ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯದ ಸಾಕ್ಷಾತ್ ಸಮೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ವೈರಲ್!

|
Google Oneindia Kannada News

Recommended Video

Lok Sabha Elections 2019: ಮಂಡ್ಯದ ಅಭ್ಯರ್ಥಿಗಳ ಬಗ್ಗೆ ಸಾಕ್ಷಾತ್ ಸಮೀಕ್ಷೆ ಕೊಟ್ಟ ಅಚ್ಚರಿಯ ವರದಿ

ಮಂಡ್ಯ, ಏಪ್ರಿಲ್ 10 : ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಡ್ಯ. ರಾಜ್ಯದ ಮುಖ್ಯಮಂತ್ರಿಯ ಪುತ್ರ ಗೆಲ್ಲುವನೋ?, ಪಕ್ಷೇತರ ಅಭ್ಯರ್ಥಿ ಸಂಸತ್ ಪ್ರವೇಶಿಸುವರೋ? ಎಂದು ಚರ್ಚೆಗಳು ನಡೆಯುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ನಡೆಸಿದ ಸಮೀಕ್ಷೆಯೊಂದು ವೈರಲ್ ಆಗಿದೆ. ಸಾಕ್ಷಾತ್ ಸಮೀಕ್ಷೆ ಹೆಸರಿನಲ್ಲಿ ನಡೆಸಿರುವ ಈ ಸಮೀಕ್ಷೆಯ ವರದಿಗಳು ಜೆಡಿಎಸ್ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ.

ಮಂಡ್ಯ ಕ್ಷೇತ್ರದ ಚುನಾವಣಾ ಪುಟ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ. ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿಯೂ ಅವರಿಗೆ ಬೆಂಬಲ ಕೊಟ್ಟಿದೆ. ಏಪ್ರಿಲ್ 18ರಂದು ಚುನಾವಣೆ ನಡೆಯಲಿದೆ.

ಪುತ್ರನ ಗೆಲುವಿಗಾಗಿ ಮಂಡ್ಯದಲ್ಲಿ ಕುಮಾರಸ್ವಾಮಿ ರಹಸ್ಯ ಸಭೆ!ಪುತ್ರನ ಗೆಲುವಿಗಾಗಿ ಮಂಡ್ಯದಲ್ಲಿ ಕುಮಾರಸ್ವಾಮಿ ರಹಸ್ಯ ಸಭೆ!

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಪ್ರತಿ ವಿಧಾನಸಭಾ ಕ್ಷೇತ್ರಗಳ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ. 2018ರಲ್ಲಿ ನಡೆದ ಮಂಡ್ಯ ಉಪ ಚುನಾವಣೆ ಸಂದರ್ಭದಲ್ಲಿ ನಾವು ನಡೆಸಿದ ಸಮೀಕ್ಷೆ ಸರಿಯಾಗಿತ್ತು ಎಂದು ಸಾಕ್ಷಾತ್ ಸಮೀಕ್ಷೆ ಹೇಳಿದೆ....ಸಮೀಕ್ಷೆಯ ವರದಿ ಇಲ್ಲಿದೆ

ನಿಖಿಲ್ ಪರ ಕೆಲಸ ಮಾಡಿದ ಆರೋಪ : ಡಿಸಿ ಮಂಜುಶ್ರೀ ಎತ್ತಂಗಡಿನಿಖಿಲ್ ಪರ ಕೆಲಸ ಮಾಡಿದ ಆರೋಪ : ಡಿಸಿ ಮಂಜುಶ್ರೀ ಎತ್ತಂಗಡಿ

ಮತದಾರರ ವಿವರ

ಮತದಾರರ ವಿವರ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪುರುಷರು 8,62,098 ಮಹಿಳೆಯರು 8,59,519, ಇತರರು 142, ಸೇವಾ ಮತದಾರರು 717 ಇದ್ದಾರೆ. ಒಟ್ಟು 17,22,476 ಮತದಾರರು ಇದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಜಾತಿವಾರು ಲೆಕ್ಕಾಚಾರ

ಜಾತಿವಾರು ಲೆಕ್ಕಾಚಾರ

ಮಂಡ್ಯದಲ್ಲಿ 8.10 ಲಕ್ಷ ಒಕ್ಕಲಿಗರು, 3.50 ಲಕ್ಷ ದಲಿತ, 1 ಲಕ್ಷ ಲಿಂಗಾಯತರು, 1 ಲಕ್ಷ ಕುರುಬರು, 80 ಸಾವಿರ ಮುಸ್ಲಿಂಮರು, 40 ಸಾವಿರ ಬೆಸ್ತರು, 30 ಸಾವಿರ ಬ್ರಾಹ್ಮಣರು, 30 ಸಾವಿರ ವಿಶ್ವಕರ್ಮ, 30 ಸಾವಿರ ಕ್ರೈಸ್ತರು, 10 ಸಾವಿರ ಈಡಿಗರು ಮತ್ತು 1.30 ಲಕ್ಷ ಇತರ ಮತದಾರರು ಇದ್ದಾರೆ ಎಂದು ಸಮೀಕ್ಷೆ ಹೇಳಿದೆ.

ನಿಖಿಲ್‌ ಕುಮಾರಸ್ವಾಮಿ ಪ್ಲಸ್ ಪಾಯಿಂಟ್

ನಿಖಿಲ್‌ ಕುಮಾರಸ್ವಾಮಿ ಪ್ಲಸ್ ಪಾಯಿಂಟ್

ನಿಖಿಲ್ ಕುಮಾರಸ್ವಾಮಿ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಪ್ರಬಲ ಅಸ್ತ್ರವಾಗಿದೆ ಎಂದು ಸಮೀಕ್ಷೆ ಹೇಳಿದೆ. ಒಕ್ಕಲಿಗರ ಒಲವು ಅವರ ಕಡೆ ಇದೆ. ಎಂಟು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ ಅದು ಹೆಚ್ಚಿನ ಬಲ ತುಂಬಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.

ನಿಖಿಲ್ ಮೈನಸ್ ಪಾಯಿಂಟ್

ನಿಖಿಲ್ ಮೈನಸ್ ಪಾಯಿಂಟ್

ಜೆಡಿಎಸ್ ನಾಯಕರು ಎದುರಾಳಿ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಮೈನಸ್ ಪಾಯಿಂಟ್ ಎಂದು ಸಮೀಕ್ಷೆ ಹೇಳಿದೆ. ಜೆಡಿಎಸ್ ನಾಯಕರ ಅತಿಯಾದ ಆತ್ಮವಿಶ್ವಾಸ, ಕಾಂಗ್ರೆಸ್-ಜೆಡಿಎಸ್ ನಾಯಕರಲ್ಲಿನ ಮೈತ್ರಿ ವಿಚಾರದ ಗೊಂದಲ, ಚಿತ್ರನಟರ ಬಗ್ಗೆ ಕುಮಾರಸ್ವಾಮಿ ಆಡುತ್ತಿರುವ ಮಾತು ಚುನಾವಣೆಯಲ್ಲಿ ನಕಾರಾತ್ಮಕ ಪ್ರಭಾವ ಬೀರಬಹುದು ಎಂಬುದು ಸಮೀಕ್ಷೆಯ ಲೆಕ್ಕಾಚಾರ.

ಅನುಕಂಪದ ಅಲೆ

ಅನುಕಂಪದ ಅಲೆ

ಅಂಬರೀಶ್ ಅವರ ಹೆಸರಿನ ಬಲ ಮತ್ತು ಅನುಕಂಪದ ಅಲೆ ಸುಮಲತಾ ಅವರಿಗೆ ಸಕಾರಾತ್ಮಕವಾಗಿದೆ ಎಂದು ಸಮೀಕ್ಷೆ ಹೇಳಿದೆ. ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡ ವಿರೋಧಿಗಳು, ವಿವಾದ ರಹಿತವಾದ ಭಾಷಣಗಳು ಸುಮಲತಾ ಅವರಿಗೆ ಜನ ಬೆಂಬಲ ನೀಡಬಹುದು ಎಂದು ವರದಿ ಹೇಳಿದೆ.

English summary
Pre poll survey conducted in the name of Sakshat Samekshe about Mandya lok sabha seat predicted Nikhil Kumaraswamy victory. Sumalatha Ambareesh independent candidate in Mandya and BJP supported Sumalatha in the elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X