ನಾಯಕ ಕಿಮ್ ಫ್ಯಾಷನ್ ಅನುಕರಣೆ ತಪ್ಪಿಸಲು ಉ.ಕೊರಿಯಾದಲ್ಲಿ ಚರ್ಮದ ಕೋಟು ನಿಷೇಧ!
ಪ್ಯೊಂಗ್ಯಾಂಗ್, ನವೆಂಬರ್ 25: ಉತ್ತರ ಕೊರಿಯಾ ದೇಶದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಫ್ಯಾಷನ್ ಅನ್ನು ಯಾರೂ ಕೂಡಾ ಅನುಕರಣೆ ಮಾಡಬಾರದು ಎಂಬ ನಿಟ್ಟಿನಲ್ಲಿ ಉತ್ತರ ಕೊರಿಯಾದಲ್ಲಿ ಚರ್ಮದ ಕೋಟನ್ನು ನಿಷೇಧ ಮಾಡಲಾಗಿದೆ. ಲೆದರ್ ಕೋಟ್ (ಚರ್ಮದ ಕೋಟು) ಧರಿಸಿರುವ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಉತ್ತರ ಕೊರಿಯಾದ ಅಧಿಕಾರಿಗಳು, "ದೇಶದ ನಾಯಕ ಕಿಮ್ ಜಾಂಗ್ ಉನ್‌ರ ಫ್ಯಾಷನ್ ಆಯ್ಕೆಗಳನ್ನು ಅನುಕರಣೆ ಮಾಡುವುದು ಅಗೌರವ ತೋರಿದಂತೆ" ಎಂದು ತಿಳಿಸಿದ್ದಾರೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 2019 ರಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ ಚರ್ಮದ ಕೋಟು ಧರಿಸಿದ ಬಳಿಕ ಉತ್ತರ ಕೊರಿಯಾದಲ್ಲಿ ಚರ್ಮದ ಕೋಟುಗಳು ಪ್ರಸಿದ್ಧವಾಗಿದೆ. ಆರಂಭದಲ್ಲಿ ಚೀನಾದಿಂದ ಚರ್ಮದ ಕೋಟುಗಳನ್ನು ಆಮದು ಮಾಡಿಕೊಂಡು ಶ್ರೀಮಂತರು ಧರಿಸುತ್ತಿದ್ದರು, ಆದರೆ ಬಳಿಕ ಉಡುಪು ತಯಾರಕರು ನಕಲಿ ಚರ್ಮದ ಕೋಟುಗಳನ್ನು ರಫ್ತು ಮಾಡಿಕೊಂಡು ಸ್ಥಳೀಯವಾಗಿ ಮಾರಾಟ ಮಾಡಲು ಆರಂಭ ಮಾಡಿದರು. ಈಗ ಉತ್ತರ ಕೊರಿಯಾದ ಎಲ್ಲಾ ಪ್ರದೇಶದಲ್ಲಿ ಚರ್ಮದ ಕೋಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಹಲವಾರು ಯುವಕರು ತಮ್ಮದೇ ಆದ ಚರ್ಮದ ಕೋಟುಗಳನ್ನು ಧರಿಸಿ ಓಡಾಡುವುದು ಕಂಡು ಬರುತ್ತದೆ.
ಆದರೆ ಈಗ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರ ಫ್ಯಾಷನ್ ಅನ್ನು ಎಲ್ಲರೂ ಕೂಡಾ ಅನುಕರಣೆ ಮಾಡುವುದನ್ನು ತಪ್ಪಿಸಲು ಚರ್ಮದ ಕೋಟುಗಳನ್ನು ಧರಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಫ್ಯಾಷನ್ ಪೊಲೀಸರು ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಮಾರಾಟಗಾರರು ಹಾಗೂ ನಾಗರಿಕರಿಂದ ಚರ್ಮದ ಕೋಟುಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ಈ ವರ್ಷ ಮತ್ತೆ ಬೇರೆ ನೋಟದಲ್ಲಿ ಕಾಣಿಸಿಕೊಂಡ ಕಿಮ್
ಈ ನಡುವೆ ಈ ವರ್ಷ ಕಿಮ್ ಜಾಂಗ್ ಉನ್ ಮಾಧ್ಯಮದಲ್ಲಿ ಹೊಸ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫ್ಯಾಷನ್ ಸದ್ಯ ಜನಪ್ರಿಯವಾಗಿದೆ. ತನ್ನ ಹೆಸರು ಹೇಳಲು ಬಯಸದ ರಾಜಧಾನಿ ಪ್ಯೊಂಗ್ಯಾಂಗ್‌ನ ಉತ್ತರದಲ್ಲಿರುವ ದಕ್ಷಿಣ ಪ್ಯೊಂಗ್‌ಯಾಂಗ್ ಪ್ರಾಂತ್ಯದ ಪ್ಯೊಂಗ್‌ಸಾಂಗ್ ನಗರದ ನಿವಾಸಿ ಈ ಮಾಹಿತಿಯನ್ನು ನೀಡಿದ್ದಾರೆ. ಇನ್ನು "ಈ ವರ್ಷದ ಜನವರಿಯಲ್ಲಿ ನಡೆದ 8 ನೇ ಪಕ್ಷದ ಕಾಂಗ್ರೆಸ್ ಮಿಲಿಟರಿ ಪರೇಡ್‌ನಲ್ಲಿ, ಅತ್ಯುನ್ನತ ಘನತೆ (ಕಿಮ್) ಹಾಗೂ ಎಲ್ಲಾ ಉನ್ನತ ಶ್ರೇಣಿಯ ಅಧಿಕಾರಿಗಳು ಚರ್ಮದ ಕೋಟ್‌ಗಳನ್ನು ಧರಿಸಿರುವುದು ಕಂಡು ಬಂದಿದೆ," ಎಂದು ಮೂಲವು ಕಿಮ್‌ಗೆ ಅತ್ಯುನ್ನತ ಘನತೆ ಎಂದು ಸಂಭೋದಿಸಿ ಮಾಹಿತಿ ನೀಡಿದೆ.

ಬಲದ ಪ್ರತೀಕವಾದ ಚರ್ಮದ ಕೋಟು!
ಇನ್ನು ಈ ಚರ್ಮದ ಕೋಟು ಧರಿಸಬಹುದಾದ ಅಧಿಕಾರಿಗಳ ಪೈಕಿ ಕಿಮ್ ಜಾಂಗ್ ಉನ್‌ರ ಸಹೋದರಿ ಕಿಮ್ ಯೋ ಜಾಂಗ್ ಕೂಡಾ ಸೇರಿದ್ದಾರೆ. ದೇಶವನ್ನು ಕಿಮ್ ಬಳಿಕ ಕಿಮ್ ಯೋ ಜಾಂಗ್ ಮುನ್ನಡೆಸುವ ಸಾಧ್ಯತೆ ಇದೆ ಎಂದು ವರದಿಗಳು ಉಲ್ಲೇಖ ಮಾಡಿದೆ. ಹಾಗಾಗಿ ಈಗ ಈ ಚರ್ಮದ ಕೋಟುಗಳು ತಾವು ಪ್ರಖ್ಯಾತ, ಪ್ರಾಬಲ್ಯ ಹೊಂದಿರುವ ಮಹಿಳೆಯರು ಎಂಬ ಸಂಕೇತ ಎಂಬಂತಾಗಿದೆ. "ಚರ್ಮದ ಕೋಟುಗಳು ಬಲದ ಪ್ರತೀಕ ಎಂಬಂತೆ ಬಿಂಬಿತವಾಗಲು ಆರಂಭವಾದ ಬಳಿಕ ಖಾಸಗಿ ಬಟ್ಟೆ ವ್ಯಾಪಾರಿಗಳು ಈ ಕೋಟು ಉತ್ಪಾದಕರ ಬಳಿ ಈ ವರ್ಷದ ಸೆಪ್ಟೆಂಬರ್ ಒಳಗಾಗಿ ಚರ್ಮದ ಕೋಟುಗಳನ್ನು ಆಮದು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ಅವರು ಈ ದೇಶದ ಅತ್ಯುನ್ನತ ಘನತೆ (ಕಿಮ್) ಹಾಗೂ ಅಧಿಕಾರಿಗಳ ಬಟ್ಟೆಯ ವಿನ್ಯಾಸವನ್ನು ನಕಲು ಮಾಡಿಕೊಂಡಿದ್ದಾರೆ. ಬಳಿಕ ಅದೇ ವಿನ್ಯಾಸದಲ್ಲಿ ಕೋಟುಗಳನ್ನು ತಯಾರಿ ಮಾಡಿ ಮಾರಾಟ ಮಾಡಿದ್ದಾರೆ," ಎಂದು ಕೂಡಾ ಮೂಲವು ಹೇಳಿದೆ.

ಕೋಟು ನಿಷೇಧ ಬೆನ್ನಲ್ಲೇ ಯುವಕರ ಪ್ರತಿಭಟನೆ
ಇನ್ನು ಚರ್ಮದ ಕೋಟನ್ನು ಉತ್ತರ ಕೊರಿಯಾದಲ್ಲಿ ನಿಷೇಧ ಮಾಡುತ್ತಿದ್ದಂತೆ ಅಲ್ಲಿನ ಯುವಕರು ಪ್ರತಿಭಟನೆ ಆರಂಭ ಮಾಡಿದ್ದಾರೆ. "ನಾವು ನಮ್ಮ ಹಣದಿಂದ ಈ ಚರ್ಮದ ಕೋಟನ್ನು ಖರೀದಿ ಮಾಡಿದ್ದೇವೆ. ಈಗ ಅದನ್ನು ಒಮ್ಮೆಲೇ ಹಿಂದಕ್ಕೆ ಪಡೆದುಕೊಳ್ಳವುದು ಎಂದರೆ ಏನು ಅರ್ಥ. ಅದು ಸರಿಯಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ದೇಶದ ನಾಯಕ ಕಿಮ್ ಜಾಂಗ್ ಉನ್‌ರ ಫ್ಯಾಷನ್ ಆಯ್ಕೆಗಳನ್ನು ಅನುಕರಣೆ ಮಾಡುವುದು ಅಗೌರವ ತೋರಿದಂತೆ ಎಂಬ ನಿಟ್ಟಿನಲ್ಲಿ ಜನರು ಚರ್ಮದ ಕೋಟನ್ನು ಧರಿಸುವುದನ್ನು ತಡೆಯಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಜನರು ಕೋಟುಗಳನ್ನು ಧರಿಸಿದ್ದರೆ ಅದನ್ನು ವಶಕ್ಕೆ ಪಡೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ," ಎಂದು ಹೇಳಿದ್ದಾರೆ. ಇನ್ನು ಈ ನಡುವೆ ಉತ್ತರ ಕೊರಿಯಾದ ನಟ ಜಾಂಗ್ ಡಾಂಗ್ ಗನ್ ಕೂಡಾ ಚರ್ಮದ ಕೋಟನ್ನು ಧರಿಸಿರುವ ಚಿತ್ರಗಳು ವೈರಲ್ ಆಗುತ್ತಿದೆ.

ಚರ್ಮದ ಕೋಟಿನ ಬೆಲೆಯೆಷ್ಟು ಗೊತ್ತಾ?
ಉತ್ತರ ಕೊರಿಯಾದಲ್ಲಿ ಚರ್ಮದ ಕೋಟುಗಳು ಬಹಳ ದುಬಾರಿ ಆಗಿದೆ. ನಿಜವಾದ ಚರ್ಮದ ಕೋಟು ಆದರೆ ಅದರ ಬೆಲೆಯು ಸುಮಾರು 170,000 ವೋನ್ (ಯು.ಎಸ್ ಡಾಲರ್ 34) ಆಗಿದೆ. ನಕಲಿ ಚರ್ಮದ ಕೋಟು ಆದರೆ, ಸುಮಾರು 80,000 ವೋನ್ ಅಂದರೆ 16 ಡಾಲರ್ ಆಗಿದೆ. ದಕ್ಷಿಣ ಕೊರಿಯಾದ ಪತ್ರಿಕೆಯಾದ ಕೊರಿಯಾ ಜುಂಗಾಂಗ್ ಡೈಲಿ ಪ್ರಕಾರ, 2018 ರಲ್ಲಿ ಉತ್ತರ ಕೊರಿಯಾದ ಸರಾಸರಿ ಮಾಸಿಕ ವೇತನವು ಸುಮಾರು 4,000 ವೋನ್ (ಯುಎಸ್ ಡಾಲರ್ 0.66) ಆಗಿದೆ. ಹೀಗಿರುವಾಗ ಈಗ ಈ ದುಬಾರಿ ಉಡುಪನ್ನು ಆಡಳಿತವು ತಮ್ಮಿಂದ ಕಿತ್ತುಕೊಳ್ಳುವುದು ಜನರಿಗೆ ಅಸಮಾಧಾನವನ್ನು ಉಂಟು ಮಾಡಿದೆ.
(ಒನ್‌ಇಂಡಿಯಾ ಸುದ್ದಿ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications