ಈ ಕಾರ್‌ಗಳನ್ನು ಖರೀದಿಸಿದರೆ, ಆಕರ್ಷಕ ಡಿಸ್ಕೌಂಟ್; ಆ ಕಾರಗಳು ಯಾವವು?
ನೀವು ಕಾರು ಖರೀದಿಸುವ ಆಸಕ್ತಿ ಇದೆಯಾ. ಈ ತಿಂಗಳಲ್ಲಿ ಒಂದು ಕಾರ್ ಬುಕ್ ಮಾಡುವ ಮನಸ್ಸು ಮಾಡಿದ್ದೀರಾ. ಹಾಗಿದ್ದರೆ ತಡ ಮಾಡಬೇಡಿ, ನೀವು ಈ ಕಂಪನಿಯ ಕಾರ್‌ಗಳನ್ನು ಖರೀದಿಸಲು ಮುಂದಾಗಿದ್ದೇ ಆದಲ್ಲಿ ಆಕರ್ಷಕ ಡಿಸ್ಕೌಂಟ್ ಪಡೆಯಬಹುದು. ಮಾರುತಿ ಸುಜುಕಿ, ಹ್ಯುಂಡೈ ಮತ್ತು ಹೋಂಡಾ ಕಂಪನಿಗಳು ತಮ್ಮ ಕಾರ್‌ಗಳ ಮೇಲೆ ಆಕರ್ಷಕ ಆಫರ್ ನೀಡುತ್ತಿವೆ.
ಮಾರುಕಟ್ಟೆಯಲ್ಲಿರುವ ಸದ್ಯ ಸದ್ದು ಮಾಡುತ್ತಿರುವ ಈ ಕಾರ್‌ಗಳನ್ನು ನೀವು ಕೊಂಡರೆ ನಿಮಗೆ ಆರ್ಥಿಕ ಹೊಣೆ ಸಹ ತಪ್ಪುತ್ತದೆ. ಹಾಗಿದ್ದರೆ ಈ ವರದಿಯಲ್ಲಿ ಯಾವೆಲ್ಲಾ ಕಾರಗಳ ಮೇಲೆ ಎಷ್ಟು ಹಣ ಉಳಿಸಬಹುದು ಎಂಬುದನ್ನು ನೋಡೋಣ.

ಮಾರುತಿ ಆಲ್ಟೊ ಕೆ10
ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನ ಛಾಪೂ ಮೂಡಿಸಿರುವ ಮಾರುತಿ, ತನ್ನ ಆಲ್ಟೊ ಕೆ10 ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಒಂದು ವೇಳೆ ಈ ಕಾರನ್ನು ನೀವು ಇದೇ ತಿಂಗಳು ಖರೀದಿ ಮಾಡಿದಲ್ಲಿ, 63,000 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನೀವು ಕಂಪನಿಯ ಶೋರೂಂ ಅನ್ನು ಸಂಪರ್ಕಿಸಬಹುದು. ಈ ಕಾರಿನ ಬೆಲೆ 3.99 ಲಕ್ಷ ರೂಪಾಯಿಗಳಿಂದ ಆರಂಭ.
ಈ ಕಾರ್ ನಿಮಗೆ ಪೆಟ್ರೋಲ್ ಮತ್ತು CNG ಆಯ್ಕೆ ನೀಡುತ್ತದೆ. ಇದು ಪೆಟ್ರೋಲ್ ಮೋಡ್‌ನಲ್ಲಿ 25 ಕಿಮೀ ಮತ್ತು ಸಿಎನ್‌ಜಿ ಮೋಡ್‌ನಲ್ಲಿ 34 ಕಿಮೀ ಮೈಲೇಜ್ ನೀಡುತ್ತದೆ. ಈ ಕಾರು 998 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 67 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಸುರಕ್ಷತೆಗಾಗಿ, ಕಾರಿನಲ್ಲಿ ಏರ್‌ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಇದರ ಹೊರತಾಗಿ, ಮಾರುತಿ ತನ್ನ ಸ್ವಿಫ್ಟ್‌ನಲ್ಲಿ 38,000 ರೂಪಾಯಿ ಹಾಗೂ ವ್ಯಾಗನ್-ಆರ್‌ನಲ್ಲಿ 60,000 ರೂಪಾಯಿ ರಿಯಾಯಿತಿ ನೀಡುತ್ತಿದೆ.
ಹೋಂಡಾದ ಕಾಂಪ್ಯಾಕ್ಟ್ ಸೆಡಾನ್ ಕಾರು ಅಮೇಜ್ ಅನ್ನು ಖರೀದಿಸುವ ಇಚ್ಛೆಯನ್ನು ಹೊಂದಿದ್ದರೆ, ನೀವು 96 ಸಾವಿರ ರೂಪಾಯಿ ಭಾರೀ ಹಣ ಉಳಿಸಬಹುದು. ಹೋಂಡಾ ಸಿಟಿ ಹೈಬ್ರಿಡ್ ಮೇಲೆ 65,000 ರೂ.ವರೆಗೆ ಹಣ ಉಳಿಸಬಹುದು.

ಹುಂಡೈ ಕಾರ್‌ಗಳಲ್ಲೂ ರಿಯಾಯಿತಿ
ಹುಂಡೈನ ಕಾಂಪ್ಯಾಕ್ಟ್ SUV ವೆನ್ಯೂನಲ್ಲಿ ನೀವು ರೂ 35,000 ವರೆಗೆ ಉಳಿಸಬಹುದು. ಈ ರಿಯಾಯಿತಿಯು ರೂ 25,000 ನಗದು ರಿಯಾಯಿತಿ ಮತ್ತು ರೂ 10,000 ವಿನಿಮಯ ಬೋನಸ್ ಹೊಂದಿದೆ. ಇಷ್ಟೇ ಅಲ್ಲ, ನೀವು ಕಂಪನಿಯ Grand i10 Nios ನಲ್ಲಿ 48,000 ರೂ.ಗಳವರೆಗೆ ಡಿಸ್ಕೌಂಟ್ ಪಡೆಯಬಹುದು. ಈ ರಿಯಾಯಿತಿಯು ಮೇ 31 ರವರೆಗೆ ಮಾತ್ರ ಅನ್ವಯಿಸುತ್ತದೆ.












Click it and Unblock the Notifications