ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ರಾಮಾಯಣ, ಮಹಾಭಾರತದ ಬಗ್ಗೆ ಶಾಲಾ ಮಕ್ಕಳ ಜ್ಞಾನಕ್ಕೆ ಮೆಚ್ಚುಗೆ

|
Google Oneindia Kannada News

ವಿಶೇಷ ಕಾರಣಕ್ಕಾಗಿ ಇಬ್ಬರು ಶಾಲಾ ಮಕ್ಕಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಇಬ್ಬರು ಮಕ್ಕಳು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ವಿವರಗಳನ್ನು ನಿಲ್ಲಿಸದೇ ಹೇಳುವುದನ್ನು ವಿಡಿಯೋ ಒಳಗೊಂಡಿದೆ. ಇಬ್ಬರು ಹುಡುಗರಿಗೆ ಎರಡು ಮಹಾಕಾವ್ಯಗಳಿಂದ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳಿಗೆ ಮಕ್ಕಳು ಥಟ್ ಅಂತ ಉತ್ತರ ಹೇಳುತ್ತಾರೆ. ಇವರ ಉತ್ತರ ಕೇಳಿದರೆ ಅವರ ನಾಲಿಗೆಯ ತುದಿಯಲ್ಲಿ ಉತ್ತರಗಳಿವೆ ಎಂಬಂತೆ ಕಂಡುಬರುತ್ತದೆ. ಟ್ವಿಟ್ಟರ್ ಬಳಕೆದಾರರಾದ ಬ್ಯೋಮಕೇಶ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು 92,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.

ವಿಡಿಯೋದಲ್ಲಿ, ಅವರಲ್ಲಿ ಒಬ್ಬರಿಗೆ ಪಾಂಡವ ಸಹೋದರರು, ಅರ್ಜುನನ ಗುರು, ದ್ರೋಣಾಚಾರ್ಯರ ಮಗ ಮತ್ತು ಮಹಾಭಾರತದ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ವಿಡಿಯೋದಲ್ಲಿರುವ ಇನ್ನೊಬ್ಬ ಹುಡುಗರಿಗೆ ರಾಮಾಯಣದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಈ ಹುಡುಗ ಕೆಜಿ 2 ನಲ್ಲಿ ಓದುತ್ತಾನೆ ಮತ್ತು ಮಹಾಕಾವ್ಯಗಳ ಬಗ್ಗೆ ಅವನ ವಿಸ್ತಾರವಾದ ಜ್ಞಾನವು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

School kids take the Internet by storm with their knowledge about Ramayana and Mahabharata

ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಕ್ಕಳ ಜ್ಞಾನವನ್ನು ಮೆಚ್ಚಿ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಳಗಿನ ಕೆಲವು ಕಾಮೆಂಟ್‌ಗಳನ್ನು ನೋಡಿ:

English summary
A video of two school children has gone viral on social media for a very special reason. The video features these two kids rattling off details about the epics Ramayana and Mahabharata without stopping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X