Get Updates
Get notified of breaking news, exclusive insights, and must-see stories!

Anna Bhagya: ಬಳ್ಳಾರಿಯಲ್ಲಿ ಅನ್ನಭಾಗ್ಯ ಯೋಜನೆ ಯಶಸ್ಸಿನ ಕಥೆ

ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ 'ಅನ್ನಭಾಗ್ಯ' ಸಹ ಒಂದು. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ನೆರವಾಗುವ ಯೋಜನೆ ಇದಾಗಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯನ್ನು 10 ಕೆಜಿಗೆ ಹೆಚ್ಚಿಸಿದೆ. ಇದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಯಾಗಿಯೂ ಘೋಷಣೆ ಮಾಡಿತ್ತು.

ರಾಜ್ಯದಲ್ಲಿ ಸದ್ಯ ಬಿಪಿಎಲ್ ಕಾರ್ಡ್ ರದ್ದು, ಎಪಿಎಲ್ ಕಾರ್ಡ್‌ ಆಗಿ ಪರಿವರ್ತನೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ 'ಅನ್ನಭಾಗ್ಯ' ಯೋಜನೆ ಹೇಗೆ ಯಶಸ್ವಿಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಯೋಜನೆ ಹೇಗೆ ಸಹಾಯಕವಾಗಿದೆ? ಎಂಬ ವರದಿಯೊಂದು ಬಳ್ಳಾರಿ ಜಿಲ್ಲೆಯಿಂದ ಬಂದಿದೆ.

Success Story Of Karnataka Government Anna Bhagya Scheme Ballari

ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಅನ್ನಭಾಗ್ಯ' ಯೋಜನೆಯು ಬಡತನ ರೇಖೆಗಿಂತ ಕಡಿಮೆ ಇರುವ ಪಡಿತರ ಕಾರ್ಡ್ ಹೊಂದಿದ ಬಡ ಕುಟುಂಬದವರ ಹಸಿವು ನೀಗಿಸುವುದರೊಂದಿಗೆ ಸಾಮಾನ್ಯರ ಬದುಕನ್ನು ಸಹ ಹಸನುಗೊಳಿಸಿದೆ.

ರಾಜ್ಯ ಕಾಂಗ್ರೆಸ್ ಬಿಪಿಎಲ್ ಕಾರ್ಡು ಹೊಂದಿರುವರ ಪ್ರತಿ ಕುಟುಂಬದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದರಂತೆ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬದ ಪ್ರತಿ ಸದಸ್ಯರಿಗೂ ಪ್ರತಿ ತಿಂಗಳು ತಲಾ 5 ಕೆಜಿ ಅಕ್ಕಿ ನೀಡುತ್ತಿದ್ದು, ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 170 ರೂ. (ಪ್ರತಿ ಕೆಜಿಗೆ 34 ರೂಪಾಯಿಗಳಂತೆ) ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.

ಭೂಮಿಯ ಮೇಲೆ ಜೀವಿಸಲು ಪ್ರಕೃತಿ ಗಾಳಿ, ನೀರು ಒದಗಿಸುತ್ತದೆ. ಆಹಾರ ಮಾತ್ರ ಮನುಷ್ಯರೇ ತಯಾರಿಸಿಕೊಳ್ಳುವುದು ಅಗತ್ಯ. ಹೀಗಿರುವಾಗ ಉಳ್ಳವರು ತಮ್ಮಲ್ಲಿನ ಹಣಬಲದಿಂದ ಆಹಾರ ಸಾಮಗ್ರಿ ಕೊಂಡುಕೊಳ್ಳವರು. ಬಡವರು ಕೊಂಡು ಕೊಳ್ಳಲು ಶಕ್ತರಾಗಿರುವುದಿಲ್ಲ. ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಒದಗಿಸುವ ಅಕ್ಕಿ ಹಾಗೂ ದಿನಸಿ ಸಾಮಾನುಗಳಿಂದ ಬಡವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಡವರ ಪರ ಕಾಳಜಿ ಇರುವ ಸರ್ಕಾರ, ಹಸಿವು ಮುಕ್ತ ಕರ್ನಾಟಕವನ್ನಾಗಿಸುವ ಆಶಾಭಾವನೆ ಹೊಂದಿದೆ. ಬಡವರ ಹಾಗೂ ಜನ ಸಾಮಾನ್ಯರ ಏಳಿಗೆಗೆ ಸರ್ಕಾರ ಸನ್ನದ್ಧವಾಗಿದೆ. ಆದ್ದರಿಂದ 'ಅನ್ನಭಾಗ್ಯ'ದಂತಹ ಯೋಜನೆಯನ್ನು ಜಾರಿಗೊಳಿಸಿದೆ. ಇದರಿಂದಾಗಿ ಬಡವರಿಗೆ ಸಹಾಯಕವಾಗಿದೆ.

ಬಳ್ಳಾರಿಯ ಅನ್ನಭಾಗ್ಯದ ಚಿತ್ರಣ: ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 357 ನ್ಯಾಯಬೆಲೆ ಅಂಗಡಿಗಳಿದ್ದು, ಒಟ್ಟು 3,40,785 ಪಡಿತರ ಚೀಟಿಗಳಿವೆ. ಅದರಲ್ಲಿ 25,434 ಎಎವೈ ಕಾರ್ಡ್, 2,69,828 ಬಿಪಿಎಲ್ ಕಾರ್ಡ್, 45,7523 ಎಪಿಎಲ್ ಕಾರ್ಡ್‌.

2023ರ ಜುಲೈನಿಂದ 2024ರ ಆಗಸ್ಟ್‌ ತನಕ ಜಿಲ್ಲೆಯ ಒಟ್ಟು 2,95,262 ಫಲಾನುಭವಿಗಳಿಗೆ ರೂ. 170ರಂತೆ ಡಿಬಿಟಿ ಮೂಲಕ ಒಟ್ಟು 223,71,56,990 ರೂ.ಗಳನ್ನು ಖಜಾನೆ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.

ಅನ್ನಭಾಗ್ಯ ಯೋಜನೆಯ ಪ್ರಯೋಜನ ಕುರಿತು ಸಂಡೂರು ತಾಲೂಕು ರೈತ ತಾಯಪ್ಪ ಹೆಚ್. ಮಾತನಾಡಿ, "ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ನೀಡುತ್ತಿರುವುದು ನಮ್ಮಂತ ರೈತಾಪಿ ವರ್ಗದವರಿಗೆ ಉಪಯೋಗವಾಗುತ್ತಿದೆ. ಹಣ ನೀಡುವ ಬದಲು ಅಕ್ಕಿಯೇ ಒದಗಿಸಿದರೆ ಇನ್ನೂ ಅನುಕೂಲಕರವಾಗುತ್ತದೆ" ಎಂದು ಹೇಳಿದ್ದಾರೆ.

ಬಳ್ಳಾರಿ ತಾಲೂಕು ಕೆ. ವೀರಾಪುರದ ಟಿ. ತಿಪ್ಪೇಸ್ವಾಮಿ ಮಾತನಾಡಿ, "ಅನ್ನಭಾಗ್ಯ ಯೋಜನೆಯು ಹಲವಾರು ಬಡ ಜನರ ಹಸಿವು ನೀಗಿಸುತ್ತಿದೆ. ಹೆಚ್ಚುವರಿಯಾಗಿ ನೀಡುತ್ತಿರುವ ಹಣವನ್ನು ಇತರೆ ಅಗತ್ಯ ದಿನಸಿ ಸಾಮಾನುಗಳನ್ನು ಕೊಂಡುಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿದ್ದೇವೆ" ಎಂದು ಯೋಜನೆಯ ಪ್ರಯೋಜನದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+