• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದೇ ಸಲಕ್ಕೆ 3 ಲಕ್ಷ ರುಪಾಯಿಯಷ್ಟು ಆಪಲ್ ಪ್ರಾಡಕ್ಟ್ ಖರೀದಿಸಿದ್ದ ಬೆಳಗೆರೆ

By ಒನ್ ಇಂಡಿಯಾ ಡೆಸ್ಕ್
|

ಪತ್ರಕರ್ತ ರವಿ ಬೆಳಗೆರೆಯನ್ನು ತುಂಬ ಹತ್ತಿರದಿಂದ ಬಲ್ಲವರಿಗೆ ಗೊತ್ತಿರಬಹುದಾದ ವಿಷಯ ಏನೆಂದರೆ, ಅವರ ಅನುಕರಣೆ ಸ್ವಭಾವ. ಯಾರನ್ನಾದರೂ ಬಹಳ ಮೆಚ್ಚಿಕೊಂಡು ಬಿಟ್ಟರೆ, ಅವರು ಏನು ಹೇಳಿದರೂ ಅದನ್ನು ಕೇಳಿಬಿಡುತ್ತಿದ್ದರು. ಅದಕ್ಕೆ ಉದಾಹರಣೆ ಸಾಲಸಾಲಾಗಿ ಸಿಗುತ್ತವೆ.

ಅಂಡರ್ ವರ್ಲ್ಡ್ ವ್ಯಕ್ತಿಯೊಬ್ಬನನ್ನು ಸಂದರ್ಶಿಸಿ ಬಂದ ಮೇಲೆ ಥೇಟ್ ಅವನಂತೆಯೇ ಮೈ ತುಂಬ ಒಡವೆ ಹೇರಿಕೊಂಡು ಫೋಟೋ ತೆಗೆಸಿಕೊಂಡಿದ್ದರು ಆರ್ ಬಿ. ಅದೇ ರೀತಿ ಚಂಪಾ ಧರಿಸುವ ಕನ್ನಡಕ, ಮಫ್ಲರ್ ಹಾಕಿಕೊಂಡಿರುವ ಫೋಟೋ ಕೂಡ ಕಾಣಬಹುದು. ಖುಷ್ವಂತ್ ಸಿಂಗ್ ರಂತೆ ಪಟಗಾ ಹಾಕಿಕೊಂಡಿರುವ ಫೋಟೋ ಸಹ ನೋಡಲು ಸಿಗುತ್ತದೆ. ಇದು ಅಷ್ಟಕ್ಕೇ ನಿಲ್ಲುತ್ತಿರಲಿಲ್ಲ.

ಅಕ್ಷರ ಗಾರುಡಿಗ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ

ತಮ್ಮ ಗೆಳೆಯನೊಬ್ಬ ಆಪಲ್ ಪ್ರಾಡಕ್ಟ್ ಬಗ್ಗೆ ಹೇಳಿದ್ದರಿಂದ ಒಂದೇ ದಿನದಲ್ಲಿ ಆಪಲ್ ಮ್ಯಾಕ್ ಬುಕ್ ಏರ್, ಐಫೋನ್, ಐಮ್ಯಾಕ್, ಐಪ್ಯಾಡ್ ಹೀಗೆ ಮೂರು ಲಕ್ಷ ರುಪಾಯಿಯಷ್ಟನ್ನು ತಂದಿಟ್ಟುಕೊಂಡರು. ಇದು ಹತ್ತು ವರ್ಷಗಳ ಹಿಂದಿನ ಮಾತು. ಆಗಿನ ಮೂರು ಲಕ್ಷ ರುಪಾಯಿ ಅಂದರೆ ನೀವೇ ಊಹಿಸಿಕೊಳ್ಳಿ.

ಔಡಿ ಕಾರು, ದುಬಾರಿ ಕ್ಯಾಮೆರಾ, ಬ್ರ್ಯಾಂಡೆಡ್ ಶರ್ಟ್ ಗಳು ಹೀಗೆ ರವಿ ಬೆಳಗೆರೆ ಅವರ ಬಳಿ ಇಲ್ಲದ್ದು ಏನೂ ಇರಲಿಲ್ಲ. ಕಪ್ಪು ಬಣ್ಣ ಅವರ ಅಚ್ಚುಮೆಚ್ಚು. ಬೀರು ತುಂಬ ಎಪ್ಪತ್ತರಿಂದ ನೂರು ಜೊತೆ ಬಟ್ಟೆಗಳಿರುತ್ತಿದ್ದವು. ಸನ್ ಗ್ಲಾಸ್, ಪರ್ ಫ್ಯೂಮ್ ಹೀಗೆ ಎಲ್ಲ ಇದ್ದರೂ ತುಂಬ ಮುಖ್ಯವಾದ ಕಾರ್ಯಕ್ರಮಗಳಿಗೂ ನೈಟ್ ಪ್ಯಾಂಟ್ ಹಾಗೂ ಸುಮಾರಾದ ಟೀ ಷರ್ಟ್- ಚಪ್ಪಲಿ ಹಾಕಿಕೊಂಡು, ತಮ್ಮ ಕೈಗಳಿಂದಲೇ ಕ್ರಾಪು ತಿದ್ದಿಕೊಂಡು ಹೊರಟು ಬಿಡುತ್ತಿದ್ದರು.

ಪತ್ರಕರ್ತ- ಸಾಹಿತಿ ರವಿ ಬೆಳಗೆರೆ ನಿಧನ- 1958ರಿಂದ 2020ರ ಹಾದಿ

ಆದರೆ, ಬರೆಯಲು ಅವರು ಬಳಸುತ್ತಿದ್ದ ಕಾಗದ ಹಾಗೂ ಪೆನ್ ಬಗ್ಗೆ ತುಂಬ ಪೊಸೆಸಿವ್ ಆಗಿದ್ದರು. ದಶಕಗಳಿಗೂ ಹೆಚ್ಚು ಕಾಲ ಬರವಣಿಗೆಗಾಗಿ ಅವರು ಬಳಸುತ್ತಿದ್ದದ್ದು ಅದೇ ಬ್ರ್ಯಾಂಡಿನ ಕಾಗದ ಹಾಗೂ ಪೆನ್. ತಮ್ಮ ಪತ್ರಿಕೆಗೆ ಧಾರಾವಾಹಿ ಕಂತನ್ನು ಬರೆಯುವುದಕ್ಕೆ ಆರಂಭಿಸುವ ಮೊದಲು ಒಂದು ಸಿಗರೇಟ್ ಹತ್ತಿಸಿಕೊಂಡು, ಏನನ್ನೋ ಧೇನಿಸುವಂತೆ ಸೇದುತ್ತಾ ಕೂತಿರುತ್ತಿದ್ದರು.

ಆ ಸಿಗರೇಟ್ ಮುಗಿದ ಮೇಲೆ ಬರವಣಿಗೆ ಆರಂಭಿಸಿದರೆ ತಡೆಯಿಲ್ಲದೆ ಸಾಗುತ್ತಿತ್ತು ಬರವಣಿಗೆ. ಆ ವಾರದ ಕಂತು ಸಿದ್ಧ. ಒಂದೇ ಒಂದು ಚಿತ್ತು ಕೂಡ ಇರುತ್ತಿರಲಿಲ್ಲ. ಆ ಮಧ್ಯದ ಸಮಯದಲ್ಲಿ ಸಣ್ಣ ಶಬ್ದ ಕೂಡ ಮಾಡುವಂತಿರಲಿಲ್ಲ. ಏನಾದರೂ ಶಬ್ದ ಆಯಿತೋ ಇಡೀ ಆಫೀಸಿನಲ್ಲಿ ಅಲ್ಲೋಲ ಕಲ್ಲೋಲ.

ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ

ರವಿ ಬೆಳಗೆರೆ ಅವರ ಅತಿ ಮುಖ್ಯ ಸಮಸ್ಯೆ ಇದ್ದದ್ದು ಯಾವುದೇ ಪ್ರಾಜೆಕ್ಟ್ ನಿಂದ ಬಹಳ ಕಾಲ ಎಕ್ಸೈಟ್ ಆಗಿರುತ್ತಿರಲಿಲ್ಲ. ಆರಂಭದಲ್ಲಿ ಇದ್ದ ಉತ್ಸಾಹ ಕ್ರಮೇಣ ಹೊರಟು ಹೋಗುತ್ತಿತ್ತು. ಇನ್ನು ಎಲ್ಲವನ್ನೂ ತಾವೇ ಮಾಡಬೇಕು ಎಂದುಕೊಳ್ಳುತ್ತಿದ್ದರು. ಅದರಲ್ಲೂ ಬರವಣಿಗೆ ವಿಷಯಕ್ಕೆ ಬಂದರಂತೂ ಇನ್ನೂ ಹೆಚ್ಚು ಮೊಂಡರಾಗುತ್ತಿದ್ದರು.

ಆ ಕಾರಣದಿಂದಲೇ ರವಿ ಬೆಳಗೆರೆ ಅವರು ಅರ್ಧ ಬರೆದು ನಿಲ್ಲಿಸಿದ ಎಷ್ಟೋ ಕಾದಂಬರಿಗಳು ಇವೆ. ಜತೆಗೆ ಎಷ್ಟೋ ಕಾದಂಬರಿಗಳಿಗೆ ಅನುವಾದದ ಹಕ್ಕನ್ನು ಪಡೆದಿದ್ದು, ಅವು ಹಾಗೇ ಉಳಿದಿವೆ.

   ತಲೆ ಮೇಲೆ ಹೊಡೆದ ಹಾಗೆ ಮಾತಾಡೋರು ನನ್ ಜೊತೆ | Oneindia Kannada

   English summary
   Here we talking about the senior journalist Ravi Belagere shopping craze of buying Rs 3 lakh worth apple products in 1 day
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X