ಬೇಸಿಗೆಯ ಬಿಸಿಯೂಟ: ಕಾರ್ ಬಾನೆಟ್ ಚಪಾತಿ, ಸ್ಕೂಟರ್ ಸೀಟ್ ದೋಸೆ

ನವ ದೆಹಲಿ ಮೇ 02: ಬೇಸಿಗೆ ಕಾಲ ಮುಂದುವರಿದಿದೆ. ಬಿಸಿಲಿನ ಝಳಕ್ಕೆ ಜನ ಪರದಾಡುವಂತಾಗಿದೆ. ಉತ್ತರ ಭಾರತ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ತಾಪಮಾನ 50 ಡಿಗ್ರಿ ತಲುಪಿದೆ. ಸುಡು ಬಿಸಿಲು, ಬಿಸಿಗಾಳಿಯಿಂದ ಜನಜೀವನ ದುಸ್ತರವಾಗಿದೆ. ಈ ಬೇಸಿಗೆಯ ಬಿಸಿಯನ್ನು ತಣಿಸಲು ಮಳೆ ಬಿಟ್ಟರೆ ಬೇರೆ ಪರಿಹಾರವಿಲ್ಲ. ಹೀಗಿರುವಾಗ ಜನ ಬೇಸಿಗೆಯ ಬಿಸಿಯೂಟದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜನರು ತಮ್ಮ ಸುತ್ತಲಿನ ಶಾಖವನ್ನು ವಿವರಿಸಲು ಅದ್ಭುತವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಇಂತಹ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಕಾರ್ ಬಾನೆಟ್ ಮೇಲೆ ಚಪಾತಿ

ಇಂತಹ ಅನೇಕ ವಿಡಿಯೊಗಳು ಟ್ವಿಟರ್‌ನಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಅನೇಕ ಜನರು ಬೇಸಿಗೆಯ ಬಿಸಿ ನೋಟವನ್ನು ತೋರಿಸುತ್ತಿದ್ದಾರೆ. ನೀಲಾ ಮಾಧಬ್ ಪಾಂಡಾ ಎಂಬ ಭಾರತೀಯ ಚಲನಚಿತ್ರ ನಿರ್ಮಾಪಕರು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಇದೇ ರೀತಿಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಒಡಿಶಾದ ಮಹಿಳೆಯೊಬ್ಬರು ಕಾರಿನ ಬಾನೆಟ್ ಮೇಲೆ ಚಪಾತಿ ಬೇಯಿಸುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಮಹಿಳೆ ಕಾರ್ ಬಾನೆಟ್‌ನಲ್ಲಿ ಬಿಸಿ ಚಪಾತಿ ಬೇಯಿಸಿದ್ದಾರೆ.

Summer hot Food: Car bonnet chapati, scooter seat Dose

ಸ್ಕೂಟರ್ ಸೀಟ್‌ ಮೇಲೆ ದೋಸೆ

ಒಡಿಶಾದ ಮಹಿಳೆಯೊಬ್ಬರು ಬಿಸಿಲಿನಲ್ಲಿ ಕಾರಿನ ಬಾನೆಟ್ ಮೇಲೆ ಚಪಾತಿ ಬೇಯಿಸಿದರೆ, ವ್ಯಕ್ತಿಯೊಬ್ಬರು ತಮ್ಮ ಸ್ಕೂಟರ್‌ನ ಹಾಟ್ ಸೀಟ್ ಮೇಲೆ ದೋಸೆ ಮಾಡಿದ್ದಾರೆ. @chittapanda ಹೆಸರಿನ ಪುಟದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ವ್ಯಕ್ತಿಯೊಬ್ಬರು ಸ್ಕೂಟರ್‌ನ ಸೀಟಿನ ಮೇಲೆ ದೋಸೆ ಹಿಟ್ಟನ್ನು ಸುರಿಯುತ್ತಾರೆ ಮತ್ತು ನಂತರ ಒಂದು ನಿಮಿಷದಲ್ಲಿ ಆ ದೋಸೆ ಸ್ಕೂಟರ್‌ನ ಸೀಟಿನ ಮೇಲೆ ಸಿದ್ಧವಾಗುತ್ತದೆ.

Summer hot Food: Car bonnet chapati, scooter seat Dose

ಈ ಹಿಂದೆ ವ್ಯಕ್ತಿಯೊಬ್ಬ ಕಾರಿನ ಬಾನೆಟ್ ಮೇಲೆ ಮೀನು ಹುರಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋಗೆ ಜನರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ತಮ್ಮ ಅನುಭವವನ್ನು ಹೇಳುತ್ತಿದ್ದರೆ, ಕೆಲವರು ಹವಾಮಾನ ಬದಲಾವಣೆಗೆ ಮನುಷ್ಯರನ್ನು ದೂಷಿಸುತ್ತಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಪಾದರಸವು 40 ಡಿಗ್ರಿ ದಾಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+