ನಮಗೆ ಅವರ ಸಹವಾಸವೇ ಬೇಡ..! ಪುಟಿನ್ ಹೇಳಿಕೆ ಹಿಂದೆ ನಿಗೂಢ ರಣತಂತ್ರ..?
ಇಡೀ ಜಗತ್ತಿನ ಕಣ್ಣು ಅಫ್ಘಾನಿಸ್ತಾನದ ಕಡೆ ತಿರುಗಿದ್ದು, ಕ್ಷಣಕ್ಷಣದ ಸುದ್ದಿಗಾಗಿ ಜನ ಎದುರು ನೋಡುತ್ತಿದ್ದಾರೆ. ಹಾಗೇ ಅಫ್ಘಾನ್ ಜನರ ಮೇಲೆ ಕರುಣೆ, ಪ್ರೀತಿ, ಮಮತೆ ಕೂಡ ಮೂಡುತ್ತಿದೆ. ಆದ್ರೆ ಈ ಹೊತ್ತಲ್ಲೇ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿಕೆ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಅಫ್ಘಾನ್ ನಿರಾಶ್ರಿತರಿಗೆ ಜಾಗ ನೀಡಲು ಹಲವು ದೇಶಗಳು ಮುಂದೆ ಬಂದಿವೆ. ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳು ಸೇರಿದಂತೆ ಯುರೋಪ್‌ನ ಕೆಲವು ರಾಷ್ಟ್ರಗಳು ನಿರಾಶ್ರಿತರಿಗೆ ನೆರವು ನೀಡಿವೆ.
ಈ ಹೊತ್ತಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ವ್ಯತಿರಿಕ್ತ ಹೇಳಿಕೆ ನೀಡಿದ್ದು, ಪುಟಿನ್ ಹೇಳಿಕೆ ಅಮೆರಿಕಗೆ ಶಾಕ್ ಕೊಟ್ಟಿದೆ. ನಿರಾಶ್ರಿತರಿಗೆ ರಷ್ಯಾದಲ್ಲಿ ಜಾಗ ನೀಡುವಂತೆ ಪಾಶ್ಚಿಮಾತ್ಯರಿಂದ ಕೇಳಿಬಂದ ಮನವಿಗೆ ನೋ ಎಂದಿದ್ದಾರೆ. ಅಷ್ಟೇ ಅಲ್ಲದೆ 'ನಿರಾಶ್ರಿತರ ಸೋಗಿನಲ್ಲಿ ಅಫ್ಘಾನಿಸ್ತಾನದ ಉಗ್ರ ಪಡೆ ಇಲ್ಲಿಗೆ ಬರುವುದು ಬೇಡ' ಎಂದಿದ್ದಾರೆ. ಇದು ಅಮೆರಿಕ ಮತ್ತು ಅದರ ಮಿತ್ರರಿಗೆ ಮುಖಭಂಗವಾಗಿದ್ದು ರಷ್ಯಾ ನಡೆ ಕಂಡು ತಣ್ಣಗಾಗಿವೆ. ಮತ್ತೊಂದು ಬದಿಯಲ್ಲಿ ಪುಟಿನ್‌ರ ಈ ನಿರ್ಧಾರ ಹೊಸ ರಣತಂತ್ರದ ಭಾಗವಾಗಿದೆ ಎನ್ನುತ್ತಿದ್ದಾರೆ ತಜ್ಞರು.

ಅಮೆರಿಕಗೆ ಹೊಸ ಶಾಕ್..!
ಈಗಿನ ಪರಿಸ್ಥಿತಿಯಲ್ಲಿ ಅಫ್ಘಾನ್ ನಿರಾಶ್ರಿತರಿಗೆ ಜಾಗ ನೀಡಿದರೆ ಅದು ತಾಲಿಬಾನ್ ವಿರೋಧಿ ನಿಲುವಾಗುತ್ತದೆ. ಇಂತಹ ನಿಲುವು ರಷ್ಯಾಗೆ ಮುಳುವಾಗುವ ಸಾಧ್ಯತೆ ಹೆಚ್ಚು. ಮತ್ತೊಂದೆಡೆ ಅಫ್ಘಾನ್ ಬಿಟ್ಟು ಹೊರಬರುತ್ತಿರುವ ಜನರು ತಾಲಿಬಾನ್ ವಿರೋಧ ಕಟ್ಟಿಕೊಂಡೆ ಬರುತ್ತಿದ್ದಾರೆ. ಅಮೆರಿಕ ಈ ವಿಚಾರದಲ್ಲಿ ತಲೆಹಾಕಿದೆ. ಇದೆಲ್ಲವೂ ರಷ್ಯಾ ರೊಚ್ಚಿಗೇಳಲು ಕಾರಣವಾಗಿದೆ. ಹೀಗಾಗಿಯೇ ಕಾದು ನೋಡುವ ತಂತ್ರಕ್ಕೆ ರಷ್ಯಾ ಅಧ್ಯಕ್ಷರು ರಣತಂತ್ರ ರೂಪಿಸಿದ್ದಾರೆ. ಇಷ್ಟೆಲ್ಲಾ ಆದರೂ ಮುಂದಿನ ದಿನಗಳಲ್ಲಿ ಅಫ್ಘಾನ್‌ನಿಂದ ಅಮೆರಿಕವನ್ನು ದೂರವಿಟ್ಟು, ಶಾಂತಿ ಮೂಡಿಸುವ ಪ್ಲ್ಯಾನ್ ರಷ್ಯಾ ಹಾಗೂ ಚೀನಾ ತಲೆಯಲ್ಲಿದೆ ಎಂಬುದು ತಜ್ಞರ ಅಭಿಪ್ರಾಯ.

ತಾಲಿಬಾನ್‌ಗೆ ಪರೋಕ್ಷ ಬೆಂಬಲ..!
ಒಂದು ಕಡೆ ಅಮೆರಿಕ ಮತ್ತದರ ಮಿತ್ರ ಪಡೆಗಳು ತಾಲಿಬಾನ್ ಆಡಳಿತವನ್ನು ತೀವ್ರವಾಗಿ ವಿರೋಧಿಸಿವೆ. ಆದ್ರೆ ಅಟ್ ದಿ ಸೇಮ್ ಟೈಂ, ರಷ್ಯಾ ಮತ್ತು ಚೀನಾ ಬೆಂಬಲಿತ ದೇಶಗಳು ಈ ವಿಚಾರದಲ್ಲಿ ತಾಲಿಬಾನ್ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಿವೆ. ಈ ಎಲ್ಲಾ ದೇಶಗಳನ್ನ ಪಕ್ಕಕ್ಕಿಟ್ಟು ರಷ್ಯಾ ಆ್ಯಂಗಲ್‌ನಲ್ಲಿ ತಾಲಿಬಾನ್ ಆಡಳಿತ ನೋಡುವುದಾದರೆ, ರಷ್ಯಾ ಇಲ್ಲಿ ತಾಲಿಬಾನ್‌ಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಪಕ್ಕಾ. ಇದಕ್ಕೆ ಹಲವು ಕಾರಣಗಳಿವೆ. ಆದ್ರೆ ಪ್ರಮುಖ ಕಾರಣವೆಂದರೆ ಅಮೆರಿಕ ವಿರುದ್ಧದ 30 ವರ್ಷಗಳ ಮಹಾ ಸೇಡು.! ಶತ್ರುವಿನ ಶತ್ರು ಮಿತ್ರ ಎಂಬ ಮಾತು ಇಲ್ಲಿ ಅನ್ವಯಿಸುತ್ತದೆ. ಹೀಗಾಗಿ ತಾಲಿಬಾನ್‌ಗೆ ನೇರ ಬೆಂಬಲ ನೀಡದಿದ್ರೂ ರಷ್ಯಾ ಪರದೆಯ ಹಿಂದೆಯೇ ನಿಂತು ಆಟ ನೋಡಲಿದೆ.

ಸೇಡಿಗೆ ಸೇಡು ಪಕ್ಕಾ..!
40 ವರ್ಷಗಳ ಹಿಂದೆ ರಷ್ಯಾ ಅಫ್ಘಾನಿಸ್ತಾನಕ್ಕೆ ನುಗ್ಗಿದ್ದಾಗ ಅಮೆರಿಕ ಏನು ಮಾಡಿತ್ತೋ ಅದನ್ನೇ ಈಗ ರಷ್ಯಾದ ನಾಯಕರು ಮಾಡುವ ನಿರೀಕ್ಷೆ ಇದೆ. ತಾಲಿಬಾನ್ ಆಡಳಿತಗಾರರು ಅಲ್ಲಿನ ಸ್ಥಳೀಯರು. ಅವರ ದೇಶ ಅವರ ಕೈಯಲ್ಲೇ ಇರಬೇಕು ಎಂಬುದು ರಷ್ಯಾ-ಚೀನಾ ವಾದವಾಗಿದೆ. ಇದರ ಅರ್ಥ ಅಮೆರಿಕ ಇತರ ದೇಶದೊಳಗೆ ನುಗ್ಗಿ ಆಡಳಿತ ನಡೆಸುವುದು ಸರಿಯಲ್ಲ ಎಂಬ ನೀತಿ ರಷ್ಯಾ-ಚೀನಾದ್ದು. ಆದ್ರೆ ಇಲ್ಲಿ ರಾಜಕೀಯ ಕಾರಣಗಳು ಹಲವು. ಅಮೆರಿಕ ಇತರ ದೇಶಗಳ ಮೇಲೆ ಹಿಡಿತ ಸಾಧಿಸುವುದನ್ನು ತಪ್ಪಿಸುವುದೇ ಮೂಲ ಉದ್ದೇಶ. ತನಗೆ 30 ವರ್ಷಗಳ ಹಿಂದೆ ಅಮೆರಿಕ ಕೊಟ್ಟಿದ್ದ ಏಟನ್ನೇ ತಿರುಗಿಸಿ ಕೊಡಲು ಈ ಮೂಲಕ ರಷ್ಯಾ ಸಿದ್ಧವಾಗಿದೆ.

ಪುಟಿನ್ ರಣತಂತ್ರವೇ ಡಿಫರೆಂಟ್..!
ಈಗಿನ ಕಾಲಘಟ್ಟದಲ್ಲಿ ಅಮೆರಿಕದ ತಂತ್ರಗಳಿಗೆ ರಣತಂತ್ರ ಹೆಣೆಯುವ ತಾಕತ್ತು ಇರುವುದು ಪುಟಿನ್ ಹಾಗೂ ಜಿನ್‌ಪಿಂಗ್‌ಗೆ ಮಾತ್ರ. ಆ ಪೈಕಿ ಪುಟಿನ್ ರಣತಂತ್ರವೇ ಡಿಫರೆಂಟ್..! ಅಮೆರಿಕ ವಿರುದ್ಧ ಪುಟಿನ್ ಮತ್ತೊಮ್ಮೆ ಇಂತಹದ್ದೇ ರಣತಂತ್ರ ರಚಿಸಿದಂತೆ ಕಾಣುತ್ತಿದೆ. ತಾಲಿಬಾನ್‌ನ ನೇರವಾಗಿ ಬೆಂಬಲಿಸಿದರೆ ಜಗತ್ತು ರಷ್ಯಾವನ್ನೇ ವಿಲನ್ ರೀತಿ ನೋಡಲಿದೆ. ಅಕಸ್ಮಾತ್ ತಾಲಿಬಾನ್ ಬೆಂಬಲಕ್ಕೆ ನಿಲ್ಲದೆ ಹೋದರೆ ಅಲ್ಲಿ ಮತ್ತೊಮ್ಮೆ ಅಮೆರಿಕ ಹಿಡಿತ ಸಾಧಿಸುವ ಸಾಧ್ಯತೆ ಇದೆ. ಹೀಗಾಗಿ ತಾಲಿಬಾನ್‌ಗೆ ಪರೋಕ್ಷ ಬೆಂಬಲ ನೀಡಿ, 30 ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಕೊಳ್ಳಲು ಮಾಸ್ಕೋ ರಣತಂತ್ರ ರೂಪಿಸಿದೆ ಎನ್ನುತ್ತಾರೆ ತಜ್ಞರು.

ಭಯೋತ್ಪಾದನೆ ಭಯವೂ ಇದೆ..!
ತಾಲಿಬಾನ್‌ಗೆ ಬೆಂಬಲ ನೀಡಿದ್ದರ ಹಿಂದೆ ರಷ್ಯಾದ ಮತ್ತೊಂದು ರಣತಂತ್ರವು ಅಡಗಿದೆ. ಅಫ್ಘಾನ್ ಗಡಿಯಿಂದ ರಷ್ಯಾ ಏನು ದೂರವಿಲ್ಲ. ಅಕಸ್ಮಾತ್ ಅಫ್ಘಾನಿಸ್ತಾನದಲ್ಲಿ ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಹೆಚ್ಚಾಗಿ, ಉಗ್ರ ಪಡೆಗಳು ಅಲ್ಲೇ ನೆಲೆಯೂರದಿರಲಿ. ಹೊಸ ತಲೆನೋವು ಸೃಷ್ಟಿಯಾಗದಿರಲಿ ಎಂಬುದು ರಷ್ಯಾದ ಮತ್ತೊಂದು ಪ್ಲ್ಯಾನ್. ಈಗಾಗಲೇ ರಷ್ಯಾ ತಾಲಿಬಾನ್‌ಗೆ ಈ ಬಗ್ಗೆ ಖಡಕ್ ಸಂದೇಶ ರವಾನಿಸಿದೆ. ನೆರೆ ದೇಶಗಳಲ್ಲಿ ಉಗ್ರರು ಉಪಟಳ ನೀಡದಂತೆ, ಅಫ್ಘಾನ್ ಉಗ್ರರಿಗೆ ನೆಲೆಯಾಗದಂತೆ ನೋಡಿಕೊಳ್ಳಲು ಆಗ್ರಹಿಸಿದ್ದಾರೆ. ಚೀನಾ ಕೂಡ ಇದೇ ಮಾತನ್ನು ತಾಲಿಬಾನ್ ಮುಖಂಡರಿಗೆ ಹೇಳಿ ಎಚ್ಚರಿಕೆಯನ್ನು ನೀಡಿಯೇ ಕಳಿಸಿದೆ. ಇದೇ ಕಾರಣಕ್ಕೆ ಈ ಬಾರಿ ತಾಲಿಬಾನ್ ಪಡೆ ಹೊಸ ಹುಮ್ಮಸ್ಸಿನಿಂದ ಆಡಳಿತ ನೀಡಲು ಮುಂದಾಗಿದೆ.
Recommended Video

9 ವರ್ಷಗಳ ಭೀಕರ ಕಾಳಗ
ಮೊದಲಿಗೆ ಗೆಲುವಿನ ನಗೆ ಬೀರಿದ್ದ ಸೋವಿಯತ್ ರಷ್ಯಾ ನಿಧಾನಕ್ಕೆ ಸೋಲುತ್ತಾ ಬಂತು. ರಷ್ಯಾ ಸೇನೆಯನ್ನು ಹೇಗಾದ್ರೂ ಮಾಡಿ ಅಫ್ಘಾನ್ ನೆಲದಿಂದ ಹೊರಹಾಕಲು ಅಮೆರಿಕ ಮತ್ತು ಅದರ ಮಿತ್ರರು ಸ್ಕೆಚ್ ಹಾಕಿದ್ದರು. ಹೀಗೆ ಕೆಲವೇ ದಿನಗಳಲ್ಲಿ ಯುದ್ಧ ಮುಗಿದು ಹೋಗಬಹುದು ಎಂಬ ಆಸೆಯಲ್ಲಿ ಅಫ್ಘಾನ್ ನೆಲಕ್ಕೆ ಬಂದಿಳಿದಿದ್ದ ಸೋವಿಯತ್ ರಷ್ಯಾ, ಬರೋಬ್ಬರಿ 9 ವರ್ಷಗಳಿಗೂ ಹೆಚ್ಚು ಕಾಲ ಅಫ್ಘಾನ್ ನೆಲದಲ್ಲಿ ಪರದಾಡುವ ಪರಿಸ್ಥಿತಿ ಎದುರಾಯಿತು. ಕಡೆಗೆ 1989ರ ಫೆಬ್ರವರಿ 15ರಂದು ಅಫ್ಘಾನ್ ನೆಲದಲ್ಲಿನ ಈ ಘೋರ ಕಾಳಗ ಮುಗಿಯಿತು. ಸೋವಿಯತ್ ರಷ್ಯಾ ಪಡೆಗಳು ಸೋತು ಹಿಂದೆ ಸರಿದಿದ್ದವು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications