ಜನರನ್ನು ವಿಷಜಂತುವಿನಿಂದ ಕಾಪಾಡುವ ವಿಷಬನಮ್ಮ ದೇವಿಯ ಬಗ್ಗೆ ನಿಮಗೆಷ್ಟು ಗೊತ್ತು?- ಇಲ್ಲಿದೆ ಉಪಯುಕ್ತ ಮಾಹಿತಿ
ಚಾಮರಾಜನಗರ, ಡಿಸೆಂಬರ್, 10: ಮಾನವ ತಲಾ ತಲಾಂತರದಿಂದಲೂ ಪ್ರಕೃತಿಯ ಒಡನಾಟದಲ್ಲಿ ಬೆಳೆದು ಬಂದಿದ್ದು, ತಮಗೆ ಕಷ್ಟ ಬಂದಾಗ ಶಕ್ತಿದೇವತೆಗಳ ಮೊರೆ ಹೋಗುವುದರೊಂದಿಗೆ ತಮ್ಮ ಬದುಕನ್ನು ಅದರೊಂದಿಗೆ ಕಂಡುಕೊಂಡಿದ್ದಾನೆ. ಅದಕ್ಕಾಗಿಯೇ ಪ್ರತಿ ಊರಿನಲ್ಲಿ ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸಿ ಅದನ್ನು ಪೂಜಿಸುತ್ತಾ ಬರುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹಿಂದಿನ ಕಾಲದಲ್ಲಿ ಕಾಯಿಲೆಗಳು ಬಂದರೆ, ಜನಜಾನುವಾರುಗಳಿಗೆ ತೊಂದರೆಯಾದರೆ ದೇವರ ಮೊರೆ ಹೋಗುತ್ತಿದ್ದದ್ದೇ ಹೆಚ್ಚು.
ಅವತ್ತಿನ ದಿನಗಳಲ್ಲಿ ಕೃಷಿಯೇ ಜೀವಾಳವಾಗಿತ್ತು. ಕೃಷಿಯೊಂದಿಗೆ ಬದುಕು ಸಾಗಿಸುತ್ತಿದ್ದ ಜನ ಜಮೀನುಗಳಲ್ಲಿ ದುಡಿಯುವಾಗ ತೊಂದರೆಯಾದರೆ ಊರ ದೇವತೆಯನ್ನು ಪ್ರಾರ್ಥಿಸುತ್ತಿದ್ದರು. ಹರಕೆ ಕಟ್ಟಿಕೊಳ್ಳುತ್ತಿದ್ದರು. ಇದು ಹಾಗೆಯೇ ಮುಂದುವರೆದು ಬಂದಿದ್ದು, ಇವತ್ತಿನ ವೈಜ್ಞಾನಿಕ ಯುಗದಲ್ಲಿಯೂ ಶಕ್ತಿದೇವತೆಗಳು ಪಡಾಡ ಸೃಷ್ಟಿಸುತ್ತಿವೆ. ಜೊತೆಗೆ ಜನರನ್ನು ಸಂಕಷ್ಟದಿಂದ ಪಾರು ಮಾಡುತ್ತಿವೆ. ಕೆಲವು ದೇವತೆಗಳು ಮನುಷ್ಯನ ಮೇಲೆಯೇ ಅವಾಹನೆಗೊಂಡು ಸಮಸ್ಯೆಗೆ ಪರಿಹಾರವನ್ನು ಸೂಚಿಸುವುದು ಕಂಡುಬರುತ್ತಿದೆ.
ಇದೆಲ್ಲದರ ನಡುವೆ ಹಾವಿನಂತಹ ವಿಷಜಂತುಗಳು ಕಚ್ಚಿದಾಗ ಆಸ್ಪತ್ರೆಗೆ ತೆರಳದೆ ದೇವಸ್ಥಾನಕ್ಕೆ ತೆರಳಿ ದೇವರ ಮುಂದೆ ಪ್ರಾರ್ಥಿಸಿ ಬೇವಿನ ಎಲೆಯೊಂದಿಗೆ ಮಂತ್ರಹಾಕುವ ಮೂಲಕ ಮನುಷ್ಯನ ದೇಹದಿಂದ ವಿಷವನ್ನು ಹೊರ ತೆಗೆದು ಪ್ರಾಣ ಉಳಿಸಲಾಗುತ್ತಿತ್ತು ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಮನುಷ್ಯನ ಮೈಗೇರಿದ ವಿಷ ತೆಗೆಯುವ ದೇವತೆಯಾಗಿ ವಿಷಬನಮ್ಮನಾಗಿ ನೆಲೆನಿಂತಿದ್ದಾಳೆ. ಜೊತೆಗೆ ಇವತ್ತಿಗೂ ಅದು ಮುಂದುವರೆಯುತ್ತಿದೆ.
ವಿಷಬನಮ್ಮ ನೆಲೆ ನಿಂತಿರುವುದು ಎಲ್ಲಿ?
ಇಷ್ಟಕ್ಕೂ ಈ ವಿಷಬನಮ್ಮ ನೆಲೆ ನಿಂತಿರುವುದು ಎಲ್ಲಿ? ಎಂಬ ಪ್ರಶ್ನೆಗಳು ಮೂಡಬಹುದು. ಈ ದೇಗುಲದ ಬಗ್ಗೆ ತಿಳಿಯಬೇಕಾದರೆ ಚಾಮರಾಜನಗರ ಜಿಲ್ಲೆಗೆ ಹೋಗಬೇಕಾಗಿದೆ. ಚಾಮರಾಜನಗರದಿಂದ ಸುಮಾರು ಹನ್ನೆರಡು ಕಿ.ಮೀ.ದೂರದ ಸಂತೆಮರಹಳ್ಳಿ ಗ್ರಾಮಕ್ಕೆ ಸಮೀಪದ ತೆಳ್ಳನೂರಿನಲ್ಲಿ ವಿಷಬನಮ್ಮ ಕಾಳಿಕಾ ದೇವಾಲಯವಿದೆ. ತೆಳ್ಳನೂರು ಪುಟ್ಟ ಗ್ರಾಮವಾಗಿದ್ದು, ಇಲ್ಲಿರುವ ವಿಷಬನಮ್ಮ ಕಾಳಿಕಾ ದೇಗುಲಕ್ಕೆ ಸುಮಾರು ಒಂದೂವರೆ ಶತಮಾನಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ.
ವಿಷಬನಮ್ಮ ಕಾಳಿಕಾ ದೇವಾಲಯವನ್ನು ಸುಮಾರು 1857ರ ಆಸುಪಾಸಿನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಕೆಲವರು ಬೃಹತ್ ಕಂಬಗಳಿಂದ ನಿರ್ಮಾಣಗೊಂಡ ಹಳೆಯ ದೇಗುಲವನ್ನು ಗಮನಿಸಿ ಇದು ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ನಿರ್ಮಿಸಿರಬಹುದು ಎಂದು ಹೇಳುತ್ತಾರೆ. ಆದರೆ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ದೇಗುಲವನ್ನು ತೆರವುಗೊಳಿಸಿ ಇತ್ತೀಚೆಗಿನ ವರ್ಷಗಳಲ್ಲಿ ಗ್ರಾಮಸ್ಥರು ದಾನಿಗಳ ಸಹಕಾರದಿಂದ ನೂತನ ದೇಗುಲವನ್ನು ನಿರ್ಮಿಸಿದ್ದಾರೆ.

ಇಲ್ಲಿನ ವಿಷಬನಮ್ಮ ಕಾಳಿಕಾ ದೇವಿ ಗ್ರಾಮದೇವತೆಯಾಗಿ ಗ್ರಾಮಸ್ಥರನ್ನು ಕಾಪಾಡುತ್ತಾ ಬಂದಿದ್ದಾಳೆ. ಅಷ್ಟೇ ಅಲ್ಲದೆ ಗ್ರಾಮ ಮಾತ್ರವಲ್ಲದೆ ಹೊರಗೂ ಭಕ್ತರಿದ್ದು, ಆಗಾಗ್ಗೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ತೆಳ್ಳನೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನ ಜಾನುವಾರನ್ನು ಕಾಪಾಡುತ್ತಾ ಬಂದಿರುವ ವಿಷಬನಮ್ಮ ತಾಯಿ ಸುತ್ತಮುತ್ತಲಿನ ಜನಕ್ಕೆ ವಿಷ ಜಂತುಗಳಿಂದ ಸಂಕಷ್ಟ ಒದಗಿದಾಗ ಅದರಿಂದ ಪಾರು ಮಾಡುವ ಮೂಲಕ ವಿಷಬನಮ್ಮಳಾಗಿ ಖ್ಯಾತಿ ಪಡೆದಿದ್ದಾಳೆ.
ಇಲ್ಲಿನ ಜನರು ಹೇಳುವಂತೆ ಗ್ರಾಮದ ಸುತ್ತ ಮುತ್ತ ಯಾವುದೇ ರೀತಿಯ ವಿಷ ಪೂರಿತ ಹಾವುಗಳು ಕಚ್ಚಿ ಸಾವು ಸಂಭವಿಸಿಲ್ಲ. ಹಾವು ಕಚ್ಚಿದ ತಕ್ಷಣ ದೇಗುಲಕ್ಕೆ ಕರೆದೊಯ್ದು ಉಪಚಾರ ಮಾಡಿದರೆ ಜೀವ ಉಳಿಸಬಹುದಂತೆ. ಯಾವುದೇ ಬಗೆಯ ಹಾವು ಕಡಿತಕ್ಕೊಳಗಾದರೂ ಅಂತಹ ಸಂದರ್ಭಗಳಲ್ಲಿ ತಕ್ಷಣ ಈ ದೇಗುಲಕ್ಕೆ ಬಂದು ವೈದ್ಯೋಪಚಾರ ಮಾಡಿದರೆ ಶೀಘ್ರವೇ ಗುಣಮುಖರಾಗುತ್ತಾರಂತೆ.
ಇನ್ನು ಹಾವು ಕಚ್ಚಿದ ವ್ಯಕ್ತಿಗೆ ವಿಷಬನಮ್ಮ ದೇವಿಯ ಸನ್ನಿಧಿಯಲ್ಲಿ ವೈದ್ಯೋಪಚಾರ ಹೇಗೆ ನಡೆಯುತ್ತದೆ ಎಂಬುದನ್ನು ನೋಡಿದ್ದೇ ಆದರೆ ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ದೇಗುಲಕ್ಕೆ ಕರೆತಂದ ಕೂಡಲೇ ದೇವಾಲಯದ ಅರ್ಚಕರು ಬಂದು ಮಂತ್ರ ಹಾಕಿ ಪಕ್ಕದಲ್ಲಿ ಇರುವ ಧೂಳು ತೆಗೆದು ಹಾವು ಕಚ್ಚಿದ ಸ್ಥಳಕ್ಕೆ ಹಾಕಿ, ಬೇವಿನ ಎಲೆಯಿಂದ ಮಂತ್ರ ಹಾಕುವುದರ ಜೊತೆಗೆ ಹಾವು ಕಚ್ಚಿದ ವ್ಯಕ್ತಿಗೆ ಕೆಲವು ಹೊತ್ತಿನವರೆಗೆ ಬೇವಿನ ಎಲೆ ತಿನ್ನುವಂತೆ ಹೇಳುತ್ತಾರೆ.
ಬೇವಿನ ಎಲೆ ತಿನ್ನುತ್ತಾ ಹೋದಂತೆ ಬೇವಿನ ಎಲೆ ಸಿಹಿ ಬಂದರೆ ಹಾವು ಕಚ್ಚಿದ ವ್ಯಕ್ತಿಯ ದೇಹಕ್ಕೆ ವಿಷ ಹರಡಿದೆ ಎಂಬರ್ಥ. ಇದನ್ನು ಅರಿತ ಅರ್ಚಕರು ಮತ್ತೆ ಉಪಚಾರ ಮುಂದುವರೆಸುತ್ತಾರೆ. ಮಂತ್ರ ಹಾಕುತ್ತಾ ಮತ್ತೆ ಬೇವಿನ ಎಲೆ ತಿನ್ನುವುದನ್ನು ಮುಂದುವರೆಸುವಂತೆ ಹೇಳುತ್ತಾರೆ. ಜೊತೆಗೆ ಆ ವ್ಯಕ್ತಿ ನಿದ್ದೆ ಮಾಡದಂತೆ ನೋಡಿಕೊಳ್ಳಲಾಗುತ್ತದೆ. ಈ ವೇಳೆ ನಿದ್ದೆಗೆ ಜಾರಿದರೆ ವಿಷ ವೇಗವಾಗಿ ಮನುಷ್ಯನ ದೇಹ ಸೇರುವ ಸಾಧ್ಯತೆ ಇರುತ್ತದೆ.
ಹಾಗಾಗಿ ಅರ್ಚಕರು ನಿದ್ದೆ ಮಾಡದಂತೆ ನೋಡಿಕೊಳ್ಳುತ್ತಾರೆ. ವೈದ್ಯೋಪಚಾರ ಮುಗಿಯುವ ವೇಳೆಗೆ ಹಾವು ಕಚ್ಚಿದ ವ್ಯಕ್ತಿಯ ಆರೋಗ್ಯ ಸುಧಾರಿಸಿ ಎಂದಿನಂತೆ ಓಡಾಡಲು ಆರಂಭಿಸಿ ಬಿಡುತ್ತಾರೆ. ಈಗಾಗಲೇ ಇಲ್ಲಿ ಬಂದು ಆರೋಗ್ಯವಾಗಿ ಹೋದವರು ಹಲವರು ಇದ್ದಾರೆ. ಅದು ಏನೇ ಇರಲಿ ಇವತ್ತಿನ ವೈಜ್ಞಾನಿಕ ಯುಗದಲ್ಲಿಯೂ ಇಂತಹದೊಂದು ಶಕ್ತಿದೇವತೆಯ ದೇಗುಲ ತೆಳ್ಳನೂರು ಗ್ರಾಮದಲ್ಲಿದೆ ಎಂಬುದೇ ವಿಶೇಷ. ಸುಮಾರು ಒಂದೂವರೇ ಶತಮಾನಗಳಿಂದ ಸುತ್ತಮುತ್ತಲ ಗ್ರಾಮಗಳ ಜನರ ಆರಾಧ್ಯದೇವತೆಯಾಗಿ ಇಷ್ಟಾರ್ಥ ನೆರವೇರಿಸುತ್ತಾ ಬರುತ್ತಿರುವುದು ನಿಜಕ್ಕೂ ಅಚ್ಚರಿಯೇ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications