ಕರ್ನಾಟಕ : 2004ರ ಬಳಿಕ ಮುಸ್ಲಿಂ ಅಭ್ಯರ್ಥಿ ಲೋಕಸಭಾ ಚುನಾವಣೆ ಗೆದ್ದಿಲ್ಲ

ಬೆಂಗಳೂರು, ಮೇ 29 : 2019ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾವುದೇ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಗೆಲುವು ಸಾಧಿಸಿಲ್ಲ. 2004ರ ಬಳಿಕ ಯಾವುದೇ ಮುಸ್ಲಿಂ ಅಭ್ಯರ್ಥಿ ರಾಜ್ಯದಿಂದ ಗೆದ್ದು ಸಂಸತ್ ಪ್ರವೇಶ ಮಾಡಿಲ್ಲ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ರಿಜ್ವಾನ್ ಅರ್ಷದ್ ಅವರು ಕಣದಲ್ಲಿದ್ದರು. ಬಿಜೆಪಿಯ ಪಿ.ಸಿ.ಮೋಹನ್ ಅವರಿಗೆ ತೀವ್ರ ಪೈಪೋಟಿಯನ್ನು ನೀಡಿದರು. ಆದರೆ, ಗೆಲುವು ಸಾಧಿಸಿಲ್ಲ.

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸೇರಿ ಮೂರು ಪ್ರಮುಖ ಪಕ್ಷದಿಂದ ಒಬ್ಬರು ಮುಸ್ಲಿಂ ಸಮುದಾಯದ ಅಭ್ಯರ್ಥಿ ಮಾತ್ರ ಕರ್ನಾಟಕದ ಚುನಾವಣಾ ಕಣದಲ್ಲಿದ್ದರು. ಪ್ರಬಲ ಪೈಪೋಟಿಯನ್ನು ನೀಡಿದ ರಿಜ್ವಾನ್ ಅರ್ಷದ್ 70968 ಮತಗಳ ಅಂತರದಿಂದ ಸೋಲು ಕಂಡರು.

2004 ರಿಂದ 2019ರ ತನಕ ಲೋಕಸಭಾ ಚುನಾವಣೆಯಲ್ಲಿ ಒಟ್ಟು 11 ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಮೂರು ಪ್ರಮುಖ ಪಕ್ಷಗಳು ಟಿಕೆಟ್ ನೀಡಿದ್ದವು. ಆದರೆ, 2004ರ ಬಳಿಕ ಯಾವುದೇ ಅಭ್ಯರ್ಥಿಗಳು ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿಲ್ಲ.....

2004ರಲ್ಲಿ ಗೆಲುವು

2004ರಲ್ಲಿ ಗೆಲುವು

2004ರ ಚುನಾವಣೆಯಲ್ಲಿ ಗುಲ್ಬರ್ಗ ಕ್ಷೇತ್ರದಲ್ಲಿ ಇಕ್ಬಾಲ್ ಅಹಮದ್ ಸಡರಗಿ ಅವರು 3,12,601 ಮತಗಳನ್ನು ಪಡೆದು ಸಂಸತ್ ಪ್ರವೇಶ ಮಾಡಿದ್ದರು. ಬಿಜೆಪಿಯ ಬಸವರಾಜ ಪಾಟೀಲ್ ಸೇಡಂ ಅವರನ್ನು ಸೋಲಿಸಿದ್ದರು. 2009ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕ್ಷೇತ್ರದಿಂದ ಕಣಕ್ಕಿಳಿದರು.

ರಿಜ್ವಾನ್ ಅರ್ಷದ್ 2 ಬಾರಿ ಸೋಲು

ರಿಜ್ವಾನ್ ಅರ್ಷದ್ 2 ಬಾರಿ ಸೋಲು

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ 2 ಬಾರಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಅವರು ಸೋಲು ಅನುಭವಿಸಿದ್ದಾರೆ. 2014 ಮತ್ತು 2019ರಲ್ಲಿ ಬಿಜೆಪಿಯ ಪಿ.ಸಿ.ಮೋಹನ್ ಅವರ ವಿರುದ್ಧ ಅವರು ಸೋಲು ಕಂಡಿದ್ದಾರೆ.

ಸಿ.ಕೆ.ಜಾಫರ್ ಷರೀಫ್ ಗೆದ್ದಿದ್ದರು

ಸಿ.ಕೆ.ಜಾಫರ್ ಷರೀಫ್ ಗೆದ್ದಿದ್ದರು

1991 ರಿಂದ 2004ರ ನಡುವೆ ನಡೆದ ಐದು ಚುನಾವಣೆಗಳಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಿ.ಕೆ.ಜಾಫರ್ ಷರೀಫ್ ಗೆದ್ದಿದ್ದರು. ಖಮರುಲ್ ಇಸ್ಲಾಂ ಅವರು 1996ರಲ್ಲಿ ಗುಲ್ಬರ್ಗದಲ್ಲಿ ಗೆಲುವು ಸಾಧಿಸಿದ್ದರು.

ಬಿಜೆಪಿಯಿಂದ ಟಿಕೆಟ್ ನೀಡಿಲ್ಲ

ಬಿಜೆಪಿಯಿಂದ ಟಿಕೆಟ್ ನೀಡಿಲ್ಲ

ಬಿಜೆಪಿ ಇದುವರೆಗೂ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ರಾಜ್ಯದಲ್ಲಿ ಟಿಕೆಟ್ ಕೊಟ್ಟಿಲ್ಲ. ಪಕ್ಷೇತರ ಅಭ್ಯರ್ಥಿಗಳಾಗಿ ನಿಂತು ಲೋಕಸಭಾ ಚುನಾವಣೆ ಗೆಲ್ಲುವುದು ಸುಲಭದ ಮಾತಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+