ಭಾರತದಲ್ಲಿ ಪ್ರತಿ ದಿನ ನಕಲಿ ಮದ್ಯ ಸೇವನೆಯಿಂದ ಮೂವರು ಸಾವು: ಎನ್‌ಸಿಆರ್‌ಬಿ ವರದಿ
ಗುಜರಾತಿನ ಬೊಟಾಡ್‌ನಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಗುಜರಾತ್‌ನಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ ನಕಲಿ ಮದ್ಯ ಮಾರಾಟ ರಾಜ್ಯದಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಈ ದುರಂತ ಸಾಕ್ಷಿಯಾಗಿದೆ.
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಹನ್ನೆರಡು ಮಂದಿ ಮೃತಪಟ್ಟಿದ್ದರು. ಅದಾದ ಕೆಲವೇ ದಿನಗಳಲ್ಲಿ ಗುಜರಾತ್‌ನಲ್ಲಿ ಈ ದುರ್ಘಟನೆ ನಡೆದಿದೆ. 2022ರ ಜನವರಿ ತಿಂಗಳಿನಲ್ಲಿ ಕಳ್ಳಭಟ್ಟಿ, ಸಾರಾಯಿ, ನಕಲಿ ಮದ್ಯ ನಿಷೇಧ ಮಾಡಿರುವ ಬಿಹಾರದಲ್ಲಿ ಕೂಡ ನಕಲಿ ಮದ್ಯಕ್ಕೆ 40 ಜನ ಬಲಿಯಾಗಿದ್ದರು.
ಕಂಟ್ರಿ ಆಲ್ಕೋಹಾಲ್ ಅಥವಾ ಅಗ್ಗದ ಬಟ್ಟಿ ಇಳಿಸಿದ ಮದ್ಯವನ್ನು ಇಂಡಸ್ಟ್ರಿಯಲ್ ಆಲ್ಕೋಹಾಲ್ ಅಥವಾ ಮೆಥನಾಲ್ ಜೊತೆ ಕಲಬೆರಕೆ ಮಾಡುವ ಮೂಲಕ ಹೆಚ್ಚಿನ ಅಮಲೇರುವ ಕಳ್ಳಭಟ್ಟಿಯನ್ನು ತಯಾರು ಮಾಡಲಾಗುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 2016 ಮತ್ತು 2020 ರ ನಡುವೆ 6,172 ಜನರು ಕಳ್ಳಭಟ್ಟಿ ಅಥವಾ ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ ದಿನವೊಂದಕ್ಕೆ ಮೂವರಂತೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಮಧ್ಯಪ್ರದೇಶದಲ್ಲಿ ಹೆಚ್ಚಿನ ಸಾವು
ನಕಲಿ ಮದ್ಯಕ್ಕೆ ಇಡೀ ದೇಶದಲ್ಲೇ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಜನ ಬಲಿಯಾಗಿದ್ದಾರೆ. ಒಟ್ಟಾರಿ ಸಾವುಗಳ ಪೈಕಿ ಐದನೇ ಒಂದು ಭಾಗ ಮಧ್ಯಪ್ರದೇಶದಲ್ಲಿ ಸಂಭವಿಸಿದೆ. 2016-20ರ ಅವಧಿಯಲ್ಲಿ 1,241 ಮಂದಿ ಮಧ್ಯಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಅಂದರೆ ರಾಜ್ಯದಲ್ಲಿ ಪ್ರತಿ ಮೂರು ದಿನಗಳಿಗೊಮ್ಮೆ ಅಕ್ರಮ ದಂಧೆಯಿಂದಾಗಿ ಎರಡು ಸಾವುಗಳು ಸಂಭವಿಸುತ್ತಿವೆ.
ಮಧ್ಯಪ್ರದೇಶದ ನಂತರ ಕರ್ನಾಟಕದಲ್ಲಿ 909, ಪಂಜಾಬ್‌ನಲ್ಲಿ 725, ಛತ್ತೀಸ್‌ಗಢದಲ್ಲಿ 505 ಮತ್ತು ಹರಿಯಾಣದಲ್ಲಿ 476 ಮಂದಿ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ದೆಹಲಿಯಲ್ಲಿ 94, ಗುಜರಾತ್ 50 ಮತ್ತು ಬಿಹಾರದಲ್ಲಿ 21 ಸಾವುಗಳು ದಾಖಲಾಗಿವೆ.

ಯಾವ ರಾಜ್ಯಗಳಲ್ಲಿ ಶೂನ್ಯ ಸಾವು ವರದಿ
ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರ, ಗೋವಾ, ಲಡಾಖ್ ಮತ್ತು ಲಕ್ಷದ್ವೀಪಗಳು ನಕಲಿ ಮದ್ಯ ಸೇವನೆಯಿಂದ ಶೂನ್ಯ ಸಾವುಗಳನ್ನು ವರದಿ ಮಾಡಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿವೆ.
ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ನಕಲಿ ಮದ್ಯ ಸೇವನೆಯಿಂದ ತಲಾ ಒಂದು ಸಾವು ದಾಖಲಾಗಿದೆ. ಈಶಾನ್ಯ ರಾಜ್ಯಗಳು ನಕಲಿ ಮದ್ಯ ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತಿಳಿಸಿದೆ.

ವರ್ಷದಿಂದ ವರ್ಷಕ್ಕೆ ಸಾವಿನ ಪ್ರಮಾಣ ಇಳಿಕೆ
ಎನ್‌ಸಿಆರ್‌ಬಿ ನೀಡಿರುವ ಅಂಕಿ ಅಂಶಗಳ ಪ್ರಕಾರ ಪ್ರತಿವರ್ಷ ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವರದಿಯ ಈ ಅಂಕಿ ಅಂಶ ಸದ್ಯಕ್ಕೆ ಸಮಾಧಾನ ನೀಡುವ ಸಂಗತಿಯಾಗಿದೆ.
2017 ರಿಂದ ದೇಶದಲ್ಲಿ ನಕಲಿ ಮದ್ಯ ಸೇವನೆಯಿಂದ ಸಾವುಗಳು ಕಡಿಮೆಯಾಗುತ್ತಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ. ದೇಶದಲ್ಲಿ 2017ರಲ್ಲಿ 1,510 ಮಂದಿ ನಕಲಿ ಮದ್ಯಕ್ಕೆ ಬಲಿಯಾಗಿದ್ದಾರೆ. 2018ರಲ್ಲಿ 1365 ಮಂದಿ, 2019ರಲ್ಲಿ 1,296 ಮತ್ತು 2020ರಲ್ಲಿ 947 ಜನ ಕಳ್ಳಭಟ್ಟಿ ಕುಡಿದು ಸಾವನ್ನಪ್ಪಿದ್ದಾರೆ.
2020ರ ದಾಖಲೆಗಳ ಪ್ರಕಾರ ಮೃತಪಟ್ಟ 947 ಮಂದಿಯಲ್ಲಿ 52 ಮಹಿಳೆಯರೂ ಸೇರಿದ್ದಾರೆ. 30 ರಿಂದ 44 ವಯೋಮಾನದವರೇ ಹೆಚ್ಚಾಗಿ ನಕಲಿ ಮದ್ಯಕ್ಕೆ ಬಲಿಯಾಗುತ್ತಿದ್ದಾರೆ. 11 ಮಂದಿ ಅಪ್ರಾಪ್ತರು ಕೂಡ ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸಿದೆ.

ಇತ್ತೀಚಿನ ಪ್ರಮುಖ ದುರಂತಗಳು
2015ರಲ್ಲಿ ಮುಂಬೈನ ಮಾಲ್ವಾನಿಯ ಕೊಳಗೇರಿಯಲ್ಲಿ 106 ಜನ ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದರು. ನಕಲಿ ಮದ್ಯದ ದುರಂತದಲ್ಲಿ ಇದು ಅತ್ಯಂತ ಭೀಕರ ಎಂದು ಗುರುತಿಸಲಾಗಿದೆ. ಮೃತಪಟ್ಟಿದ್ದವರೆಲ್ಲ ನಿರ್ಮಾಣ ಕಾರ್ಮಿಕರು, ಒಳಚರಂಡಿ ಕ್ಲೀನರ್‌ಗಳು ಮತ್ತು ಸ್ವೀಪರ್‌ಗಳು ಎಂದು ತಿಳಿದುಬಂದಿತ್ತು. ನಕಲಿ ಮದ್ಯದ ಫೋರೆನ್ಸಿಕ್ ವರದಿಯ ಪ್ರಕಾರ ನೀರಿನಲ್ಲಿ ದುರ್ಬಲಗೊಳಿಸಿದ ಶುದ್ಧ ಮೆಥನಾಲ್ ಇತ್ತು ಎಂದು ತಿಳಿದು ಬಂದಿತ್ತು.
2011ರಲ್ಲಿ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸಂಗ್ರಾಮ್‌ಪುರದಲ್ಲಿನಕಲಿ ಮದ್ಯ ದುರಂತದಲ್ಲಿ 172 ಮಂದಿ ಪ್ರಾಣ ಕಳೆದುಕೊಂಡಿದ್ದರು. ನಕಲಿ ಮದ್ಯ ಸೇವನೆ ಮಾಡುವವರು ಸಾಮಾನ್ಯವಾಗಿ ಕೂಲಿ ಕಾರ್ಮಿಕರು, ಬಡವರೇ ಆಗಿರುತ್ತಾರೆ.
-
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು?











Click it and Unblock the Notifications