Lakshmi: ಲಕ್ಷ್ಮೀ ದೇವಿ ಸದಾ ನಿಮ್ಮ ಮನೆಯಲ್ಲೇ ನೆಲೆಸಿರಲು ಈ ಸರಳ ವಿಚಾರಗಳನ್ನು ನೆನಪಿಡಿ
ಲಕ್ಷ್ಮೀ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ನಂಬಲಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ಜೊತೆಗೆ ಐಶ್ವರ್ಯವೂ ಮುಖ್ಯ. ಮನೆಯಲ್ಲಿ ಸಮೃದ್ಧಿ ಇದ್ದರೆ ಜೀವನ ಸುಖಕರವಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಲಕ್ಷ್ಮೀ ದೇವಿಯನ್ನು ಪೂಜಿಸಿ ದೇವಿಯ ಆಶೀರ್ವಾದವನ್ನು ಬೇಡುತ್ತಾರೆ.
ಲಕ್ಷ್ಮಿ ದೇವಿಯ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲವೂ ಇದ್ದಂತೆ ಎಂದು ಹಲವರು ನಂಬುತ್ತಾರೆ. ಹೀಗಾಗಿ ಲಕ್ಷ್ಮೀ ದೇವಿ ಸದಾಕಾಲ ನಮ್ಮ ಮನೆಯಲ್ಲೇ ನೆಲಸಲಿ ಎನ್ನುವುದು ಎಲ್ಲರ ಬಯಕೆಯಾಗಿರುತ್ತದೆ. ಹೀಗಾಗಿ ಲಕ್ಷ್ಮೀ ದೇವಿ ಸದಾ ನಿಮ್ಮ ಮನೆಯಲ್ಲೇ ಇರಲು ಈ ಸರಳ ವಿಚಾರಗಳನ್ನು ನೀವು ನೆನಪಿನಲ್ಲಿಡಿ.

ಸ್ವಚ್ಛ ಮನೆ ಇರಲಿ
ಮನೆಯ ಮೂಲೆ ಮೂಲೆಯಲ್ಲಿ ಕಸ, ನೆಲದಲ್ಲಿ ಗಲೀಜು, ಕಂಡ ಕಂಡಲ್ಲಿ ಚೆಲ್ಲಾಪಿಲ್ಲಿಯಾದ ವಸ್ತುಗಳು ಈ ರೀತಿಯ ಮನೆಗಳಿಗೆ ಲಕ್ಷ್ಮೀ ದೇವಿ ಎಂದೂ ಬರುವುದಿಲ್ಲ. ಹಿಂದಿನ ಸಂಪತ್ತು ಇದ್ದರೂ ಸಹ ಇಂತಹ ಸ್ಥಳಗಳಲ್ಲಿ ಲಕ್ಷ್ಮೀ ದೇವಿಯ ವಾಸ ಇರುವುದಿಲ್ಲ. ಹೀಗಾಗಿ ಆದಷ್ಟು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಮನೆಯ ಗೋಡೆ ಅಂಚಿನ ಮೂಲೆಗಳಲ್ಲಿ ಕಸಗಳು ಸಂಗ್ರವಾಗದಂತೆ ಪ್ರತಿ ದಿನ ಸ್ವಚ್ಛಗೊಳಿಸಿ. ನೆಲದಲ್ಲಿ ಗಲೀಜು ಇರದಂತೆ, ಮನೆಯ ಬಳಕೆಯ ವಸ್ತುಗಳು ನಿಗದಿತ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಿ. ಪ್ರತಿನಿತ್ಯ ಜೀವನದಲ್ಲಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೆಲಸದಂತೆ ನೋಡದೇ, ಮನೆಯನ್ನು ಪ್ರೀತಿಸಿ ಅದನ್ನು ವ್ಯವಸ್ಥಿತವಾಗಿರಿಸಿ. ಮನೆಯ ಗಾತ್ರ ಚಿಕ್ಕದು ಅಥವಾ ದೊಡ್ಡದು ಎನ್ನುವುದು ವಿಚಾರವಲ್ಲ. ಶುದ್ಧವಾದ, ಸ್ವಚ್ಛವಾದ ಮನೆಗಳಲ್ಲಿ ಲಕ್ಷ್ಮೀ ದೇವಿ ನೆಲಸುತ್ತಾಳೆ ಎನ್ನುವುದು ನಂಬಿಕೆ.
ಸ್ವಚ್ಛ ಅಡುಗೆ ಮನೆ ಇರಲಿ
ಒಂದು ಮನೆಯಲ್ಲಿ ದೇವರ ಕೋಣೆ ಎಷ್ಟು ಶ್ರೇಷ್ಠವೋ..ಅಡುಗೆ ಮನೆಯೂ ಅಷ್ಟೇ ಶ್ರೇಷ್ಠ. ಹೀಗಾಗಿ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕಂಡ ಕಂಡಲ್ಲಿ ಪಾತ್ರೆಗಳು, ಕೊಳೆತ ತರಕಾರಿ, ಕಸ, ಬಳಸಿ ತೊಳೆಯದ ರಾಶಿ..ರಾಶಿ ಪಾತ್ರೆಗಳು..ಇದು ಮನೆಯಲ್ಲಿರುವರ ಮನಸ್ಸಿಗೂ ಕೂಡ ಕಿರಿಕಿರಿ ಉಂಟುಮಾಡುತ್ತದೆ. ಅಡುಗೆ ಮನೆ ಸ್ವಚ್ಛವಾಗಿದ್ದರೆ, ಮನಸ್ಸು ಶಾಂತವಾಗಿರುತ್ತದೆ ಎನ್ನುವ ಮಾತಿದೆ. ಹೀಗಾಗಿ ಆದಷ್ಟು ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ಅಡುಗೆ ಮನೆಯಲ್ಲಿರು ಅಕ್ಕಿ, ಉಪ್ಪು, ಪೊರಕೆ, ಒಳ ಕಲ್ಲು ಹಾಗೂ ಇತರ ವಸ್ತುಗಳನ್ನು ಲಕ್ಷ್ಮೀ ಸ್ವರೂಪ ಎಂದು ನಂಬಲಾಗುತ್ತದೆ. ಹೀಗಾಗಿ ಸ್ವಚ್ಛವಾಗಿರುವ ಅಡುಗೆ ಮನೆಯಲ್ಲಿ ಲಕ್ಷ್ಮೀ ದೇವಿಯ ವಾಸ ಇರುತ್ತದೆ ಎಂದು ನಂಬಲಾಗುತ್ತದೆ.

ಸ್ವಚ್ಛ ಬಟ್ಟೆ ಧರಿಸಿ
ಮನೆ ಸ್ವಚ್ಛತೆ ಜೊತೆಗೆ ನಿಮ್ಮ ವೈಯಕ್ತಿಕ ಸ್ವಚ್ಛತೆಯೂ ಕೂಡ ಮುಖ್ಯ. ಪ್ರತಿ ದಿನ ಒಗೆದ ಶುಭ್ರವಾದ ಬಟ್ಟೆಯನ್ನು ಧರಿಸಿ. ಕೊಳಕು ಬಟ್ಟೆಗಳನ್ನು ಧರಿಸಬೇಡಿ. ಕೆಲವರು ಉದಾಸೀನತೆಗೆ ಬಿದ್ದು, ಸ್ನಾನ ಮಾಡದೇ, ಬಟ್ಟೆ ಬದಲಿಸದೇ ಮಲಗಿದ್ದಲ್ಲೇ ಮಗಲಿರುತ್ತಾರೆ. ಇದರಿಂದ ಮನೆಯಲ್ಲಿ ಧರಿದ್ರ ಶುರುವಾಗುತ್ತದೆ. ಹೀಗಾಗಿ ಪ್ರತಿ ದಿನ ಸ್ನಾನ ಮಾಡಿ, ಉಗುರುಗಳನ್ನು ಕತ್ತರಿಸಿ, ಶುದ್ಧವಾದ ಬಟ್ಟೆಯನ್ನು ಧರಿಸಿ. ಇಂತವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ.
ಸ್ವಚ್ಛ ಮನಸಿರಲಿ
ಯಾವಾಗಲೂ ಒಂದು ನೆನಪಿರಲಿ. ನಮ್ಮ ಮನಸ್ಸಿನಲ್ಲಿ ಕಲ್ಮಶ ತುಂಬಿಕೊಂಡು ಎಷ್ಟೇ ಶುದ್ಧವಾಗಿ ದೇವರನ್ನು ಪ್ರಾರ್ಥಿಸಿದರೂ ಅಂತವರ ಭಕ್ತಿಗೆ ಯಾವ ದೇವರೂ ಕೂಡ ಒಲಿಯುವುದಿಲ್ಲ. ಹೀಗಾಗಿ ಸ್ವಚ್ಛ ಮನಸಿರಲಿ. ಮತ್ತೊಬ್ಬರ ಬಗ್ಗೆ ಇಲ್ಲ ಸಲ್ಲದ ಮಾತುಗಳು ಬೇಡ, ದ್ವೇಷ ಬೇಡ, ಇನ್ನೊಬ್ಬರಿಗೆ ಮನಸ್ಸಿಗೆ ನೋವು ತರುವಂತೆ ಮಾತನಾಡುವುದು ಅಥವಾ ನಡೆದುಕೊಳ್ಳುವುದನ್ನು ಮಾಡಬಾರದು. ಶುದ್ಧವಾದ ಮನಸ್ಸಿರಲಿ. ಸದಾ ಉತ್ತಮ ಚಿಂತನೆ ಇರಲಿ.

ನಂಬಿಕೆ & ಪೂಜೆ
ಯಾವುದೇ ವಿಚಾರದಲ್ಲಿಯೂ ಕೂಡ ನಂಬಿಕೆ ಮುಖ್ಯ. ಹೀಗಾಗಿ ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮೀ ದೇವಿಯ ಬಗ್ಗೆ ನಂಬಿಕೆ ಇರಲಿ. ದಿನದಲ್ಲಿ ಒಂದು ಬಾರಿಯಾದರೂ ಆಕೆಯನ್ನು ಮನಸಾರೆ ಪ್ರಾರ್ಥಿಸಿ. ಪ್ರತಿ ದಿನ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ. ದೇವರ ಪೂಜೆ ಮಾಡಿ. ನಿಮ್ಮ ಕೈಯಲ್ಲಿ ಆಗುವಷ್ಟು ದಾನ-ಧರ್ಮ ಮಾಡಿ. ಮೂಕ ಪ್ರಾಣಿಗಳನ್ನು ಪ್ರೀತಿಸಿ ಅವುಗಳಿಗೆ ಆಹಾರ ನೀಡಿ. ಶುದ್ಧವಾದ ಮನಸ್ಸಿನಿಂದ ನಂಬಿಕೆ ಇಟ್ಟು ಪೂಜೆ ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ ಎನ್ನುವ ಅಪಾರವಾದ ನಂಬಿಕೆ ಇದೆ.












Click it and Unblock the Notifications