Get Updates
Get notified of breaking news, exclusive insights, and must-see stories!

ಮೋದಿಯನ್ನು ಹಣಿಯಲು ಸಂಚುಗಾರ ಆಗಬೇಕು, ಮಹಾತ್ಮನಲ್ಲ: ಅರ್ನಬ್ ಹೇಳಿದ್ದ ಮಾತು

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ಸಂಜಯ್ ಝಾ ಅನೇಕ ಟೆಲಿವಿಷನ್ ಕಾರ್ಯಕ್ರಮಗಳು ಮತ್ತು ಬರಹಗಳಿಂದ ಜನರಿಗೆ ಪರಿಚಿತರು. ಕಾಂಗ್ರೆಸ್ ಪಕ್ಷ ಮತ್ತು ನಾಯಕತ್ವವನ್ನು ಚರ್ಚೆಗಳಲ್ಲಿ ಹಾಗೂ ಮಾಧ್ಯಮಗಳ ಮುಂದೆ ಸಮರ್ಥಿಸಿಕೊಳ್ಳುವ ಹಾಗೂ ಸರಿ-ತಪ್ಪುಗಳಿಗೆ ಪಕ್ಷದ ಪರವಾಗಿ ವಿವರಣೆ ನೀಡುವ ಸಂಜಯ್ ಝಾ, ಪಕ್ಷದ ವರ್ಚಸ್ಸನ್ನು ಉಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾಯಕರೂ ಹೌದು.

ಸಂಜಯ್ ಝಾ ಅವರು ಬರೆದ 'ದಿ ಗ್ರೇಟ್ ಅನ್‌ ರಾವೆಲ್ಲಿಂಗ್: ಇಂಡಿಯಾ ಆಫ್ಟರ್ 2014' ಎಂಬ ಕೃತಿಯಲ್ಲಿ ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಹಾಗೂ ಆಗ ಟೈಮ್ಸ್ ನೌ ವಾಹಿನಿಯ ನ್ಯೂಸ್ ಅವರ್‌ನ ಚರ್ಚೆ ನಡೆಸಿಕೊಡುತ್ತಿದ್ದ ಈಗ ರಿಪಬ್ಲಿಕ್ ಟಿವಿಯ ಸಂಪಾದಕರಾಗಿರುವ ಅರ್ನಬ್ ಗೋಸ್ವಾಮಿ ನಡುವಿನ ಮಾತುಕತೆ, ಜಗಳ ಹಾಗೂ ವೈಮನಸ್ಸಿನ ಬಗ್ಗೆ ಬರೆದುಕೊಂಡಿದ್ದಾರೆ. ದಿ ಪ್ರಿಂಟ್‌ ಪತ್ರಿಕೆಯಲ್ಲಿ ಪ್ರಕಟವಾದ ಅದರ ಆಯ್ದ ಭಾಗದ ಸಂಕ್ಷಿಪ್ತ ಕನ್ನಡ ಅನುವಾದ ಇಲ್ಲಿದೆ.

ಅರ್ನಬ್‌ಗೆ ಟಿಆರ್‌ಪಿಯ ಗೀಳಿದೆ. ಕಮರ್ಷಿಯಲ್ ವಿರಾಮಗಳ ನಡುವೆ ಅವರು ತಮ್ಮ ಮೊಬೈಲ್‌ಗೆ ಬಂದ ವೀಕ್ಷಕರ ವೀಕ್ಷಣೆ ಸಂಖ್ಯೆಗಳ ಕುರಿತಾದ ಸ್ವಾರಸ್ಯಕರ ಅಂಶಗಳನ್ನು ಹಂಚಿಕೊಳ್ಳುತ್ತಾರೆ. ಜತೆಗೆ ತಮ್ಮ ಆರಾಧಕ ಅಭಿಮಾನಿಗಳ ಭಟ್ಟಂಗಿತನದ ಸಂದೇಶಗಳನ್ನೂ ಹಂಚಿಕೊಳ್ಳುತ್ತಾರೆ. ಅದೇ ರೀತಿ ಹಲವು ವಿಚಾರಗಳಿವೆ. ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವೆ ವ್ಯಕ್ತವಾಗದ ಹೊಂದಾಣಿಕೆಯೊಂದು ಅಸ್ತಿತ್ವದಲ್ಲಿದೆ; ಈ ಸಂಬಂಧವು ಅಂತರ್ಗತವಾಗಿ ವಿರೋಧಿಯಾಗಿರುತ್ತದೆ. ಹೀಗಾಗಿ ಹೊರಗೆ ಪ್ರಕಟವಾಗುವ ನಿಕಟ ಸ್ನೇಹದಾಚೆ ನಾನು ಮತ್ತು ಗೋಸ್ವಾಮಿ ಗೌರವಯುತ ಅಂತರವನ್ನು ಕಾಪಾಡಿಕೊಂಡಿದ್ದೆವು. ಮುಂದೆ ಓದಿ.

ಬದಲಾದ ಗೌರವ

ಬದಲಾದ ಗೌರವ

ನಾವಿಬ್ಬರೂ ಪರಸ್ಪರ ಗಂಟಲಿಗೆ ಕೈಹಾಕಿದಂತೆ ಮಾತಾಡಿಕೊಂಡರೂ ನಿಮಿಷಗಳ ಬಳಿಕ ಪರಿಶುದ್ಧ ಕೃತಜ್ಞತೆ ಎನಿಸುವಂತಹ ನೋಟವೊಂದನ್ನು ಅವರು ಬೀರುತ್ತಿದ್ದರು. ಆ ಸಮಯದಲ್ಲಿ ನಾನು ಪ್ರಾಮಾಣಿಕ ಪರಸ್ಪರ ಗೌರವ ಎಂದು ಭಾವಿಸಿರುವುದಿಲ್ಲ. ಅವರು ನಗರ ಮಧ್ಯಮ ವರ್ಗದ ಪರವಾದ ಬದ್ಧತೆಯುಳ್ಳ ಹೋರಾಟಗಾರ ಎಂದು ನಂಬುತ್ತೇನೆ (ಅವರಿಗೆ ರೈತರು, ಎನ್‌ಜಿಒಗಳು, ಪರಿಸರ ಅಥವಾ ಬಡತನ ಮತ್ತು ನಿರಾಶ್ರಿತರ ಬಗ್ಗೆ ಅತಿಯಾದ ಕಾಳಜಿ ಇಲ್ಲ). ಆದರೆ 2015ರ ಆಗಸ್ಟ್ 17ರಂದು ನಮ್ಮ ಸಮೀಕರಣವು ಮಾರ್ಪಡಿಸಲಾಗದ ಮಟ್ಟಿಗೆ ಬದಲಾಯಿತು.

ರಾಹುಲ್ ಗಾಂಧಿ ವಿದೇಶ ಪ್ರವಾಸದ ಸುದ್ದಿ

ರಾಹುಲ್ ಗಾಂಧಿ ವಿದೇಶ ಪ್ರವಾಸದ ಸುದ್ದಿ

ರಾಹುಲ್ ಗಾಂಧಿ ಅವರು ವಿದೇಶದ ರಜೆಯಿಂದ ಆಗಷ್ಟೇ ಮರಳಿದ್ದರು. ಐವತ್ತಾರು ದಿನ ಅವರು ಅವರು ಎಲ್ಲಿಗೆ ಹೋಗಿದ್ದರು ಎಂಬ ಬಗ್ಗೆ ವಿಪರೀತ ಕುತೂಹಲವಿತ್ತು. ತಾವು ವಿಸ್ತೃತ ವಿರಾಮವನ್ನು ಪಡೆದುಕೊಳ್ಳುತ್ತಿರುವುದಾಗಿ ಅವರು ಸಾರ್ವಜನಿಕವಾಗಿ ಪ್ರಕಟಿಸಿದ್ದರು. ಜತೆಗೆ ಕಾಂಗ್ರೆಸ್ ಕಚೇರಿಗೂ ಔಪಚಾರಿಕವಾಗಿ ಮಾಹಿತಿ ನೀಡಿದ್ದರು. ಅದು ಜಾಣ ನಡೆಯಾಗಿತ್ತು; ಅವರ ಅಪ್ರಕಟಿತ ವಿದೇಶ ಭೇಟಿಗಳು ಅನೂಚಿತ ಪ್ರಚಾರಗಳಿಗೆ ಎಡೆಮಾಡಿಕೊಡುತ್ತಿದ್ದವು. ಅವರು ಎಲ್ಲಿದ್ದಾರೆ ಎಂಬ ಜನರ ಕುತೂಹಲ ನನಗೆ ಅರ್ಥವಾಗುತ್ತದೆ- ಗಾಂಧಿಯಾಗಿರುವುದು ಸುಲಭವಲ್ಲ. ಕುಟುಂಬವು ನಿರಂತರ ಮತ್ತು ಕ್ಷಣ ಕ್ಷಣದ ಮಾಧ್ಯಮ ನಿಗಾದಲ್ಲಿ ಇರುತ್ತದೆ; ಅವರಲ್ಲಿ ಯಾರಾದರೂ ಮಲ್ಟಿಪ್ಲೆಕ್ಸ್‌ಗೆ ತೆರಳಿ 'ಸ್ಟಾರ್ ವಾರ್ಸ್' ನೋಡಿದರೆ ಸುದ್ದಿಯಾಗದೆ ಇರಲು ಸಾಧ್ಯವಿಲ್ಲ.

ಪ್ರಿಯಾಂಕಾ ಸೂಕ್ತ ಎಂದಿದ್ದ ಗೋಸ್ವಾಮಿ

ಪ್ರಿಯಾಂಕಾ ಸೂಕ್ತ ಎಂದಿದ್ದ ಗೋಸ್ವಾಮಿ

ನಮ್ಮ ಮಾತುಕತೆಯಲ್ಲಿ, ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉನ್ನತ ಸ್ಥಾನಕ್ಕಾಗಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಗೋಸ್ವಾಮಿ ಅವರು ನಂಬಿರುವುದಾಗಿ ತಿಳಿಸಿದ್ದರು. ರಾಹುಲ್ ತೀರಾ ಸಂಭಾವ್ಯ ಮತ್ತು ಭಾರತದ ರಾಜಕಾರಣಕ್ಕೆ ಅತಿ ಮುಗ್ಧರಾಗುತ್ತಾರೆ ಎಂದು ಅವರಿಗೆ ಅನಿಸಿತ್ತು. 'ಮೋದಿ ಅವರನ್ನು ಮೀರಿಸಲು ನಿಮಗೆ ತಂತ್ರಗಾರಿಕೆ ಬೇಕೇ ವಿನಾ ಮಹಾತ್ಮನಲ್ಲ' ಎಂದು ಅವರು ನನಗೆ ಒಮ್ಮೆ ಹೇಳಿದ್ದರು. ಆದರೆ ಪ್ರಿಯಾಂಕಾ ತನ್ನ ಇಂದಿರಾ ಗಾಂಧಿ ನೋಟ ಮತ್ತು ನಿರಾಯಾಸ ಸಂವಹನದಿಂದ ಬಿಜೆಪಿಯನ್ನು ಅಲುಗಾಡಿಸಬಹುದು ಎಂದು ನನಗೆ ಸಲಹೆ ನೀಡಿದ್ದರು. ಏಪ್ರಿಲ್ 17ರಂದು ಗೋಸ್ವಾಮಿ ಅವರು ರಾಹುಲ್ ಗಾಂಧಿಯನ್ನು ನಿಶ್ಶಕ್ತೀಕರಣಗೊಳಿಸುವ ಉದ್ದೇಶ ಹೊಂದಿದ್ದಂತೆ ಕಾಣಿಸಿತ್ತು.

ರಾಹುಲ್ ಗಾಂಧಿ ಉತ್ತರದಾಯಿ

ರಾಹುಲ್ ಗಾಂಧಿ ಉತ್ತರದಾಯಿ

ಆ ಸಂಜೆ ಅಲ್ಲಿದ್ದ ಇತರೆ ಅತಿಥಿಗಳೆಂದರೆ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಮತ್ತು ಪತ್ರಕರ್ತರಾದ ಶಂಕರನ್ ಠಾಕೂರ್, ಪಂಕಜ್ ವೋಹ್ರಾ, ಆರತಿ ಜೆರಾತ್ ಮತ್ತು ಶಾಹಿದ್ ಸಿದ್ದಿಕಿ. ಅವರೆಲ್ಲರೂ ವೈಯಕ್ತಿಕ ವರ್ಚಸ್ಸು ಹೊಂದಿದ್ದವರು ಮತ್ತು ನಾನು ಇಷ್ಟಪಡುವ ಹಾಗೂ ಗೌರವಿಸುವ ಭಾಗಶಃ ಉದಾರವಾದಿಗಳು. ತಮ್ಮ ಪಕ್ಷದ ಇತರೆ ಅನೇಕರಿಗಿಂತ ವಿಭಿನ್ನರಾಗಿರುವ ಕೊಹ್ಲಿ, ಬಹಳ ವಿವೇಕಯುತ ಎದುರಾಳಿ. ಅಂದು ಚರ್ಚೆಯಾದ ವಿಚಾರವೆಂದರೆ ರಾಹುಲ್ ಗಾಂಧಿ ಎಲ್ಲಿಗೆ ಹೋಗಿದ್ದರು ಮತ್ತು ಏಕೆ ಹಾಗೂ ತಮ್ಮ ಪ್ರಯಾಣದ ವಿವರಣೆಗಳಲ್ಲಿ ಅವರು ಭಾರತದ ಜನರಿಗೆ ಉತ್ತರದಾಯಿಯಲ್ಲವೇ? ಎನ್ನುವುದು. ಮಾಮೂಲಿಯಂತೆ ನಾನು ಮತ್ತು ಗೋಸ್ವಾಮಿ ಪರಸ್ಪರ ವಂದಿಸಿಕೊಂಡೆವು. ನನಗೆ ನೀಡಿದ ಟೀ ಚೆನ್ನಾಗಿತ್ತು ಮತ್ತು ಬಿಸಿಯಾಗಿತ್ತು. ಅಂದು ನನಗೆ ಎಂದಿನಂತೆಯೇ ಮತ್ತೊಂದು ದಿನ ಎಂದೆನಿಸಿತ್ತು.

ಖಾಸಗಿತನ ಮೂಲಭೂತ ಹಕ್ಕು

ಖಾಸಗಿತನ ಮೂಲಭೂತ ಹಕ್ಕು

ಅದು ಮಾಮೂಲಿ ನ್ಯೂಸ್ ಅವರ್ ಚರ್ಚೆ. ರಾಹುಲ್ ವಿರುದ್ಧ ಹೋಗುವಾಗ ಗೋಸ್ವಾಮಿ ವಾಸ್ತವಾಂಶಗಳ ಬಗ್ಗೆ ಯೋಚಿಸುತ್ತಿರಲಿಲ್ಲ. 'ಇದು ನಿಮಗೆ ಕಠಿಣವಾಗಲಿದೆ ಸಂಜಯ್' ಎಂದು ಕಾರ್ಯಕ್ರಮಕ್ಕೂ ಮುನ್ನ ಅವರು ನನ್ನ ಬಳಿ ತಮಾಷೆಯಾಗಿ ಹೇಳಿದ್ದರು. ನನಗೆ ಮೊದಲೇ ಎಚ್ಚರಿಕೆ ನೀಡಿದರೆ ನಾನು ಉದ್ವಿಗ್ನನಾಗಿ ಗೊಂದಲಕ್ಕೆ ಒಳಗಾಗಬಹುದು. ನಾನು ಸಣ್ಣನೆ ನಕ್ಕು ಆಗಲಿ ಶುರುಮಾಡೋಣ ಎಂದು ನನ್ನನ್ನು ನಾನು ಗಟ್ಟಿಗೊಳಿಸಿಕೊಂಡೆ.

ರಾಹುಲ್ ಅವರ ಗೈರು ಹಾಜರಿಯ ಬಗ್ಗೆ ನಾನು ಸರಳವಾದ ವಿವರಣೆ ನೀಡಿದೆ; ಅವರು ಪಕ್ಷಕ್ಕೆ ಮತ್ತು ಸಾರ್ವಜನಿಕರಿಗೆ ಮೊದಲೇ ಮಾಹಿತಿ ನೀಡಿದ್ದಾರೆ. ಹೀಗಾಗಿ ಅವರ ನಡೆದ ಪಾರದರ್ಶಕವಾಗಿತ್ತು ಎಂದು. ಎಷ್ಟು ಮಂದಿ ರಾಜಕಾರಣಿಗಳು ಹೀಗೆ ಮಾಡುತ್ತಾರೆ? ಅವರು ಎಲ್ಲಿಗೆ ಹೋಗಿದ್ದರು ಮತ್ತು ಏಕೆ ಎಂಬ ವಿಚಾರದಲ್ಲಿ ಅವರಿಗೆ ಖಾಸಗಿತನದ ಮೂಲಭೂತ ಹಕ್ಕುಇದೆ. ರಾಜಕಾರಣಿ ಅಥವಾ ಸಾರ್ವಜನಿಕ ವ್ಯಕ್ತಿಯಾಗಿರುವ ಕಾರಣಕ್ಕೆ ಯಾರೂ ಆ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಗಾಂಧಿ ಅವರು ಎಸ್‌ಪಿಜಿ ಭದ್ರತೆಯಲ್ಲಿದ್ದಾರೆ. ಹೀಗಾಗಿ ಮೋದಿ ಸರ್ಕಾರಕ್ಕೆ ಅವರು ಇರುವ ಸ್ಥಳ ಗೊತ್ತಿರಲೇಬೇಕು. ಎಸ್‌ಪಿಜಿ ನೇರವಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ.

ಮೋದಿ ಏಕೆ ಮುಚ್ಚಿಟ್ಟಿದ್ದರು?

ಮೋದಿ ಏಕೆ ಮುಚ್ಚಿಟ್ಟಿದ್ದರು?

ರಾಹುಲ್ ಗಾಂಧಿ ಅವರ ರಕ್ಷಣೆಗೆ ನಿರಾಕರಿಸಲಾಗದಂತಹ ವಾದಗಳಿದ್ದವು. ಬಿಜೆಪಿಗೆ ಪ್ರತಿಯಾಗಿ ಎದುರಿಸಲು ಅವರಿಗೆ ಮುಜುಗರದ ಪ್ರಶ್ನೆಯೊಂದನ್ನು ಮುಂದಿಟ್ಟೆ; 2014ರವರೆಗೂ ಮೋದಿ ಅವರು ತಮ್ಮ ವೈವಾಹಿಕ ವಿಚಾರವನ್ನು ಏಕೆ ಮುಚ್ಚಿಟ್ಟಿದ್ದರು? ಚುನಾವಣಾ ಆಯೋಗಕ್ಕೆ ಸುಳ್ಳು ಹೇಳಿದ್ದರು ಮತ್ತು ಹಲವು ವರ್ಷಗಳ ಕಾಲ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆದಿದ್ದರು? ಅವರು ಈ ದೇಶದ ಪ್ರಧಾನಿ. ಸುಳ್ಳುಗಳನ್ನು ಬಹಿರಂಗಪಡಿಸುವುದು ಅವರಿಗೆ ಖಂಡಿತವಾಗಿಯೂ ಹೊರೆಯಾಗುತ್ತದೆಯೇ? ಅಮೆರಿಕದಲ್ಲಿ ಹಗರಣವೊಂದು ರಾಜಕಾರಣಿಯೊಬ್ಬರ ಪ್ರತಿಷ್ಠೆಯನ್ನು ಸರಿಪಡಿಸಲಾಗಷ್ಟು ಹಾಳುಮಾಡಿತ್ತು. ಭಾರತದಲ್ಲಿ ಪ್ರತಿಯೊಬ್ಬರೂ ನಾಲಿಗೆಯನ್ನು ಕಟ್ಟಿಕೊಂಡಂತೆ ಕಾಣಿಸುತ್ತಾರೆ. ಏಕೆ? ಎಲ್ಲರೂ ರಾಹುಲ್ ಗಾಂಧಿ ಅವರ ಅಪಾರದರ್ಶಕತೆ ಕಟು ಟೀಕೆ ನಡೆಸುತ್ತಿರುವಾಗ ನಾನು ತೀಕ್ಷ್ಣ ವಾದ ಮಂಡಿಸಿದ್ದೆ. ಬಳಿಕ ಇದ್ದಕ್ಕಿದ್ದಂತೆ ಪರಿಸ್ಥಿತಿ ಅನಿರೀಕ್ಷಿತ ತಿರುವು ಪಡೆದುಕೊಂಡಿತು.

ರಾಹುಲ್ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ

ರಾಹುಲ್ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ

ಒಂದು ಸಮಯದಲ್ಲಿ ಗೋಸ್ವಾಮಿ ಅವರು ರಾಹುಲ್ ಗಾಂಧಿಯ ಮಾನಸಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದರು. ಅದು ಬಹಳ ಕೀಳು ಅಭಿರುಚಿಯ ಹೇಳಿಕೆ ಎಂದೆನಿಸಿತು. ಜತೆಗೆ ವಾಸ್ತವವಾಗಿ ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವವರೆಡೆಗೆ ತೋರುವ ಅಗೌರವ ಕೂಡ ಆಗಿತ್ತು. ಕೂಡಲೇ ಅವರು ನನ್ನೆಡೆಗೆ ಮತ್ತೊಂದು ಬಾಣ ತೂರಿದರು. ದೆಹಲಿಯ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಸ್ವತಃ ಅದನ್ನು ಹೇಳಿದ್ದಾರೆ ಎಂದರು.

ಸಂದೀಪ್ ತಪ್ಪನ್ನು ತಪ್ಪು ಎನ್ನುವ ಕೆಲವು ಕಾಂಗ್ರೆಸ್ಸಿಗರಲ್ಲಿ ಒಬ್ಬರು. ತಮ್ಮ ನಾಯಕ ಇರಲಿ, ಬೇರೆ ಯಾರ ಬಗ್ಗೆಯೂ ಅಸಂಬದ್ಧವಾಗಿ ಮಾತನಾಡದಷ್ಟು ವಿನಯವಂತರು. ಮುಖ್ಯವಾಗಿ ನಾನು ಸಂದೀಪ್ ಅವರ ವಿಡಿಯೋ ತುಣುಕನ್ನು ನೋಡಿದ್ದೆ. ಅಂತಹ ವಿಚಾರವನ್ನು ಅವರು ಹೇಳಿಯೇ ಇರಲಿಲ್ಲ. ಹೀಗಾಗಿ ಗೋಸ್ವಾಮಿ ವಿರುದ್ಧ ಕಟುವಾದೆ ಮತ್ತು ಈಗಲೇ ಆ ವಿಡಿಯೋವನ್ನು ತೋರಿಸುವಂತೆ ಹೇಳಿದೆ. ನೀವು ಹೇಳಿದ್ದು ಸುಳ್ಳಾದರೆ ಈಗಲೇ ಸಾರ್ವಜನಿಕ ಕ್ಷಮಾಪಣೆ ಕೋರಬೇಕು ಎಂದೆ. ಮಾತುಗಳು ಕಠಿಣವಾಗಿದ್ದವು ಆದರೆ ನಾವು ಚರ್ಚೆಯ ಸಮರದಲ್ಲಿದ್ದೆವು.

ಸಂಕಟಕ್ಕೆ ಸಿಲುಕಿದ ಗೋಸ್ವಾಮಿ

ಸಂಕಟಕ್ಕೆ ಸಿಲುಕಿದ ಗೋಸ್ವಾಮಿ

ಆದರೆ ಗೋಸ್ವಾಮಿ ಪ್ರತಿ ಆಕ್ರಮಣವನ್ನು ಎದುರಿಸುವ ಸಂದರ್ಭಗಳು ಕಡಿಮೆ. ತಮ್ಮ ಅಂಕಣದಲ್ಲಿ ತಪ್ಪಿಸಿಕೊಳ್ಳಲಾಗದ ಶೋಮ್ಯಾನ್ ಮತ್ತು ಸೋಲಿಸಲಾಗದ ಹೀರೋ. ಉದ್ವಿಗ್ನತೆಯನ್ನು ಸೃಷ್ಟಿಸಿದ್ದಕ್ಕೆ ಮತ್ತು ಅಂತಿಮ ವಾದವನ್ನು ಇರಿಸಿದ್ದಕ್ಕೆ ಅವರು ನನ್ನ ಮೇಲೆ ಉರಿದುಬೀಳುತ್ತಿದ್ದರು. ಏಕೆಂದರೆ ಅದು ಯಾವಾಗಲೂ ಅವರ ಶಕ್ತಿಯಾಗಿತ್ತು.

ನಾನು ಕೀಳು ವರ್ತನೆ ತೋರಿಸುತ್ತಿದ್ದೇನೆ ಮತ್ತು ಸರಿಯಾಗಿ ನಡೆದುಕೊಳ್ಳದಿದ್ದರೆ ಶೋದಿಂದ ಹೊರಹಾಕುವುದಾಗಿ ಹೇಳಿ ನನಗೆ ಆಘಾತ ಮೂಡಿಸಿದರು. ಕಳಪೆ ನಡೆಯನ್ನು ಚೆನ್ನಾಗಿದೆ ಎಂದು ಯಾರನ್ನು ಬೇಕಾದರೂ ಅವರು ತಿರುಗಿಸಬಲ್ಲರು. ನನ್ನ ವಾದದಿಂದ ಅವರಿಗೆ ಎಷ್ಟು ಸಂಕಟ ಉಂಟಾಯಿತು ಎಂದು ಅರ್ಥವಾಯಿತು. ಆ ಸಮಯದಲ್ಲಿ ಸಂದೀಪ್ ದೀಕ್ಷಿತ್ ವಿಡಿಯೋ ಪ್ರಸಾರ ಮಾಡದೆ ಗೋಸ್ವಾಮಿಗೆ ಯಾವ ಆಯ್ಕೆಯೂ ಇರಲಿಲ್ಲ. ಅವರು ದೀರ್ಘ ಉಸಿರು ತೆಗೆದುಕೊಂಡರು. ಅದನ್ನು ಪ್ರಸಾರ ಮಾಡುವಂತೆ ಹೇಳಿದರು. ದೀಕ್ಷಿತ್ ಆ ರೀತಿ ಹೇಳದೆ ಇರುವುದು ಸ್ಪಷ್ಟವಾಗಿತ್ತು. ಅದನ್ನು ಅವರ ಮುಖಕ್ಕೆ ಹಿಡಿಯಬಹುದಾಗಿತ್ತು. ಆದರೆ ಹೋಗಲಿ ಎಂದು ಬಿಟ್ಟೆ. ಅಂದು ಗೋಸ್ವಾಮಿಗೆ ಕೆಟ್ಟದಿನವಾಗಿತ್ತು.

ವೈಯಕ್ತಿಕವಾಗಿ ತೆಗೆದುಕೊಂಡಿದ್ದು

ವೈಯಕ್ತಿಕವಾಗಿ ತೆಗೆದುಕೊಂಡಿದ್ದು

ಕಾರ್ಯಕ್ರಮದ ಮುಕ್ತಾಯಕ್ಕೆ ಅವರು ಕೋಪದಿಂದ ಮುಖ ಸಿಂಡರಿಸಿಕೊಂಡಿದ್ದರು. 'ನೀವೇಕೆ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದು?' ಎಂದು ಕಿಡಿಕಾರಿದರು. 'ವೈಯಕ್ತಿಕ? ನಿಮ್ಮ ಜತೆ ನಾನು ಯಾವಾಗ ವೈಯಕ್ತಿಕವಾಗಿ ತೆಗೆದುಕೊಂಡಿದ್ದೇನೆ? ಎಂದು ಪ್ರಶ್ನಿಸಿದೆ.

'ನೀವು ನನ್ನ ಮಗನನ್ನು ಉಲ್ಲೇಖಿಸಿದಿರಿ!'

ನಾವು ಮತ್ತೆ ಭೇಟಿಯಾಗಲೇ ಇಲ್ಲ

ನಾವು ಮತ್ತೆ ಭೇಟಿಯಾಗಲೇ ಇಲ್ಲ

ಅರೆ ಕ್ಷಣ ನನಗೆ ಆಘಾತವಾಗಿ ಸುಮ್ಮನಾದೆ. ಗೋಸ್ವಾಮಿ ಹೇಳುತ್ತಿದ್ದಂತೆ ರಾಹುಲ್ ಗಾಂಧಿ ಪರಾರಿಯಾಗಿರಲಿಲ್ಲ ಎಂಬ ಸತ್ಯ ಚರ್ಚೆಯಲ್ಲಿ ನಿಂತುಕೊಂಡಿತ್ತು. 'ನಿಮ್ಮ ಮಗ ಶಾಲೆಯಲ್ಲಿ ರಜೆಗಾಗಿ ಅನುಮತಿ ಪಡೆದುಕೊಂಡು ಹೋದರೆ ಅದನ್ನು ಪರಾರಿ ಎಂದು ಕರೆಯುತ್ತೀರಾ?' ಎಂದು ನಾನು ಪ್ರಶ್ನಿಸಲು ಹೊರಟಾಗ, 'ಒಂದು ವೇಳೆ ನಿಮ್ಮ ಮಗ' ಎನ್ನುವಾಗ ಅದನ್ನು ಪೂರ್ಣಗೊಳಿಸಲು ಅವರು ಬಿಟ್ಟಿರಲಿಲ್ಲ. ಕೊನೆಗೆ ರಾಷ್ಟ್ರೀಯ ಚರ್ಚೆಯಲ್ಲಿ ಅವರ ಮಗನನ್ನು ಎಳೆದು ತಂದಿದ್ದಾಗಿ ನನ್ನ ಮೇಲೆ ಆರೋಪಿಸಿದರು. ನನ್ನ ಆಕ್ರಮಣಕಾರಿ ವಾದದಿಂದ ಗೋಸ್ವಾಮಿ ಕಂಗೆಟ್ಟಿದ್ದರು ಮತ್ತು ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ವಿಡಿಯೋ ಸವಾಲು ಗಾಸಿ ಉಂಟುಮಾಡಿತ್ತು ಎನ್ನುವುದು ನನಗೆ ಸ್ಪಷ್ಟವಾಗಿತ್ತು.

2008ರಿಂದ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಅನೇಕ ಸಂಭಾಷಣೆಗಳಲ್ಲಿ ಪಾಲ್ಗೊಂಡಿದ್ದೇನೆ. ಭಾರತೀಯ ರಾಜಕಾರಣಿಗಳು ಎಷ್ಟೇ ಭಾವೋದ್ವೇಗದಿಂದ ಅವರೊಂದಿಗೆ ಅಸಮ್ಮತಿ ಹೊಂದಿದ್ದರೂ ಖಂಡಿತವಾಗಿಯೂ ತಿರಸ್ಕರಿಸಲಾಗದ ವ್ಯಕ್ತಿ ಗೋಸ್ವಾಮಿ ಎಂದೇ ನಾನು ಪರಿಗಣಿಸಿದ್ದೆ. ವಾಸ್ತವವಾಗಿ ಟೈಮ್ಸ್ ನೌ ನಡೆಸಿದ್ದ ಟೆಲಿವಿಷನ್ ಕಮರ್ಷಿಯಲ್‌ನಲ್ಲಿ ಗೋಸ್ವಾಮಿ ಅವರನ್ನು ಹೊಗಳಿದ್ದೆ. ಆದರೆ ಆ ರಾತ್ರಿಯ ಬಳಿಕ ನಾವಿಬ್ಬರು ಎಂದಿಗೂ ಭೇಟಿಯಾಗಲೇ ಇಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+