ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್ಮದಿನ ವಿಶೇಷ: ಒತ್ತಡ ಮುಕ್ತವಾಗಲು 72 ವರ್ಷದ ಪ್ರಧಾನಿ ಮೋದಿಯವರ 5 ಫಿಟ್‌ನೆಸ್ ಮಂತ್ರಗಳು

|
Google Oneindia Kannada News

ನವದೆಹಲಿ ಸೆಪ್ಟೆಂಬರ್ 17: ವಯಸ್ಸು ಕೇವಲ ಸಂಖ್ಯೆ ಎಂಬುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಜೀವಂತ ಉದಾಹರಣೆ. ಈ ವಯಸ್ಸಿನಲ್ಲೂ ಅವರು ಭಾರತದಂತಹ ದೇಶವನ್ನು ಕಟ್ಟುವುದರೊಂದಿಗೆ ತಮ್ಮ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಅವರು ಒಬ್ಬ ಮಹಾನ್ ನಾಯಕ ಮಾತ್ರವಲ್ಲದೆ ಅತ್ಯಂತ ಆರೋಗ್ಯಕರ ಜೀವನವನ್ನು ನಡೆಸುವ ಫಿಟ್ ಪರ್ಸನಾಲಿಟಿ ಕೂಡ ಹೊಂದಿದ್ದಾರೆ.

ಶೀತದ ವಿರುದ್ಧ ಹೋರಾಡುವುದಾಗಲಿ, ಎರಡು ದಿನಗಳ ಉಪವಾಸವಿರಲಿ, ದಿನಕ್ಕೆ ಕೇವಲ 3 ಗಂಟೆ ನಿದ್ದೆ ಮಾಡಲಿ ಅಥವಾ ನಿಯಮಿತ ಯೋಗವಿರಲಿ ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ನರೇಂದ್ರ ಮೋದಿಯವರ ಈ 5 ಮಂತ್ರಗಳು ನಿಮ್ಮನ್ನು ಫಿಟ್ ಆಗಿಸಬಹುದು.

'Early bird catches the worm' ಎಂಬುದು ಯಶಸ್ವಿ ಜನರಲ್ಲಿ ಪ್ರಸಿದ್ಧವಾದ ಮಾತು. ಅಂದರೆ ಯಾರು ಮುಂಜಾನೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೋ ಅವರಿಗೆ ಯಶಸ್ಸು ಸಿಗುತ್ತದೆ. ಒಂದು ಅಧ್ಯಯನದ ಪ್ರಕಾರ, ಪ್ರಪಂಚದ ಹೆಚ್ಚಿನ ಸಿಇಒಗಳು ಮತ್ತು ಅನೇಕ ನಾಯಕರು ಬೆಳಗ್ಗೆ ಇತರರಿಗಿಂತ ಮುಂಚೆಯೇ ಏಳುತ್ತಾರೆ. ತಜ್ಞರ ಪ್ರಕಾರ, ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಅಳವಡಿಸಿಕೊಳ್ಳುವುದು ಆರೋಗ್ಯಕರವಾಗಿರಲು ಉತ್ತಮ ಜೀವನಶೈಲಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾದ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸುತ್ತಾರೆ. ಅವರು ಕೇವಲ 3 ರಿಂದ 4 ಗಂಟೆಗಳ ನಿದ್ದೆ ಮಾಡುತ್ತಾರೆ. ಇದರ ನಂತರವೂ ಅವರು ಸಕ್ರಿಯವಾಗಿಯೇ ಇರುತ್ತಾರೆ.

ಮೋದಿಯವರ ನಿಯಮಿತ ಯೋಗ

ಮೋದಿಯವರ ನಿಯಮಿತ ಯೋಗ

ಮೋದಿಯವರ ಫಿಟ್‌ನೆಸ್ ಮಂತ್ರಗಳಲ್ಲಿ ಯೋಗ ಪ್ರಮುಖವಾದದ್ದು. ಶಿಸ್ತಿನಿಂದ ಜೀವನ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಪಟುವಾಗಿ ಖ್ಯಾತರಾಗಿದ್ದಾರೆ. ಅವರು ಬೆಳಗ್ಗೆ ಎದ್ದ ತಕ್ಷಣ ಯೋಗವನ್ನು ಮೊದಲು ಅಭ್ಯಾಸ ಮಾಡುತ್ತಾರೆ. ಯೋಗವನ್ನು ಪ್ರಪಂಚದಾದ್ಯಂತ ಜನಪ್ರಿಯಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಲವಾರು ಸಂದರ್ಭಗಳಲ್ಲಿ, ವಿಶೇಷವಾಗಿ ಅಂತರಾಷ್ಟ್ರೀಯ ಯೋಗ ದಿನದಂದು, ಪ್ರಧಾನಿ ಮೋದಿ ಅವರು ಯೋಗದ ವಿವಿಧ 'ಆಸನ'ಗಳನ್ನು ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದೆ. ಅವರು ಭಾರತೀಯರನ್ನು, ವಿಶೇಷವಾಗಿ ಯುವ ಪೀಳಿಗೆಯನ್ನು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಾರೆ. ಯೋಗ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ಇದು ಜನರಿಗೆ ತಿಳಿಸುತ್ತದೆ. ಇದರಿಂದ ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಂಡು ಆರೋಗ್ಯವಂತರಾಗಿ ಬಾಳಬಹುದು.

ಮೋದಿಯವರ ಆರೋಗ್ಯಕರ ಉಪಹಾರ

ಮೋದಿಯವರ ಆರೋಗ್ಯಕರ ಉಪಹಾರ

ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯಕರ ಉಪಹಾರದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಇದು ಹೆಚ್ಚಾಗಿ ಶುಂಠಿ ಚಹಾವನ್ನು ಒಳಗೊಂಡಿರುತ್ತದೆ. ಪ್ರಧಾನಿ ಮೋದಿ ಸಸ್ಯಾಹಾರಿ ಆದ್ದರಿಂದ ಅವರ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳು ಮಾತ್ರ ಇರುತ್ತವೆ. ಅವರು ಸಾಂಪ್ರದಾಯಿಕ ಗುಜರಾತಿ ಭಕ್ಷ್ಯಗಳನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅವಕಾಶ ಸಿಕ್ಕಾಗಲೆಲ್ಲಾ ಅವುಗಳನ್ನು ತಿನ್ನುತ್ತಾರೆ.

ಆಯುರ್ವೇದದ ಮೇಲೆ ನಂಬಿಕೆ

ಆಯುರ್ವೇದದ ಮೇಲೆ ನಂಬಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಆಯುರ್ವೇದವನ್ನು ಪ್ರಚಾರ ಮಾಡುತ್ತಾರೆ. ಯೋಗದ ನಂತರ, ಜಗತ್ತು ಶೀಘ್ರದಲ್ಲೇ ಭಾರತದ ಆಯುರ್ವೇದದ ಪ್ರಾಚೀನ ತತ್ವಗಳನ್ನು ಒಪ್ಪಿಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ವೈಜ್ಞಾನಿಕವಾಗಿ ಇತರ ದೇಶಗಳಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿಯನ್ನು ಯುವಕರು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಸಿನೀರು ಕುಡಿಯುವುದರಿಂದ ಶೀತ ಗುಣವಾಗುತ್ತದೆ ಎಂದು ಪ್ರಧಾನಿ ಮೋದಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದಲ್ಲದೆ, ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸಲು ಮನೆಮದ್ದುಗಳನ್ನು ಅವಲಂಬಿಸುವಂತೆ ಪ್ರಧಾನಿ ಮೋದಿ ದೇಶವಾಸಿಗಳನ್ನು ಕೇಳಿಕೊಂಡಿರುವುದಿದೆ.

ಧ್ಯಾನ ಮತ್ತು ಉಸಿರಾಟದ ಯೋಗ

ಧ್ಯಾನ ಮತ್ತು ಉಸಿರಾಟದ ಯೋಗ

ಪ್ರಧಾನಿ ಮೋದಿ ಧ್ಯಾನ ಮತ್ತು ಉಸಿರಾಟದ ಸಹಾಯದಿಂದ ಒತ್ತಡವನ್ನು ಮುಕ್ತವಾಗಿರಿಸಿಕೊಳ್ಳುತ್ತಾರೆ. ಶಾಲೆಗಳ ವಿದ್ಯಾರ್ಥಿಗಳು ಮತ್ತು ವಿವಿಧ ಪ್ರತಿಷ್ಠಿತ ಪರೀಕ್ಷೆಗಳ ಅಭ್ಯರ್ಥಿಗಳು ಒತ್ತಡ ಮುಕ್ತರಾಗಲು ಧ್ಯಾನ ಮತ್ತು ಉಸಿರಾಟದ ತಂತ್ರಗಳನ್ನು ಅನುಸರಿಸಲು ಅವರು ಸಲಹೆ ನೀಡಿದ್ದಾರೆ.

English summary
PM Narendra Modi's birthday: Learn 5 fitness mantras of 72-year-old Modi to stay stress-free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X