ಎಂದಿಗೂ ಬಿಜೆಪಿಗೆ ಸೇರಲ್ಲ ಎಂದ ಚುನಾವಣಾ ಚಾಣಕ್ಯನಿಗೆ 'ರಾಜಕೀಯ ಸಹಾಯಕ' ಎಂದು ಕರೆದರೆ ಇಷ್ಟವಂತೆ!
ನವದೆಹಲಿ, ಡಿಸೆಂಬರ್ 23: ರಾಜಕೀಯ ತಂತ್ರಜ್ಞ ಎಂದು ಕರೆಯುವುದರಲ್ಲಿ ಹೆಚ್ಚು ತೂಕ ಇಲ್ಲ ಎಂದು ಹೇಳುವ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ತಾನು "ರಾಜಕೀಯ ಸಹಾಯಕ" ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ದಿ ಪ್ರಿಂಟ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ ಪ್ರಶಾಂತ್ ಕಿಶೋರ್ ಈ ಹೇಳಿಕೆ ನೀಡಿದ್ದಾರೆ.
ಭಾರತೀಯ ರಾಜಕೀಯ ಕ್ರಿಯಾ ಸಮಿತಿಯ (ಐ-ಪಿಎಸಿ) ಸ್ಥಾಪಕರಾದ ಪ್ರಶಾಂತ್ ಕಿಶೋರ್, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸಹಾಯ ಮಾಡುವ ಮೂಲಕ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಪತ್ತೆ ಆಡಳಿತರ ಚುಕ್ಕಾಣಿ ಹಿಡಿಯಲು ಕಾರಣವಾದರು. ಇನ್ನು ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ವಿಜಯಕ್ಕೂ ಪ್ರಶಾಂತ್ ಬೆನ್ನೆಲುಬಾಗಿದ್ದಾರೆ.
ಬುಧವಾರ ಪ್ರಸಾರವಾದ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಶಾಂತ್ ಕಿಶೋರ್, "ರಾಜಕಾರಣಿಗಳ ಸಹಾಯಕನಾಗಿ ನನ್ನನ್ನು ನಾನು ಕಂಡುಕೊಂಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಸಹಾಯ ಪಡೆಯುವವರಿಗೆ ನಾನು ಸಹಾಯಕನಾಗಿರುತ್ತೇನೆ," ಎಂದು ಹೇಳಿದ್ದಾರೆ. ಕಿಶೋರ್‌ರ ಸ್ವಂತ ಸಿದ್ಧಾಂತ ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಳು, ವಿರೋಧ ಪಕ್ಷಗಳ ಸ್ಥಾನಮಾನ, ಬಿಜೆಪಿನ ಯಶಸ್ಸಿಗೆ ಕಾರಣ, ಭಾರತದ ಪ್ರಸ್ತುತ ರಾಜಕೀಯ ಸನ್ನಿವೇಶಗಳ ಬಗ್ಗೆ ಪ್ರಶಾಂತ್ ಕಿಶೋರ್ ಮಾತನಾಡಿದ್ದಾರೆ.

ಪ್ರಶಾಂತ್ ಕಿಶೋರ್ ಸಿದ್ಧಾಂತ ಯಾವುದು?
ಪ್ರಶಾಂತ್ ಕಿಶೋರ್ ತನ್ನದೇ ಆದ ಸಿದ್ಧಾಂತವನ್ನು ಹೊಂದಿದ್ದಾರೆಯೇ ಎಂದು ಪ್ರಶ್ನೆ ಮಾಡಿದಾಗ, ಖಂಡಿತ ಹೌದು ಎಂದು ಹೇಳಿರುವ ಪ್ರಶಾಂತ್ ಕಿಶೋರ್, "ನನಗೆ ಖಂಡಿತವಾಗಿ ಸಿದ್ಧಾಂತವಿದೆ. ಆದರೆ ಯಾವುದೇ ಸಿದ್ಧಾಂತ ನನ್ನ ವಸ್ತುನಿಷ್ಠತೆಯನ್ನು ಕಳೆದುಕೊಳ್ಳುವಂತೆ ಮಾಡಬಾರದು," ಎಂದು ಹೇಳಿದ್ದಾರೆ, ಇದೇ ಸಂದರ್ಭದಲ್ಲಿ ಬಿಜೆಪಿಯ ಉದಾಹರಣೆಯನ್ನು ಪ್ರಶಾಂತ್ ಕಿಶೋರ್ ನೀಡಿದ್ದಾರೆ. "ಬಿಜೆಪಿಯಲ್ಲಿ ಹತ್ಯೆಗಳನ್ನು ನಾಯರುಗಳೇ ಸಮರ್ಥಿಸಿಕೊಳ್ಳುತ್ತಿದ್ದಾರೆ," ಎಂದಿದ್ದು, ಇದು ಸಿದ್ದಾಂತಕ್ಕೆ ಜೋತು ಬಿದ್ದು ವಸ್ತುನಿಷ್ಠತೆಯನ್ನು ಕಳೆದುಕೊಳ್ಳುವುದು ಎಂದು ಕೂಡಾ ಅಭಿಪ್ರಾಯಿಸಿದ್ದಾರೆ

ಎಂದಿಗೂ ಬಿಜೆಪಿಗೆ ಸೇರಲ್ಲ ಎಂದ ಪ್ರಶಾಂತ್
ಇನ್ನು ತನ್ನ ರಾಜಕೀಯ ಕಣ್ಣೋಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಶಾಂತ್ ಕಿಶೋರ್, "ನಾನು ಸೋತ ರಾಜಕಾರಣಿ" ಎಂದಿದ್ದಾರೆ. ಬಿಹಾರದಲ್ಲಿ ಜನತಾ ದಳ (ಯುನೈಟೆಡ್) ಸದಸ್ಯರಾಗಿದ್ದಾಗ ವಿಫಲ ರಾಜಕಾರಣಿಯಾದೆ ಎಂದಿದ್ದಾರೆ. ಈ ಸಂದರ್ಭದಲ್ಲೇ ತಾನು ಹೆಚ್ಚಾಗಿ ಕಾಂಗ್ರೆಸ್‌ನವರಂತೆ ಬಿಂಬಿತವಾಗುವ ಬಗ್ಗೆ ಮಾತನಾಡಿ, ನನಗೆ ರಾಜಕೀಯ ಮಹತ್ವಾಕಾಂಕ್ಷೆಗಳು ಇದೆ ಎಂದು ಒಪ್ಪಿಕೊಂಡಿದ್ದಾರೆ. ಈ ವೇಳೆಯೇ "ನಾನು ಎಂದಿಗೂ ಬಿಜೆಪಿಗೆ ಸೇರ್ಪಡೆ ಆಗಲ್ಲ. ಅದು ನನ್ನ ಟೇಬಲ್ ಮೇಲೆ ಇರುವ ಆಹಾರವಲ್ಲ, ಸೈದ್ಧಾಂತಿಕವಾಗಿ ನೋಡುವಾಗ ನಾನು ಬಿಜೆಪಿಗೆ ಸೇರಿದರೆ ಅದು ಬಹಳ ಅಹಿತಕರವಾದ ಪರಿಸ್ಥಿತಿಯನ್ನು ತಂದೊಡ್ಡಬಹುದು," ಎಂದಿದ್ದಾರೆ.

ಕಾಂಗ್ರೆಸ್ ಬಗ್ಗೆ ಪ್ರಶಾಂತ್ ಕಿಶೋರ್ ಹೇಳುವುದು ಏನು?
ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ನ ಬಗ್ಗೆ ಪ್ರಶಾಂತ್ ಕಿಶೋರ್ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. "ಹಲವು ದಶಕಗಳು ಕಳೆದರೂ ಬಿಜೆಪಿ ಎಲ್ಲಿಗೂ ಹೋಗುವುದಿಲ್ಲ. ಈಗ ಸಮಸ್ಯೆ ಇರುವುದು ರಾಹುಲ್ ಗಾಂಧಿಯಲ್ಲಿ, ಈ ನೈಜ ವಿಚಾರಗಳನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳುತ್ತಿಲ್ಲ, ಅರಿತುಕೊಳ್ಳುತ್ತಿಲ್ಲ," ಎಂದು ಪ್ರಶಾಂತ್ ಕಿಶೋರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಕಳೆದ 20 ವರ್ಷಗಳಲ್ಲಿ, 72 ಗಂಟೆಗಳಿಗಿಂತ ಹೆಚ್ಚು ಕಾಲ ಭಾರತದಾದ್ಯಂತ ನಡೆದ ಆಂದೋಲನವನ್ನು ಕಾಂಗ್ರೆಸ್ ನಿರ್ವಹಣೆ ಮಾಡಿಲ್ಲ ಎಂದೂ ಹೇಳಿದ್ದರು.

"ಬಿಜೆಪಿಯನ್ನು ಎದುರಿಸುವವರು ಕಾಂಗ್ರೆಸ್ ಆಕ್ರಮಿತ ಜಾಗದಲ್ಲಿರಬೇಕು"
"ಪ್ರಸ್ತುತ ಯಾರು ಬಿಜೆಪಿಯನ್ನು ಎದುರಿಸಲು ಬಯಸುತ್ತಾರೋ ಅವರು ಕಾಂಗ್ರೆಸ್ ಆಕ್ರಮಿಸಿಕೊಂಡಿರುವ ಜಾಗದಲ್ಲಿ ಇರಬೇಕು. ಕಾಂಗ್ರೆಸ್ ಬಿಟ್ಟರೆ ಬಿಜೆಪಿಯನ್ನು ಸೋಲಿಸುವ ದೊಡ್ಡ ಶಕ್ತಿ ನಿಮ್ಮಲ್ಲಿ ಇಲ್ಲ. ಆದರೆ ಕಾಂಗ್ರೆಸ್ ಕೂಡಾ ಇದ್ದ ಹಾಗೆ ಇಲ್ಲ," ಎಂದು ಕೂಡಾ ಪ್ರಶಾಂತ್ ಕಿಶೋರ್ ವಿವರಿಸಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಏನು?
ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯ ಬಗ್ಗೆಯೂ ಪ್ರಶಾಂತ್ ಕಿಶೋರ್ ಮಾತನಾಡಿದ್ದಾರೆ. "ವಿಧಾನಸಭಾ (ಚುನಾವಣೆ) ನಲ್ಲಿ ಬಿಜೆಪಿಯ ಕಳಪೆ ಪ್ರದರ್ಶನ ನೀಡಿದೆ. ಇದಕ್ಕೆ ಕಾರಣ ಅತಿರಾಷ್ಟ್ರೀಯತೆ ಯಾವುದೇ ಕೆಲಸವನ್ನು ಮಾಡದಿರುವುದು ಆಗಿದೆ. ಪಕ್ಷವು ಪ್ರಧಾನಿ ಮೋದಿ ಜನಪ್ರಿಯತೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಅಸಮರ್ಥವಾಗಿದೆ ಎಂಬುದು ತಿಳಿದು ಬಂದಿದೆ. ಬಿಜೆಪಿಯ ವಿಭಜನಕಾರಿ ನೀತಿಯಿದ್ದರೂ ಬಿಜೆಪಿ ಶೇ.50-55ಕ್ಕಿಂತ ಹೆಚ್ಚು ಹಿಂದೂ ಮತಗಳನ್ನು ಪಡೆದಿಲ್ಲ," ಎಂದು ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications