ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆ ದಿನಾಂಕ ರಿವೀಲ್-ದರ, ವಿಶೇಷತೆ ತಿಳಿಯಿರಿ
Tata's new electric car: ಆಟೋಮೊಬೈಲ್ ಕ್ಷೇತ್ರದಲ್ಲಿ ಬದಲಾವಣೆಯ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ದೇಶದ ದೈತ್ಯ ಕಂಪನಿಯಾದ ಟಾಟಾ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕೈಗೆಟಕುವ ದರದಲ್ಲಿ ಹೊಸ ಹೊಸ ಮಾದರಿಯ ಕಾರು, ಬೈಕ್‌ಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಹಾಗೆಯೇ ಇದೀಗ ಮತ್ತೊಂದು ಕಾರು ಬಿಡುಗಡೆಗೆ ದಿನಾಂಕ ರಿವೀಲ್ ಮಾಡಿದೆ. ಹಾಗಾದರೆ ಇದರ ದರ, ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದೇಶದ ದೈತ್ಯ ಕಂಪನಿ ಆಗಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಕರ್ವ್ ಎಲೆಕ್ಟ್ರಿಕ್ ಆವೃತ್ತಿಯ ಕಾರನ್ನು ಮುಂದಿನ ತಿಂಗಳು ಅಂದರೆ, ಅಗಸ್ಟ್ 7ರಂದು ಅಧಿಕೃತವಾಗಿ ಬಿಡುಗಡೆ ಮಾಡಲು ಮುಂದಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ, ಟಿಗೋರ್ ಇವಿ, ಟಿಯಾಗೋ ಇವಿ ಮತ್ತು ಪಂಚ್ ಇವಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಕಂಪನಿ ಇದೀಗ ಕರ್ವ್ ಇವಿ ಕಾರನ್ನು ಮಾರುಕಟ್ಟೆಗೆ ತರುತ್ತಿದೆ.

ಟಾಟಾದ ಕರ್ವ್ ಇವಿ ಕಾರು ಮಾದರಿಯು ನೆಕ್ಸಾನ್ ಉತ್ಪಾದನಾ ಪ್ಲ್ಯಾಟ್ ಫಾರ್ಮ್‌ನಲ್ಲಿ ನಿರ್ಮಾಣ ಆಗುತ್ತಿದ್ದು, ಇದು ವಿನೂತನ ಸೌಲಭ್ಯಗಳೊಂದಿಗೆ ಕೂಪೆ ಎಸ್‌ಯುವಿ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಇದು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾತ್ರ ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲೂ ಕೂಡ ಬಿಡುಗಡೆಯಾಗುತ್ತಿದೆ.
ಇದರಲ್ಲಿ ಸದ್ಯ ಎಲೆಕ್ಟ್ರಿಕ್ ಆವೃತ್ತಿ ಮಾತ್ರ ಬಿಡುಗಡೆ ಆಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು 2025ರ ಮಧ್ಯಂತರದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಇದು ನೆಕ್ಸಾನ್ ಇವಿಗಿಂತಲೂ ಹೆಚ್ಚಿನ ಮಟ್ಟದ ಸೌಲಭ್ಯ ಮತ್ತು ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದೆ.
ಹೊಸ ಕರ್ವ್ ಇವಿ ಟಾಟಾ ಮೋಟಾರ್ಸ್ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರಲಿದ್ದು, ಇದು ನೆಕ್ಸಾನ್ ಇವಿಗಿಂತಲೂ ಹೆಚ್ಚಿನ ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿದೆ. ಆದರೆ ಹೊಸ ಕಾರಿನಲ್ಲಿರುವ ವಿನೂತನ ಸೌಲಭ್ಯಗಳು ಎಂಜಿ ಜೆಡ್ಎಸ್ ಇವಿಗೆ ಉತ್ತಮ ಪೈಪೋಟಿ ಆಗಲಿದ್ದು, ಇದರತ್ತ ಗ್ರಾಹಕರು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕರ್ವ್ ಇವಿ ಕಾರು ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಜೆನ್ 2 ಆಕ್ಟಿ. ಇವಿ ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಒಂದು ಬಾರಿ ಚಾರ್ಜ್‌ಗೆ ಗರಿಷ್ಠ 450ರಿಂದ 500 ಕಿಲೋ ಮೀಟರ್ ಮೈಲೇಜ್ ನೀಡಲಿದೆ. ಜೊತೆಗೆ ಮುಂಭಾಗದಲ್ಲಿ ನೆಕ್ಸಾನ್ ಇವಿ ಕಾರಿಗೆ ಹೋಲಿಕೆ ಆಗುವ ವಿನ್ಯಾಸ ಹೊಂದಿರಲಿದೆ.
ಜೊತೆಗೆ ಸ್ಪೋರ್ಟಿ ಆಗಿರುವ ಬಂಪರ್, ಎಲ್ಇಡಿ ಲೈಟ್ ಸಿಗ್ನಿಚರ್ ಒಳಗೊಂಡಿರಲಿದೆ. ಕಾರಿನ ಒಳಭಾಗದಲ್ಲಿ ಫೋರ್-ಸ್ಪೋರ್ಕ್ ಸ್ಟೀರಿಂಗ್ ವ್ಹೀಲ್, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಡಯಲ್ಸ್, ವೈರ್‌ಲೆಸ್ ಚಾರ್ಜರ್, 360 ಡಿಗ್ರಿ ಕ್ಯಾಮೆರಾ, ವೆಂಟಿಲೆಟೆಡ್ ಸೀಟ್‌ಗಳು, ಕನೆಕ್ಟೆಡ್ ಕಾರ್ ಟೆಕ್ ಮತ್ತು ಪನೊರಮಿಕ್ ಸನ್ ರೂಫ್ ಸೌಲಭ್ಯಗಳನ್ನು ಹೊಂದಿರಲಿದೆ.
ಇದು ಹ್ಯಾರಿಯರ್ ಕಾರಿನಲ್ಲಿರುವ ಹಲವು ಸುರಕ್ಷಾ ಸೌಲಭ್ಯಗಳನ್ನು ಹೊಂದಿರಲಿದೆ. ಈ ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಸೌಲಭ್ಯಗಳಿರಲಿದ್ದು, ಇದರ ಎಕ್ಸ್ ಶೋರೂಂ ಬೆಲೆ 18ರಿಂದ 23 ಲಕ್ ರೂಪಾಯಿ ಇರಲಿದ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.












Click it and Unblock the Notifications