• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುವಿನ ಮಹತ್ವದ ಕುರಿತು ಆಧ್ಯಾತ್ಮಿಕ ಚಿಂತಕರು ಹೇಳುವುದೇನು?

|

ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಇವತ್ತಿನ ಮಟ್ಟಿಗೆ ಅಕ್ಷರ ಕಲಿಸಿ ಬದುಕಿಗೆ ದಾರಿ ತೋರಿಸುವ ಶಿಕ್ಷಕರೇ ನಮ್ಮ ಗುರುಗಳು. ಅಷ್ಟೇ ಅಲ್ಲ, ನಿಸ್ವಾರ್ಥದಿಂದ ತನ್ನ ಶಿಷ್ಯ ಉನ್ನತಿ ಕಾಣುವುದನ್ನು ನೋಡಿ ಸಂತಸಪಡುವ ಏಕೈಕ ಜೀವಗಳಿದ್ದರೆ ಅದು ಶಿಕ್ಷಕರು ಮಾತ್ರ.

ನಿನ್ನೆ ಮೊನ್ನೆ ಓದಿದ ಕಾಲೇಜಿನ ಪ್ರೊಫೆಸರ್ ಬಹುಶಃ ಕೆಲವೊಮ್ಮೆ ಮರೆತು ಹೋಗಬಹುದು. ಆದರೆ ಪ್ರಾಥಮಿಕ ಶಾಲೆಯಲ್ಲಿ ಅಆಇಈ, ಎಬಿಸಿಡಿ ಕಲಿಸಿದ ಶಿಕ್ಷಕರನ್ನು ನಾವ್ಯಾರೂ ಅಷ್ಟು ಸುಲಭವಾಗಿ ಮರೆಯಲಾರೆವು. ಶಿಕ್ಷಕರ ಬಗೆಗಿನ ಗೌರವವೇ ನಮ್ಮನ್ನು ವಿದ್ಯೆ ಕಲಿಕೆಯಲ್ಲಿ ಮುಂದಡಿಯಿಡಲು ದಾರಿ ತೋರಿಸುತ್ತದೆ.

ಶಿಕ್ಷಕರ ದಿನಾಚರಣೆ ವಿಶೇಷ: "ಗುರುವಿನ ಗುಲಾಮನಾಗುವ ತನಕ.."

ಗುರುವಿನ ಮಾರ್ಗದರ್ಶನ ಅಗತ್ಯ

ನಮ್ಮ ಗುರುಗಳು ಅಕ್ಷರ ಕಲಿಸಿದ ಶಿಕ್ಷಕರು ಆಗಿದ್ದರೂ ಬದುಕಿನ ಪಯಣದಲ್ಲಿ ಬೇರೆ ಬೇರೆ ವಿಚಾರಗಳಿಗೆ ನಮಗೆ ಗುರುಗಳು ಬೇಕಾಗುತ್ತದೆ. ಇಂದು ನಾವು ಅಭ್ಯಸಿಸುತ್ತಿರುವ ಯಾವುದೇ ವಿಷಯವಾಗಿರಲಿ ಆ ವಿಷಯಗಳ ಬಗ್ಗೆ ಪರಿಪೂರ್ಣವಾಗಿ ಅರಿತುಕೊಳ್ಳಬೇಕಾದರೆ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದ್ದೇ ಇದೆ. ಹಿಂದಿನ ಕಾಲದಲ್ಲಿ ಗುರುಕುಲಗಳಿದ್ದವು. ಅಲ್ಲಿ ಗುರುಗಳೇ ಸಕಲ ವಿದ್ಯೆಗಳನ್ನು ತನ್ನ ಶಿಷ್ಯಂದಿರಿಗೆ ಧಾರೆ ಎರೆಯುತ್ತಾ ಶಿಷ್ಯರನ್ನು ಸಕಲ ರೀತಿಯಲ್ಲಿ ವಿದ್ಯಾಪಾರಂಗತರನ್ನಾಗಿ ಮಾಡುತ್ತಿದ್ದರು. ಶಿಷ್ಯರು ಗುರುಗಳ ಸೇವೆ ಮಾಡುತ್ತಾ ವಿದ್ಯೆಗಳನ್ನು ಕಲಿಯುತ್ತಿದ್ದರು.

ನಮಗೆ ಯೋಗ್ಯ ಗುರು ಏಕೆ ಬೇಕು?

ಆಧ್ಯಾತ್ಮಿಕ ವಿಚಾರದಲ್ಲಿ ನಮಗೆ ಯೋಗ್ಯ ಗುರು ಏಕೆ ಬೇಕು? ಗುರುವಿನಿಂದ ನಮಗ್ಯಾವ ರೀತಿಯ ಉಪಯೋಗವಿದೆ ಎಂಬುದಕ್ಕೆ ಉತ್ತರವಾಗಿ ಸ್ವಾಮಿ ವಿವೇಕಾನಂದರು ಹೀಗೆ ವಿವರಿಸಿದ್ದಾರೆ... ಪ್ರತಿಯೊಂದು ಜೀವಿಯೂ ಅಂತಿಮವಾಗಿ ಪರಿಪೂರ್ಣತೆ ಪಡೆಯಲೇಬೇಕು. ನಾವು ಈಗ ಏನಾಗಿದ್ದೇವೆಯೋ ಅದಕ್ಕೆ ನಮ್ಮ ಹಿಂದಿನ ಕರ್ಮಗಳು ಹಾಗೂ ಆಲೋಚನೆಗಳೇ ಕಾರಣ. ನಾಳೆ ಏನಾಗುವೆವೋ ಅದಕ್ಕೆ ನಮಗೆ ಯೋಗ್ಯ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದೆಲ್ಲದರ ನಡುವೆ ನಮ್ಮೆಲ್ಲ ಕಾರ್ಯ ಸಾಧನೆಗಾಗಿ ನಮಗೊಬ್ಬ ಗುರು ಬೇಕೇ ಬೇಕು. ಇಂದು ನಾವು ಅಭ್ಯಸಿಸುತ್ತಿರುವ ಯಾವುದೇ ವಿಷಯವಾಗಿರಲಿ ಆ ವಿಷಯಗಳ ಬಗ್ಗೆ ಪರಿಪೂರ್ಣವಾಗಿ ಅರಿತುಕೊಳ್ಳಬೇಕಾದರೆ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದ್ದೇ ಇರುತ್ತದೆ.

"ಶಿಕ್ಷಕರ ತವರೂರು" ಬೆಳಗಾವಿಯ ಈ ಇಂಚಲ ಗ್ರಾಮ

ಗುರುಗಳಿಂದ ಶಿಷ್ಯರಿಗೆ ವಿದ್ಯಾದಾನ

ಹಿಂದಿನ ಕಾಲದಲ್ಲಿ ಗುರುಕುಲಗಳಿದ್ದವು. ಅಲ್ಲಿ ಗುರುಗಳೇ ಸಕಲ ವಿದ್ಯೆಗಳನ್ನು ತನ್ನ ಶಿಷ್ಯಂದಿರಿಗೆ ಧಾರೆ ಎರೆಯುತ್ತಾ ಶಿಷ್ಯರನ್ನು ಸಕಲ ರೀತಿಯಲ್ಲಿ ವಿದ್ಯಾಪಾರಂಗತರನ್ನಾಗಿ ಮಾಡುತ್ತಿದ್ದರು. ಶಿಷ್ಯರು ಗುರುಗಳ ಸೇವೆ ಮಾಡುತ್ತಾ ವಿದ್ಯೆಗಳನ್ನು ಕಲಿಯುತ್ತಿದ್ದರು. ಬಹುಪಾಲು ಜನರಿಗೆ ಅನ್ಯರ ಸಹಾಯ ಅತ್ಯವಶ್ಯಕ. ಆ ಸಹಾಯ ಒದಗಿದಾಗ ಜೀವನದ ಉತ್ತಮ ಶಕ್ತಿಗಳು, ಸಾಧ್ಯತೆಗಳು ಬಹುಬೇಗ ವೃದ್ಧಿಯಾಗುತ್ತವೆ. ಅಷ್ಟೇ ಅಲ್ಲ. ಆಧ್ಯಾತ್ಮಿಕ ಜೀವನ ಜಾಗೃತವಾಗುವುದು. ಬೆಳವಣಿಗೆ ಚುರುಕಾಗುತ್ತದೆ. ಪರಿಪೂರ್ಣ ಜೀವನ ಪ್ರಾಪ್ತಿಯಾಗುತ್ತದೆ. ಬಹುಶಃ ಇಂತಹ ಉತ್ತೇಜಕ ಶಕ್ತಿಯು ಗ್ರಂಥಗಳ ಓದುವುದರಿಂದ ದೊರಕಲಾರದು. ಅದು ಒಂದು ಜೀವಿಯಿಂದ ಮತ್ತೊಂದು ಜೀವಿಗೆ ದೊರಕಬೇಕಷ್ಟೇ. ಯಾರಿಂದ ಇಂತಹ ಅದ್ಭುತ ಉತ್ತೇಜನ ಬರುವುದೋ ಅವನೇ ಗುರು. ಯಾರಿಗೆ ಇದು ನೀಡಲ್ಪಡುವುದೋ ಅವನೇ ಶಿಷ್ಯ.

ಎಲ್ಲ ಸಂಬಂಧಗಳನ್ನು ಮೀರಿದ ಸಂಬಂಧ

ಇಂತಹದೊಂದು ಸಂಬಂಧ ಎಲ್ಲ ಸಂಬಂಧಗಳಿಗೂ ಮಿಗಿಲಾದದ್ದು. ಶಿಷ್ಯನಿಗೆ ಅದ್ಭುತ ಉತ್ತೇಜನ ಶಕ್ತಿಯನ್ನು ಧಾರೆ ಎರೆಯುವ ಗುರುವಿಗೆ ಆ ಶಕ್ತಿಯಿರಬೇಕು. ಹಾಗೆಯೇ ಅದನ್ನು ಸ್ವೀಕರಿಸುವ ಶಿಷ್ಯ ಯೋಗ್ಯನಾಗಿರಬೇಕು. ಇದರೆಡು ಸರಿಯಿದ್ದರೆ ಒಂದೊಳ್ಳೆಯ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ. 'ಆಶ್ವರ್ಯೋ ವಕ್ತಾ ಕುಶಲೋ ಅಸ್ಯಲಬ್ದಾ' ಎನ್ನುವಂತೆ ಗುರುವು ಅದ್ಭುತ ವ್ಯಕ್ತಿಯಾಗಿರಬೇಕು. ಶಿಷ್ಯನು ಜಾಣನಾಗಿರಬೇಕು. ಇಬ್ಬರೂ ಅದ್ಭುತ ವ್ಯಕ್ತಿಗಳಾದಾಗ ಮಾತ್ರ ಅಸಾಧಾರಣ ಆಧ್ಯಾತ್ಮಿಕ ಜಾಗೃತಿ ಉಂಟಾಗುತ್ತದೆ. ಇಲ್ಲದಿದ್ದರೆ ಶಿಷ್ಯ ತನ್ನಲ್ಲಿ ಏಳುವ ತಾತ್ಕಾಲಿಕ ಉದ್ವೇಗವನ್ನು ನಿಜವಾದ ಅಧ್ಯಾತ್ಮಿಕ ಹಂಬಲ ಎಂದು ತಪ್ಪು ತಿಳಿಯಬಹುದು. ಅಷ್ಟೇ ಅಲ್ಲ ಅದನ್ನು ನಮ್ಮ ಜೀವನದಲ್ಲಿ ಪರೀಕ್ಷಿಸಿಕೊಳ್ಳಬಹುದು. ಬಹಳಷ್ಟು ಸಲ ನಮ್ಮ ಜೀವನದಲ್ಲಿ ಹಲವು ರೀತಿಯಲ್ಲಿ ಆಘಾತ ಉಂಟಾಗಬಹುದು. ಪ್ರಪಂಚ ನಮ್ಮ ಕೈಗಳಿಂದ ನುಸುಳಿ ಹೋದಂತೆ ಭಾಸವಾಗಬಹುದು. ಇನ್ನೇನೋ ಕೆಲವು ರೀತಿಯ ಕ್ಷಣಿಕ ಉದ್ವೇಗ ಏಳಬಹುದು. ಈ ರೀತಿ ಆದಾಗ ನಿಷ್ಕಲ್ಮಷವಾದ ಅಧ್ಯಾತ್ಮಿಕ ದಾಹ ಪ್ರಾಪ್ತವಾಗುವುದಿಲ್ಲ. ಈ ಸಂದರ್ಭ ಗುರುವಿನ ಸಹಾಯ ಬೇಕಾಗುತ್ತದೆ.

ಯೋಗ್ಯ ಗುರು ಸಿಗದಿದ್ದರೆ ಅಪಾಯ ನಿಶ್ಚಿತ

ಕೆಲವೊಮ್ಮೆ ಯೋಗ್ಯ ಗುರು ದೊರೆಯದೇ ಹೋದಾಗ ಹಲವು ರೀತಿಯ ಅಪಾಯಗಳು ಎದುರಾಗುತ್ತವೆ. ಅಜ್ಞಾನದಲ್ಲಿ ಮುಳುಗಿ ಹೋದ ಗುರುಗಳು ಅಹಂಕಾರದಿಂದ ಉನ್ಮಾದರಾಗಿ ತಾವೇ ಸರ್ವಜ್ಞರೆಂಬಂತೆ ವರ್ತಿಸುತ್ತಾರೆ. ಜತೆಗೆ ಇತರರ ಜವಾಬ್ದಾರಿಯನ್ನೂ ತಾವೇ ಸ್ವೀಕರಿಸುತ್ತಾರೆ. ಆಗ ಕುರುಡ ಕುರುಡನಿಗೆ ಮಾರ್ಗದರ್ಶಕನಾಗಿ ಇಬ್ಬರೂ ಹಳ್ಳಕ್ಕೆ ಬಿದ್ದಂತಾಗುತ್ತದೆ. ತಾವೇ ಅರಿತವರೆಂಬಂತೆ ಅಹಂಪಡುತ್ತಾ ಗುರುವಾಗಲು ಇಚ್ಛೆ ಪಡುತ್ತಾ ಮುನ್ನಡೆದರೆ ಅವರಿಂದ ಶಿಷ್ಯರಿಗೆ ಅದೆಂತಹ ವಿದ್ಯೆ ದೊರೆಯಬಹುದು? ಶಿಷ್ಯರೂ ಗುರುವಿನ ಮಾರ್ಗ ಹಿಡಿಯಬಹುದು. ಹಾಗಾಗದಂತೆ ನೋಡಿಕೊಳ್ಳಬೇಕಾದರೆ ನಮಗೊಬ್ಬ ಯೋಗ್ಯ ಗುರು ಬೇಕಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

English summary
What do spiritual thinkers say about the importance of the Guru, here is their words...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X