Sudha Murty: ಜೀವನಕ್ಕೆ ಸ್ಫೂರ್ತಿಯಾಗುವ ಸುಧಾಮೂರ್ತಿ ಅವರ ಈ ಐದು ಸೂತ್ರಗಳು
ಇಂದು ಸರಳ, ಸಜ್ಜನಿಕೆ ಹೆಸರುವಾಸಿಯಾದ ವಿಶ್ವವಿಖ್ಯಾತ ಇನ್ಪೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿ ಅವರ ಹುಟ್ಟುಹಬ್ಬ. ಸುಧಾಮೂರ್ತಿ ಅವರು ಇಂದು 73ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕೇವಲ ವಾಣಿಜ್ಯ ಕ್ಷೇತ್ರವಷ್ಟೇ ಅಲ್ಲದೇ ಶಿಕ್ಷಣ, ಸಮಾಜ ಸೇವೆ, ಸಾಹಿತ್ಯದಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಇಂದಿನ ಯುವ ಜನತೆಗೆ ಸುಧಾಮೂರ್ತಿ ಅವರ ನಡೆ-ನುಡಿ ಎಂದಿಗೂ ಸ್ಫೂರ್ತಿ.
ಜೀವನ ಪಾಠ ಹಾಗೂ ಅಪಾರ ಜ್ಞಾನ ನೀಡುವ ಪುಸ್ತಕಗಳ ಲೇಖಕಿಯಾಗಿರುವ ಸುಧಾಮೂರ್ತಿ ಅವರು ತಮ್ಮ ಸರಳತನದಿಂದಲೇ ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ. ಸುಧಾಮೂರ್ತಿ ಅವರ ಬರಹಗಳಲ್ಲಿ ನೀವು ಆಳವಾದ ಜೀವನ ಪಾಠಗಳನ್ನು ಸ್ಪಷ್ಟವಾಗಿ ಕಾಣಬಹುದು. ಜೀವನವನ್ನು ಸುಂದರವಾಗಿರಿಸಲು ಸುಧಾಮೂರ್ತಿ ಅವರು ತಮ್ಮ ಬರಹಗಳಲ್ಲಿ ನೀಡಿರುವ ಜೀವನಕ್ಕೆ ಅತ್ಯಮೂಲ್ಯವಾದ ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಜೀವನವನ್ನು ಸಂಭ್ರಮಿಸುವುದನ್ನು ಯಾವತ್ತೂ ನಿಲ್ಲಿಸಬೇಡಿ
ನೀವು ಒಳ್ಳೆಯದನ್ನು ಯೋಚಿಸುವುದು, ಇತರರಿಗೆ ಒಳ್ಳೆಯದು ಮಾಡುವುದರಿಂದ ನಿಮ್ಮ ಜೀವನ ಉತ್ಸಾಹ ಮತ್ತು ಹವ್ಯಾಸಗಳನ್ನು ನೀವು ನಿರಾಕರಿಸುತ್ತೀರಿ ಎಂದು ಅರ್ಥವಲ್ಲ. ಬೇರೆಯವರಿಗೆ ಒಳ್ಳೆಯದನ್ನು ಬಯಸುವುದರ ಜೊತೆಗೆ ನಮ್ಮ ಬದುಕನ್ನು ಉತ್ತಮವಾಗಿ ಮಾಡಿಕೊಳ್ಳುವ ಮೂಲಕ ನಾವು ಇಷ್ಟಪಟ್ಟು ಬದುಕಬೇಕು ಎಂದು ಸುಧಾಮೂರ್ತಿ ಅವರು ಸಲಹೆ ನೀಡುತ್ತಾರೆ. ದಿನದ ಇಪ್ಪತ್ತಾನ್ಕಾಲು ಗಂಟೆ ಕೆಲಸ ಅಥವಾ ನಿಮ್ಮ ನೇರ ಸ್ವಭಾವ ನಿಮ್ಮನ್ನು ಗಂಭಿರ ವ್ಯಕ್ತಿಯನ್ನಾಗಿ ಮಾಡಬಹುದು. ಆದರೆ ಇಷ್ಟಪಡುವ ವ್ಯಕ್ತಿಯಾಗಿ ಮಾಡುವುದಿಲ್ಲ. ಹೀಗಾಗಿ ಜೀವನವನ್ನು ಸಂಭ್ರಮಿಸುವುದನ್ನು ಯಾವತ್ತೂ ನಿಲ್ಲಿಸಬಾರದು.
ಜೀವನದಲ್ಲಿ ಸ್ವಾತಂತ್ಯ ಮುಖ್ಯ
'ನಿಮ್ಮ ಪಾಲಿನ ಮ್ಯಾರಥಾನ್ ಅನ್ನು ನೀವು ಓಡಿ' ಎಂದು ಸುಧಾಮೂರ್ತಿ ಅವರು ಹೇಳುತ್ತಾರೆ.ಯಾರೊಬ್ಬರ ಭುಜದ ಮೇಲೆ ಕುಳಿತುಕೊಳ್ಳುವ ಮೂಲಕ ಯಶಸ್ಸನ್ನು ಖಂಡಿತವಾಗಿ ಸಾಧಿಸಲಾಗುವುದಿಲ್ಲ. ನೀವು ಯಾರದ್ದೇ ಹೆಂಡತಿಯಾಗಿದ್ದರೂ, ತಾಯಿಯಾಗಿದ್ದರೂ ಅಥವಾ ಮಗಳಾಗಿದ್ದರೂ, ಒಬ್ಬ ವ್ಯಕ್ತಿಯಾಗಿ ನೀವು ಇತರರಿಗಿಂದ ಭಿನ್ನವಾಗಿರುತ್ತೀರಿ. ಹೀಗಾಗಿ ನಿಮಗಾಗಿ ನೀವು ಸ್ವತಂತ್ರವಾಗಿ ಯೋಚಿಸಲು ಪ್ರಾರಂಭಿಸಬೇಕು. ಇದು ಸ್ವಾರ್ಥವಲ್ಲ. ಇದನ್ನು ಸ್ವಯಂ ಪ್ರೀತಿ ಎಂದು ಕರೆಯಲಾಗುತ್ತದೆ.

ಕರುಣೆ ಹಣಕ್ಕಿಂತ ದೊಡ್ಡದು
ಸಾಧನೆಗಳು, ಪ್ರಶಸ್ತಿಗಳು ಅಥವಾ ಹಣಕ್ಕಿಂತಲೂ ಜೀವನದಲ್ಲಿ ಸಂಬಂಧಗಳು, ಸಹಾನುಭೂತಿ ಮತ್ತು ಮನಸ್ಸಿನ ಶಾಂತಿಯನ್ನು ಹೊಂದಿರುವುದು ಹೆಚ್ಚು ಮುಖ್ಯ ಎಂದು ಸುಧಾಮೂರ್ತಿ ಅವರು ತಮ್ಮ ವಿಶಾಲವಾದ ಅನುಭವಗಳಿಂದ ಹೇಳುತ್ತಾರೆ. ಒಂದು ಚಿಕ್ಕ ವಿಚಾರ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತವೆ. ನಮ್ಮಲ್ಲಿ ಸಹಾನುಭೂತಿ ಇದ್ದರೆ ಇತರರಲ್ಲಿ ಒಳ್ಳೆಯದನ್ನು ನೋಡಲು ನಮಗೆ ಸಹಾಯ ಮಾಡುತ್ತದೆ.ಅಥವಾ ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು ಎನ್ನುವುದನ್ನು ಯೋಚಿಸುತ್ತೇವೆ. ಇಂದಿನ ಜಗತ್ತಿನಲ್ಲಿ ಸಹಾನುಭೂತಿ ಅಥವಾ ಕರುಣೆಯ ಅವಶ್ಯಕತೆ ಹೆಚ್ಚಿದೆ.
ಏಕಾಂತವನ್ನು ಆನಂದಿಸಬೇಕು
ಒಂಟಿತನ ಮತ್ತು ಏಕಾಂತತೆಯ ನಡುವೆ ಪ್ರಮುಖ ವ್ಯತ್ಯಾಸವಿದೆ ಎಂದು ಸುಧಾಮೂರ್ತಿ ಅವರು ತಿಳಿಸಿದ್ದಾರೆ. ಒಂಟಿತನವು ನಮಗೆ ಬೇಸರವನ್ನುಂಟು ಮಾಡುತ್ತದೆ ಮತ್ತು ನಮ್ಮೊಂದಿಗೆ ತೊಂದರೆ ಉಂಟುಮಾಡುತ್ತದೆ. ಆದರೆ ಏಕಾಂತತೆಯು ನಮ್ಮ ಆಲೋಚನೆಗಳನ್ನು ಪರೀಕ್ಷಿಸಲು ಮತ್ತು ನಮ್ಮ ಕಾರ್ಯಗಳನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಏಕಾಂತದಲ್ಲಿ ಕಳೆದ ಕೆಲವು ಕ್ಷಣಗಳು ವೈಯಕ್ತಿಕವಾಗಿ ಅಥವಾ ವೃತ್ತಿಪರವಾಗಿ ಉತ್ತಮವಾಗಿ ನಡೆದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ಎಲ್ಲರನ್ನು ಮೆಚ್ಚಿಸುವುದನ್ನು ನಿಲ್ಲಿಸಿ
ನೀವು ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸಿದರೆ, ನೀವು ಯಾರನ್ನೂ ಮೆಚ್ಚಿಸುವುದಿಲ್ಲ ಎಂದು ಸುಧಾಮೂರ್ತಿ ಅವರು ತಮ್ಮ ಪುಸ್ತಕವೊಂದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಬೇರೆಯವರನ್ನು ಮೆಚ್ಚಿಸುವ ಭರದಲ್ಲಿ ನೀವು ನಿಮ್ಮನ್ನು ನಿರಾಶೆಗೊಳಿಸಬಹುದು. ಯಾಕೆಂದರೆ ಎಲ್ಲಾ ಒಳ್ಳೆಯ ಕಾರ್ಯಗಳಿಗೂ ಕೃತಜ್ಞತೆ ಸಿಗುವುದಿಲ್ಲ. ಯಾಕೆಂದರೆ ಜೀವನವು ಸುಗಮ ನೌಕಾಯಾನವಲ್ಲ. ಹೀಗಾಗಿ ಜೀವದಲ್ಲಿ ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುವುದನ್ನು ನಿಲ್ಲಿಸಬೇಕು.












Click it and Unblock the Notifications