Arbail Shivaram Hebbar: ಎಪಿಎಂಸಿ to ವಿಧಾನಸೌಧದ ಜರ್ನಿಯಲ್ಲಿ ಬೆಳೆದ ಶಿವರಾಮ್‌ ಹೆಬ್ಬಾರ್‌! ವ್ಯಕ್ತಿ ಪರಿಚಯ

ಸತತ 2 ಅವಧಿಗೆ ಶಾಸಕರಾಗಿರುವ ಶಿವರಾಮ್‌ ಹೆಬ್ಬಾರ್‌ ಎರಡು ಸಲ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಆದರೆ, ರಾಜಕೀಯ ಸ್ಥಿತ್ಯಂತರಗಳಿಂದ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಸದ್ಯ ಬಿಜೆಪಿ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರೆಬೈಲು ಶಿವರಾಮ ಹೆಬ್ಬಾರ್, ಉದ್ಯಮಿ ಕೂಡ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದು, ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸತತ 2 ಅವಧಿಗೆ ಶಾಸಕರಾಗಿರುವ ಶಿವರಾಮ್‌ ಹೆಬ್ಬಾರ್‌ ಎರಡು ಸಲ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಆದರೆ, ರಾಜಕೀಯ ಸ್ಥಿತ್ಯಂತರಗಳಿಂದ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಸದ್ಯ ಬಿಜೆಪಿ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿಯಲ್ಲೊಬ್ಬರು.

ಶಿವರಾಮ್‌ ಹೆಬ್ಬಾರ್‌ ಅವರ ಪೂರ್ಣ ಹೆಸರು ಅರೆಬೈಲು ಶಿವರಾಮ್‌ ಹೆಬ್ಬಾರ್‌. 1956 ಜೂನ್‌ 4ರಂದು ಯಲ್ಲಾಪುರದಲ್ಲಿ ಜನಿಸುವ ಇವರ ತಂದೆ ಹೆಸರು ಮಹಾಬಲೇಶ್ವರ ಹೆಬ್ಬಾರ್‌. ಎಎಸ್‌ಎಸ್‌ಎಲ್‌ಸಿವರೆಗೂ ವ್ಯಾಸಂಗ ಮಾಡಿರುವ ಶಿವರಾಮ್‌ ಹೆಬ್ಬಾರ್‌ ಉದ್ಯಮಿಯಾಗಿಯೂ ಯಶಸ್ಸನ್ನು ಕಂಡಿದ್ದು, ಹಲವಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ. 1983ರಲ್ಲಿಯೇ ಶಿವರಾಮ್‌ ಹೆಬ್ಬಾರ್‌ ಅವರ ರಾಜಕೀಯ ಜೀವನ ಆರಂಭವಾಗಿದ್ದು, ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಆಯ್ಕೆಯಾಗಿ ರಾಜಕೀಯ ಜೀವನ ಪ್ರವೇಶಿಸಿದರು.

Shivaram Hebbar Age, Biography, Education, Family, Net Worth & Political Career Details

ಬಳಿಕ ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಶಿವರಾಮ್‌ ಹೆಬ್ಬಾರ್‌ ಸೇವೆ ಸಲ್ಲಿಸಿದ್ದಾರೆ. 2008ರಲ್ಲಿ ವಿಧಾನಸಭಾ ಚುನಾವಣೆಗೆ ಯಲ್ಲಾಪುರ-ಮುಂಡಗೋಡ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಆದರೆ, ವಿಎಸ್‌ ಪಾಟೀಲ್‌ ಎದುರು ಸೋಲು ಅನುಭವಿಸುತ್ತಾರೆ. ಬಳಿಕ 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಶಿವರಾಮ್‌ ಹೆಬ್ಬಾರ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಾರೆ. ಬಳಿಕ 2018ರಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಹೆಬ್ಬಾರ್‌ ಮರು ಆಯ್ಕೆಯಾಗುತ್ತಾರೆ. ಈ ವೇಳೆ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಆದರೆ, 2019ರಲ್ಲಿ ಬದಲಾದ ರಾಜಕೀಯ ಬೆಳವಣಿಗೆಗಳಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಶಿವರಾಮ್‌ ಹೆಬ್ಬಾರ್‌ ಅವರನ್ನು ಪಕ್ಷಾಂತರ ನಿಷೇಧ ಕಾಯಿದೆಯಡಿ ವಿಧಾನಸಭಾ ಸ್ಪೀಕರ್‌ ಕೆಆರ್‌ ರಮೇಶ್‌ ಕುಮಾರ್‌ ಅವರು ಅನರ್ಹಗೊಳಿಸುತ್ತಾರೆ. ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಯಲ್ಲಾಪುರದಲ್ಲಿ ಸ್ಪರ್ಧಿಸುವ ಶಿವರಾಮ್‌ ಹೆಬ್ಬಾರ್‌ ಮರುಆಯ್ಕೆಯಾಗುತ್ತಾರೆ. ಬಳಿಕ ಬಿಎಸ್‌ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಕಾರ್ಮಿಕ ಹಾಗೂ ಸಕ್ಕರೆ ಕಾರ್ಖಾನೆ ಸಚಿವರಾಗಿ ನೇಮಕವಾದರು. ಬಳಿಕ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೃಷಿ ಮತ್ತು ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿರುವ ಶಿವರಾಮ್‌ ಹೆಬ್ಬಾರ್‌, ಕರ್ನಾಟಕ ರಾಜ್ಯ ಸಹಕಾರಿ (ಅಪೆಕ್ಸ್) ಬ್ಯಾಂಕ್‌ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕೆನರಾ ಜಿಲ್ಲಾ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಶಿರಸಿಯ (ಕೆಡಿಸಿಸಿ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವರಾಮ್‌ ಹೆಬ್ಬಾರ್‌ ರಾಜಕೀಯ ಕ್ಷೇತ್ರವಲ್ಲದೇ ಉದ್ಯಮ ಕ್ಷೇತ್ರದಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

Shivaram Hebbar Age, Biography, Education, Family, Net Worth & Political Career Details

ಸದ್ಯ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾಗಿರುವ ಶಿವರಾಮ್‌ ಹೆಬ್ಬಾರ್‌ಗೆ ಈ ಚುನಾವಣೆಯಲ್ಲಿಯೂ ಟಿಕೆಟ್‌ ಖಚಿತ ಎನ್ನಲಾಗಿದೆ. ಆದರೆ, ಮೂಲ ಮತ್ತು ವಲಸಿಗ ಎಂಬ ಕಿತ್ತಾಟ ಯಲ್ಲಾಪುರದಲ್ಲಿಯೂ ಇದ್ದು, ಶಿವರಾಮ್‌ ಹೆಬ್ಬಾರ್‌ಗೆ ಮುಳುವಾಗುವ ಸಾಧ್ಯತೆ ಇದೆ. ಮೂಲ ಬಿಜೆಪಿಗರನ್ನು ಶಿವರಾಮ್‌ ಹೆಬ್ಬಾರ್‌ ಕಡೆಗಣಿಸ್ತಿದ್ದಾರೆ ಎಂಬುದು ಇಲ್ಲಿನ ಕಾರ್ಯಕರ್ತರ ಆರೋಪವಾಗಿದೆ. ಅದಲ್ಲದೇ ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಶಾಸಕ ವಿಎಸ್‌ ಪಾಟೀಲ್‌ ಹಾಗೂ ಶಾಂತರಾಮ್‌ ಸಿದ್ಧಿ ಕೂಡ ಪ್ರಯತ್ನಿಸುತ್ತಿರುವುದು ಶಿವರಾಮ್‌ ಹೆಬ್ಬಾರ್‌ಗೆ ಸಮಸ್ಯೆ ತರುವ ಸಾಧ್ಯತೆ ಇದೆ. ಈಗಾಗಲೇ ವಿಎಸ್‌ ಪಾಟೀಲ್‌ ಬೇರೆ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದು, ಬಿಜೆಪಿ ಕಾರ್ಯಕರ್ತರ ಮತವಿಭಜನೆ ಆಗುವ ಸಾಧ್ಯತೆಯೂ ಇದೆ. ಇದರಿಂದ ಶಿವರಾಮ್‌ ಹೆಬ್ಬಾರ್‌ ಅವರ ನಡೆ ಏನು ಎಂಬುದೇ ಕುತೂಹಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+