Get Updates
Get notified of breaking news, exclusive insights, and must-see stories!

Timeline: 2012ರ ನಿರ್ಭಯಾ ಪ್ರಕರಣ: ದುರಂತದಿಂದ ನ್ಯಾಯದ ತನಕ

ಇಡೀ ವಿಶ್ವದ ಗಮನಸೆಳೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ 7 ವರ್ಷಗಳ ಬಳಿಕ ಕೊನೆಗೂ ನ್ಯಾಯ ಸಿಕ್ಕಿದೆ.

ದೆಹಲಿಯಲ್ಲಿ 2012ರ ಡಿಸೆಂಬರ್ 16 ರಾತ್ರಿ ವೇಳೆ 23 ವರ್ಷ ವಯಸ್ಸಿನ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಾಲ್ವರಿಗೆ ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿತ್ತು. ಈ ಪ್ರಕರಣದ ಅಪರಾಧಿಗಳ ಪೈಕಿ ನಾಲ್ವರನ್ನು ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲಾಗಿದೆ. ಈ ಪ್ರಕರಣದ ಟೈಮ್ ಲೈನ್ ಇಲ್ಲಿದೆ.

2012ರ ಡಿಸೆಂಬರ್ ನಲ್ಲಿ ನಡೆದಿದ್ದ ಈ ಹೀನ, ಕುಕೃತ್ಯಕ್ಕೆ ಮೇ 5, 2014ರಂದು ಅಂತಿಮ ತೀರ್ಪು ಬಂದಿತ್ತು. ಸುಮಾರು ವರ್ಷಗಳವರೆಗೆ ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿದ್ದ ಈ ಪ್ರಕರಣದ ತೀರ್ಪು ನೀಡಿದ ಸುಪ್ರೀಂಕೋರ್ಟ್ ಮರಣದಂಡನೆ ಕಾಯಂಗೊಳಿಸಿತ್ತು. ಸೆಷನ್ಸ್ ಕೋರ್ಟ್ ಡೆತ್ ವಾರೆಂಟ್ ಜಾರಿಗೊಳಿಸಿತ್ತು.

2012 Delhi gang-rape,Nirbhaya Case Timeline, Convicts hanged

ಆದರೆ, 6 ವರ್ಷಗಳ ಕಾಲ ಕಾನೂನು ವಿಚಾರಣೆ ನಡೆದು, ಹಲವು ಬಾರಿ ಡೆತ್ ವಾರೆಂಟ್, ಹೈಕೋರ್ಟ್, ಸುಪ್ರೀಂಕೋರ್ಟ್, ರಾಷ್ಟ್ರಪತಿಗಳ ಬಳಿ ಕ್ಷಮಾದಾನ ಅರ್ಜಿ, ಮಾನವ ಹಕ್ಕುಗಳ ಆಯೋಗದ ಮುಂದೆ ಅರ್ಜಿ ಹೀಗೆ ಮರಣದಂಡನೆ ತೀರ್ಪು ಜಾರಿಗೊಳಿಸುವುದು ವಿಳಂಬವಾಗಿತ್ತು.

ಮಾರ್ಚ್ 20ರಂದು 5.30ರಂದು ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಕೇಶ್ (32), ಪವನ್ ಗುಪ್ತಾ(25), ವಿನಯ್ ಶರ್ಮ (26) ಹಾಗೂ ಅಕ್ಷಯ್ ಕುಮಾರ್ ಸಿಂಗ್ (31) ಗಲ್ಲಿಗೇರಿಸಲಾಗಿದೆ.

2012ರ ಸಾಮೂಹಿಕ ಅತ್ಯಾಚಾರ ಪ್ರಕರಣದ ಟೈಮ್ ಲೈನ್

ಡಿಸೆಂಬರ್ 16, 2012 - ನಿರ್ಭಯಾ ಅಂದು ತನ್ನ ಭಾವಿ ಪತಿಯೊಂದಿಗೆ ಸಿನಿಮಾಕ್ಕೆ ತೆರಳಿ ಸಂಜೆ ಕತ್ತಲಾಗುವ ಹೊತ್ತಿಗೆ ಮನೆಗೆ ಮರಳುವ ವೇಳೆ ಖಾಸಗಿ ಬಸ್ ನಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿತ್ತು. ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾತ್ರವಲ್ಲ, ಮನುಷ್ಯತ್ವಕ್ಕೇ ಅಪಮಾನವಾಗುವಂಥ ರೀತಿಯಲ್ಲಿ ಆ ಯುವತಿಯ ಮೇಲೆ ಅತ್ಯಂತ ಕ್ರೂರವಾಗಿ, ಚಲಿಸುತ್ತಿದ್ದ ಬಸ್ ನಲ್ಲಿ ಅತ್ಯಾಚಾರ.

ಡಿ. 17, 2012 - ಮಾಧ್ಯಮಗಳಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ ರಾಷ್ಟ್ರಾದ್ಯಂತ ಕೋಲಾಹಲ ಸೃಷ್ಟಿಯಾದ ಮೇಲೆ ಎಚ್ಚೆತ್ತ ದೆಹಲಿ ಪೊಲೀಸರಿಂದ, ಪ್ರಕರಣದ ತನಿಖೆ ನಡೆಸಿ, 17 ವರ್ಷದ ಓರ್ವ ಬಾಲಕ ಸೇರಿದಂತೆ ಆರು ಆರೋಪಿಗಳನ್ನು ಗುರುತು ಪತ್ತೆಯಾಗಿತ್ತು.

ಡಿ. 18, 2012 - ಒಬ್ಬ 17 ವರ್ಷದ ಹುಡುಗ ಸೇರಿದಂತೆ ಆರು ಆರೋಪಿಗಳ ಬಂಧನ. ಪ್ರಮುಖರು - ಅಕ್ಷಯ್, ರಾಮ್ ಸಿಂಗ್, ಮುಖೇಶ್, ವಿನಯ್ ಶರ್ಮಾ ಹಾಗೂ ಪವನ್ ಗುಪ್ತಾ.

ಡಿ. 29 , 2012 - ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಕರೆದೊಯ್ಯಲಾಯಿತು. ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29, 2012ರಂದು ಆಕೆ ಕೊನೆಯುಸಿರೆಳೆದಿದ್ದರು.

ಮಾ. 11, 2013 - ಪ್ರಕರಣದ ಪ್ರಮುಖ ಆರೋಪಿ ರಾಮ್ ಸಿಂಗ್, ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು.

ಆ. 31, 2013 - ಬಾಲಾಪರಾಧಿ ನ್ಯಾಯಾಧೀಕರಣ (ಜೆಜೆಬಿ), ಪ್ರಕರಣದ ಬಾಲಾಪರಾಧಿಗೆ ಮೊಹಮ್ಮದ್ ಅಫ್ರೋಜ್ ಗೆ ಮೂರು ವರ್ಷ ಶಿಕ್ಷೆ ವಿಧಿಸಿ ಆತನನ್ನು ಬಾಲ ಮಂದಿರಕ್ಕೆ ಕಳುಹಿಸಿತು.

ಸೆ. 13, 2013 - ಒಬ್ಬ ಬಾಲಾಪರಾಧಿಯೆಂದು ಪರಿಗಣಿಸಲ್ಪಟ್ಟ, ಮತ್ತೊಬ್ಬ ಆತ್ಮಹತ್ಯೆ ಮಾಡಿಕೊಂಡ. ಹಾಗಾಗಿ, ಉಳಿದ ನಾಲ್ವರಿಗೆ ಮರಣ ದಂಡನೆ ಶಿಕ್ಷೆ ನೀಡಿದ ದೆಹಲಿಯ ಸಾಕೇತ್ ನ್ಯಾಯಾಲಯ. ನ್ಯಾ. ರೇವಾ ಖೇತ್ರಪಾಲ್ ಹಾಗೂ ಪ್ರತಿಭಾ ರಾಣಿ ಅವರಿಂದ ಆದೇಶ ಪ್ರಕಟ.

ಮಾ. 15, 2014: ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್. ಪ್ರಕರಣದ ಸಾಕ್ಷಿಗಳ ಮರು ವಿಚಾರಣೆಗೆ ಇಂಗಿತ.

ಡಿ. 18, 2015 - ಬಾಲಾಪರಾಧಿಯನ್ನು ಬಿಡುಗಡೆ ಮಾಡಕೂಡದೆಂದು ಸಲ್ಲಿಸಲಾಗಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್. ಇದರ ಪರಿಣಾಮವಾಗಿ, ಬಾಲಾಪರಾಧಿ ಬಿಡುಗಡೆ.

ಏ. 3, 2016 - ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ಆರಂಭ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ವಿ. ಗೋಪಾಲ ಗೌಡ ಹಾಗೂ ಕುರಿಯನ್ ಜೋಸೆಫ್ ಅವರುಳ್ಳ ಪೀಠದಿಂದ ವಿಚಾರಣೆ.

ಏ. 8, 2016 - ಹಿರಿಯ ವಕೀಲರಾದ ರಾಜು ರಾಮಚಂದ್ರನ್, ಸಂಜಯ್ ಹೆಗ್ಡೆ ಅವರು ಅಮಿಕಸ್ ಕ್ಯೂರಿಯಾಗಿ ನೇಮಕ.

ಜು. 11, 2016 - ನಿರ್ಭಯಾ ಪ್ರಕರಣದ ನ್ಯಾಯಪೀಠ ಬದಲಾವಣೆ. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಆರ್. ಬಾನುಮತಿ, ಅಶೋಕ್ ಭೂಷಣ್ ಅವರುಳ್ಳ ಹೊಸ ಸಮಿತಿ ನೇಮಕ.

ಸೆ. 2, 2016 - ಡಿಫೆನ್ಸ್ ಅಡ್ವೊಕೇಟ್ ಎಂ.ಎಲ್. ಶರ್ಮಾ ಅವರಿಂದ ಅಹವಾಲು ಸಲ್ಲಿಕೆ.

ಮಾ. 6, 2017 - ಆರೋಪಿಗಳಿಂದ ಹೆಚ್ಚುವರಿ ಅಫಿಡವಿಟ್ ಸಲ್ಲಿಕೆ.

ಮಾ. 27, 2017 - ವಿಚಾರಣೆ ಮುಕ್ತಾಯ. ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್.

ಏ. 5, 2017 - ಅಪರಾಧಿಗಳಿಗೆ ಮರಣ ದಂಡನೆ ಕಾಯಂಗೊಳಿಸಿದ ಸರ್ವೋಚ್ಛ ನ್ಯಾಯಾಲಯ.

ನಿರ್ಭಯಾ ಕೇಸ್ : 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ, ಸುಪ್ರೀಂ ಆದೇಶ

ಜುಲೈ 09, 2018: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮೂವರು ಅಪರಾಧಿಗಳು ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟಿನ ತ್ರಿಸದಸ್ಯಪೀಠ. ಎಲ್ಲಾ ಅಪರಾಧಿಗಳಿಗೂ ಗಲ್ಲುಶಿಕ್ಷೆ ಖಾಯಂಗೊಳಿಸಲಾಗಿದೆ.

ಡಿಸೆಂಬರ್ 18, 2019: ಅಕ್ಷಯ್ ಕುಮಾರ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ(ಡಿಸೆಂಬರ್ 18) ತಿರಸ್ಕರಿಸಿದೆ. ಹೀಗಾಗಿ, ಪ್ರಕರಣದ ನಾಲ್ವರು ಆರೋಪಿಗಳಿಗೆ ಮರಣ ದಂಡನೆ ಕಾಯಂಗೊಂಡಿದೆ.

ಮಾರ್ಚ್ 03, 2020: ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಾಲ್ವರು ದೋಷಿಗಳಿಗೆ ಮಾರ್ಚ್.03ರಂದು ಗಲ್ಲುಶಿಕ್ಷೆ ವಿಧಿಸುವಂತೆ ಡೆತ್ ವಾರಂಟ್ ಜಾರಿಗೊಳಿಸಿತ್ತು.

* 2020ರಲ್ಲಿ ಹೆಚ್ಚುವರಿ ಸೆಷನ್ಸ್ ಜಡ್ಜ್ ಸತೀಶ್ ಕುಮಾರ್ ಅರೋರಾ ಅವರು ತಿಹಾರ್ ಜೈಲಿನ ಮುಖ್ಯ ಅಧಿಕಾರಿಗೆ ಬ್ಲ್ಯಾಕ್ ವಾರೆಂಟ್ ಎಂದು ಕೂಡಾ ಕರೆಯಲ್ಪಡುವ ಡೆತ್ ವಾರೆಂಟ್ ಪ್ರತಿ ಕಳಿಸಿದ್ದಾರೆ.
* ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಕೇಶ್ (32), ಪವನ್ ಗುಪ್ತಾ(25), ವಿನಯ್ ಶರ್ಮ (26) ಹಾಗೂ ಅಕ್ಷಯ್ ಕುಮಾರ್ ಸಿಂಗ್ (31) ಅವರ ವಿರುದ್ಧ ಹೊಸದಾಗಿ ಡೆತ್ ವಾರೆಂಟ್ ಜಾರಿಯಾಗಿದೆ.

* ನಾಲ್ವರಿಗೆ ಪ್ರತ್ಯೇಕ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ಬಾನುಮತಿ ನೇತೃತ್ವದ ನ್ಯಾ.ಅಶೋಕ್ ಭೂಷಣ್, ನ್ಯಾ. ನವಿನ್ ಸಿನ್ಹಾರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ.

ಮಾರ್ಚ್ 19, 2020: ಗಲ್ಲು ಶಿಕ್ಷೆಗೆ ತಡೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಗುರುವಾರ ರಾತ್ರಿ 11.20ಕ್ಕೆ ವಜಾಗೊಳಿಸಿತು. ಬಳಿಕ ಅಪರಾಧಿಗಳ ಪರ ವಕೀಲರು ಸುಪ್ರೀಂಕೋರ್ಟ್ ಮೊರೆ ಹೋದರು.

ನಡುರಾತ್ರಿ 1 ಗಂಟೆ ಸುಮಾರಿಗೆ ಅರ್ಜಿಯ ವಿಚಾರಣೆಯನ್ನು ಆರ್. ಭಾನುಮತಿ ನೇತೃತ್ವದ ಪೀಠ ಕೈಗೆತ್ತಿಕೊಂಡಿತು. 3.30ರ ಸುಮಾರಿಗೆ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿತು. 5.30ಕ್ಕೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವುದು ಖಚಿತವಾಯಿತು.

ಮಾರ್ಚ್ 20, 2020: 2012ರ ದೆಹಲಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ತಿಹಾರ್ ಜೈಲಿನ ನಂಬರ್ 3ರಲ್ಲಿ ಗಲ್ಲಿಗೇರಿಸಲಾಗಿದೆ. ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹ್ಯಾಂಗ್ ಮನ್ ಪವನ್ ಜಲ್ಲಾದ್ ಅವರು ನಾಲ್ವರನ್ನು ಗಲ್ಲಿಗೇರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+