• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲೂನು ಮಾರಿ ಬದುಕು ಕಟ್ಟಿಕೊಳ್ಳಬೇಕಾ ಪುಟಾಣಿ ಮಕ್ಕಳು?

By ಸಂಜಯ್ ಚಿತ್ರದುರ್ಗ
|
Google Oneindia Kannada News

ಅಪ್ಪನದೋ ಅಮ್ಮನದೋ ಅಂಗೈಯನ್ನು ತಮ್ಮ ಪುಟ್ಟ ಕೈಯಲ್ಲಿ ಗಟ್ಟಿಯಾಗಿ ಹಿಡಿದು, ಮತ್ತೊಂದು ಕೈಯಲ್ಲಿ ಕಾಡಿ ಬೇಡಿ ಪಡೆದುಕೊಂಡ ಬಣ್ಣ ಬಣ್ಣದ ಬಲೂನು ಹಿಡಿದು ಬಾಲ್ಯದಲ್ಲಿ ನಾವೆಲ್ಲರೂ ಜಾತ್ರೆಯಲ್ಲಿ ಸುತ್ತಿರುತ್ತೇವೆ. ಆ ನೆನಪುಗಳು ಯಾವತ್ತೂ ನಮಗೆ ಮರೆಯುವುದಿಲ್ಲ.

ಆದರೆ, ಧರ್ಮಸ್ಥಳದ ದೀಪೋತ್ಸವದಲ್ಲಿ ಸಾವಿರಾರು ಜನರ ಮಧ್ಯ ಸಾಗುತ್ತಿರಬೇಕಾದರೆ ಯಾವುದೋ ಮಗುವೊಂದು ಕರೆದಂತಾಗಿ ತಿರುಗಿ ನೋಡಿದರೆ ಕೊಳೆಯಾದ ಹರಕು ಬಟ್ಟೆ ತೊಟ್ಟ ಒಂದಿಬ್ಬರು ಪುಟಾಣಿ ಮಕ್ಕಳು ತಮ್ಮ ಪುಟ್ಟ ಬಡಕಲು ಕೈಗಳಲ್ಲಿ ಐದತ್ತು ಬಣ್ಣ ಬಣ್ಣದ ಬಲೂನ್‌ಗಳನ್ನು ಹಿಡಿದು "ಲೇಲೋ ಬಯ್ಯಾ" ಎಂದು ಅಂಗಲಾಚುತ್ತಿದ್ದವು.

ಜಿಗಣಿ- ಧರ್ಮಸ್ಥಳ ಭೀಷ್ಮನ ಪಾದಯಾತ್ರೆ: 360 ಕಿಮೀ‌ ಪ್ರಯಣದ ರೋಚಕ ಕಥೆಜಿಗಣಿ- ಧರ್ಮಸ್ಥಳ ಭೀಷ್ಮನ ಪಾದಯಾತ್ರೆ: 360 ಕಿಮೀ‌ ಪ್ರಯಣದ ರೋಚಕ ಕಥೆ

ಎಂತಹ ಕಲ್ಲು ಮನಸ್ಸು ಇರುವವನು ನೋಡಿದರೂ‌ ಒಂದೇ ಕ್ಷಣದಲ್ಲಿ ಮನಸ್ಸು ಕರಗಿ ಬಿಡಬೇಕು. ಅಂತಹ ಆದ್ರತೆ. ಮುಗ್ಧತೆ. ನಾವೆಲ್ಲರೂ ಆ ವಯಸ್ಸಿನಲ್ಲಿ ನಾವು ನಮ್ಮ ಖುಷಿಗಾಗಿ ಅತ್ತು ಬಲೂನು ಕೊಡಿಸಿಕೊಂಡರೆ, ಆ ಮಕ್ಕಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಅಳು ಮುಖ ಮಾಡಿಕೊಂಡು ಮಾರುತ್ತಿದ್ದದ್ದು ಎಂತಹ ವಿಚಿತ್ರವಲ್ಲವೇ. ಇನ್ನೂ ತಮ್ಮ ಎದುರಿಗಿರುವ ಜಗತ್ತು ಏನೆಂದು ತಿಳಿಯುವ ಮೊದಲೇ ಆ ಪುಟ್ಟ ಮಕ್ಕಳು ಅಲೆಮಾರಿಗಳಾಗಿ ಬಲೂನು ಮಾರಾಟ ಮಾಡುತ್ತಾ ಮುಂದೆ ತಮ್ಮ ಜೀವನದ ದಾರಿಯನ್ನೇ ಮಾರಾಟವಾದ ಬಲೂನಿನಂತೆ ಮರೆತು ಬಿಡುತ್ತಾರೆನೋ.

ಆದರೆ ಇದೇ ರೀತಿಯ ದೃಶ್ಯಗಳು ರಸ್ತೆಯ ಅನೇಕ ಕಡೆಗಳಲ್ಲಿ ಸಾಮಾನ್ಯವೆಂಬತೆ ಕಾಣುತ್ತಿತ್ತು. ಇದನೆಲ್ಲಾ ಗಮನಿಸಿದರೆ ಆ ಮಗ್ಧತೆ, ಆದ್ರತೆಗಳೇ ಕೆಲವರಿಗೆ ಹಣ ಮಾಡುವ ಮಾರ್ಗಗಳಂತೆ ಕಾಣಿಸಿರಬೇಕೇನೋ ಅಥವಾ ಆ ಪುಟ್ಟ ಮಕ್ಕಳ ಕೆಲವು ತಂದೆ ತಾಯಿಯರಿಗೆ ಅದುವೇ ಅನಿವಾರ್ಯವೆನೋ.. ಅದೆನೇ ಇರಲಿ, ಆ ಮಕ್ಕಳನ್ನು ನೋಡಿದ ತಕ್ಷಣ ನಿಮಗೆ ಕರುಣೆ ಉಕ್ಕಿದರೆ ನಿಮ್ಮ ಕೈಯಲ್ಲಿ ದೊಡ್ಡ ಸಹಾಯ ಮಾಡಲು ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ. ಸಾಧ್ಯವಿದ್ದರೆ ಅವರಿಗೆ ತಿನ್ನಲು ಏನಾದರೂ ತೆಗೆದುಕೊಡಿ. ಅದು ಬಿಟ್ಟು ಸಹಾಯದ ಸೋಗಿನಲ್ಲಿ ಆ ಮಕ್ಕಳ ಬಳಿ ಬಲೂನು ಖರೀದಿಸಲು ದಯವಿಟ್ಟು ಹೋಗಬೇಡಿ. ಯಾಕೆಂದರೆ ನೀವು ಕರುಣೆ ತೋರಿ ಖರೀದಿಸುವುದು ಅವರ ಬಾಲ್ಯವನ್ನು ಕಸಿದುಕೊಳ್ಳಬಹುದು. ಮಕ್ಕಳ ಬಳಿ ಯಾರೂ ಖರೀದಿ ಮಾಡದಿದ್ದರೆ ಖಂಡಿತವಾಗಿ ವ್ಯಾಪಾರಿಗಳು ಈ "ಎಮೋಷನಲ್ ಮಾರಾಟ" ದ ದಾರಿಯನ್ನು ಬಿಡುತ್ತಾರೆ.

ಅದರಲ್ಲೂ ಇತ್ತೀಚಿಗೆ ಮಕ್ಕಳನ್ನು ಬಳಸಿ ಭಿಕ್ಷೆ ಬೇಡುವುದು, ಬಲೂನು ಮಾರಾಟ ಮಾಡಿಸುವುದು, ಪುಟ್ಟ ಮಗುವನ್ನು ಕಂಕುಳಲ್ಲಿ ಹಿಡಿದು ಕೊಂಡು ಅದರ ಉಪಯೋಗ ಪಡೆಯುವುದು ಒಂದು ರೀತಿಯಲ್ಲಿ ದಂಧೆಯೇ ಆಗಿಬಿಟ್ಟಿದೆ. ನಮ್ಮ ದೇಶದಲ್ಲಿ ಬಾಲ ಕಾರ್ಮಿಕ ಪದ್ದ‌ತಿಗೆ ನಿಷೇಧವಿದ್ದರೂ ಈ ದಂಧೆಯನ್ನು ನಿಯಂತ್ರಣಕ್ಕೆ ತರುವುದರಲ್ಲಿ ವಿಫಲವಾಗಿರುವುದು ನಮ್ಮ ಆಡಳಿತ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತೆ ಕಾಣುತ್ತಿದೆ.

Small Children Selling Baloon In Dharmasthala Lakshadeepotsava

ಬಾಲ ಕಾರ್ಮಿಕರ ಬಗ್ಗೆ ವರ್ಷಪೂರ್ತಿ ಮಾಹಿತಿ ಜಾಥಾ ಮಾಡುವ ನಮ್ಮ ಅಧಿಕಾರಿ ವರ್ಗಕ್ಕೆ ಈ ರೀತಿ ಬಲೂನು ಮಾರುತ್ತಾ, ಬಿಕ್ಷೆ ಬೇಡುತ್ತಾ ತಮ್ಮ ಜೀವನ ಶುರುವಾಗುವ ಮೊದಲಿನಿಂದಲೇ ತಮ್ಮ ಜೀವನ ಪೂರ್ತಿ ಬೀದಿಯಲ್ಲಿ ಕಳೆಯುವವರ ಕುರಿತು ಮಾಹಿತಿ ಇಲ್ಲವೇ ,ಇದ್ದರೆ ಈ ಮೂಖ ಮೌನವೇಕೆ ...? ಭಾರತದಂತಹ ದೇಶದಲ್ಲಿ ಇನ್ನೂ ಎಷ್ಟು ದಿನ ಮಕ್ಕಳು ಬೀದಿಯಲ್ಲಿ ಬಲೂನು ಮಾರುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳಬೇಕು..! ಇದಕ್ಕೆಲ್ಲಾ ಉತ್ತರವೇ ಇಲ್ಲವೇ ಅಥವಾ ಉತ್ತರ ಯಾರಿಗೂ ಬೇಕಿಲ್ಲವೇ..?

- ಸಂಜಯ್ ಚಿತ್ರದುರ್ಗ, ಪತ್ರಿಕೋದ್ಯಮ ವಿಭಾಗ, ಎಸ್.ಡಿ.ಎಂ ಕಾಲೇಜು, ಉಜಿರೆ.

English summary
Small Children selling baloon in Dharmasthala lakshadeepotsava. people buying balloons with them kindness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X