Murugesh R Nirani Profile: ರಾಜಕೀಯದಲ್ಲಿ ಉದ್ಯಮದ ಛಾಪು ಮೂಡಿಸಿದ ಮುರಗೇಶ್ ನಿರಾಣಿ ಜೀವನ, ರಾಜಕೀಯ ಪರಿಚಯ
ಕರ್ನಾಟಕದ ಬೀಳಗಿ ವಿಧಾನಸಭಾ ಕ್ಷೇತ್ರದಿಂದ ರಾಜಕೀಯ ಪ್ರಮುಖ ಘಟ್ಟ ಆರಂಭಿಸಿದ ಮುರುಗೇಶ್ ಆರ್. ನಿರಾಣಿ ಅವರ ವಿದ್ಯಾಭ್ಯಾಸ, ವಾಣಿಜ್ಯೋದ್ಯಮ ವೃತ್ತಿ ಪರಿಚಯ, ರಾಜಕೀಯ ಜೀವನದ ವಿವರ.
ಬೆಂಗಳೂರು, ಮಾರ್ಚ್ 06: ಕರ್ನಾಟಕದ ಬೀಳಗಿ ವಿಧಾನಸಭಾ ಕ್ಷೇತ್ರದಿಂದ ರಾಜಕೀಯ ಪ್ರಮುಖ ಘಟ್ಟ ಆರಂಭಿಸಿದ ಮುರುಗೇಶ್ ಆರ್. ನಿರಾಣಿ ಅವರು, ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಲಿ ಕರ್ನಾಟಕ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದಾರೆ. ಇವರು ಯಶಸ್ವಿ ಉದ್ಯಮಿಯೂ ಹೌದು.
Investments worth 9.87 lakh crore
— Dr. Murugesh R Nirani (@NiraniMurugesh) November 7, 2022
More than 80% of these investments to be outside Bengaluru
Over 6 lakh jobs to be created
The Global Investors Meet 2022 has been a resounding success and we will redefine Karnataka’s growth story. pic.twitter.com/TRmb44sXbj
ರುದ್ರಪ್ಪ ನಿರಾಣಿ ದಂಪತಿಯ ಪುತ್ರನಾಗಿ ಬಾಗಲಕೋಟೆ ಜಿಲ್ಲೆಯ ಬಿಳಗಿಯಲ್ಲಿ ಜನಿಸಿದರು. ಇವರದ್ದು ಕೃಷಿಕ ಕುಟುಂಬವಾಗಿತ್ತು. ಹುಟ್ಟಿದೂರಿನಲ್ಲಿಯೇ ಬಾಲ್ಯ ಕಳೆದ ಅವರು, ಬಿಇ ಸಿವಿಲ್ ಇಂಜಿನಿಯರಿಂಗ್ ಕೋಸ್ ಅನ್ನು ಮುಗಿಸಿದ್ದ ಅವರು, ಮುಂಬೈ ವಿಶ್ವವಿದ್ಯಾಲಯದಲ್ಲಿ ಅವರು ಬಿಸಿನೆಸ್ ಮ್ಯಾನೇಜ್‌ಮೆಂಟ್ ಡಿಪ್ಲೋಮಾ ಸಹ ಪಡೆದರು.

ವಿದ್ಯಾಭ್ಯಾಸ ಮುಗಿಸಿದ ಮುರುಗೇಶ್ ನಿರಾಣಿ ಅವರು, ವಾಣಿಜ್ಯೋದ್ಯಮ ವೃತ್ತಿ ಆರಂಭಿಸಿದರು. ಸ್ವಂತ ಜಿಲ್ಲೆ ಬಾಗಲಕೋಟೆಯಲ್ಳೇ ತಮ್ಮ ಮೊದಲ ಸಕ್ಕರೆ ಕಾರ್ಖಾನೆ ಸ್ಥಾಪಿಸಿದರು. ಈ ಕಾರ್ಖಾನೆಯು ದಿನಕ್ಕೆ 500ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಅವರ ಈ ವಾಣಿಜ್ಯೋದ್ಯಮ ವೃತ್ತಿ, ಯಶಸ್ವಿ ಉದ್ಯಮ ಆಸಕ್ತಿಗೆ ಮೇಕ್ ಇನ್ ಇಂಡಿಯಾ ಪ್ರಶಸ್ತಿ (2014) ಗೆ ಭಾಜನರಾದರು. ಕ್ರಮೇಣ ಅವರು ಮರುಗೇಶ್ ಆರ್ ನಿರಾಣಿ (MRN) ಗ್ರೂಪ್‌ನ ಅಧ್ಯಕ್ಷರೂ ಆದರು. ಇದರಲ್ಲಿ ನಿರಾಣಿ ಶುಗರ್ಸ್ ಲಿಮಿಟೆಡ್, ಸಾಯಿ ಪ್ರಿಯಾ ಶುಗರ್ಸ್ ಲಿಮಿಟೆಡ್, MRN ಕೇನ್ ಪವರ್ ಇಂಡಿಯಾ ಲಿಮಿಟೆಡ್, ನಿರಾಣಿ ಸಿಮೆಂಟ್ಸ್ ಪ್ರೈ. ಲಿಮಿಟೆಡ್, ಮತ್ತು ಬಿಳಗಿ ಶುಗರ್ ಮಿಲ್ ಲಿಮಿಟೆಡ್ ಒಳಗೊಂಡಿದೆ.
ಮುರುಗೇಶ್ ನಿರಾಣಿಯವರ ರಾಜಕೀಯ ಪ್ರವೇಶ
ವಿದ್ಯಾಭ್ಯಾಸ ಮತ್ತು ಉದ್ಯಮಿ ಕನಸು ನನಸಾಗುತ್ತಿದ್ದಂತೆ ಹದಿಹರೆಯದಲ್ಲಿದ್ದ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ಗೆ ಸೇರಿದರು. ಅಲ್ಲಿಂದ ಅವರ ರಾಜಕೀಯ ಜೀವನ ಶುರುವಾಯಿತು. ಅಲ್ಲದೇ ಅವರು ಮೈಸೂರು ಮಹಾರಾಜ ಕೃಷ್ಣ ರಾಜ ಒಡೆಯರ್ ಅವರಿಂದ ಸ್ಪೂರ್ತಿ ಪಡೆದಿದ್ದರು.
1992 ರ ನಂತರ ಸುಮಾರು ಎಂಟು ವರ್ಷ (2000) ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮುರುಗೇಶ್ ನಿರಾಣಿ ಜವಾಬ್ದಾರಿ ನಿಭಾಯಿಸಿದರು. 2013-14ರಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್ ಪ್ರತಿಮೆ ಲೋಹ ಸಂಗ್ರಹಣಾ ಸಮಿತಿ ರಾಜ್ಯ ಪ್ರಕೋಷ್ಟದ ಸಂಚಾಲಕರಾಗಿದ್ದರು. ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಆಗ ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಲು ಶುರುಮಾಡಿದ್ದ ಒಬ್ಬ ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರಾಗಿ ಹಂತ ಹಂತವಾಗಿ ಅವರು ಗುರುತಿಸಿಕೊಳ್ಳುತ್ತಾ ಹೋದರು. 2004ರಲ್ಲಿ ಬಿಳಗಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದು ಬೀಗಿದರು. ಇದು ಅವರಿಗೆ ಅಭೂತಪೂರ್ವ ಗೆಲುವಾಗಿತ್ತು. 2008ರಲ್ಲಿ ಮತ್ತೆ ಅಲ್ಲಿಂದಲೇ ಆಯ್ಕೆಯಾಗಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾದರು.

2018ರ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ 3ನೇ ಬಾರಿಗೆ ಆಯ್ಕೆಗೊಂಡರು. ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿರಾಣಿ ಅವರು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರಾದರು. ಬಳಿಕ ರಾಜ್ಯದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಸ್ಥಾನ ಅಂಕರಿಸಿದ್ದು, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ರಾಜಕೀಯ ಹೊರತುಪಡಿಸಿ ಸಚಿವ ಮುರುಗೇಶ್ ನಿರಾಣಿ ಯಶಸ್ವಿ ಉದ್ಯಮಿಯಾಗಿದ್ದಾರೆ. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ವಿಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಲ್ಲಿ ಮಹ್ವದ ಪಾತ್ರ ವಹಿಸಿದ್ದಾರೆ. ಅಲ್ಲದೇ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ವಿದೇಶ ಕಂಪನಿಗಳು ಬಂಡವಾಳ ಹೂಡಿಕೆಗೆ ಅವರು ಕಾರಣರಾಗಿದ್ದಾರೆ. ಸಚಿವ ಮುರುಗೇಶ್ ನಿರಾಣಿಯವರು ರಾಜಕೀಯದಲ್ಲಿ ತಮ್ಮ ವಾಣಿಜ್ಯೋದ್ಯಮಿಯ ಛಾಪು ಮೂಡಿಸಿದ್ದಾರೆ.












Click it and Unblock the Notifications