ಮುಂಬೈ ಏರ್‌ಪೋರ್ಟ್‌ನಲ್ಲಿ ದೋಸೆ ಬೆಲೆ ಕೇಳಿದಿರಾ? ಒಂದಕ್ಕೆ ಆರರ ಮುಂದೆ ಎರಡು ಸೊನ್ನೆ....

ಮುಂಬೈ ಡಿಸೆಂಬರ್ 27: ದೋಸೆ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಬಹುತೇಕ ಜನ ದೋಸೆಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಮನೆಯಲ್ಲಿ ಮಾಡದೇ ಇದ್ದರೂ ಹೊರಗಡೆ ತಮ್ಮ ನೆಚ್ಚಿನ ಹೋಟೆಲ್‌ನಲ್ಲಾದ್ರೂ ದೋಸೆ ಸವಿದು ಆನಂದಿಸುತ್ತಾರೆ. ದೋಸೆ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 99, 100 ದೋಸೆಗಳೆಲ್ಲಾ ಮಾರುಕಟ್ಟೆಗಳಲ್ಲಿ ಸಿಗಲಾರಂಭಿಸಿವೆ.

ಹೀಗೆ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್, ಹೋಟೆಲ್‌ಗಳಲ್ಲಿ ಸಿಗೋ ಒಂದು ಪ್ಲೇಟ್ ದೋಸೆ ಬೆಲೆ ಅಮ್ಮಮ್ಮಾ ಅಂದರೆ 50 ರಿಂದ 200 ರೂಪಾಯಿ ಇರಬಹುದು. ಬೀದಿ ಬದಿ ತಿಂದರೆ ಈ ಬೆಲೆ ಇನ್ನೂ ಕಡಿಮೆ ಇರುತ್ತದೆ. ಆದರೆ ಇಲ್ಲೊಂದು ಸ್ಥಳದಲ್ಲಿ ದೋಸೆ ಬೆಲೆ ಕೇಳಿ ಜನ ದಂಗಾಗಿದ್ದಾರೆ. ಇಲ್ಲಿ ಒಂದು ಪ್ಲೇಟ್ ದೋಸೆಗೆ ಬರೋಬ್ಬರಿ 600 ರೂಪಾಯಿ. ಹೌದು... ಶಾಕ್ ಆದರೂ ಇದು ನಿಜಾನೆ.

Mumbai Airport: Expensive Dosa Sale at Mumbai Airport

ಮುಂಬೈ ಏರ್‌ಪೋರ್ಟ್‌ನಲ್ಲಿ ಒಂದು ಪ್ಲೇಟ್ ದೋಸೆ ಬೆಲೆ 600 ರೂಪಾಯಿ ಇದೆ. ಇದನ್ನು ಕೇಳಿ ಜನ ಶಾಕ್ ಆಗಿದ್ದಾರೆ. ಜೊತೆಗೆ ಇಷ್ಟೊಂದು ದುಬಾರಿ ಇರೋ ದೋಸೆಯಲ್ಲಿ ಏನಾಪ್ಪ ಅಂತಹ ವಿಶೇಷತೆ ಇದೆ ಅಂತ ನೀವೇನಾದರೂ ಕೇಳಿದರೆ, ಅಂಥಹ ವಿಶೇಷವಾದದ್ದು ಇದರಲ್ಲಿ ಏನೂ ಇಲ್ಲ. ಹೋಟೆಲ್‌ಗಳಲ್ಲಿ ಸಿಗುವಂತಹ ಮಾಮೂಲಿ ದೋಸೆನೇ ಇದು. ಆದರೂ ವಿಮಾನ ನಿಲ್ದಾಣದಲ್ಲಿ ಮಾರುವ ಸಲುವಾಗಿ ಇದರ ಬೆಲೆ ಆರು ಪಟ್ಟು ಹೆಚ್ಚಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಜನ ಗಾಬರಿ ಆಗಿದ್ದಾರೆ.

ವಿಡಿಯೋ ಇಲ್ಲಿ ನೋಡಿ

ಈ ಹಣದಲ್ಲಿ ಕೆಲವರು ತಿಂಗಳ ಊಟ ಮಾಡ್ತಾರೆ. ಇನ್ನೂ ಕೆಲವರಿಗೆ 3-4 ದಿನದ ಊಟದ ಹಣವಿದು. ಹೀಗೆ ಒಂದೇ ಸಲ ಯಾವುದೇ ವಿಶೇಷತೆ ಇಲ್ಲದೆ 600 ರೂಪಾಯಿಯನ್ನು ಒಂದು ಪ್ಲೇಟ್ ದೋಸೆಗೆ ಮಾತ್ರ ಖರ್ಚು ಮಾಡೋದು ಅಚ್ಚರಿಯನ್ನು ಮೂಡಿಸಿದೆ. ಸಾಮಾನ್ಯವಾಗಿ ವಿಮಾನದಲ್ಲಿ ಓಡಾಡುವ ಜನರ ಜೀವನ ಶೈಲಿ ಕೊಂಚ ದುಬಾರಿಯೇ. ಆದರೆ ಒಂದು ಪ್ಲೇಟ್‌ ದೋಸೆಗೆ 600 ರೂಪಾಯಿ ಕೊಡುವಷ್ಟು ದುಬಾರಿನಾ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇಂಥಹ ದುಬಾರಿ ದೋಸೆ ಜನರಿಗೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ.

ಇನ್ನೂ ಇಲ್ಲಿನ ಬೆಣ್ಣೆ ದೋಸೆಗೆ 620 ರೂಪಾಯಿ ಇದೆ. ಇಲ್ಲಿನ ಫಿಲ್ಟರ್ ಕಾಫಿ ಹಾಗೂ ಲಸ್ಸಿ ಕೂಡ ದುಬಾರಿಯೇ. ಈ ದೋಸೆಯ ವಿಡಿಯೋ ಶೇರ್ ಮಾಡಿದಾಗಿನಿಂದಲೂ 9.3 ಮಿಲಿಯನ್ ಜನ ನೋಡಿದ್ದು 1.8 ಲಕ್ಷ ಜನ ಕಾಮೆಂಟ್ ಮಾಡಿದ್ದಾರೆ.

ಕಾಮೆಂಟ್:

ಇದಕ್ಕೆ ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ. 'ಇದರಲ್ಲಿ ಅಂತಹ ವಿಶೇಷತೆ ಏನೂ ಇಲ್ಲ, ಮತ್ಯಾಕ್ ಇಷ್ಟೊಂದು ದುಬಾರಿ?'

ಇನ್ನೊಬ್ಬರು 'ನೀವು ದೋಸೆಗೆ ಮಾತ್ರ ಪಾವತಿಸುತ್ತಿಲ್ಲ. ಬದಲಿಗೆ ಟ್ಯಾಕ್ಸ್, ಸೆಕ್ಯೂರಿಟಿ ಕಾಸ್ಟ್, ಹೈ ಮೆಟೆನೆನ್ಸ್ ಕಾಸ್ಟ್, ಹೈ ರೆಂಟ್ ಮುಂತಾದವುಗಳನ್ನೂ ನೀವು ಪಾವತಿಸುತ್ತೀರಿ' ಎಂದು ಬರೆದಿದ್ದಾರೆ.

ಮತ್ತೊಬ್ಬರು 'ಇದೆಲ್ಲದಕ್ಕಿಂತ ಫುಡ್‌ ಸ್ಟ್ರೀಟ್ ದೋಸೆಯೇ ಸಾವಿರಪಾಲಿಗೆ ವಾಸಿ' ಎಂದು ಗೇಲಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+