ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌ ಭೀತಿ: ಹೊಸ ವರ್ಷಾಚರಣೆಗೆ ಈ ರಾಜ್ಯಗಳಲ್ಲಿ ನಿರ್ಬಂಧ

|
Google Oneindia Kannada News

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್‌ ರೂಪಾಂತರವು ಭಾರತದಲ್ಲಿ ಈಗ ತೀವ್ರವಾಗಿ ಏರಿಕೆ ಕಾಣುತ್ತಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕದ ಮೂರನೇ ಅಲೆಯನ್ನು ದೇಶದಲ್ಲಿ ಸೃಷ್ಟಿ ಮಾಡುವ ಭೀತಿಯನ್ನು ಈ ಓಮಿಕ್ರಾನ್‌ ರೂಪಾಂತರ ತಂದೊಡ್ಡಿದೆ. ಈ ನಡುವೆ ದೇಶದಲ್ಲಿ ನಾಳೆ ಹೊಸ ವರ್ಷ ಆಚರಣೆಯನ್ನು ಮಾಡಲಾಗುತ್ತಿದೆ.

ಈಗಾಗಲೇ ಹಲವಾರು ರಾಜ್ಯಗಳಲ್ಲಿ ಕೊರೊನಾ ವೈರಸ್‌ ಸೋಂಕಿನ ಕಾರಣದಿಂದಾಗಿ ನಿರ್ಬಂಧಗಳನ್ನು ಹೇರಳಾಗಿದೆ. ಹಲವೆಡೆ ಓಮಿಕ್ರಾನ್‌ ಪ್ರಕರಣಗಳ ಏರಿಕೆ ಹಿನ್ನೆಲೆಯಿಂದಾಗಿ ನೈಟ್‌ ಕರ್ಫ್ಯೂನಂತಹ ಕ್ರಮಗಳನ್ನು ಕೂಡಾ ಕೈಗೊಳ್ಳಲಾಗಿದೆ. ಇನ್ನು ಹೊಸ ವರ್ಷ ಆಚರಣೆಯ ಹಿನ್ನೆಲೆಯಿಂದಾಗಿ ಹಲವಾರು ರಾಜ್ಯಗಳನ್ನು ನಿರ್ಬಂಧವನ್ನು ಕಠಿಣ ಮಾಡಿದೆ. ಇನ್ನು ಕೆಲವು ರಾಜ್ಯಗಳು ಹೊಸ ವರ್ಷ ಆಚರಣೆ ಹಿನ್ನೆಲೆ ಪ್ರತ್ಯೇಕವಾಗಿ ನಿರ್ಬಂಧವನ್ನು ಜಾರಿ ಮಾಡಿದೆ.

ಗಮನಿಸಿ: ಹೊಸ ವರ್ಷದಲ್ಲಿ ಈ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ.. ಗಮನಿಸಿ: ಹೊಸ ವರ್ಷದಲ್ಲಿ ಈ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ..

ಕರ್ನಾಟಕ, ದೆಹಲಿ, ಗುಜರಾತ್‌, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಓಮಿಕ್ರಾನ್‌ ಭೀತಿಯ ನಡುವೆ ಹೊಸ ವರ್ಷಾಚರಣೆ ಹಿನ್ನೆಲೆಯಿಂದಾಗಿ ನೈಟ್‌ ಕರ್ಫ್ಯೂ ಅನ್ನು ಜಾರಿ ಮಾಡಲಾಗಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಹಲವು ನಿರ್ಬಂಧಗಳನ್ನು ಹೇರಳಾಗಿದೆ. ಹಾಗಾದರೆ ಯಾವ ರಾಜ್ಯದಲ್ಲಿ ಹೊಸ ವರ್ಷಾಚರಣೆ ವೇಳೆ ನಿರ್ಬಂಧ ಹೇರಲಾಗಿದೆ ಹಾಗೂ ನಿರ್ಬಂಧ ಹೇಗಿದೆ ಎಂದು ತಿಳಿಯಲು ಮುಂದೆ ಓದಿ...

 ದೆಹಲಿಯಲ್ಲಿ ನೈಟ್‌ ಕರ್ಫ್ಯೂ

ದೆಹಲಿಯಲ್ಲಿ ನೈಟ್‌ ಕರ್ಫ್ಯೂ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು ಏರಿಕೆ ಆಗುತ್ತಿದೆ. ಈ ನಡುವೆ ಹೊಸ ವರ್ಷವೂ ಆರಂಭವಾಗಲಿದೆ. ಈ ಹಿನ್ನೆಲೆಯಿಂದಾಗಿ ದೆಹಲಿಯಲ್ಲಿ ನೈಟ್‌ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ನೈಟ್‌ ಕರ್ಫ್ಯೂ ಇದೆ. ಇನ್ನು ದೆಹಲಿಯಲ್ಲಿ ಜನರು ಗುಂಪು ಸೇರುವುದನ್ನು ಕೂಡಾ ನಿಷೇಧ ಮಾಡಲಾಗಿದೆ. ರೆಸ್ಟೋರೆಂಟ್‌, ಬಾರ್‌ಗಳು ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಶೇಕಡ 50ರಷ್ಟು ಮಾತ್ರ ಜನರಿಗೆ ಅವಕಾಶ ನೀಡಲು ಸರ್ಕಾರ ಆದೇಶ ನೀಡಿದೆ.

 ಮಹಾರಾಷ್ಟ್ರದಲ್ಲಿ ಹೇಗಿದೆ ನಿರ್ಬಂಧ

ಮಹಾರಾಷ್ಟ್ರದಲ್ಲಿ ಹೇಗಿದೆ ನಿರ್ಬಂಧ

ಹೊಸ ವರ್ಷಾಚರಣೆಯ ನಡುವೆ ಮುಂಬೈನಲ್ಲಿ ಜನವರಿ 7, 2022ರವರೆಗೂ ನಿಷೇದಾಜ್ಞೆಯನ್ನು ಜಾರಿ ಮಾಡಲಾಗಿದೆ. ಇನ್ನು ಹೊಸ ವರ್ಷಾಚರಣೆಯನ್ನು ನಿರ್ಬಂಧಿಸಲಾಗಿದೆ. ಯಾವುದೇ ತೆರೆದ ಪ್ರದೇಶ ಅಥವಾ ಮುಚ್ಚಿದ ಪ್ರದೇಶದಲ್ಲಿ ಹೊಸ ವರ್ಷಾಚರಣೆ ಮಾಡಲು ಅವಕಾಶವಿಲ್ಲ. ಡಿಸೆಂಬರ್‌ 30ರಿಂದ ಜನವರಿ 7, 2022ರವರೆಗೆ ರೆಸ್ಟೋರೆಂಟ್‌, ಹೊಟೇಲ್‌, ಬಾರ್‌, ಪಬ್‌, ರೆಸಾರ್ಟ್, ಕ್ಲಬ್‌ಗಳಲ್ಲಿ ಹೊಸ ವರ್ಷಾಚರಣೆ ಮಾಡಲು ಅವಕಾಶವಿಲ್ಲ. ಇನ್ನು ಆಡಿಟೋರಿಯಂಗಳಲ್ಲಿ ಶೇಕಡ 50ರಷ್ಟು ಮಂದಿ ಮಾತ್ರ ಸೇರಿ ಕಾರ್ಯಕ್ರಮ ನಡೆಸಲು ಅವಕಾಶವಿದೆ. ಇನ್ನು ತೆರೆದ ಪ್ರದೇಶದಲ್ಲಿ ಶೇಕಡ 25ರಷ್ಟು ಮಾತ್ರ ಜನರು ಸೇರಿ ಕಾರ್ಯಕ್ರಮ ನಡೆಸಲು ಅವಕಾಶವಿದೆ. ಇನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವಾಲಯಗಳಿಗೆ ಭೇಟಿ ನೀಡಲು ಅವಕಾಶವಿದೆ. ಡಿಸೆಂಬರ್‌ 31ರಂದು ಸಾರ್ವಜನಿಕ ಪ್ರದೇಶಗಳಾದ ಬೀಚ್‌, ಗಾರ್ಡನ್‌, ಬೀದಿಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸ್ಯಾನಿಟೈಜರ್‌ಗಳನ್ನು ಬಳಸಬೇಕು.

 ಕರ್ನಾಟಕದಲ್ಲಿ ನೈಟ್‌ ಕರ್ಫ್ಯೂ

ಕರ್ನಾಟಕದಲ್ಲಿ ನೈಟ್‌ ಕರ್ಫ್ಯೂ

ಕೊರೊನಾವೈರಸ್‌ ಸೋಂಕಿನ ಮೂರನೇ ಅಲೆಯ ಭೀತಿಯ ನಡುವೆ ಹೊಸ ವರ್ಷಾರಣೆ ಹಿನ್ನೆಲೆಯಿಂದಾಗಿ ಕರ್ನಾಟಕದಲ್ಲಿಯೂ ನೈಟ್‌ ಕರ್ಫ್ಯೂ ಅನ್ನು ಜಾರಿ ಮಾಡಲಾಗಿದೆ. ಡಿಸೆಂಬರ್‌ 28ರಿಂದ ಹತ್ತು ದಿನಗಳ ಕಾಲ ನೈಟ್‌ ಕರ್ಫ್ಯೂ ಅನ್ನು ಕರ್ನಾಟಕ ರಾಜ್ಯದಾದ್ಯಂತ ಜಾರಿ ಮಾಡಲಾಗಿದೆ. ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ನೈಟ್‌ ಕರ್ಫ್ಯೂ ಇರಲಿದೆ. ಸರ್ಕಾರವು ಎಲ್ಲಾ ಹೊಸ ವರ್ಷಾಚರಣೆ ಪಾರ್ಟಿಗಳನ್ನು ನಿಷೇಧ ಮಾಡಿದೆ. ಸಾರ್ವಜನಿಕ ಪ್ರದೇಶದಲ್ಲಿ ಜನರು ಸೇರುವುದನ್ನು ಕೂಡಾ ನಿರ್ಬಂಧಿಸಲಾಗಿದೆ. "ಯಾವುದೇ ಪಾರ್ಟಿ, ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಹೊಸ ವರ್ಷಾಚರಣೆ ಸಂದರ್ಭದ ಪಾರ್ಟಿ, ಸಮಾರಂಭವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ," ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

 ತಮಿಳುನಾಡಿನಲ್ಲಿ ಹೀಗಿದೆ ನಿರ್ಬಂಧ

ತಮಿಳುನಾಡಿನಲ್ಲಿ ಹೀಗಿದೆ ನಿರ್ಬಂಧ

ತಮಿಳುನಾಡಿನಲ್ಲಿ ಬೀಚ್‌ಗಳಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧ ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಡಿಸೆಂಬರ್‌ 29ರಂದು ತಿಳಿಸಿದ್ದಾರೆ. ಜನರು ಸಾರ್ವಜನಿಕವಾಗಿ ಸಭೆ ಸೇರಬಾರದು ಎಂದು ಸೂಚನೆ ನೀಡಲಾಗಿದೆ. ಹಾಗೆಯೇ ಮದ್ಯಪಾನ ಮಾಡಿ ಯಾರೂ ವಾಹನ ಚಲಾವಣೆ ಮಾಡುತ್ತಾರೋ ಅವರನ್ನು ಬಂಧನ ಮಾಡಲಾಗುವುದು ಎಂದು ಕೂಡಾ ಡಿಜಿಪಿ ಸಿ ಸೈಲೇಂದ್ರ ಬಾಬು ಎಚ್ಚರಿಕೆ ನೀಡಿದ್ದಾರೆ. ಇನ್ನು ಕೊರೊನಾ ವೈರಸ್‌ ಸೋಂಕು ಹರಡುವ ಹಿನ್ನೆಲೆಯಿಂದಾಗಿ ಜನರು ಗುಂಪು ಸೇರದಂತೆ ಸರ್ಕಾರ ಸೂಚನೆ ನೀಡಿದೆ. "ಹೊಸ ವರ್ಷ ಆಚರಣೆಗೆ ತಮಿಳುನಾಡಿನ ಯಾವುದೇ ಬೀಚ್‌ಗಳಲ್ಲಿ ಅನುಮತಿ ಇಲ್ಲ. ಜನರು ಬೇರೆ ಯಾರಿಗೂ ತೊಂದರೆ ಉಂಟು ಮಾಡದೆ ತಮ್ಮ ತಮ್ಮ ಮನೆಯಲ್ಲೇ ಹೊಸ ವರ್ಷಾಚರಣೆ ಮಾಡಿಕೊಳ್ಳಬೇಕು," ಎಂದು ಡಿಜಿಪಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಾಹನ ತಪಾಸಣೆಯನ್ನು ಕೂಡಾ ಹೆಚ್ಚಿಸಲಾಗುತ್ತದೆ. ರೆಸ್ಟೋರೆಂಟ್‌, ವಸತಿ ಗೃಹಗಳು ರಾತ್ರಿ 11 ಗಂಟೆಗಳವರೆಗೆ ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಹಿದೆ. ರೆಸ್ಟೋರೆಂಟ್‌, ವಸತಿ ಗೃಹದ ಎಲ್ಲ ಸಿಬ್ಬಂದಿಗಳು ಎರಡೂ ಡೋಸ್‌ ಲಸಿಕೆಯನ್ನು ಹಾಕಿಸಿಕೊಂಡಿರಬೇಕು. ಧಾರ್ಮಿಕ ಕೇಂದ್ರಗಳಲ್ಲಿಯೂ ಎಲ್ಲಾ ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು. ಇನ್ನು ಚೆನ್ನೈ ನಗರ ಪೊಲೀಸರು ರೆಸಾಟ್‌, ಫಾರ್ಮ್ ಹೌಸ್‌, ಬೀಚ್‌ ಹಾಗೂ ಕ್ಲಬ್‌ಗಳಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧ ಮಾಡಿದ್ದಾರೆ.

 ಗುಜರಾತ್‌ನಲ್ಲಿ ನೈಟ್‌ ಕರ್ಫ್ಯೂ

ಗುಜರಾತ್‌ನಲ್ಲಿ ನೈಟ್‌ ಕರ್ಫ್ಯೂ

ಗುಜರಾತ್‌ನಲ್ಲಿ ಡಿಸೆಂಬರ್‌ 25ರಿಂದ ನೈಟ್‌ ಕರ್ಫ್ಯೂ ಅವಧಿಯನ್ನು ಹೆಚ್ಚಳ ಮಾಡಲಾಗಿದೆ. ಗುಜರಾತ್‌ ಸರ್ಕಾರವು ನೈಟ್‌ ಕರ್ಫ್ಯೂ ಅವಧಿಯನ್ನು ಎರಡು ಗಂಟೆಗಳ ಕಾಲ ಹೆಚ್ಚಳ ಮಾಡಿದೆ. ರಾತ್ರಿ 1ರಿಂದ ಬೆಳಿಗ್ಗೆ 5ರವರೆಗೆ ಇದ್ದ ನೈಟ್‌ ಕರ್ಫ್ಯೂ ಈಗ ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಇದೆ.

 ಉತ್ತರ ಪ್ರದೇಶದಲ್ಲಿ ನೈಟ್‌ ಕರ್ಫ್ಯೂ

ಉತ್ತರ ಪ್ರದೇಶದಲ್ಲಿ ನೈಟ್‌ ಕರ್ಫ್ಯೂ

ಉತ್ತ ಪ್ರದೇಶದಲ್ಲಿ ಶುಕ್ರವಾರದಂದು ಅಂದರೆ ಡಿಸೆಂಬರ್‌ 31ರಂದು ಹೊಸ ವರ್ಷಾರಣೆಯ ಹಿನ್ನೆಲೆಯಲ್ಲಿ ನೈಟ್‌ ಕರ್ಫ್ಯೂ ಅನ್ನು ಘೋಷಣೆ ಮಾಡಲಾಗಿದೆ. ಶುಕ್ರವಾರ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5ರವರೆಗೆ ನೈಟ್‌ ಕರ್ಫ್ಯೂ ಅನ್ನು ಜಾರಿ ಮಾಡಲಾಗುತ್ತದೆ. ಹಾಗೆಯೇ ನೊಯ್ಡಾ ಹಾಗೂ ಲಕ್ನೋದಲ್ಲಿ ಸೆಕ್ಷನ್‌ 144 ಅನ್ನು ಜಾರಿ ಮಾಡಲಾಗಿದೆ.

 ಒಡಿಶಾದಲ್ಲಿ ಹೀಗಿದೆ ನಿರ್ಬಂಧ

ಒಡಿಶಾದಲ್ಲಿ ಹೀಗಿದೆ ನಿರ್ಬಂಧ

ಹೊಸ ವರ್ಷಾಚರಣೆ ಹಿನ್ನೆಲೆಯಿಂದಾಗಿ ಒಡಿಶಾದಲ್ಲಿ ಈಗಾಗಲೇ ಸಾರ್ವಜನಿಕ ಕಾರ್ಯಕ್ರವನ್ನು ನಿಷೇಧ ಮಾಡಲಾಗಿದೆ. ಎಲ್ಲಾ ನಗರಳಲ್ಲಿ ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿದೆ. "ಹೆಚ್ಚು ನಿರ್ಬಂಧಗಳನ್ನು ಹೇರಬೇಕಾದ ಪರಿಸ್ಥಿತಿ ಪ್ರಸ್ತುತ ನಮ್ಮ ರಾಜ್ಯದಲ್ಲಿ ಉಂಟಾಗಿಲ್ಲ. ಪ್ರತಿ ದಿನದ ಕೋವಿಡ್‌ ಪ್ರಕಣಗಳನ್ನು, ಪಾಸಿಟಿವಿಟಿ ದರವನ್ನು, ಸಕ್ರಿಯ ಕೊರೊನಾ ವೈರಸ್‌ ಸೋಂಕು ಪ್ರಕರಣಗಳನ್ನು, ಆಸ್ಪತ್ರೆಗೆ ದಾಖಲಾಗಿರುವವರ ಪ್ರಮಾಣವನ್ನು ನೋಡಿಕೊಂಡು ಲಾಕ್‌ಡೌನ್‌ ಅಥವಾ ನೈಟ್‌ ಕರ್ಫ್ಯೂ ಅನ್ನು ಜಾರಿಗೆ ತರಲಾಗುವುದು," ಎಮದು ರಾಜ್ಯ ಸಾರ್ವಜನಿಕ ಆರೋಗ್ಯ ನಿರ್ದೇಶಕ ನಿರಂಜನ್‌ ಮಿಶ್ರಾ ಹೇಳಿದ್ದಾರೆ.

 ಗೋವಾಕ್ಕೆ ಹೋಗುವ ಇದನ್ನು ಓದಿ..

ಗೋವಾಕ್ಕೆ ಹೋಗುವ ಇದನ್ನು ಓದಿ..

ಹಲವಾರು ಮಂದಿ ಹೊಸ ವರ್ಷಾಚರಣೆಗೆ ಗೋವಾಕ್ಕೆ ಹೋಗುತ್ತಾರೆ. ಇನ್ನು ಈಗಾಗಲೇ ಹಲವಾರು ಮಂದಿ ಗೋವಾಕ್ಕೆ ಹೋಗುವ ತಯಾರಿಯನ್ನು ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಗೋವಾದಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವನ್ನು ಹೇರಿಲ್ಲ. ಆದರೆ ಗೋವಾದಲ್ಲಿ ಹೊಸ ವರ್ಷಾಚರಣೆ ಮಾಡುವವರು ಎರಡೂ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿರಬೇಕು ಅಥವಾ ಕೋವಿಡ್‌ ನೆಗೆಟಿವ್‌ ವರದಿಯನ್ನು ಹೊಂದಿರಬೇಕು. "ಗೋವಾದಲ್ಲಿ ರೆಸ್ಟೋರೆಂಟ್‌, ಪಾರ್ಟಿಗಳಿಗೆ ಹಾಜರಾಗುವವರು ಎರಡೂ ಡೋಸ್‌ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿರಬೇಕು ಅಥವಾ ಕೋವಿಡ್ ನೆಗೆಟಿವ್‌ ವರದಿಯನ್ನು ಹೊಂದಿರಬೇಕು," ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. ಕಾರ್ಯಕ್ರಮ ಆಯೋಜಕರು ಬೇರೆ ರಾಜ್ಯದಿಂದ ಬಂದವರಿಂದ ಕೋವಿಡ್ ನೆಗೆಟಿವ್‌ ವರದಿ ಅಥವಾ ಕೋವಿಡ್‌ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಹೊಂದಿದ್ದಾರೆಯೇ ಎಂದು ಪರಶೀಲನೆ ಮಾಡಬೇಕು. ರಾಜ್ಯವು ಮುಖ್ಯ ಪ್ರವಾಸಿ ತಾಣವಾಗಿರುವ ಹಿನ್ನೆಲೆಯಿಂದಾಗಿ ನೈಟ್‌ ಕರ್ಫ್ಯೂ ಜಾರಿ ಮಾಡದಿರಲು ಸರ್ಕಾರ ನಿರ್ಧಾರ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

English summary
Omicron: These states have imposed curbs on New Year celebrations, Here's a List in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X