ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪೌಷ್ಟಿಕತೆ ಇರುವವರಿಗೆ ಕೊರೊನಾ ಸೋಂಕಿನ ಸಾಧ್ಯತೆ ಅತಿ ಹೆಚ್ಚು; ಅಧ್ಯಯನ

|
Google Oneindia Kannada News

ನವದೆಹಲಿ, ಆಗಸ್ಟ್ 12; ವಿಶ್ವವ್ಯಾಪಿಯಾಗಿ ಹರಡುತ್ತಿರುವ ಕೊರೊನಾ ಸೋಂಕಿಗೆ ಯಾರು ಅತಿ ಬೇಗನೆ ತುತ್ತಾಗುವ ಸಾಧ್ಯತೆ ಇದೆ ಎಂಬ ಕುರಿತ ಚರ್ಚೆಗಳು ಆರಂಭದಿಂದಲೂ ನಡೆದುಕೊಂಡು ಬಂದಿವೆ.

ವಯಸ್ಸಾದವರು, ಇನ್ನಿತರೆ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಕೊರೊನಾ ಸೋಂಕು ಸುಲಭವಾಗಿ ತಗುಲುವ ಸಾಧ್ಯತೆ ಹೆಚ್ಚಿದೆ ಎಂಬ ಅಂಶವನ್ನು ಹಲವು ಅಧ್ಯಯನಗಳು ತಿಳಿಸಿವೆ. ಕ್ಯಾಲಿಫೋರ್ನಿಯಾದಲ್ಲಿ ಈ ಸಂಬಂಧ ಅಧ್ಯಯನವೊಂದನ್ನು ನಡೆಸಲಾಗಿದ್ದು, ಅಪೌಷ್ಟಿಕತೆ ಹಾಗೂ ಕೊರೊನಾ ಸೋಂಕಿನ ನಡುವಿನ ಸಂಬಂಧದ ಕುರಿತು ಬೆಳಕು ಚೆಲ್ಲಲಾಗಿದೆ.

ಯಾವ ಸಮಸ್ಯೆ ಹೊಂದಿರುವವರಿಗೆ ಕೊರೊನಾ ಲಸಿಕೆಯ ಅಡ್ಡಪರಿಣಾಮದ ಅಪಾಯವಿದೆ?ಯಾವ ಸಮಸ್ಯೆ ಹೊಂದಿರುವವರಿಗೆ ಕೊರೊನಾ ಲಸಿಕೆಯ ಅಡ್ಡಪರಿಣಾಮದ ಅಪಾಯವಿದೆ?

ಕ್ಯಾಲಿಫೋರ್ನಿಯಾದ ಆರೆಂಜ್‌ ಕೌಂಟಿಯ ಮಕ್ಕಳ ಆಸ್ಪತ್ರೆ ಈ ಅಧ್ಯಯನವನ್ನು ನಡೆಸಿತ್ತು. ಅಪೌಷ್ಟಿಕತೆಗೂ ಕೊರೊನಾ ಸೋಂಕಿನ ಗಂಭೀರತೆಗೂ ನಡುವಿನ ಸಂಬಂಧವನ್ನು ಈ ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ. ಅಧ್ಯಯನದಲ್ಲಿ ಏನೇನು ಅಂಶಗಳು ತಿಳಿದುಬಂದಿವೆ? ಮುಂದೆ ಓದಿ...

 ಅಪೌಷ್ಟಿಕತೆ ಇದ್ದವರಿಗೆ ಸೋಂಕು ಸುಲಭವಾಗಿ ತಗುಲುತ್ತದೆ

ಅಪೌಷ್ಟಿಕತೆ ಇದ್ದವರಿಗೆ ಸೋಂಕು ಸುಲಭವಾಗಿ ತಗುಲುತ್ತದೆ

ಅಪೌಷ್ಟಿಕತೆಯಿಂದ ಬಳಲುತ್ತಿರುವ ಅಥವಾ ಅಪೌಷ್ಟಿಕತೆ ಇತಿಹಾಸ ಹೊಂದಿರುವ ಮಕ್ಕಳು ಹಾಗೂ ವಯಸ್ಕರು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಈ ಅಧ್ಯಯನ ಒತ್ತಿ ಹೇಳಿದೆ. ಇಂಥವರಲ್ಲಿ ಸೋಂಕಿನಿಂದ ಸಾವನ್ನಪ್ಪುವ ಸಾಧ್ಯತೆಯೂ ಅಧಿಕವಿದೆ. ಹೀಗಾಗಿ ಅಪೌಷ್ಟಿಕತೆ ಸಮಸ್ಯೆ ಇರುವವರು ಹಾಗೂ ಈ ಹಿಂದೆ ಈ ಸಮಸ್ಯೆ ಇದ್ದವರು ವೈದ್ಯಕೀಯ ಸಲಹೆ ಪಡೆಯುವುದು ಅವಶ್ಯಕ ಎಂದು ಅಧ್ಯಯನ ಹೇಳಿದೆ.

 ಅಪೌಷ್ಟಿಕತೆ ಇದ್ದವರಲ್ಲಿ ಸೋಂಕಿನ ಗಂಭೀರತೆ ಕುರಿತು ಅಧ್ಯಯನ

ಅಪೌಷ್ಟಿಕತೆ ಇದ್ದವರಲ್ಲಿ ಸೋಂಕಿನ ಗಂಭೀರತೆ ಕುರಿತು ಅಧ್ಯಯನ

ಅಪೌಷ್ಟಿಕತೆಗೂ ಕೊರೊನಾ ಸೋಂಕಿನ ಗಂಭೀರತೆಗೂ ನಡುವಿನ ಸಂಬಂಧವನ್ನು ಈ ಅಧ್ಯಯನದ ಮೂಲಕ ಸಂಶೋಧಕರು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. 8604 ಮಕ್ಕಳ ಹಾಗೂ 94495 ವಯಸ್ಕರ (18 ವರ್ಷಕ್ಕೂ ಮೇಲ್ಪಟ್ಟವರ) ವೈದ್ಯಕೀಯ ವರದಿಯನ್ನು ಬಳಸಿಕೊಂಡು ಪರಾಮರ್ಶೆ ನಡೆಸಿದ್ದಾರೆ. ಅಮೆರಿಕದಲ್ಲಿ 2020ರ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ಸೇರಿರುವವರ ಮಾಹಿತಿಯನ್ನು ಕಲೆ ಹಾಕಲಾಗಿದೆ.

ಯಾವ ವಯಸ್ಸಿನವರಲ್ಲಿ ಕೊರೊನಾ ಲಸಿಕೆಯಿಂದ ಹೆಚ್ಚಿನ ಪ್ರತಿಕಾಯ ಸೃಷ್ಟಿ?ಯಾವ ವಯಸ್ಸಿನವರಲ್ಲಿ ಕೊರೊನಾ ಲಸಿಕೆಯಿಂದ ಹೆಚ್ಚಿನ ಪ್ರತಿಕಾಯ ಸೃಷ್ಟಿ?

 ಪ್ರತಿಕಾಯ ವ್ಯವಸ್ಥೆ ಕಾರ್ಯನಿರ್ವಹಣೆಗೆ ಅಪೌಷ್ಟಿಕತೆ ತೊಡಕು

ಪ್ರತಿಕಾಯ ವ್ಯವಸ್ಥೆ ಕಾರ್ಯನಿರ್ವಹಣೆಗೆ ಅಪೌಷ್ಟಿಕತೆ ತೊಡಕು

2015-2019ರ ನಡುವೆ ಅಪೌಷ್ಟಿಕತೆಗೆ ಚಿಕಿತ್ಸೆ ಪಡೆದಿದ್ದವರಿಗೂ, ಸಾಮಾನ್ಯರಿಗೂ ಹೋಲಿಕೆ ಮಾಡಲಾಗಿದೆ. ಆಗ ಅಪೌಷ್ಟಿಕತೆ ಸಮಸ್ಯೆ ಹೊಂದಿದ್ದವರು ಸೋಂಕಿಗೆ ತುತ್ತಾಗಿರುವ ಪ್ರಮಾಣ ಅಧಿಕವಿರುವುದಾಗಿ ಕಂಡುಬಂದಿದೆ. ಅಪೌಷ್ಟಿಕತೆ ಪ್ರತಿಕಾಯ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ. ಈ ಮೂಲಕ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. ಆದರೆ ಕೊರೊನಾ ಸೋಂಕಿನ ಮೇಲೆ ಅಪೌಷ್ಟಿಕತೆಯ ಸಂಭಾವ್ಯ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.

 ಅಪೌಷ್ಟಿಕತೆ-ಕೊರೊನಾ ಸೋಂಕಿನ ಪರಾಮರ್ಶೆ

ಅಪೌಷ್ಟಿಕತೆ-ಕೊರೊನಾ ಸೋಂಕಿನ ಪರಾಮರ್ಶೆ

ಕೊರೊನಾ ಸೋಂಕಿನ ಗಂಭೀರ ಪರಿಣಾಮ ಎದುರಿಸಿದ 520 ಮಕ್ಕಳ ಪೈಕಿ 39 ಮಕ್ಕಳು ಈ ಹಿಂದೆ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿದ್ದವರಾಗಿದ್ದರು. ಸೌಮ್ಯ ಸ್ವರೂಪದ ಕೊರೊನಾ ಸೋಂಕಿಗೆ ತುತ್ತಾಗಿದ್ದ 7959 ಮಕ್ಕಳಲ್ಲಿ 125 ಮಕ್ಕಳು ಅಪೌಷ್ಟಿಕತೆ ಇತಿಹಾಸ ಹೊಂದಿದ್ದರು. ಕೊರೊನಾ ಸೋಂಕಿನ ಗಂಭೀರ ಪರಿಣಾಮ ಎದುರಿಸಿದ್ದ 11423 ವಯಸ್ಕರಲ್ಲಿ 453 ಮಂದಿ ಅಪೌಷ್ಟಿಕತೆಗೆ ಚಿಕಿತ್ಸೆ ಪಡೆದವರಾಗಿದ್ದು, ಸೌಮ್ಯ ಸ್ವರೂಪದ ಸೋಂಕು ಹೊಂದಿದ್ದ 81515 ಮಂದಿಯಲ್ಲಿ 1557 ಮಂದಿಗೆ ಅಪೌಷ್ಟಿಕತೆ ಇತ್ತು ಎಂದು ಈ ಅಧ್ಯಯನದ ರೂವಾರಿ ಲೂಯಿಸ್ ತಿಳಿಸಿದ್ದಾರೆ.

 18-78ರ ವಯೋಮಾನದವರು ಸೋಂಕಿಗೆ ತುತ್ತಾದ ಪ್ರಮಾಣ ಹೆಚ್ಚು

18-78ರ ವಯೋಮಾನದವರು ಸೋಂಕಿಗೆ ತುತ್ತಾದ ಪ್ರಮಾಣ ಹೆಚ್ಚು

ಅಪೌಷ್ಟಿಕತೆಯಿಲ್ಲದವರಿಗೆ ಹೋಲಿಸಿದರೆ, ಅಪೌಷ್ಟಿಕತೆಯ ರೋಗನಿರ್ಣಯ ಹೊಂದಿದ್ದ ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ 18-78ರ ವಯೋಮಾನದವರು ಕೊರೊನಾ ಸೋಂಕಿಗೆ ತುತ್ತಾದ ಪ್ರಮಾಣ ಹೆಚ್ಚಾಗಿರುವುದನ್ನು ಅಧ್ಯಯನ ಪ್ರಮುಖವಾಗಿ ಉಲ್ಲೇಖಿಸಿದೆ.

English summary
People who has an history of malnutrition are at higher risk of coronavirus, says study at california
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X