• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ದಿನಗಳ ಸಕ್ಸಸ್ ಸ್ಟೋರಿ! ಸೆಂಚ್ಯೂರಿ ಸ್ಟಾರ್ ‘ನಾಸಾ’ ಸಾಧನೆ!

|
Google Oneindia Kannada News

ಸರಿಯಾಗಿ 100 ದಿನಗಳ ಹಿಂದೆ ಬಾಹ್ಯಾಕಾಶ ಪ್ರೇಮಿಗಳು, ಅದರಲ್ಲೂ ಮಂಗಳ ಗ್ರಹದ ಅಭಿಮಾನಿಗಳು ನಿದ್ದೆ ಬಿಟ್ಟು ನಾಸಾ ಕಡೆ ಗಮನ ಇಟ್ಟು ಕೂತಿದ್ದರು. ಇದೆಲ್ಲವನ್ನೂ ಯ್ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡುತ್ತಿತ್ತು ನಾಸಾ. ಅದೊಂದು ಶತಮಾನದ ಸಾಧನೆ ಎಂಬುದು ಎಲ್ಲರಿಗೂ ಗೊತ್ತಿತ್ತು, ಅಷ್ಟೇ ಆತಂಕ ಆವರಿಸಿತ್ತು.

ಹಾಗೇ ನಾಸಾ ಹೆಡ್‌ ಆಫಿಸ್‌ನಲ್ಲಿ ಕೂತು ಎಲ್ಲವನ್ನೂ ಲೀಡ್ ಮಾಡುತ್ತಿದ್ದವರು ಬೇರಾರು ಅಲ್ಲ, ಭಾರತದ ಹೆಮ್ಮೆಯ ಮಹಿಳೆ. ಹೀಗೆ ನೋಡ ನೋಡ್ತ್ತಿದ್ದಂತೆ ನಾಸಾ ಜಗತ್ತು ತಿರುಗಿನೋಡುವ ಮತ್ತೊಂದು ಸಾಧನೆ ಮಾಡಿಬಿಟ್ಟಿತು. ಯಶಸ್ವಿಯಾಗಿ ಮಂಗಳ ಗ್ರಹದ ಮೇಲೆ ತನ್ನ ನೌಕೆ ಇಳಿಸಿಬಿಟ್ಟಿತ್ತು. ಹೌದು, ನಾವು ಹೇಳುತ್ತಿರುವುದು ನಾಸಾ ರೋವರ್ ಪೆರ್‌ಸೆವೆರನ್ಸ್ ಲ್ಯಾಂಡ್ ಆಗಿದ್ದ ರೋಚಕ ಕಹಾನಿ ಬಗ್ಗೆ.

ಅಂದ ಹಾಗೆ ಈಗ್ಯಾಕೆ ಈ ಮಾತು ಅಂದ್ರೆ 'ಪೆರ್‌ಸೆವೆರನ್ಸ್' ರೋವರ್ ಮಂಗಳ ಗ್ರಹದ ಮೇಲೆ ಲ್ಯಾಂಡ್ ಆಗಿ 100 ದಿನ ಪೂರೈಸಿದ್ದು, ಪೆರ್‌ಸೆವೆರನ್ಸ್ ಈ 100 ದಿನಗಳಲ್ಲಿ ಮಾನವ ಇದುವರೆಗೂ ಮಾಡದ ಸಾಧನೆ ಮಾಡಿದೆ. ಅದರಲ್ಲೂ ಮೊಟ್ಟಮೊದಲ ಬಾರಿಗೆ ಭೂಮಿ ಬಿಟ್ಟು ಬೇರೆ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸಿದ್ದು ಶತಮಾನದ ಸಾಧನೆಯಾಗಿದೆ.

ಮಂಗಳನ ಮೇಲೆ ಹೆಲಿಕಾಪ್ಟರ್..!

ಮಂಗಳನ ಮೇಲೆ ಹೆಲಿಕಾಪ್ಟರ್..!

ಈ ಮಾತು ಮೊದಲಿಗೆ ಕೇಳಿದಾಗ ತಮಾಷೆ ಎನಿಸಿತ್ತು. ಭೂಮಿ ಮೇಲೆ ಹೆಲಿಕಾಪ್ಟರ್ ಹಾರಿಸುವುದೇ ದೊಡ್ಡ ಸಾಧನೆಯಾಗಿರುವಾಗ, ಮಂಗಳನ ಮೇಲೂ ಹೆಲಿಕಾಪ್ಟರ್ ಹಾರಿಸಲು ಸಾಧ್ಯವಾ ಎಂಬ ಪ್ರಶ್ನೆ ನಾಸಾ ಸಂಸ್ಥೆಗೆ ಎದುರಾಗಿತ್ತಂತೆ. ಆದರೆ ಎಲ್ಲವನ್ನೂ ದಿಟ್ಟವಾಗಿ ಎದುರಿಸಿ ನಾಸಾ ಗೆದ್ದು ಬೀಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಏಪ್ರಿಲ್ 7 ರಂದು ನಾಸಾ ನಿರ್ಮಿತ ಹೆಲಿಕಾಪ್ಟರ್ ಮಂಗಳನ ವಾತಾವರಣದಲ್ಲಿ ಮೊದಲ ಹಾರಾಟ ನಡೆಸಬೇಕಿತ್ತು. ಆದರೆ ಅದು ನಡೆಯಲಿಲ್ಲ, ಏಪ್ರಿಲ್ 11ರಂದು ಮತ್ತೊಮ್ಮೆ ಹೆಲಿಕಾಪ್ಟರ್ ಹಾರಾಟಕ್ಕೆ ಸಿದ್ಧತೆ ನಡೆದಿತ್ತು. ಆಗಲೂ ತಾಂತ್ರಿಕ ಸಮಸ್ಯೆಯಿಂದ ಏಪ್ರಿಲ್ 14ಕ್ಕೆ ಟೈಂ ಫಿಕ್ಸ್ ಆಗಿತ್ತು. ಏಪ್ರಿಲ್ 14ರ ಡೇಟ್ ಕೂಡ ಫ್ಲಾಪ್ ಆಗಿ, ಏಪ್ರಿಲ್ 19ರಂದು ಹೆಲಿಕಾಪ್ಟರ್ ಹಾರಾಟಕ್ಕೆ ಸಕ್ಸಸ್ ಕಂಡಿತ್ತು.

200 ಕೋಟಿ ವರ್ಷಗಳಷ್ಟು ಹಳೆ ಕೆರೆ

200 ಕೋಟಿ ವರ್ಷಗಳಷ್ಟು ಹಳೆ ಕೆರೆ

ಹೌದು, ಪೆರ್‌ಸೆವೆರನ್ಸ್ ರೋವರ್ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿಯ ಮೇಲೆ. ಅಷ್ಟಕ್ಕೂ ಇದು ಕುಳಿ ಅಥವಾ ದೊಡ್ಡ ಗುಂಡಿ ಅಲ್ಲ. 200 ಕೋಟಿ ವರ್ಷಗಳ ಹಿಂದೆ ಇಲ್ಲೊಂದು ಕೆರೆಯೇ ಇತ್ತು. ಮಂಗಳ ಗ್ರಹದ ಬಹುತೇಕ ಪ್ರದೇಶಗಳಿಗೆ ಇದೇ ಕುಳಿಯಿಂದ ನೀರು ಹರಿಯುತ್ತಿತ್ತು. ಜೀವಿಗಳು ಈ ನೀರನ್ನು ಬಳಸಿ, ಬದುಕು ಕಟ್ಟಿಕೊಂಡಿದ್ದವು ಎಂಬ ವಾದವಿದೆ. ಆದರೆ ಕಾಲ ಕ್ರಮೇಣ ಆ ಕೆರೆ ನಾಶವಾಗಿ ಹೋಗಿದೆ ಎನ್ನುತ್ತಾರೆ ವಿಜ್ಞಾನಿಗಳು. ನಾಸಾ ವಿಜ್ಞಾನಿಗಳ ವಾದಕ್ಕೆ ಬಲ ನೀಡುವಂತೆ, 'ಜೆಝೀರೋ' ಕುಳಿ ಆಚೆ ಮತ್ತು ಈಚೆ ನೀರು ಬರಲು ಹಾಗೂ ಹೋಗಲು ದಾರಿ ಕೂಡ ಕಾಣುತ್ತದೆ. ಹೀಗಾಗಿ ಅಲ್ಲಿ ಜೀವಿಗಳು ಬದುಕಿರಬಹುದು ಅಥವಾ ಮೂಳೆ, ಪಳಿಯುಳಿಕೆ ಸಿಗಬಹುದು ಎಂಬ ವಿಶ್ವಾಸ ನಾಸಾ ವಿಜ್ಞಾನಿಗಳಿಗೆ ಇದೆ.

ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳನ ಮಣ್ಣು ತರಲಿದೆ ‘ನಾಸಾ’

ಮೊದಲ ಬಾರಿ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಹೊಂದಿರುವ ನಾಸಾ ಮತ್ತೊಂದು ಸವಾಲನ್ನು ಗೆದ್ದಿದೆ. ಪೆರ್‌ಸೆವೆರನ್ಸ್ ರೋವರ್ ಇದೀಗ ಲ್ಯಾಂಡ್ ಆಗಿರುವುದು ಮಂಗಳನ 'ಜೆಝೀರೋ' ಕುಳಿ ಮೇಲೆ. ಈವರೆಗೂ ಯಾರೂ ಈ ಸಾಹಸ ಮಾಡಿರಲಿಲ್ಲ. ಏಕೆಂದರೆ 'ಜೆಝೀರೋ' ಕುಳಿಯಲ್ಲಿ ತನ್ನ ಬಿಡಾರ ಹೂಡುವುದು ಯಾವುದೇ ದೇಶಕ್ಕೂ ಸಾಧ್ಯವಿರದ ಮಾತು. ಅಲ್ಲಿನ ಇಕ್ಕಟ್ಟಾದ ಪರಿಸ್ಥಿತಿ ಹಾಗೂ ವ್ಯತಿರಿಕ್ತ ವಾತಾವರಣ ಅಧ್ಯಯನಕ್ಕೆ ಸಹಕಾರಿ ಆಗಿರಲಿಲ್ಲ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ್ದ ನಾಸಾ, ತನ್ನ ರೋವರ್ ಲ್ಯಾಂಡ್ ಮಾಡುವಲ್ಲಿ ಯಶಸ್ಸು ಕಂಡಿದೆ.

6 ಚಕ್ರದ ರೋವರ್..!

6 ಚಕ್ರದ ರೋವರ್..!

ಪೆರ್‌ಸೆವೆರನ್ಸ್ ಭೂಮಿಯಿಂದ ಉಡಾವಣೆಯಾದಾಗ ಸುಮಾರು 1 ಟನ್ ತೂಕವಿತ್ತು. ಹಾಗೂ ರೋವರ್‌ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳನ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು ಕೂಡ 6 ಅಡಿಗಿಂತ ಉದ್ದವೇ ಇದೆ. ಮತ್ತು 6 ಚಕ್ರಗಳನ್ನು ಪೆರ್‌ಸೆವೆರನ್ಸ್ ಹೊಂದಿದ್ದು, 2020ರ ಜುಲೈನಲ್ಲಿ ಭೂಮಿಯಿಂದ ಬಾಹ್ಯಾಕಾಶಕ್ಕೆ ಹಾರಿತ್ತು. ಇದೀಗ ಮಂಗಳ ಗ್ರಹದ ಮೇಲೆ ಏಕಾಂಗಿಯಾಗಿ ಅಧ್ಯನ ನಡೆಸಲಿದೆ. ಉದ್ದವಾದ ರೊಬೊಟಿಕ್ ಕ್ರೇನ್ ಹಾಗೂ ಡ್ರಿಲ್ಲರ್ 'ಪೆರ್‌ಸೆವೆರನ್ಸ್'ಗೆ ಸಹಾಯ ಮಾಡಲಿದೆ.

English summary
NASA’s rover Perseverance successfully completed 100 days in planet Mars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X