ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ಉಳಿತಾಯ; ಎಚ್‌ಆರ್‌ಎ, ಆರೋಗ್ಯ ವಿಮೆ ಮೂಲಕ ಲಕ್ಷ ರೂ. ಉಳಿಸಿ; ಹೇಗೆ ತಿಳಿಯಿರಿ

|
Google Oneindia Kannada News

ವಾರ್ಷಿಕ ಆದಾಯವು 5 ಲಕ್ಷಗಿಂತ ಹೆಚ್ಚಿನ ಗಳಿಕೆ ಇದ್ದರೆ ಆದಾಯ ತೆರಿಗೆ ಇಲಾಖೆಯು ಕಡ್ಡಾಯವಾಗಿ ಐಟಿಆರ್ ಇ-ರಿಟರ್ನ್ ಮಾಡಲು ಸೂಚಿಸಿದೆ ಮತ್ತು 5ಲಕ್ಷಗಿಂತ ಕಡಿಮೆ ಆದಾಯವಿದ್ದರು ತೆರಿಗೆ ಇಲಾಖೆಗೆ ಐಟಿಆರ್ ಸಲ್ಲಿಸಬೇಕು. ಹೀಗಿರುವುವಾಗ, ನಾವು ಆದಾಯ ತರಿಗೆ ಕಟ್ಟುವ ಮೊದಲು ಕೆಲವು ವಿನಾಯತಿ ಪಡೆದಕೊಳ್ಳಬಹುದು ಇಂದು ಉತ್ತಮ ಯೋಜನೆಯ ಮೂಲಕ ಸಂಬಳ ಪಡೆಯುವ ಜನರು ವಾರ್ಷಿಕವಾಗಿ ಲಕ್ಷಾಂತರ ರೂ.ಯ ಕಟ್ಟುವ ತೆರಿಗೆಯನ್ನು ಉಳಿಸಬಹುದು.

ಆದಾಯ ತೆರಿಗೆಯ ಹಲವು ನಿಯಮಗಳಲ್ಲಿ ತೆರಿಗೆ ಕಡಿತದ ಸೌಲಭ್ಯವಿದೆ. ಇವುಗಳಲ್ಲಿ ಸೆಕ್ಷನ್ 80ಸಿ ಉದ್ಯೋಗಿಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಎಚ್‌ಆರ್‌ಎ, ಎನ್‌ಪಿಎಸ್ ಮತ್ತು ಆರೋಗ್ಯ ವಿಮೆ ಮೂಲಕ ನೀವು 2 ಲಕ್ಷಕ್ಕಿಂತ ಹೆಚ್ಚು ತೆರಿಗೆ ಉಳಿಸಬಹುದು. ಹೌದು ತೆರಿಗೆ ಉಳಿತಾಯ ಸಲಹೆಗಳು ಏನೆಂದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರತಿ ವರ್ಷವು ಕೊನೆಯ ದಿನಾಂಕ ಜುಲೈ 31ರಂದು ಇರುತ್ತದೆ ಆದರೆ ನೀವು ತೆರಿಗೆ ಕಟ್ಟುವುದು ನಿಮಗೆ ಕಡ್ಡಾಯವಿದೆ ಎಂದಾದರೆ ನೀವು ನಿಮ್ಮ ತೆರಿಗೆಯನ್ನು ಮುಂಚಿತವಾಗಿ ಸಲ್ಲಿಸಿಸುವುದು ಒಳಿತು.

PF Updates; ಪಿಎಫ್ ಖಾತೆಗೆ 8.1 % ದರದಲ್ಲಿ ಬಡ್ಡಿ ದರ ಯಾವಾಗ ಜಮಾ?PF Updates; ಪಿಎಫ್ ಖಾತೆಗೆ 8.1 % ದರದಲ್ಲಿ ಬಡ್ಡಿ ದರ ಯಾವಾಗ ಜಮಾ?

ಸಾಮಾನ್ಯವಾಗಿ ಜನರು ತಮ್ಮ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಎಂದು ಹೇಳುತ್ತಾರೆ. ಆದರೂ ಅವರು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇ-ರಿಟರ್ನ್ ಸಲ್ಲಿಸುವ ಕೊನೆಯಲ್ಲಿ ಜನರು ತೆರಿಗೆ ಉಳಿಸಲು ಕುಶಲತೆಯನ್ನು ಮಾಡುತ್ತಾರೆ. ಕೆಲವು ಜನರು ಅದನ್ನು ಮುಂಚಿತವಾಗಿ ಲೆಕ್ಕ ಹಾಕಿದರೂ. ನೀವು ತೆರಿಗೆಯನ್ನು ಉಳಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ನಿಮಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಸಾಬೀತುಪಡಿಸಬಹುದು. ಎಚ್‌ಆರ್‌ಎ, ಎನ್‌ಪಿಎಸ್ ಮತ್ತು ಆರೋಗ್ಯ ವಿಮೆ ಮೂಲಕ ನೀವು 2 ಲಕ್ಷಕ್ಕಿಂತ ಹೆಚ್ಚು ತೆರಿಗೆಯನ್ನು ಉಳಿಸಬಹುದು ಅದು ಹೇಗೆ ಎಂದು ನೀವು ಅರಿಯಬಹುದು.

ಬಾಡಿಗೆಯ ಹಣ ತೆರಿಗೆ ಮುಕ್ತ

ಬಾಡಿಗೆಯ ಹಣ ತೆರಿಗೆ ಮುಕ್ತ

ನೀವು ನಿಮ್ಮ ಅಜ್ಜನ ಮನೆಯಲ್ಲಿ ನಿಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದರೆ. ನೀವು ಬಾಡಿಗೆ ಪಾವತಿಸುವುದಿಲ್ಲ. ಆದರೆ ನೀವು ನೀವು ಅಜ್ಜನಿಗೆ ತಿಂಗಳಿಗೆ 43,000 ರೂ. ಬಾಡಿಗೆ ಪಾವತಿಸಿದರೆ ಅಥವಾ ನೀವು ಬಾಡಿಗೆ ಹಣ ನೀಡುತ್ತಿದ್ದರೆ ಈ ಹಣ ಸಂಪೂರ್ಣ ಎಚ್‌ಆರ್‍ಎ ತೆರಿಗೆ ಮುಕ್ತವಾಗುತ್ತದೆ. ಇದರಿಂದ ವಾರ್ಷಿಕವಾಗಿ ನಿಮಗೆ 1.34 ಲಕ್ಷ ರೂಪಾಯಿ ಉಳಿತಾಯವಾಗಬಹುದು. ಮತ್ತೊಂದೆಡೆ, ನಿಮ್ಮ ಅಜ್ಜ ಶೇ.30 ಸ್ಟ್ಯಾಂಡರ್ಡ್ ಡಿಡಕ್ಷನ್ ನಂತರ ಬಾಡಿಗೆಗೆ ಪಡೆದ 5.16 ಲಕ್ಷ ರೂ.ಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಅವರು ಎನ್‌ಪಿಎಸ್‌ ಅಡಿಯಲ್ಲಿ ವಿನಾಯಿತಿ ಪಡೆಯುತ್ತಾರೆ.

ಮನೆ ಬಾಡಿಗೆ ಭತ್ಯೆ ಅಂದರೆ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡುತ್ತವೆ. ಇದು ನಿಮ್ಮ ಮೂಲ ವೇತನದ 40-50%ವರೆಗೆ ಇರುತ್ತದೆ. ನೀವು ಐಟಿಆರ್ ಸಲ್ಲಿಸಿದಾಗ ಮನೆ ಬಾಡಿಗೆ ಭತ್ಯೆಯ ಮೊತ್ತದ ಮೇಲೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತೀರಿ. ನಿಮ್ಮ ಕಂಪನಿಯು ಮನೆ ಬಾಡಿಗೆ ಭತ್ಯೆಯನ್ನು ನೀಡದಿದ್ದರೆ ಖಂಡಿತವಾಗಿಯೂ ಕಂಪನಿಯ ಎಚ್‌ಆರ್‍‌ ಜೊತೆ ಮಾತನಾಡಿ, ಇದರಿಂದ ನೀವು ತೆರಿಗೆ ಉಳಿಸಬಹುದು.

NPSನಲ್ಲಿ ತೆರಿಗೆ ಕಟ್ಟಲು ರಿಯಾಯಿತಿ

NPSನಲ್ಲಿ ತೆರಿಗೆ ಕಟ್ಟಲು ರಿಯಾಯಿತಿ

ಸೆಕ್ಷನ್ 80CCD ಅಡಿಯಲ್ಲಿ, ಎನ್‌ಪಿಎಸ್‌ನಲ್ಲಿ ಇರಿಸಲಾಗಿರುವ ಮೂಲ ವೇತನದ 10 ಪ್ರತಿಶತದವರೆಗೆ ತೆರಿಗೆ ಮುಕ್ತವಾಗಿದೆ. ಕಂಪನಿಯು ಎನ್‌ಪಿಎಸ್‌ನಲ್ಲಿ ರೂ 7,169 ಅಥವಾ ಮೂಲ ವೇತನದ 10 ಪ್ರತಿ ತಿಂಗಳು ಹಾಕುತ್ತದೆ. ಇದರ ತೆರಿಗೆ ಸುಮಾರು 27,000 ರೂ. ಇದೆ. ಆದರೆ ಎನ್‌ಇಎಸ್‌ನಲ್ಲಿ 50,000ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು 15,600 ರೂಪಾಯಿಗಳನ್ನು ಸುಲಭವಾಗಿ ಉಳಿಸಬಹುದು.

ತೆರಿಗೆ ಮುಕ್ತ ಸೌಲಭ್ಯಗಳ ಲಾಭ

ತೆರಿಗೆ ಮುಕ್ತ ಸೌಲಭ್ಯಗಳ ಲಾಭ

ಕಂಪನಿಯು ಒದಗಿಸುವ ಸೌಲಭ್ಯಗಳನ್ನು ತೆರಿಗೆ ಮುಕ್ತವಾಗಿಯೂ ಬಳಸಬಹುದು. ಆಹಾರ ಕೂಪನ್‌ಗಳು, LTA ಮತ್ತು ಗ್ಯಾಜೆಟ್ ಭತ್ಯೆಗಳಂತೆ, ಈ ಎಲ್ಲಾ ವೆಚ್ಚಗಳನ್ನು ಮನೆ ತೆರಿಗೆ ವಿನಾಯಿತಿಯಿಂದ ಕೆಲಸದಲ್ಲಿ ಸೇರಿಸಬಹುದು. ನೀವು ರೂ 22,000 ಆಹಾರ ಕೂಪನ್, ರೂ 60,000 ರ ಎಲ್ಟಿಎ ಮತ್ತು ರೂ 60,000 ಗ್ಯಾಜೆಟ್ ಭತ್ಯೆಯನ್ನು ಪಡೆದರೆ, ನೀವು ವಾರ್ಷಿಕ ತೆರಿಗೆಯಲ್ಲಿ ರೂ 42,500 ವರೆಗೆ ಸುಲಭವಾಗಿ ಉಳಿಸಬಹುದು.

ರಜೆಯ ಪ್ರಯಾಣ ಭತ್ಯೆ ಹಾಗೂ ತೆರಿಗೆ

ರಜೆಯ ಪ್ರಯಾಣ ಭತ್ಯೆ ಹಾಗೂ ತೆರಿಗೆ

ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ರಜೆಯ ಪ್ರಯಾಣ ಭತ್ಯೆಯನ್ನು ನೀಡುತ್ತವೆ. ಐಟಿಆರ್ ಸಲ್ಲಿಸುವಾಗ ನೀವು ಇದರ ಲಾಭವನ್ನು ಪಡೆಯಬಹುದು. ಇದರ ಅಡಿಯಲ್ಲಿ ನಿಮಗೆ ಎಲ್ಲೋ ಹೋಗಲು ಭತ್ಯೆ ನೀಡಲಾಗುತ್ತದೆ. ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಲಾಂಗ್ ಟೂರ್ ಹೋಗಬಹುದು. ಈ ಪ್ರವಾಸದ ವೆಚ್ಚದಲ್ಲಿ ನೀವು ನಿರ್ದಿಷ್ಟ ಮಿತಿಯವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ಈ ಮಿತಿಯು ನಿಮ್ಮ ರಜೆಯ ಪ್ರಯಾಣ ಭತ್ಯೆಯಷ್ಟಿರಬಹುದು. ಆದ್ದರಿಂದ ಈಗ ನೀವು ಪ್ರಯಾಣಿಸಲು ಯೋಜಿಸಬೇಕು, ಆದರೆ ಮೊದಲು ಎಚ್‌ಆರ್ ಅವರೊಂದಿಗೆ ಮಾತನಾಡಿ ಮತ್ತು ನಿಮ್ಮ ಸಂಬಳದಲ್ಲಿ ರಜೆಯ ಪ್ರಯಾಣ ಭತ್ಯೆಯನ್ನು ಸೇರಿಸಬೇಕು.

English summary
A few exemptions can be availed before paying income tax Today, through a good scheme, salaried people can save lakhs of rupees in tax annually,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X