Tesla Car: ಐಷಾರಾಮಿ ಟೆಸ್ಲಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಂತು ಈ ಕಾರು.! ವಿಶೇಷತೆಗಳೇನು ತಿಳಿಯಿರಿ

Tesla Car: ಎಲಾನ್‌ ಮಸ್ಕ್‌ ಮಾಲಿಕತ್ವದ ಅಮೇರಿಕಾ ಮೂಲದ ಟೆಸ್ಲಾ ಇವಿ ಕಾರು ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದ್ದು, ಇವಿಯಲ್ಲಿ ಇದಕ್ಕೆ ಸರಿಸಾಟಿ ಯಾವ ಕಾರು ಇಲ್ಲ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಆದರೆ ಇದೀಗ ಇದಕ್ಕೆ ಪೈಪೋಟಿ ನೀಡಲು ಇದೇ ಮಾದರಿಯ ಬೇರೆ ಕಂಪನಿಯ ಕಾರೊಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹಾಗಾದರೆ ಇದರ ವಿಶೇಷತೆಗಳು ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಚೀನಾದ ಎಲೆಕ್ಟ್ರಿಕ್ ವಾಹನ (EV) ತಯಾರಕ ನಿಯೊ ಕಂಪನಿಯು, ಹೊಸದಾಗಿ, ಕಡಿಮೆ ಬೆಲೆಯ ಬ್ರ್ಯಾಂಡ್ ಒನ್ವೊದಿಂದ ಮೊದಲ ಕಾರನ್ನು ಬಿಡುಗಡೆ ಮಾಡಿದೆ. ಇದು ಟೆಸ್ಲಾಗೆ ಪೈಪೋಟಿ ನೀಡುವುದಲ್ಲಿ ಯಾವುದೇ ಅನುಮಾನವಿಲ್ಲ ಅಂತಿದ್ದಾರೆ ಕಂಪನಿ ಮಾಲೀಕರು.

Neo Car is competitor to the luxury Tesla

Onvoನ ಬೆಲೆ 2,19,900 ($30,465, £23,990)ನಿಂದ ಪ್ರಾರಂಭವಾಗಲಿದ್ದು, ಈ L60 SUV ಪ್ರಪಂಚದ ಅತ್ಯಂತ ಜನಪ್ರಿಯ EVಗೆ ಹೋಲಿಕೆ ಮಾಡಿದರೆ, 10%ಗಿಂತ ಹೆಚ್ಚು ಅಗ್ಗವಾಗಿದೆ. ಇನ್ನು ಟೆಸ್ಲಾದ Y ಮಾದರಿಯ ಕಾರಿನ ಎಕ್ಸ್‌ ಶೋ ರೂಂ ಬೆಲೆ 2,49,900 ರೂಪಾಯಿ ಆಗಿದೆ.

ಚೀನಾದಿಂದ ಎಲೆಕ್ಟ್ರಿಕ್ ಕಾರುಗಳ ಮೇಲಿನ ಆಮದು ತೆರಿಗೆಯನ್ನು ನಾಲ್ಕು ಪಟ್ಟು ಹೆಚ್ಚಿಸುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ ಒಂದೇ ವಾರದಲ್ಲಿ ಇದು ಬರುತ್ತದೆ. ಇತರ EV ತಯಾರಕರಂತೆ, ಚೀನಿ ಬ್ರಾಂಡ್‌ಗಳ ತೀವ್ರ ಸ್ಪರ್ಧೆ ಹಿನ್ನೆಲೆ ಟೆಸ್ಲಾ ಕಂಪನಿಯ ಕಾರು ಮಾರಾಟದಲ್ಲಿ ನೆಲಕಚ್ಚುವ ಸಾಧ್ಯತೆಯಿದೆ ಅಂತಲೂ ಹೇಳಲಾಗುತ್ತಿದೆ. ಅಷ್ಟರ ಮಟ್ಟಿದೆ ಇದು ಪ್ರತಿಸ್ಪರ್ಧಿಯಾಗಿದೆ ಎಂದರೆ ತಪ್ಪಾಗಲಾರದು.

ನಿಯೋದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಲಿಯಂ ಲಿ ಅವರು ಶಾಂಘೈನಲ್ಲಿ ಈ ವಾಹನವನ್ನು ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅವರು "ನಮ್ಮ ಕಂಪನಿಯ ಕಾರು ಟೆಸ್ಲಾ ಮತ್ತು ಟೊಯೋಟಾ RAV4ಗೆ ಪ್ರತಿಸ್ಪರ್ಧಿಯಾಗಿದೆ ಎಂದು ಎಂದು ಹೇಳಿದರು.

"ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನದಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿದ್ದು, ಸ್ಮಾರ್ಟ್ ಇವಿ ವಾಹನಗಳತ್ತ ಜನರು ಹೆಚ್ಚಾಗಿ ಗಮನಹರಿಸುತ್ತಿದ್ದಾರೆ. ಆದ್ದರಿಂದ ಇಂದು ನಾವು ಕೂಡ ನಮ್ಮ ಕಂಪನಿಯ ಕಾರುಗಳಿಗೆ ಹೊಸ ವಿನ್ಯಾಸವನ್ನು ಅಳವಡಿಕೆ ಮಾಡಲು ಪ್ರಾರಂಭಿಸಿದ್ದೇವೆ," ಎಂದು ಹೇಳಿದರು.

"ಕಂಪನಿಯು L60ಗಾಗಿ ಗ್ರಾಹಕರ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದೆ ಮತ್ತು ಸೆಪ್ಟೆಂಬರ್‌ನೊಳಗೆ ಇದರ ವಿತರಣೆ ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಈ ಕಾರನ್ನು ಮಾರುಕಟ್ಟೆಗೆ ವಿಸ್ತರಿಸುವ ಪ್ರಯತ್ನಗಳ ಭಾಗವಾಗಿ ವರ್ಷಕ್ಕೆ ಹೊಸ ಒಂದು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದ್ದೇವೆ," ಎಂದು ನಿಯೋ ಕಾರ್ಯನಿರ್ವಾಹಣಾಧಿಕಾರಿ ಹೇಳಿದರು.

ಈಗಾಗಲೇ ಟೆಸ್ಲಾಗೆ ಈ ಕಾರು ಪೈಪೋಟಿ ನೀಡುವ ಹಿನ್ನೆಲೆ ಯುಎಸ್‌ನಲ್ಲಿ ಶೇಕಡಾ 100ರಷ್ಟು ಸುಂಕವನ್ನು ವಿಧಿಸಲಾಗುತ್ತಿದೆ. ಚೀನಾದಿಂದ EV ಆಮದುಗಳ ಮೇಲೆ ಯುರೋಪಿಯನ್ ಒಕ್ಕೂಟ ಪ್ರಾರಂಭಿಸಿರುವ ಸಬ್ಸಿಡಿ ವಿರೋಧಿ ತನಿಖೆಯನ್ನು ಎದುರಿಸುತ್ತಿದೆ ಎನ್ನುವ ಮಾಹಿತಿ ಇದೆ.

ಇನ್ನು ಪ್ರಪಂಚದಾದ್ಯಂತದ ಎಲೆಕ್ಟ್ರಿಕ್ ಕಾರ್ ಬ್ರ್ಯಾಂಡ್‌ಗಳು ನಿಧಾನಗತಿಯಲ್ಲಿ ಸದ್ದು ಮಾಡುತ್ತಲೇ ಇವೆ. ಅಲ್ಲದೆ ಮಾರುಕಟ್ಟೆಯಲ್ಲಿ ಇವಿಗಳಿಗೆ ಹೆಚ್ಚು ಬೇಡಿಕೆಯಿದ್ದು, ಬೇರೆ ಬೇರೆ ಕಂಪನಿ ಇವಿ ವಾಹನಗಳ ನಡುವೆಯೂ ಸ್ಪರ್ಧೆ ಎದುರಿಸಲಾಗುತ್ತಿದ್ದು, ಇದೇ ಸವಾಲಾಗಿ ಪರಿಣಮಿಸಿದೆ.

ಏಪ್ರಿಲ್‌ನಲ್ಲಿ, ಟೆಸ್ಲಾ 10%ಕ್ಕಿಂತ ಹೆಚ್ಚು EV ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿತು. ಆ ಬಳಿಕ, ಕಂಪನಿಯು ವರ್ಷದ ಮೊದಲ ಮೂರು ತಿಂಗಳ ಲಾಭವನ್ನು ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ, ಅರ್ಧಕ್ಕಿಂತ ಹೆಚ್ಚು ಕುಸಿದಿದೆ ಎಂದು ಘೋಷಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+