ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಳವಾಸ್ತು ಖ್ಯಾತಿಯ ಡಾ. ಚಂದ್ರಶೇಖರ್ ಗುರೂಜಿ ಹಿನ್ನೆಲೆ ಏನು?

|
Google Oneindia Kannada News

ಸರಳ ವಾಸ್ತು ಸಂಶೋಧಕ ಎನಿಸಿಕೊಂಡಿದ್ದ ಡಾ. ಚಂದ್ರಶೇಖರ್ ಗುರೂಜಿ ಹತ್ಯೆಯಾಗಿದೆ. ಇಂಜಿನಿಯರ್ ಆಗಿದ್ದ ಚಂದ್ರಶೇಖರ್ ವಾಸ್ತುತಜ್ಞರಾಗಿ ಜನಪ್ರಿಯರಾದರು.

Recommended Video

Chandrashekar Guruji ಓದಿದ್ದು ಸಿವಿಲ್ ಇಂಜಿನಿಯರಿಂಗ್ ಆಗಿದ್ದು ವಾಸ್ತು ತಜ್ಞ | OneIndia Kannada

ಸರಳವಾಸ್ತು ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿರುವಂತೆ, ಚಿಕ್ಕಂದಿನಿಂದಲೇ ಜನರ ನೋವು, ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಚಂದ್ರಶೇಖರ್ ರೂಢಿಸಿಕೊಂಡಿದ್ದರು. ಬಾಗಲಕೋಟೆ ಮೂಲದವರಾದ ಚಂದ್ರಶೇಖರ್ ತಮ್ಮ 8ನೇ ವಯಸ್ಸಿನಲ್ಲಿ ದೇವಸ್ಥಾನವೊಂದರದ ಜೀರ್ಣೋದ್ಧಾರಕ್ಕಾಗಿ ದೇಣಿಗೆ ಸಂಗ್ರಹಕ್ಕೆ ಕೈಜೋಡಿಸಿದ್ದರು.

ಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಹಂತಕರ ಬಂಧನಹುಬ್ಬಳ್ಳಿಯಲ್ಲಿ ಚಂದ್ರಶೇಖರ್ ಗುರೂಜಿ ಹಂತಕರ ಬಂಧನ

14ನೇ ವಯಸ್ಸಿನಲ್ಲಿ ಜೀವನ ಸಾರ್ಥಕತೆಗಾಗಿ ಭಾರತೀಯ ಸೇನೆ ಸೇರಲು ಯತ್ನಿಸಿದ್ದರು. ಆದರೆ, ಸೇನೆಗೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಆದರೆ, ಉತ್ತಮ ಶಿಕ್ಷಣ ಪಡೆಯುವ ಗುರಿಯನ್ನು ಮುಂದುವರೆಸಿದರು.

Saral Vaastu Fame Dr. Chandrashekhar Guruji Profile, Education, Family and other details

ಬಾಗಲಕೋಟೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಮುಂಬೈನಲ್ಲಿ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಹಂಬಲ ಕಡಿಮೆಯಾಗಿರಲಿಲ್ಲ.

ಚಂದ್ರಶೇಖರ್ ಗುರೂಜಿ ಹತ್ಯೆ ನಡೆದ ನಾಲ್ಕು ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರಶೇಖರ್ ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆ ಜುಲೈ 6ರಂದು ನಡೆಯಲಿದ್ದು, ಹುಬ್ಬಳ್ಳಿ ಬಳಿಯ ಗ್ರಾಮವೊಂದರ ಜಮೀನಿನಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.

ಉತ್ತಮ ಶಿಕ್ಷಣ ಪಡೆಯುವ ಗುರಿ

ಉತ್ತಮ ಶಿಕ್ಷಣ ಪಡೆಯುವ ಗುರಿ

ಬಾಗಲಕೋಟೆ ಮೂಲದ ಚಂದ್ರಶೇಖರ್ ಗುರೂಜಿ ಮೂಲ ಹೆಸರು ವಿರುಪಾಕ್ಷಪ್ಪ ಅಂಗಡಿ. ಚಂದ್ರಶೇಖರ್ ಗುರೂಜಿ ಅವರು ಇಬ್ಬರು ಸೋದರರು, ಇಬ್ಬರು ಪತ್ನಿಯರು, ಮೂವರು ಸಹೋದರಿಯರು ಇದ್ದರು. ಸದ್ಯ ಒಬ್ಬ ಸೋದರಿ ನಿಧನರಾಗಿದ್ದಾರೆ.

14ನೇ ವಯಸ್ಸಿನಲ್ಲಿ ಜೀವನ ಸಾರ್ಥಕತೆಗಾಗಿ ಭಾರತೀಯ ಸೇನೆ ಸೇರಲು ಯತ್ನಿಸಿದ್ದರು. ಆದರೆ, ಸೇನೆಗೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಆದರೆ, ಉತ್ತಮ ಶಿಕ್ಷಣ ಪಡೆಯುವ ಗುರಿಯನ್ನು ಮುಂದುವರೆಸಿದರು.

1995ರಲ್ಲಿ ಶರಣ ಸಂಕುಲ ಟ್ರಸ್ಟ್

1995ರಲ್ಲಿ ಶರಣ ಸಂಕುಲ ಟ್ರಸ್ಟ್

ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಮುಂಬೈನಲ್ಲಿ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಹಂಬಲ ಕಡಿಮೆಯಾಗಿರಲಿಲ್ಲ.

1995ರಲ್ಲಿ ಶರಣ ಸಂಕುಲ ಟ್ರಸ್ಟ್ ಸ್ಥಾಪಿಸಿ ,ಟ್ರಸ್ಟಿಯಾಗಿ ಸಮಾಜಮುಖಿ ಕಾರ್ಯಗಳಿಗೆ ಚಲನೆ ನೀಡಿದರು. 1998ರಲ್ಲಿ ಮೊದಲ ಬಾರಿಗೆ ಮನೆ, ವಾಸ್ತು ಬಗ್ಗೆ ಕನಸು ಕಾಣಲಾರಂಭಿಸಿದರು. ಈ ಜೀವನದಲ್ಲಿ ಜನರ ಸಮಸ್ಯೆ ಬಗೆಹರಿಸಲು ಮನೆ ವಾಸ್ತು ಅಗತ್ಯದ ಬಗ್ಗೆ ಆಲೋಚಿಸಿ ಸರಳ ವಾಸ್ತು ರೂಪಿಸುವ ಬಗ್ಗೆ ಚಿಂತಿಸಿದರು.

ಜನರ ಕಷ್ಟಗಳಿಗೆ ಸರಳ ಪರಿಹಾರ

ಜನರ ಕಷ್ಟಗಳಿಗೆ ಸರಳ ಪರಿಹಾರ

ಭಾರತದ ಪುರಾತನ ವಾಸ್ತುಶಾಸ್ತ್ರದ ಆಧಾರದ ಮೇಲೆ ಸರಳ ವಾಸ್ತು ರೂಪಿಸಿದರು. ಮಾಗದರ್ಶಕ, ಸಲಹೆಗಾರರಾಗಿ ಗುರುತಿಸಿಕೊಂಡರು. ಜನರ ಕಷ್ಟಗಳಿಗೆ ಸರಳ ಪರಿಹಾರಗಳನ್ನು ಸೂಚಿಸುತ್ತಾ ಬಂದರು. ಅವರು ಪಾಲಿಸುತ್ತಾ ಬಂದಿದ್ದ ಐದು ತತ್ವಗಳು ಆಥವಾ ಸೂತ್ರಗಳು

-ಯಾರಿಗೂ ಮೋಸ ಮಾಡಬಾರದು
-ಜೀವನದಲ್ಲಿ ಮೇಲಿನ ಸ್ತರಕ್ಕೇರಿದರೂ ಸೌಜನ್ಯದಿಂದಿರಬೇಕು
-ಹೆತ್ತವರ ಆಶೀರ್ವಾದ, ಆರೈಕೆಯಿಂದ ದೂರಾಗಬಾರದು
-ಸಂತ್ರಸ್ತರಿಗೆ ಸದಾ ಕಾಲ ನೆರವು ನೀಡಬೇಕು
-ಸದಾಕಾಲ ಸಂತೋಷದಿಂದರಬೇಕು ಹಾಗೂ ಇತರರ ಸಂತೋಷಕ್ಕಾಗಿ ದುಡಿಯಬೇಕು ಎಂಬ ಸರಳ ಸಲಹೆ ಸೂಚನೆ ನೀಡುತ್ತಿದ್ದರು.

ಸರಳ ವಾಸ್ತು ಎಂಬ ವಾಹಿನಿ

ಸರಳ ವಾಸ್ತು ಎಂಬ ವಾಹಿನಿ

ಜನಪ್ರಿಯತೆಯ ತುತ್ತತುದಿ ಮುಟ್ಟಿದ್ದ ಡಾ ಚಂದ್ರಶೇಖರ್ ಗುರೂಜಿ ಸರಳ ವಾಸ್ತು ಎಂಬ ವಾಹಿನಿಯನ್ನೇ ಆರಂಭಿಸಿದ್ದರು. ಚಂದ್ರಶೇಖರ್ ಸಲಹೆ ಪಡೆದು ವಾಸ್ತು ಬದಲಾಯಿಸಿಕೊಂಡು ಅನೇಕರು ಏಳಿಗೆ ಕಂಡಿದ್ದರು. ಅನೇಕ ಖಾಸಗಿ ವಾಹಿನಿಗಳಲ್ಲಿ ತಮ್ಮ ಸಲಹೆ ಸೂಚನೆ ನೀಡುತ್ತಿದ್ದರು. ತಮ್ಮ ಕಚೇರಿಗೆ ಬರುವವರಿಂದ ಇಂತಿಷ್ಟು ಮೊತ್ತ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ವಾಸ್ತು ಪ್ರಕಾರ ಪರಿಹಾರ ಪಡೆದ ಬಳಿಕ ಏಳಿಗೆ ಕಾಣದಿದ್ದಾಗ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ

ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ

ಚಂದ್ರಶೇಖರ್ ಗುರೂಜಿ ಸರಳವಾಸ್ತು ಹೆಸರಿನಲ್ಲಿ ವಾಸ್ತು ಶಾಸ್ತ್ರದ ನೈಜತೆ ಅಪಮೌಲ್ಯಗೊಳಿಸಿದ್ದಾರೆ ಎಂದು ಆರೋಪಿಸಿರುವ ಶೈಲೇಶ್ ಜೈನ್, ಸರಳವಾಸ್ತು ಹೆಸರಿನಲ್ಲಿ ಚಂದ್ರಶೇಖರ್ ಗುರೂಜಿ ತಮ್ಮ ಸಿಬ್ಬಂದಿ ಮೂಲಕ ಚೀನಾ ಆಟಿಕೆ ವಸ್ತುಗಳನ್ನು ಪರಿಹಾರ ಎಂಬಂತೆ ಜನರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದಾರೆ, ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಮಂಗಳೂರು ಮೂಲದ ಶೈಲೇಶ್ ಜೈನ್ ಆರೋಪಿಸಿದ್ದರು. ಆದರೆ, ಈ ಬಗ್ಗೆ ಚಂದ್ರಶೇಖರ್ ಯಾವುದೇ ರೀತಿ ಖಾರವಾಗಿ ಪ್ರತಿಕ್ರಿಯಿಸಿರಲಿಲ್ಲ.

ತಂತ್ರಜ್ಞಾನ ಜೊತೆಗೆ ವಾಸ್ತು

ತಂತ್ರಜ್ಞಾನ ಜೊತೆಗೆ ವಾಸ್ತು

ಅಂಗಡಿ, ಹೋಟೆಲ್, ಮನೆ, ಕಚೇರಿ, ಕಾರ್ಖಾನೆ, ಆಸ್ಪತ್ರೆ, ಕೈಗಾರಿಕೆ, ಕಾರ್ಪೊರೇಟ್ ಸಂಸ್ಥೆ,ಶಿಕ್ಷಣ ಸಂಸ್ಥೆ ಹೀಗೆ ಎಲ್ಲಾ ಕಟ್ಟಡಗಳಿಗೂ ಸರಳ ವಾಸ್ತುವನ್ನು ತಂತ್ರಜ್ಞಾನ ಜೊತೆಗೆ ಅಳವಡಿಸಿಕೊಳ್ಳುವುದನ್ನು ಚಂದ್ರಶೇಖರ್ ಗುರೂಜಿ ತಿಳಿಸುತ್ತಿದ್ದರು. ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆ ಕಚೇರಿ ಹೊಂದಿದ್ದರು. ಬಾಗಲಕೋಟೆಯ ಹುಂಡೇಕಾರ ಓಣಿಯಲ್ಲಿ ಮನೆಯಲ್ಲಿ ಹೊಂದಿದ್ದಾರೆ. ಅಂದ ಹಾಗೆ, ಚಂದ್ರಶೇಖರ್ ಗುರೂಜಿ ವಾಸ್ತು ಅಧ್ಯಯನ ಮಾಡಿದ್ದು ಸಿಂಗಪುರದಲ್ಲಿ ಎಂಬುದು ವಿಶೇಷ.

English summary
Saral Vaastu Fame Dr. Chandrashekhar Guruji Profile, Education, Family and other details. Dr. Chandrashekhar Guruji murdered at private hotel in hubballi today. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X