ಏಳುಬೀಳಿನ ನಡುವೆಯೂ ಗೆದ್ದುಬೀಗಿದ ಮಹಾನಾಯಕ ಸಿದ್ದರಾಮಯ್ಯ
ಬೆಂಗಳೂರು, ಮೇ 18: ಅಹಿಂದ ನಾಯಕ ಎಂದೇ ಗುರುತಿಸಿಕೊಂಡು ರಾಜ್ಯ ರಾಜಕಾರಣದಲ್ಲಿ ತಮ್ಮ ಸಿದ್ಧಾಂತದ ಮೂಲಕ ಮನೆ ಮಾತಾದವರು ಸಿದ್ದರಾಮಯ್ಯನವರು. ಮೇ 20ನೇ ತಾರೀಖಿನಂದು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ಹಿಡಿಯಲಿದ್ದಾರೆ. ಅವರ ಬಗ್ಗೆ ತಿಳಿಯಲೇಬೇಕಿರುವ ಜೀವನ ಸಂಗತಿಗಳು ಇಲ್ಲಿವೆ.
ಕರ್ನಾಟಕ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪೂರ್ಣಾವಧಿಗೆ ಜವಾಬ್ದಾರಿ ನಿಭಾಯಿಸಿದ ಸಿದ್ದರಾಮಯ್ಯ ಅವರು ಕಳೆದ ಅವಧಿಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕರಾಗಿದ್ದರು. ತಮ್ಮ ರಾಜಕೀಯ ಅನುಭವ, ವಾಕ್‌ಚಾತುರ್ಯದಿಂದಲೇ ಹೆಸರುವಾಸಿಯಾದ ಇವರು, ಇದೀಗ 2023ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ.

ಮೈಸೂರು ತಾಲೂಕು ವರುಣಾ ಹೋಬಳಿಯ ಸಿದ್ಧರಾಮನಹುಂಡಿ ಸಿದ್ದರಾಮಯ್ಯನವರ ಹುಟ್ಟೂರು. 1948 ರ ಆಗಸ್ಟ್ 12 ರಂದು ಅವರು ಸಿದ್ಧರಾಮೇಗೌಡ ಹಾಗೂ ಬೋರಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಅವಿಭಕ್ತ ಕುಟುಂಬ ಸದಸ್ಯರಾಗಿದ್ದ ಅವರು ಬಾಲ್ಯದಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತವರು. ಇಂದಿಗೂ ಆ ಕಲಾ ಪ್ರಕಾರಗಳಲ್ಲಿ ಆಸಕ್ತಿ ಉಳಿಸಿಕೊಂಡಿದ್ದಾರೆ.
10ನೇ ವಯಸ್ಸಿನವರೆಗೂ ಶಾಲೆ ಮೆಟ್ಟಿಲು ತುಳಿಯದ ಇವರು, ನೇರವಾಗಿ ಐದನೇ ತರಗತಿಗೆ ವಿದ್ಯಾಭ್ಯಾಸ ಮಾಡಿದರು. ಹೀಗೆ ಹುಟ್ಟೂರಿನಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣ ಪೂರೈಸಿದರು. ಬಿಎಸ್‌ಸಿ ಪೂರ್ಣಗೊಳಿಸಿದ ನಂತರ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದರು. ಬಳಿಕ ಹಲವು ವರ್ಷಗಳ ಕಾಲ ವಕೀಲಿಕೆ ವೃತ್ತಿಯನ್ನು ಹಿರಿಯರೊಬ್ಬರ ಬಳಿ ಅಭ್ಯಾಸ ಮಾಡಿದರು.

ಭಾರತೀಯ ಲೋಕದಳ ಪಕ್ಷದಿಂದ ಮೊದಲ ಸ್ಪರ್ಧೆ:
ವಕೀಲಿಕೆ ವೃತ್ತಿ ಕಲಿಕೆ ಬಳಿಕ ಸಿದ್ದರಾಮಯ್ಯನವರು 1983ರಲ್ಲಿ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳ ಪಕ್ಷದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ವಿಜಯ ಪತಾಕೆ ಹಾರಿಸಿದ್ದರು. ಬಳಿಕ ಅವರು ಜನತಾಪಕ್ಷಕ್ಕೆ ಸೇರ್ಪಡೆಯಾದರು. ಆಗ ಅವರನ್ನು ಆಗಷ್ಟೇ ರಚಿಸಿದ 'ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಮಾಡಲಾಯಿತು. ಅಲ್ಲಿ ಸಹ ದಕ್ಷತೆಯಿಂದ ಹೊಣೆ ನಿಭಾಯಿಸಿದರು.
ಮೊದಲ ಬಾರಿ ಪಶುಸಂಗೋಪನೆ ಸಚಿವ:
ನಂತರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದರು. ಪಶುಸಂಗೋಪನೆ ಸಚಿವರಾಗಿ ಮೊದಲ ಬಾರಿಗೆ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಅದಾದ ನಂತರ ಸಿದ್ದರಾಮಯ್ಯನವರ ಅದೃಷ್ಟ ಕೈ ಕೊಟ್ಟಿತ್ತು. ಕಾರಣ ಆಗ ಕಾಂಗ್ರೆಸ್ ಅಲೆ ಎಲ್ಲೆಡೆ ಆರಂಭವಾಗಿತ್ತು. ಕಾಂಗ್ರೆಸ್ ಅಲೆ ಆರಂಭದ ನಂತರ ಕಾರಣಾಂತರಗಳಿಂದ ಜನತಾ ಪಕ್ಷ ಇಬ್ಬಾಗ ಆಯಿತು. ಈ ವೇಳೆ ಸಿದ್ದರಾಮಯ್ಯ ಜನತಾದಳ (ಜಾತ್ಯಾತೀತ) ಪಕ್ಷ ಸೇರಿದರು. ಇದಾದ ಬಳಿಕ ಮತ್ತೆ ಗೆಲುವಿನ ಕುದುರೆಯಂತಾದ ಸಿದ್ದರಾಮಯ್ಯನವರು 1994 ರಲ್ಲಿ ಚುನಾವನಣೆಯಲ್ಲಿ ಗೆದ್ದು ಹಣಕಾಸು ಖಾತೆ ಸಚಿವರೂ ಆಗಿ ಅನುಭವ ಪಡೆದರು. ಚುನಾವಣೆ ವೇಳೆ ಜನತಾ ದಳ ಎರಡು (1999) ಭಾಗವಾಯಿತು. ಅದಾದ ವರ್ಷ ಚುನಾವಣೆಯಲ್ಲಿ ಸೋಲು ಕಂಡರು.

ಕಾಂಗ್ರೆಸ್ ಜತೆಗೂಡಿ ಜನತಾದಳ ಸರ್ಕಾರ ರಚನೆ:
2004ರಲ್ಲಿ ಸಿದ್ದರಾಮಯ್ಯನವರು ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರೂ ಸಹ ಅಂದು ಎದುರಾದ ಅತಂತ್ರ ವಿಧಾನಸಭೆ ಸ್ಥಿತಿಯಿಂದಾಗಿ ಕಾಂಗ್ರೆಸ್ ಜತೆಗೂಡಿ ಜನತಾದಳ ಸರ್ಕಾರ ರಚನೆ ಮಾಡಿತು. ಅಂದು ಅವರು ಎರಡನೇ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. ನಂತರ ಸಿದ್ದರಾಮಯ್ಯರನ್ನು ಜನತಾದಳಿದಿಂದ ಹೊರದಬ್ಬಲಾಯಿತು.
2008ರಲ್ಲಿ ಗೆಲುವು:
ಇದಾದ ಮೇಲೆ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅವರು 2008ರಲ್ಲಿ ಗೆಲುವು ಸಾಧಿಸಿದರು. ಅಲ್ಲಿಂದ 2012ರವರೆಗೆ ಐದು ವರ್ಷಗಳ ಪೂರ್ಣಾವಧಿಗೆ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಬಳಿಕ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದಲೇ ಮುಖ್ಯಮಂತ್ರಿ ಅಭ್ಯರ್ಥಿಯಾದರು. ಅದಾದ ಬಳಿಕ 2018ರಲ್ಲಿ ಜೆಡಿಎಸ್ ಜೊತೆ ಸೇರಿ ಮೈತ್ರಿ ರಚನೆ ಮಾಡುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನಂತರ ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂಬ ಮಾಜಿ ಮುಖ್ಯಮಂತ್ರಿ ಜೆಡಿಎಸ್‌ನ ಎಚ್.ಡಿ ಕುಮಾರಸ್ವಾಮಿಯವರ ಟೀಕೆಗೆ ಗುರಿಯಾದರು.
ಚಾಮುಂಡೇಶ್ವರಿ ಶಕ್ತಿ ನೀಡಿದ ಕ್ಷೇತ್ರ:
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರು ಐದ ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಅಲ್ಲದೇ ಮೂರು ಬಾರಿ ಸೋಲು ಕಂಡಿದ್ದು, ರಾಜಕೀಯದಲ್ಲಿ ಒಟ್ಟು 8 ಬಾರಿ ಗೆಲುವು ನನ್ನದಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಶಕ್ತಿ ನೀಡಿದ ಕ್ಷೇತ್ರ, ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಆಗಾಗ ಹೇಳಿದ್ದು ಇದು. ಆದರೆ 2018ರಲ್ಲಿ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಸದ್ಯ ಮುಂಬರಲಿರುವ ವಿಧಾನಸಭೆ ಚುನಾವಣೆ (2023) ಎದರಿಸಲು ಸಜ್ಜಾಗಿರುವ ಅವರು ಹೈಕಮಾಂಡ್ ಒಪ್ಪಿದರೆ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇತ್ತ ಅವರಿಗೆ ಬೆಂಗಳೂರಿನ ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆಯೂ ಆಹ್ವಾನ ಬಂದಿದ್ದರ ಬಗ್ಗೆ ಚರ್ಚೆಗಳು ನಡೆದಿದ್ದವು.
15.5 ಕೋಟಿ ಆಸ್ತಿ ಒಡೆಯ:
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗ ಒಬ್ಬರೇ ಪುತ್ರ. ಅವರು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ. ಮೂಲಗಳ ಪ್ರಕಾರ ಒಟ್ಟು 15.5 ಕೋಟಿ ಆಸ್ತಿ ಒಡೆಯರಾಗಿರುವ ಅವರು https://twitter.com/siddaramaiah/status/1633715035951489024?s=20 ಲಭ್ಯವಿರುತ್ತಾರೆ. 2023ರ ಈ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಪಡೆಯಲು ಡಿಕೆ ಶಿವಕುಮಾರ್ ಅವರ ತಂತ್ರಗಾರಿಕೆ ಎಷ್ಟು ಕೆಲಸ ಮಾಡಿದೆಯೋ ಅಷ್ಟೇ ಮಟ್ಟಿಗೆ ಸಿದ್ದರಾಮಯ್ಯ ಅವರ ಮಾಸ್ ಲೀಡರ್‌ಶಿಫ್ ಹೆಚ್ಚಾಗಿಯೇ ಕೆಲಸ ಮಾಡಿದೆ.
ಸಿಎಂಗಾದಿಗಾಗಿ ಹಾವು ಏಣಿ ಆಟ:
ಕರ್ನಾಟಕದಲ್ಲಿ ಬಹುಸಂಖ್ಯಾತ ಮತದಾರ ಸಮುದಾಯವಾಗಿರುವ ಲಿಂಗಾಯತರು ಸಿದ್ದರಾಮಯ್ಯ ಕಾರಣಕ್ಕೆ ಮತ ಹಾಕಿದ್ದಾರೆ ಎಂದು ಅನೇಕರು ವಿಶ್ಲೇಷಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಸಿಎಂಗಾದಿಗಾಗಿ ನಡೆಯುತ್ತಿರುವ ಹಾವು ಏಣಿ ಆಟದಲ್ಲಿ ಬಹುಮತದ ನಾಯಕನಾಗಿ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಘೋಷಿತರಾಗಿದ್ದಾರೆ.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications