ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್‌ನಲ್ಲಿ ಹೊಸ ವೈರಸ್: ಏನಿದು ಪ್ಲೂರೊನಾ?

|
Google Oneindia Kannada News

ಜೆರುಸಲೇಂ ಡಿಸೆಂಬರ್ 31: ವಿಶ್ವಾದ್ಯಂತ ಹೊಸ ಹೊಸ ವೈರಸ್‌ಗಳು ಹುಟ್ಟಿಕೊಳ್ಳುತ್ತಿದ್ದು ಜನ ಆತಂಕದಿಂದ ದೂರ ಸರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಓಮಿಕ್ರಾನ್, ಡೆಲ್ಮಿಕ್ರಾನ್ ಬಳಿಕ ಸದ್ಯ ಇಸ್ರೇಲ್‌ನಲ್ಲಿ ಹೊಸದೊಂದು ವೈರಸ್ ಪತ್ತೆಯಾಗಿದೆ. ಈ ವೈರಸ್‌ನ ಮೊದಲ ಪ್ರಕರಣ ಇಸ್ರೇಲ್‌ನಲ್ಲಿ ದಾಖಲಾಗಿದೆ. ಇಸ್ರೇಲ್‌ನಲ್ಲಿ 'ಫ್ಲೂರೊನಾ' ವೈರಸ್‌ನ ಪ್ರಕರಣವೊಂದು ಪತ್ತೆಯಾಗಿದೆ.ಇದು ಜಗತ್ತಿನಲ್ಲೇ ಪತ್ತೆಯಾದ ಮೊದಲ ಸೋಂಕಿತ ಪ್ರಕರಣವಾಗಿದೆ ಎಂದು ಜಾಗತಿಕ ಮಾಧ್ಯಮಗಳಲ್ಲಿ ವರದಿಯಾಗಿದೆ. 'ಫ್ಲೂರೊನಾ' ಎರಡು ಸೋಂಕುಗಳ ಸಂಯೋಜನೆಯಾಗಿದೆ. ಈ ಹೆಸರು 'ಫ್ಲೂ' (ಇಂಗ್ಲಿಷ್‌ನಲ್ಲಿ ಜ್ವರ) ಮತ್ತು ಕೊ'ರೊನ' ವೈರಸ್ ಪದಗಳ ಮಿಶ್ರಣವಾಗಿದೆ. ಹೀಗಾಗಿ ಇದನ್ನು ಪ್ಲೂರೊನಾ ಎಂದು ಕರೆಯಲಾಗಿದೆ.

ಈ ಸುದ್ದಿಯನ್ನು Ynet ವೆಬ್‌ಸೈಟ್ ವರದಿ ಮಾಡಿದೆ. ಪೆಟಾಚ್ ಟಿಕ್ವಾದಲ್ಲಿನ ಬೈಲಿನ್ಸನ್ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ಮಹಿಳೆಗೆ ಹೊಸ ಫ್ಲೂರೊನಾ ಕಾಣಿಸಿಕೊಂಡಿದೆ. ಆಸ್ಪತ್ರೆಯ ಪ್ರಕಾರ, ಯಾವುದೇ ವೈರಸ್ ವಿರುದ್ಧ ಲಸಿಕೆ ಹಾಕದ ಗರ್ಭಿಣಿ ತಾಯಿಗೆ ಫ್ಲೂರೊನಾ ಕಂಡುಬಂದಿದೆ. ಅವರು ಆರೋಗ್ಯವಾಗಿದ್ದಾರೆ. ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆಂದು ತಿಳಿಸಿದೆ. ಆರೋಗ್ಯ ಸಚಿವಾಲಯವು ಪ್ರಕರಣವನ್ನು ಪರಿಶೀಲಿಸುತ್ತಿದೆ. ಎರಡು ಸೋಂಕುಗಳ ಸಂಯೋಜನೆಯಾದ ಫ್ಲೂರೊನಾ ಗಂಭೀರವಾದ ಅನಾರೋಗ್ಯವನ್ನು ಉಂಟುಮಾಡಬಹುದೇ ಎಂದು ನಿರ್ಧರಿಸಲು ತುಂಬಾ ಕಷ್ಟಕರವಾಗಿದೆ ಎಂದಿದೆ.

ಕಳೆದ ವರ್ಷ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ನಿರ್ದೇಶಕ ಪ್ರೊಫೆಸರ್ ಅರ್ನಾನ್ ವಿಜ್ನಿಟ್ಸರ್, "ನಾವು ಗರ್ಭಿಣಿಯರು ಅಥವಾ ಹೆರಿಗೆಗೆ ಬಂದ ಮಹಿಳೆಯರಲ್ಲಿ ಜ್ವರ ಪ್ರಕರಣಗಳನ್ನು ನೋಡಿಲ್ಲ. ಇಂದು ನಾವು ಕೋವಿಡ್ ಮತ್ತು ಜ್ವರ ಎರಡೂ ಸೋಂಕುಗಳ ಸಂಯೋಜನೆಯ ಫ್ಲೂರೊನಾ ಪ್ರಕರಣಗಳಿಗೆ ಸಾಕ್ಷಿಯಾಗಿದ್ದೇವೆ. ಮುಂದೆ ನಾವು ಹೆಚ್ಚು ಹೆಚ್ಚು ಗರ್ಭಿಣಿಯರನ್ನು ಜ್ವರದಿಂದ ನೋಡಬಹುದು" ಎಂದಿದ್ದಾರೆ.

New virus detected in Israel, What is Flurona?
ರೋಮ್‌ನ ಜೆಮೆಲ್ಲಿಯ ಸಾಂಕ್ರಾಮಿಕ ರೋಗ ತಜ್ಞ ರಾಬರ್ಟೊ ಕೌಡಾ ಅವರ ಪ್ರಕಾರ, "ಪ್ರಕರಣವು ಸ್ವಲ್ಪ ವಿಚಿತ್ರವಾಗಿದೆ. ಒಂದು ರೋಗವನ್ನು ಉಂಟುಮಾಡುವ ವೈರಸ್ ಇದ್ದರೆ. ಅದಕ್ಕೆ ಚಿಕಿತ್ಸೆ ನೀಡಬಹುದು. ಆಗ ಇನ್ನೊಂದರ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ. ಕೋವಿಡ್ ಇಂಟರ್ಫೆರಾನ್ ಉತ್ಪಾದನೆಯಲ್ಲಿ ದೋಷವನ್ನು ಉಂಟುಮಾಡುತ್ತದೆ ಮತ್ತು ಇದು ಇತರ ವೈರಸ್‌ಗೆ ದಾರಿ ಮಾಡಬಹುದು ಮಾಡದೇ ಇರಬಹುದು. ಈ ಸಂದರ್ಭದಲ್ಲಿ ಜ್ವರ ಕಾಣಿಸಿಕೊಳ್ಳಬಹುದು" ಎಂದು ಅವರು ವಿವರಿಸುತ್ತಾರೆ.

ಇಸ್ರೇಲಿ ಆರೋಗ್ಯ ಸಚಿವಾಲಯವು ಇನ್ನೂ ಪ್ರಕರಣವನ್ನು ಪರಿಶೀಲಿಸುತ್ತಿದೆ. ಎರಡು ವೈರಸ್‌ಗಳು ಸಂಯೋಜಿತವಾಗಿ ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗಬಹುದು ಎಂಬುದನ್ನು ಇನ್ನೂ ನಿರ್ಧರಿಸಬೇಕಾಗಿದೆ. ಇತರ ರೋಗಿಗಳು ಎರಡೂ ದೋಷಗಳಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ನಂಬಿದ್ದಾರೆ. ಆದರೆ ಇನ್ನೂ ರೋಗನಿರ್ಣಯ ಮಾಡಲಾಗಿಲ್ಲ.

ಜ್ವರ ಮತ್ತು ಕೋವಿಡ್ ಎರಡಕ್ಕೂ ಪಾಸಿಟಿವ್ ಪರೀಕ್ಷಿಸುವ ಹೆಚ್ಚಿನ ರೋಗಿಗಳು ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುತ್ತಾರೆ.

ಜ್ವರ

ಮೈ ನೋವು

ಕೆಮ್ಮು

ಸೀನುವುದು

ಗಂಟಲು ಕೆರತ

ಉಸಿರಾಟದ ತೊಂದರೆ

ಆಯಾಸ

ತಲೆನೋವು

ವಾಕರಿಕೆ

ವಾಂತಿ

ಅತಿಸಾರ

ಕೆಲವು ಸೂಕ್ಷ್ಮ ವ್ಯತ್ಯಾಸಗಳಿವೆ.

ಕಳೆದ 24 ಗಂಟೆಗಳಲ್ಲಿ ಇಸ್ರೇಲ್‌ನಲ್ಲಿ 5600 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1472 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 13,80,053 ಸೋಂಕಿತ ಪ್ರಕರಣಗಳು ವರದಿಯಾಗಿವೆ.

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಟ್ಟು 1,889,175 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಇದೇ ಅವಧಿಯಲ್ಲಿ 7,058 ಜನರು ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 579,614 ಸೋಂಕಿತರು ಗುಣಮುಖರಾಗಿದ್ದರೆ, 28,225,010 ಸಕ್ರಿಯ ಪ್ರಕರಣಗಳಿವೆ. ಜಗತ್ತಿನಲ್ಲಿ ಈವರೆಗೂ ಒಟ್ಟು 286,826,415 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ.

English summary
Israel has recorded its first case of 'flurona'- the double infection from Covid and flu, local website Ynet reported on Thursday. The name is a mix of the words "flu" (flu in English) and coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X