ಮನೆಯ ಅಟ್ಟವಲ್ಲ, ಮೌಂಟ್ ಎವರೆಸ್ಟ್ 23 ಬಾರಿ ಏರಿ ದಾಖಲೆ ಬರೆದ ನೇಪಾಳದ ಪರ್ವತಾರೋಹಿ
ನೇಪಾಳದ ಪರ್ವತಾರೋಹಿ ಕಮಿ ರಿತಾ ಶೆರ್ಪಾ ಅವರು ತಮ್ಮ ಹೆಸರಿಗೆ ಹೊಸದೊಂದು ದಾಖಲೆ ಸೇರಿಸಿಕೊಂಡಿದ್ದಾರೆ. ಭೂಮಿ ಮೇಲೆ ಅತಿ ದೊಡ್ಡ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಅತಿ ಹೆಚ್ಚು ಬಾರಿ, ಅಂದರೆ 23 ಬಾರಿ ಏರಿದ ದಾಖಲೆಯನ್ನು ಮಂಗಳವಾರ ಅವರು ಮಾಡಿದ್ದಾರೆ.
ಶಿಖರ ಏರುವ ಋತು ಮಾರ್ಚ್ ನಿಂದ ಮೇ ತನಕ ಇರುತ್ತದೆ. ಕಮಿ ರಿತಾ ಶೆರ್ಪಾ ನೇಪಾಳದ ಕಡೆಯಿಂದ ಶಿಖರ ಏರಿದ್ದಾರೆ. ಮತ್ತೊಂದು ಮಾರ್ಗವು ಟಿಬೆಟ್ ಕಡೆಯಿಂದ ಇದೆ. ಹಿಮಾಲಯದ ಎತ್ತರದ ಶಿಖರಗಳನ್ನು ಏರಲು ವಿದೇಶಿಯರಿಗೆ ಮಾರ್ಗದರ್ಶನ ನೀಡುವ ಜನಾಂಗವೇ ಶೆರ್ಪಾ. ಎತ್ತರದ ಪ್ರದೇಶಗಳಲ್ಲಿ ಇವರ ಅನುಭವ ಹಾಗೂ ಸಾಮರ್ಥ್ಯ ಅದ್ಭುತವಾದದ್ದು.
ಕಮಿ ರಿತಾ ಶೆರ್ಪಾ ಸೇರಿದಂತೆ ಎಂಟು ನೇಪಾಳಿಗಳು ಮಂಗಳವಾರದಂದು ಮೌಂಟ್ ಎವರೆಸ್ಟ್ ಶಿಖರದ ತುದಿ ಮುಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಈ ಶಿಖರ ಏರಿದವರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಆಗಲಿದೆ. "ಈ ವರ್ಷ ಕಷ್ಟ ಇತ್ತು ಮತ್ತು ನಮಗೆ ಆ ಬಗ್ಗೆ ಚಿಂತೆ ಆಗಿತ್ತು. ಕೊನೆಗೆ ವಾತಾವರಣ ಚೆನ್ನಾಗಿ ಆಯಿತು. ಆ ಕಾರಣಕ್ಕೆ ಎಂಟು ಮಂದಿ ತುದಿ ತಲುಪಲು ಸಾಧ್ಯವಾಯಿತು" ಎಂದು ನೇಪಾಳದ ಮಾರ್ಗದರ್ಶಕರೊಬ್ಬರು ತಿಳಿಸಿದ್ದಾರೆ.

ಶಿಖರ ಏರಲು ಪರ್ಮಿಟ್ ಗೆ ತಲಾ 7,70,000 ರುಪಾಯಿ
ಅವರ ಪ್ರಕಾರ, ಮುಂದಿನ ದಿನಗಳಲ್ಲಿ ಇನ್ನೂ ಹಲವು ಮಂದಿ ಶಿಖರಾರೋಹಣಕ್ಕೆ ಸಿದ್ಧರಾಗಿದ್ದಾರೆ. ನೇಪಾಳವು ದಾಖಲೆಯ 378 ಪರ್ಮಿಟ್ ನೀಡಿದೆ. ಅದಕ್ಕೆ ಒಬ್ಬೊಬ್ಬರಿಗೆ $ 11,000 ವೆಚ್ಚವಾಗುತ್ತದೆ. ಅಂದರೆ ಭಾರತೀಯ ಲೆಕ್ಕಾಚಾರದಲ್ಲಿ ಅಂದಾಜು ಏಳು ಲಕ್ಷದ ಎಪ್ಪತ್ತು ಸಾವಿರ ರುಪಾಯಿ.

29,035 ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರ
ಶಿಖರ ಏರುವ ಉತ್ಸಾಹಿಗಳಿಗೆ ನೇಪಾಳಿ ಮಾರ್ಗದರ್ಶಕರು ಜತೆಯಾಗುತ್ತಾರೆ. ಹಾಗೆ ಲೆಕ್ಕ ನೋಡಿದರೆ ಒಟ್ಟು 750 ಮಂದಿ 8850 ಮೀಟರ್ (29,035 ಅಡಿ) ಎತ್ತರದ ಶಿಖರವನ್ನು ಮುಂದಿನ ವಾರಗಳಲ್ಲಿ ಏರುತ್ತಾರೆ. ಕನಿಷ್ಠ 140 ಮಂದಿ ಉತ್ತರದ ಟಿಬೆಟ್ ಮಾರ್ಗವಾಗಿ ಮೌಂಟ್ ಎವರೆಸ್ಟ್ ಏರಲು ಸಿದ್ಧತೆ ನಡೆಸಿದ್ದಾರೆ. ಕಳೆದ ವರ್ಷದ ದಾಖಲೆ ಈ ವರ್ಷ ಮುರಿಯುತ್ತದೆ ಎನ್ನುತ್ತಾರೆ ಆಪರೇಟರ್ ಗಳು.

ಏಪ್ರಿಲ್ ಕೊನೆಯಿಂದ ಮೇ ಕೊನೆವರೆಗೆ ಸೂಕ್ತ ಕಾಲ
ಪ್ರತಿ ವರ್ಷದ ಏಪ್ರಿಲ್ ಕೊನೆಯಿಂದ ಮೇ ಕೊನೆವರೆಗೆ ಇಲ್ಲಿನ ವಾತಾವರಣ ಚೆನ್ನಾಗಿದ್ದು, ಪರ್ವತಾರೋಹಿಗಳು ಭಾರೀ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಕಳೆದ ವರ್ಷ 807 ಮಂದಿ ಮೌಂಟ್ ಎವರೆಸ್ಟ್ ಏರಿದ್ದರು. ಅದರಲ್ಲಿ ದಕ್ಷಿಣದಿಂದ 563 ಹಾಗು ಉತ್ತರದಿಂದ 244 ಮಂದಿ ಏರಿದ್ದರು. ಆ ವೇಳೆ ಐವರು ಪರ್ವತಾರೋಹಿಗಳು ಸಾವನ್ನಪ್ಪಿದ್ದರು. ಅದರಲ್ಲಿ ಒಬ್ಬರು ಅನುಭವಿ ಶೆರ್ಪಾ ಕೂಡ ಸೇರಿದ್ದರು.

1953ರಲ್ಲಿ ಮೊದಲ ಬಾರಿಗೆ ಏರಿದ್ದರು ತೇನ್ಜಿಂಗ್, ಎಡ್ಮಂಡ್ ಹಿಲರಿ
ಮೌಂಟ್ ಎವರೆಸ್ಟ್ ಏರುವುದು ಒಂದು ಹೆಮ್ಮೆಯಾಗಿ, ಸ್ಥಳೀಯವಾಗಿ ದೊಡ್ಡ ವ್ಯವಹಾರವಾಗಿ ಮಾರ್ಪಾಟು ಆಗಿದ್ದು 1953ರಲ್ಲಿ. ಮೊದಲ ಬಾರಿಗೆ ಸರ್ ಎಡ್ಮಂಡ್ ಹಿಲರಿ ಮತ್ತು ತೇನ್ಜಿಂಗ್ ನೋರ್ಗೆ ಮೌಂಟ್ ಎವರೆಸ್ಟ್ ಏರಿದ ವರ್ಷ ಅದು. ಆ ನಂತರ ಮೌಂಟ್ ಎವರೆಸ್ಟ್ ಅನ್ನು ಅದೆಷ್ಟೋ ಮಂದಿ ಏರಿದ್ದಾರೆ, ಏರುತ್ತಲೇ ಇದ್ದಾರೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications