Shravanmasa 2023: ಶ್ರಾವಣದಲ್ಲಿ ಶಿವನನ್ನು ಏಕೆ ಪೂಜಿಸಲಾಗುತ್ತದೆ? ಶ್ರಾವಣದ ಅರ್ಥವೇನು?
ಈ ಬಾರಿ ಶ್ರಾವಣಮಾಸ 59 ದಿನಗಳು ಮತ್ತು ಎಂಟು ಸೋಮವಾರಗಳವರೆಗೆ ನಡೆಯುತ್ತದೆ. ಈ ಮಾಸದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಇದರಿಂದ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗುತ್ತದೆ. ಭಕ್ತಿಯಿಂದ ಶಿವನನ್ನು ಪೂಜಿಸಿದರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಅಷ್ಟಕ್ಕೂ ಶಿವನಿಗೆ ಶ್ರಾವಣ ಏಕೆ ಪ್ರಿಯ ಮತ್ತು ಈ ತಿಂಗಳಿಗೆ ಶ್ರಾವಣ ಎಂದು ಏಕೆ ಕರೆಯಲಾಗುತ್ತದೆ? ಇದಕ್ಕೆ ಉತ್ತರ ಇಲ್ಲಿದೆ.
ಕರ್ನಾಟಕ ಹಾಗೂ ದಕ್ಷಿಣದ ರಾಜ್ಯಗಳಲ್ಲಿ 2023 ರಲ್ಲಿ ಶ್ರಾವಣದಲ್ಲಿ ಜುಲೈ 18 ಮಂಗಳವಾರದಿಂದ ಆಗಸ್ಟ್ 16 ರ ಬುಧವಾರದವರೆಗೆ ಅಧಿಕ ಮಾಸ ಇರುತ್ತದೆ. ಹಾಗಾಗಿ ಇದನ್ನು ಅಧಿಕ ಶ್ರವಣ ಮಾಸ ಎಂದು ಕರೆಯಲಾಗುತ್ತದೆ. ಆದರೆ ಈ ಬಾರಿ ಸೋಮವಾರದ ವ್ರತ ಹಾಗೂ ಇತರ ವ್ರತಗಳ ದಿನಾಂಕದಲ್ಲಿ ಸ್ವಲ್ಪ ಬದಲಾವಣೆ ಆಗುತ್ತದೆ.

ಶಿವನಿಗೆ ಇಷ್ಟವಾದ ಶ್ರಾವಣ
ಶ್ರಾವಣಮಾಸ ಶಿವನಿಗೆ ನೆಚ್ಚಿನ ಮಾಸವಾಗಿದೆ. ಶ್ರಾವಣಮಾಸ ದಕ್ಷಿಣಾಯಣವನ್ನು ಸೂಚಿಸುತ್ತದೆ. ಅದರ ಅಧಿಪತಿ ಮಹಾದೇವ ಶಿವನಾಗಿದ್ದಾನೆ. ಅದಕ್ಕಾಗಿಯೇ ಅವರನ್ನು ಈ ತಿಂಗಳಲ್ಲಿ ಪೂಜಿಸಲಾಗುತ್ತದೆ.
ಎರಡನೆಯ ಮುಖ್ಯವಾದ ವಿಷಯವೆಂದರೆ, 'ಶಿವಲಿಂಗ'ದ ಮೇಲೆ ಇಡುವ ಬಿಲ್ವಪತ್ರೆ ಮಳೆಯ ಮಾಸದಲ್ಲಿ ಬೆಳೆಯುತ್ತದೆ. ಈ ತಿಂಗಳು ಮುಂಗಾರು ಪ್ರವೇಶವಾಗಿರುತ್ತದೆ. ಹೆಚ್ಚು ಮಳೆಯಾದಾಗ ಬಿಲ್ವಪತ್ರೆ ಹೆಚ್ಚು ಸಿಗುತ್ತದೆ. ಆದ್ದರಿಂದ ಶಿವನಿಗೆ ಶ್ರಾವಣ ಇಷ್ಟವಾಗುತ್ತದೆ. ಸ್ಕಂದ ಪುರಾಣದಲ್ಲಿಯೂ ಈ ಮಾಸದ ಉಲ್ಲೇಖವಿದೆ.
ಹುಣ್ಣಿಮೆಯಂದು ಶ್ರಾವಣ ನಕ್ಷತ್ರ ಗೋಚರ
ಅದರ ಹಿಂದೆ ಅನೇಕ ಕಥೆಗಳನ್ನು ಹೇಳಲಾಗುತ್ತದೆ. ಶಿವಪುರಾಣದ ಪ್ರಕಾರ 'ಶ್ರಾವಣ' ನಕ್ಷತ್ರವು ಈ ತಿಂಗಳ ಹುಣ್ಣಿಮೆಯಂದು ಬರುತ್ತದೆ, ಆದ್ದರಿಂದ ಈ ತಿಂಗಳಿಗೆ 'ಶ್ರಾವಣ' ಎಂದು ಹೆಸರು.

ಶ್ರಾವಣದ ಇನ್ನೊಂದು ಅರ್ಥ
ಇನ್ನೊಂದು ನಂಬಿಕೆಯ ಪ್ರಕಾರ ಈ ಮಾಸವು ಪೂಜೆಗೆ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಅದರ ಮಹತ್ವವನ್ನು ಕೇಳಲು ಯೋಗ್ಯವಾಗಿದೆ.
ಶಿವ-ಪಾರ್ವತಿಯರ ಮಿಲನದ ತಿಂಗಳು
ಒಂದು ನಂಬಿಕೆಯ ಪ್ರಕಾರ, ಈ ತಿಂಗಳು ಶಿವ-ಪಾರ್ವತಿ ಭೇಟಿಯ ತಿಂಗಳು. ಅಂದರೆ ಪಾರ್ವತಿ ಶಿವನನ್ನು ಪಡೆಯಲು ತೀವ್ರ ತಪಸ್ಸು ಮಾಡಿದ ಬಳಿಕ ಶಿವನ ಪಾರ್ವತಿಗೆ ಕಾಣಿಸಿಕೊಂಡನು. ಶಿವ ಪಾರ್ವತಿಗೆ ಕಾಣಿಸಿಕೊಂಡಾಗ ಅದು ಶ್ರಾವಣ ತಿಂಗಳಾಗಿತ್ತು.
ಶ್ರಾವಣನಲ್ಲಿ ಶಿವ ತಮ್ಮ ಅತ್ತೆಯ ಮನೆಗೆ ಭೇಟಿ
ಹಾಗಾಗಿ ಇನ್ನೊಂದು ಕಥೆಯ ಪ್ರಕಾರ, ಶ್ರಾವಣಮಾಸದಲ್ಲಿ ಶಿವ ತಮ್ಮ ಇಡೀ ತಂಡದೊಂದಿಗೆ ತಮ್ಮ ಅತ್ತೆಯ ಮನೆಗೆ ತೆರಳಿದ್ದರು. ಅಲ್ಲಿ ಅವರನ್ನು ತುಂಬಾ ಗೌರವಿಸಲಾಯಿತು. ಆದ್ದರಿಂದ ಅವರನ್ನು ಈ ತಿಂಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಈ ತಿಂಗಳು ಭಗವಂತನಲ್ಲಿ ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುವುದು ಈ ಶ್ರಾವಣ ಮಾಸದ ವಿಶೇಷತೆ. ಈ ಸಮಯದಲ್ಲಿ ಮನಃಪೂರ್ವಕವಾಗಿ ಮಾಡುವ ಪೂಜೆಯಿಂದ ದೇವರ ಅನುಗ್ರಹವನ್ನು ಪಡೆಯಬಹುದು.

ಶ್ರಾವಣಮಾಸದಲ್ಲಿ ಈ ಮಂತ್ರಗಳಿಂದ ಶಿವನನ್ನು ಆರಾಧಿಸಿ
ಓಂ ನಮಃ ಶಿವಾಯ ।
ಓಂ ಶಿವಾಯ ನಮಃ
ಓಂ ಶಂಕರಾಯ ನಮಃ ।
ಓಂ ಮಹಾದೇವಾಯ ನಮಃ ।
ಓಂ ಮಹೇಶ್ವರಾಯ ನಮಃ ।
ಓಂ ಶ್ರೀ ರುದ್ರಾಯ ನಮಃ ।
ಓಂ ನೀಲಕಂಠಾಯ ನಮಃ ।
ಓಂ ತ್ರ್ಯಮ್ಬಕಂ ಯಜಾಮಹೇ ಸುಗನ್ಧಿ ಪುಷ್ಟಿವರ್ಧನಮ್ । ಉರ್ವಾರುಕಮಿವ್ ಬನ್ಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ॥
ಸೋಮವಾರ ವ್ರತದ ದಿನಾಂಕ ಹೀಗಿದೆ: , 21 ಆಗಸ್ಟ್ , 28 ಆಗಸ್ಟ್ , 11 ಸೆಪ್ಟೆಂಬರ್ ಇದ್ದು, ಈ ದಿನ ಶಿವನ ಆರಾಧನೆಗೆ ಬಹಳ ಸೂಕ್ತವಾಗಿದೆ. ಇನ್ನು ಆಗಸ್ಟ್ 22, ಆಗಸ್ಟ್ 29, ಸೆಪ್ಟೆಂಬರ್ 5, ಸೆಪ್ಟೆಂಬರ್ 12 ರಂದು ಮಂಗಳ ಗೌರಿ ವ್ರತ ಆಚರಣೆ ಮಾಡಬೇಕು.
ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಂಪ್ರದಾಯದ ಅನುಸಾರ, ಶ್ರಾವಣ ಮಾಸವು ಜುಲೈ 18 ರ ಮಂಗಳವಾರ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 16 ರ ಬುಧವಾರ ಕೊನೆಗೊಳ್ಳುತ್ತದೆ. ಹಾಗೆಯೇ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಹರಿಯಾಣ, ಬಿಹಾರ, ಛತ್ತೀಸ್‌ಗಢ ಮತ್ತು ಇತರ ಉತ್ತರ ಭಾರತದ ರಾಜ್ಯಗಳಲ್ಲಿ ಜುಲೈ 4 ರಂದು ಮಂಗಳವಾರ ಪ್ರಾರಂಭವಾಗಿ, ತ್ತು ಗುರುವಾರ, ಆಗಸ್ಟ್ 31 ರಂದು ಕೊನೆಗೊಳ್ಳುತ್ತದೆ.












Click it and Unblock the Notifications