ಭೂಮಿ ಕೆಳಗೆ ಜೀವನ ನಡೆಸುವ ಜನ, ಇದೆ ಕಾರಣ
ಸಿಡ್ನಿ, ಜನವರಿ 13: ಭೂಮಿ ಮೇಲೆ ಮನುಷ್ಯ ವಾಸಿಸುತ್ತಾನೆ, ಅದೇ ಮನುಷ್ಯ ವಾಸಕ್ಕೆ ಸೂಕ್ತ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಭೂಮಿಯ ಒಳಗೂ ಮನುಷ್ಯ ವಾಸಿಸುತ್ತಿದ್ದಾನೆ.
ಹೌದು, ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಜನ ಈಗಲೂ ಭೂಮಿಯ ಕೆಳಗೆ (ಅಂಡರ್‌ಗ್ರೌಂಡ್) ನಲ್ಲಿ ವಾಸಿಸುತ್ತಿದ್ದಾರೆ. ಭೂಮಿಯ ಕೆಳಗೆ ಬೃಹತ್ ಬಂಗಲೆಗಳನ್ನೇ ನಿರ್ಮಿಸಿಕೊಂಡಿದ್ದಾರೆ.
ದಕ್ಷಿಣ ಆಸ್ಟ್ರೇಲಿಯಾದ ಕೂಬರ್ ಪೆಡಿ ಎಂಬ ಪ್ರದೇಶವಿದೆ. ಕಣ್ಣು ಹಾಯಿಸಿದಷ್ಟೂ ದೂರ ಕೆಂಪು ಮಣ್ಣು ಅಲ್ಲಲ್ಲಿ ಕೆಲವು ಬೋರ್ಡ್‌ಗಳು, ಮಣ್ಣು ಗುಡ್ಡೆಗಳು ಇಷ್ಟೇ ಕಾಣ ಸಿಗುತ್ತವೆ. ಆದರೆ ಈ ನಗರದಲ್ಲಿ ಜನರಿದ್ದಾರೆ. ಆದರೆ ಎಲ್ಲರೂ ಭೂಮಿಯ ಕೆಳಗೆ ಇದ್ದಾರೆ.

ಹೌದು, ಇಲ್ಲಿಯ ಜನ ಮನೆ ಮಾಡಿ ವಾಸ ಮಾಡುತ್ತಿರುವುದು ಮಣ್ಣಿನ ಅಡಿಯಲ್ಲಿ. ಇಲ್ಲಿನ ಹೊಟೆಲ್‌ಗಳು, ಚರ್ಚು, ಕಚೇರಿಗಳು ಇರುವುದು ಭೂಮಿಯ ಕೆಳಗೆ. ಈ ನಗರದಲ್ಲಿ ಸ್ವಿಮ್ಮಿಂಗ್ ಫೂಲ್ ಸಹ ಭೂಮಿಯ ಕೆಳಗೆ ಇದೆ.
ಇಲ್ಲಿಯ ಜನ ಭೂಮಿಯ ಒಳಗೆ ಜೀವನ ಸಾಗಿಸುತ್ತಿರುವುದಕ್ಕೆ ಕಾರಣವೂ ಇದೆ. ದಕ್ಷಿಣ ಆಸ್ಟ್ರೇಲಿಯಾದ ಈ ಭಾಗದಲ್ಲಿ ಎರಡೇ ಋತು. ಒಂದು ಬೇಸಗೆ ಕಾಲ ಮತ್ತೊಂದು ಚಳಿಗಾಲ. ಬೇಸಗೆಯಲ್ಲಿ ಇಲ್ಲಿ ವಿಪರೀತವಾದ ಬಿಸಿ. ಹೊರಗೆ ಹೆಜ್ಜೆ ಸಹ ಇಡಲಾಗದು. ಅದೇ ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವಂತಹಾ ಚಳಿ.

ಹಾಗಾಗಿ ಇಲ್ಲಿನ ಜನ ನೆಲದ ಕೆಳಗೆ ಸುರಂಗ ಕೊರೆದು ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ನೆಲದ ಒಳಗೆ ಮನೆ ನಿರ್ಮಿಸಲು ಅನುಕೂರವಾದ ಮಣ್ಣು ಇಲ್ಲಿದೆ.
ನೆಲದ ಕೆಳಗೆ ಬಹುತೇಕ ಸಮ ಉಷ್ಣತೆ ಇರುತ್ತದೆ. ನೆಲದ ಒಳಗಿನಿಂದ ಮೇಲಕ್ಕೆ ದೊಡ್ಡ ಪೈಪ್ ಒಂದನ್ನು ಇಟ್ಟು ಶುದ್ಧ ಗಾಳಿ ಒಳಬರುವಂತೆ ವ್ಯವಸ್ಥೆ ಮಾಡಿರುತ್ತಾರೆ. ಬೆಳಕಿಗೆ ಕೃತಕ ದೀಪಗಳನ್ನು ಬಳಸುತ್ತಾರೆ.

ನೆಲವನ್ನು ತಮಗೆ ಬೇಕಾದಂತೆ ಕೊರದು, ಹಾಲ್, ಅಡಿಗೆ ಕೋಣೆ, ಬೆಡ್ ರೂಂಗಳಾಗಿ ವಿಂಗಡಿಸಿಕೊಂಡಿದ್ದಾರೆ. ನೆಲದ ಮೇಲೆ ನಿರ್ಮಿಸುವ ಮನೆಗಳಲ್ಲಿ ಇರುವ ಎಲ್ಲಾ ಭೋಗ ವಸ್ತುಗಳು ಇಲ್ಲಿಯೂ ಇವೆ. ಆದರೆ ಅಂಡರ್‌ಗ್ರೌಂಡ್‌ನಲ್ಲಿ.
ಅಂಡರ್‌ಗ್ರೌಂಡ್ ನಗರವನ್ನು ನೋಡಲು ಸಾವಿರಾರು ಮಂದಿ ಇಲ್ಲಿಗೆ ಪ್ರತಿ ವರ್ಷ ಭೇಟಿ ನೀಡುತ್ತಾರೆ. ಪ್ರವಾಸಿಗರಿಗಾಗಿ ಹೋಟೆಲ್‌ಗಳು ಸಹ ಇಲ್ಲಿ ನೆಲದ ಕೆಳಗೆ ನಿರ್ಮಿಸಲಾಗಿದೆ.












Click it and Unblock the Notifications