• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಸಭೆ ಅಭ್ಯರ್ಥಿ ಖರ್ಗೆಗಿಂತ ಅವರ ಪತ್ನಿಯೇ ಸಿರಿವಂತೆ

|
Google Oneindia Kannada News

ಬೆಂಗಳೂರು, ಜೂನ್ 9: ದಲಿತ ಹೋರಾಟಗಳ ಮೂಲಕ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಪ್ರವೇಶ ಬಯಸಿದ್ದಾರೆ.

   ಬೆಳ್ಳಂಬೆಳಿಗ್ಗೆ ಚಿರು ಸಮಾಧಿ ಬಳಿ ಬಂದ ಧ್ರುವ ಸರ್ಜಾ | Oneindia Kannada

   ರಾಜ್ಯಸಭಾ ಚುನಾವಣೆಗೆ ರಾಜ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಸೋಮವಾರ(ಜೂನ್ 8)ದಂದು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿ, ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಖರ್ಗೆ ಅವರ ಅಫಿಡವಿಟ್ ಪ್ರಕಾರ ಖರ್ಗೆ ಅವರಿಗಿಂತ ಅವರ ಪತ್ನಿ ರಾಧಾಭಾಯಿ ಅವರೇ ಹೆಚ್ಚು ಶ್ರೀಮಂತರೆನಿಸಿದ್ದಾರೆ. ಖರ್ಗೆ ಅವರ ಬಳಿ ಸ್ವಂತ ಜಮೀನು, ಕಾರು ಇಲ್ಲ ಎಂದು 2020ರಲ್ಲಿ ನೀಡಿದ ಅಫಿಡವಿಟ್ ನಂತೆ ಸೂಚಿಸಿದ್ದಾರೆ.

   ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಲು ಒತ್ತಡವಿತ್ತು: ಡಿ.ಕೆ. ಶಿವಕುಮಾರ್ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಲು ಒತ್ತಡವಿತ್ತು: ಡಿ.ಕೆ. ಶಿವಕುಮಾರ್

   ಖರ್ಗೆ ಅವರು ನಾಮಪತ್ರದ ಜೊತೆಗೆ ನಿಯಮಾನುಸಾರ ತಮ್ಮ ಆಸ್ತಿ ಸೇರಿದಂತೆ ಹಲವು ಮಾಹಿತಿಗಳನ್ನು ಆಯೋಗಕ್ಕೆ ನೀಡಿದ್ದಾರೆ . ಅದರಂತೆ, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ, ಅವರು ಬಿಎ, ಎಲ್‌ಎಲ್‌ಬಿ ಓದಿದ್ದಾರೆ. ಖರ್ಗೆ ಅವರ ಸ್ಥಿರಾಸ್ತಿ, ಚರಾಸ್ತಿ, ಇನ್ನಿತರ ವಿವರಗಳು ಮುಂದಿವೆ..

   ಪತ್ನಿ ಹೆಸರಲ್ಲಿ 2.60 ಲಕ್ಷ ಹೂಡಿಕೆ

   ಪತ್ನಿ ಹೆಸರಲ್ಲಿ 2.60 ಲಕ್ಷ ಹೂಡಿಕೆ

   ಮಲ್ಲಿಕಾರ್ಜುನ ಖರ್ಗೆ ಅವರು 28.39 ಲಕ್ಷ ಹಣವನ್ನು ಷೇರು, ಡಿವಿಡೆಂಡ್‌ಗಳ ಮೇಲೆ ಹೂಡಿದ್ದಾರೆ, ಪತ್ನಿ ಹೆಸರಲ್ಲಿ 2.60 ಲಕ್ಷ ಹೂಡಿಕೆ ಇದೆ. ಖರ್ಗೆ ಹಾಗೂ ಅವರ ಪತ್ನಿ ಬಳಿ ಯಾವುದೇ ಕಾರು ಇಲ್ಲ, ಸಾಲವೂ ಇಲ್ಲ, ಖರ್ಗೆ ಅವರ ಬಳಿ 10.30 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಇದೆ. ಪತ್ನಿ ಬಳಿ 29.35 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ.

   ಖರ್ಗೆ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ

   ಖರ್ಗೆ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ

   ಖರ್ಗೆ ಅವರ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ, ಪತ್ನಿ ರಮಾಬಾಯಿ ಹೆಸರಲ್ಲಿ 22 ಎಕರೆ ಕೃಷಿ ಜಮೀನಿದೆ, ಇದರ ಈಗಿನ ಮೌಲ್ಯ 44.08 ಲಕ್ಷ ರೂಪಾಯಿ. ಖರ್ಗೆ ಅವರ ಹೆಸರಿನಲ್ಲಿ 1.08 ಎಕರೆ ಕೃಷಿಯೇತರ ಜಮೀನು ಇವೆ. ಇದರ ಮಾರುಕಟ್ಟೆ ಮೌಲ್ಯ 48 ಲಕ್ಷ ರು. ಪತ್ನಿ ಹೆಸರಲ್ಲಿ 4.9 ಎಕರೆ ಕೃಷಿಯೇತರ ಜಮೀನಿದೆ ಇದರ ಮೌಲ್ಯ 1.9 ಕೋಟಿ ರುಪಾಯಿ ಇದೆ.

   ರಾಜ್ಯಸಭೆಗೆ ಮಲ್ಲಿಕಾರ್ಜುನ್ ಖರ್ಗೆ; ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಹೀಗಿದೆ!ರಾಜ್ಯಸಭೆಗೆ ಮಲ್ಲಿಕಾರ್ಜುನ್ ಖರ್ಗೆ; ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಹೀಗಿದೆ!

   ಯಾವುದೇ ವಾಣಿಜ್ಯ ಕಟ್ಟಡ ಹೊಂದಿಲ್ಲ

   ಯಾವುದೇ ವಾಣಿಜ್ಯ ಕಟ್ಟಡ ಹೊಂದಿಲ್ಲ

   ಖರ್ಗೆ ಅವರ ಹೆಸರಿನಲ್ಲಿ ಯಾವುದೇ ವಾಣಿಜ್ಯ ಕಟ್ಟಡಗಳು ಇಲ್ಲ, ಪತ್ನಿ ಹೆಸರಿನಲ್ಲಿ 1.79 ಕೋಟಿ ಮೌಲ್ಯದ ಒಂದು ಹಾಗೂ 84 ಲಕ್ಷ ಮೌಲ್ಯದ ಒಂದು ವಾಣಿಜ್ಯ ಕಟ್ಟಡ ಇದೆ. ಖರ್ಗೆ ದಂಪತಿಗಳ ಹೆಸರಿನಲ್ಲಿ ಸದಾಶಿವನಗರದಲ್ಲಿ ಮನೆ ಇದ್ದು, ಇದರ ಮಾರುಕಟ್ಟೆ ಮೌಲ್ಯ 1.23 ಕೋಟಿ. ಖರ್ಗೆ ಅವರ ಹೆಸರಿನಲ್ಲಿ ಕಲಬುರಗಿಯಲ್ಲಿ 32 ಲಕ್ಷ ಮೌಲ್ಯದ ವಸತಿ ಕಟ್ಟಡವಿದೆ. ಆರ್‌ಎಂವಿ ಎರಡನೇ ಹಂತದಲ್ಲಿ 4.64 ಕೋಟಿ ಮೌಲ್ಯದ ವಸತಿ ಕಟ್ಟಡ ಇದೆ. ಪತ್ನಿ ಹೆಸರಲ್ಲಿ 48.16 ಲಕ್ಷದ ಮನೆಯೊಂದಿದೆ. ಒಟ್ಟಾರೆ, 8.7 ಕೋಟಿ ರು ವಸತಿ ಕಟ್ಟಡ, 2 ಕೋಟಿ ರು ವಾಣಿಜ್ಯ ಕಟ್ಟಡ, 42 ಲಕ್ಷ ರು ಕೃಷಿಯೇತರ ಜಮೀನು, 1 ಕೋಟಿ ರು ಕೃಷಿ ಭೂಮಿ ಸೇರಿ ಸ್ಥಿರಾಸ್ತಿ =13 ಕೋಟಿ ರು

   10 ಲಕ್ಷ ರೂಪಾಯಿ ಸಾಲದ ಹೊರೆ

   10 ಲಕ್ಷ ರೂಪಾಯಿ ಸಾಲದ ಹೊರೆ

   ಖರ್ಗೆ ಅವರ ಮೇಲೆ 10 ಲಕ್ಷ ರೂಪಾಯಿ ಸಾಲದ ಹೊರೆ ಇದೆ. ಪತ್ನಿ ಹೆಸರಿನಲ್ಲಿ 21.22 ಲಕ್ಷ ಸಾಲವಿದೆ. ಒಟ್ಟಾರೆ, 31.22 ಲಕ್ಷ ರು ಸಾಲ ಹೊಂದಿದ್ದಾರೆ. ಖರ್ಗೆ ಅವರ ಒಟ್ಟು ಚರಾಸ್ತಿ ಮೌಲ್ಯ 2.80 ಕೋಟಿ. ಸ್ಥಿರಾಸ್ತಿ ಮೌಲ್ಯ 7 ಕೋಟಿ ರು. ಖರ್ಗೆ ಅವರ ಒಟ್ಟು ಆಸ್ತಿ 9.80 ಕೋಟಿ ಇದೆ. ಖರ್ಗೆ ಅವರ ಪತ್ನಿ ಚರಾಸ್ತಿ, ಹಿಂದು ಅವಿಭಜಿತ ಕುಟುಂಬದ ಸ್ಥಿರಾಸ್ತಿ ಮೌಲ್ಯ ಸೇರಿಸಿದರೆ ಒಟ್ಟಾರೆ 15.80 ಕೋಟಿ ರು ಆಸ್ತಿ ಹೊಂದಿದ್ದಾರೆ.

   English summary
   Karnataka Rajya Sabha Election 2020: Here is Congress candidate Mallikarjuna Kharge's declared assets and liabilities. His net assets stand at Rs 8 crore, He has no Land and Car.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X