ಒಬ್ಬರು. ಇವರು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತು ಕೂಡ ಆಗಿದ್ದರು.
ರಾಣಿ ಅಹಲ್ಯಾ ಬಾಯಿ ಹೋಳ್ಕರ್
ಅಹಮದ್‌ನಗರದ ಜಮ್‌ಕೆಟ್‌ನ ಚೊಂಡಿ ಗ್ರಾಮದಲ್ಲಿ ಜನಿಸಿದ ಅಹಲ್ಯಾಬಾಯಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು. ಆ ಕಾಲದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಎಷ್ಟು ಕಡಿಮೆ ಪ್ರಾಮುಖ್ಯತೆ ನೀಡಲಾಯಿತು ಎಂಬುದನ್ನು ಗಮನಿಸಿದರು. ಇವರು ಲೋಕದ ಕಲ್ಯಾಣಕ್ಕಾಗಿ ಹೋರಾಡಿದರು. ಅಹಲ್ಯಾ ಅಧಿಕಾರದ ಗದ್ದುಗೆ ಏರಿದ್ದನ್ನು ನೋಡಿದ ಯಾರೇ ಆಗಲಿ, ಆಕೆಯ ಪರಿಶ್ರಮವೇ ಆಕೆಯನ್ನು ರಾಣಿಯನ್ನಾಗಿ ಮಾಡಿತು ಎನ್ನುತ್ತಾರೆ. ರಾಜಮನೆತನದಲ್ಲಿ ಮದುವೆಯಾಗಿ ರಾಜಕುಮಾರನಿಗೆ ಜನ್ಮ ನೀಡಿದರೂ, ಅವಳು ಕೆಲವೇ ವರ್ಷಗಳಲ್ಲಿ ತನ್ನ ಪತಿ, ಮಾವ ಮತ್ತು ಮಗ ಎಲ್ಲರನ್ನೂ ಕಳೆದುಕೊಂಡರು.
ಅಹಲ್ಯಾ ಅವರು 11 ಡಿಸೆಂಬರ್ 1767 ರಂದು ಸಿಂಹಾಸನವನ್ನು ಏರಿದಾಗ ಮಾಲ್ವಾದಲ್ಲಿ ತಮ್ಮ ಜನರ ಜೀವನವನ್ನು ಸುಧಾರಿಸಲು ನಿರ್ಧರಿಸಿದರು. ತನ್ನ ಆಳ್ವಿಕೆಯ ಮೂಲಕ ಆಕೆ ರಾಜವಂಶವನ್ನು ಮತ್ತು ದೇಶದ ಜನರನ್ನು ರಕ್ಷಿಸಿ ದಾಳಿಗಳನ್ನು ಪ್ರತಿರೋಧಿಸಿದರು. ಮಾತ್ರವಲ್ಲದೆ ತನ್ನ ಸೈನ್ಯವನ್ನು ವಿಸ್ತರಿಸಿದರು. ಹೀಗೆ ಒಟ್ಟು ಮೂವತ್ತು ವರ್ಷಗಳ ಕಾಲ ಧೈತಿಗೆಡದೆ ಎದುರಾಳಿಯನ್ನು ಸೋಲಿಸುವ ಮೂಲಕ ರಾಜ್ಯವನ್ನು ಆದರ್ಶ ರೀತಿಯಲ್ಲಿ ಆಳಿದರು.

ರಾಣಿ ತಾರಾಬಾಯಿ ಭೋಸಲೆ
ತಾರಾಬಾಯಿ ಭೋಸಲೆ ಭಾರತದ ಮರಾಠ ಸಾಮ್ರಾಜ್ಯದ ರಾಜಪ್ರತಿನಿಧಿಯಾಗಿದ್ದರು. ತನ್ನ ಪತಿ ಮರಣದ ನಂತರ ಮರಾಠ ಪ್ರಾಂತ್ಯಗಳ ಮೊಘಲ್ ಆಕ್ರಮಣದ ವಿರುದ್ಧ ಪ್ರತಿರೋಧವನ್ನು ಜೀವಂತವಾಗಿರಿಸುವ ಪಾತ್ರಕ್ಕಾಗಿ ಅವರು ಮೆಚ್ಚುಗೆ ಪಡೆದಿದ್ದಾರೆ.
1700 ರಲ್ಲಿ ಮರಾಠಾ ಸಾಮ್ರಾಜ್ಯವನ್ನು ಉಳಿಸುವ ನಿರ್ಧಾರ ಮಾಡಿದ ಇವರು ತಮ್ಮ ಜನರಿಗಾಗಿ ಹೋರಾಟದಲ್ಲಿ ಎಂದಿಗೂ ಕದಲಲಿಲ್ಲ. ಹೀಗೆ ಭಾರತದ ಇತಿಹಾಸ ಪುಟಗಳಲ್ಲಿ ಅವರು ಅಚ್ಚಳಿಯದಂತೆ ಉಳಿದಿದ್ದಾರೆ.
ಸೇತು ಲಕ್ಷ್ಮಿ ಬಾಯಿ
ಸೇತು ಲಕ್ಷ್ಮಿ ಬಾಯಿ ಅವರನ್ನು ಮಹಿಳಾ ಹಕ್ಕುಗಳ ವಕೀಲೆ ಎಂದು ಕರೆಯಲಾಗುತ್ತದೆ. ಅವರು ಕೆಲಸ ಮಾಡುವ ಮಹಿಳೆಯರನ್ನು ಅಧ್ಯಯನ ಮಾಡಲು ಹೆಚ್ಚು ಪ್ರೋತ್ಸಾಹಿಸುತ್ತಿದ್ದರು. ಕಾಲೇಜಿಗೆ ಹೋಗುವ ಹುಡುಗಿಯರು ಅವನ ಅರಮನೆಯಲ್ಲಿ ಅವರೊಂದಿಗೆ ಚಹಾ ಸೇವಿಸುವಷ್ಟು ಆತ್ಮೀಯತೆಯನ್ನು ಅವರು ಹೊಂದಿದ್ದರು. ತನ್ನ ಆಳ್ವಿಕೆಯ ಉದ್ದಕ್ಕೂ, ಅವರು ಹೆಚ್ಚಿನ ಶಿಕ್ಷಣವನ್ನು ಮುಂದುವರಿಸಲು ಮಹಿಳೆಯರಿಗೆ ಉತ್ತೇಜನ ನೀಡಿದರು. ಅವರಿಗೆ ಸ್ಥಳೀಯ ಸ್ಥಾನಗಳಿಂದ ಸರ್ಕಾರಿ ಹುದ್ದೆಗಳಿಗೆ ಬಡ್ತಿ ನೀಡಲಾಯಿತು.
ಆ ಮೂಲಕ ಸರ್ಕಾರದ ನಿರ್ಧಾರಗಳಲ್ಲಿ ಮಹಿಳೆಯರಿಗೆ ಸಮಾನ ಪ್ರಾಮುಖ್ಯತೆಯನ್ನು ಖಾತ್ರಿಪಡಿಸಿದರು. 1927 ರಲ್ಲಿ ಅವರು ಮಹಿಳಾ ವಿದ್ಯಾರ್ಥಿಗಳಿಗೆ ಕಾನೂನು ಕೋರ್ಸ್‌ಗಳನ್ನು ತೆರೆದರು. ತಿರುವನಂತಪುರದ ಮಹಿಳಾ ಕಾಲೇಜಿನಲ್ಲಿ ಇತಿಹಾಸ, ನೈಸರ್ಗಿಕ ವಿಜ್ಞಾನ, ಭಾಷೆಗಳು ಮತ್ತು ಗಣಿತದ ತರಗತಿಗಳನ್ನು ಪ್ರಾರಂಭಿಸಲು ಆದೇಶಿಸಿದರು.

ರಾಣಿ ಚೆನ್ನಮ್ಮ
ರಾಣಿ ಚೆನ್ನಮ್ಮ... ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. ಪತಿ ಮತ್ತು ಮಗ ತೀರಿಕೊಂಡಾಗ ರಾಜವಂಶವನ್ನು ಮುಂದುವರಿಸಲು, ಬ್ರಿಟಿಷರ ಅಧಿಕಾರವನ್ನು ತಪ್ಪಿಸಲು ಉತ್ತರಾಧಿಕಾರಕ್ಕಾಗಿ ದತ್ತು ಮಗುವನ್ನು ತೆಗೆದುಕೊಂಡ ಮಹಿಳೆ.
1824 ರಲ್ಲಿ ಅವರು ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದರು. ಆದರೆ ಇದು ಈಸ್ಟ್ ಇಂಡಿಯಾ ಕಂಪನಿಯನ್ನು ಕೆರಳಿಸಿತು. ತನ್ನ ಸಾಮ್ರಾಜ್ಯದ ಕಿತ್ತೂರು ತನ್ನ ರಾಜ ಸ್ಥಾನಮಾನವನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಚೆನ್ನಮ್ಮ ಬ್ರಿಟಿಷರಿಗೆ ಸವಾಲು ಹಾಕಿದಳು. ಬ್ರಿಟಿಷರು 21 ಅಕ್ಟೋಬರ್ 1824 ರಂದು 20,000 ಪುರುಷರು ಮತ್ತು 400 ಬಂದೂಕುಗಳೊಂದಿಗೆ ದಾಳಿ ಮಾಡಿದರು. ಒಮ್ಮೆ ಬ್ರಿಟಿಷರೊಂದಿಗೆ ಧೈರ್ಯಗುಂದದೆ ಹೋರಾಡಿದ ಅವಳು, ತನ್ನ ಎರಡನೇ ಪ್ರಯತ್ನದಲ್ಲಿ ವಿಫಲವಾಗಿ ಸೆರೆಸಿಕ್ಕು ಬೈಲಹೊಂಗಲ ಕೋಟೆಯಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದರು.
ಇವರಂತೆ ಇನ್ನೂ ಹಲವಾರು ರಾಣಿಯರು ಭಾರತದ ಇತಿಹಾಸದ ಪುಟ್ಟದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇವರನ್ನು ನೆನಪಿಸಿಕೊಳ್ಳುವುದು, ಇವರ ಸಾಹಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications