2019ರ ಸ್ಮಾರ್ಟ್ ಫೋನ್ ಗೂಗಲ್ ಸರ್ಚ್ ಟ್ರೆಂಡ್ಸ್, ಅಚ್ಚರಿಯ ಫಲಿತಾಂಶ
2019ರಲ್ಲಿ ಸ್ಮಾರ್ಟ್ ಫೋನ್ ಬಳಕೆಯಲ್ಲಿ ಭಾರತ ಅನೇಕ ಬದಲಾವಣೆಯನ್ನು ಕಂಡಿದ್ದು, ಕಡಿಮೆ ಬಜೆಟ್ ನಲ್ಲಿ ಬಹುಪಯೋಗಿ ಸ್ಮಾರ್ಟ್ ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿವೆ. ಬಜೆಟ್ ಕೆಟಗೆರಿ, ಪ್ರೀಮಿಯಂ ಹೀಗೆ ವಿವಿಧ ಶ್ರೇಣಿಯಲ್ಲಿನ ಫೋನ್ ಗಳ ಬಗ್ಗೆ ಭಾರತದಲ್ಲಿ ಸರ್ಚ್ ಹೇಗೆ ನಡೆದಿದೆ ಎಂಬುದರ ಫಲಿತಾಂಶ ಇಲ್ಲಿದೆ.
ಸ್ಮಾರ್ಟ್ ಫೋನ್ ಕುರಿತಂತೆ ಗೂಗಲ್ ಸರ್ಚ್ ಟ್ರೆಂಡ್ ವರದಿಯಂತೆ ಬಜೆಟ್ ಕೆಟಗೆರಿಯಲ್ಲಿ ರೆಡ್ಮಿ ನೋಟ್ 7 ಪ್ರೋ ಬಗ್ಗೆ ಭಾರತೀಯರು ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
2019 ಗೂಗಲ್ ಸರ್ಚ್: ವಿಂಗ್ ಕಮ್ಯಾಂಡರ್ ಅಭಿನಂದನ್ ಹೆಚ್ಚು ಹುಡುಕಾಟ
ಪ್ರೀಮಿಯಂ ಕೆಟಗೆರಿಯಲ್ಲಿ ಐಫೋನ್ 11 ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಮಧ್ಯ ವಲಯದಲ್ಲಿ ವಿವೋ ಎಸ್ 1 ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂದು ವರದಿ ಹೇಳಿದೆ.
ಬಜೆಟ್ ಕೆಟಗೆರಿಯಲ್ಲಿ ಟಾಪ್ ಸರ್ಚಿಂಗ್ ಪಟ್ಟಿಯಲ್ಲಿ ಸ್ಯಾಮ್ ಸಂಗ್ ಸಂಸ್ಥೆಯ ಏಕೈಕ ಮೊಬೈಲ್ ಫೋನ್ ಸ್ಥಾನ ಪಡೆದುಕೊಂಡಿದ್ದರೆ, ರಿಯಲ್ ಮಿ ಸಂಸ್ಥೆಯ 5 ಸ್ಮಾರ್ಟ್ ಫೋನ್ ಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.
1. ರೆಡ್ಮಿ ನೋಟ್ 7 ಪ್ರೋ
2. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20
3. ರಿಯಲ್ ಮಿ 3 ಪ್ರೊ
4. ರಿಯಲ್ ಮಿ 5
5. ರಿಯಲ್ ಮಿ 3
6. ರಿಯಲ್ ಮಿ 5 ಪ್ರೊ
7. ರೆಡ್ಮಿ ನೋಟ್ 8
8. ರೆಡ್ಮಿ ನೋಟ್ 6
ಮಧ್ಯ ವಲಯದಲ್ಲಿ ಹೆಚ್ಚು ಸರ್ಚ್ ಸ್ಮಾರ್ಟ್ ಫೋನ್
ವಿವೋ ಎಸ್ 1 ಸ್ಮಾರ್ಟ್ ಫೋನ್ ಬಗ್ಗೆ ಭಾರತೀಯರನ್ನು ಅತಿ ಹೆಚ್ಚು ಸರ್ಚ್ ಮಾಡಲಾಗಿದೆ ಎಂದು ಗೂಗಲ್ ಹೇಳಿದೆ. ಈ ಶ್ರೇಣಿಯಲ್ಲಿ ವಿವೋಗೆ ಸೇರಿದ 3 ಅಲ್ಲದೆ, ರೆಡ್ಮಿ 1, ರಿಯಲ್ 2 ಸ್ಮಾರ್ಟ್ ಫೋನ್ ಗಳಿವೆ.
Best of 2019: ಟಿಕ್ ಟಾಕ್ ಟಾಪ್ 10 ಕ್ರೇಜಿ ವಿಡಿಯೋಗಳು
ಪ್ರೀಮಿಯಂ ಶ್ರೇಣಿಯಲ್ಲಿ ಹೆಚ್ಚು ಸರ್ಚ್ ಸ್ಮಾರ್ಟ್ ಫೋನ್
1. ಐಫೋನ್ 11
2. ಐಫೋನ್ 11 ಪ್ರೋ
3. ಒನ್ ಪ್ಲಸ್ 7
4. ಒನ್ ಪ್ಲಸ್ 7 ಪ್ರೊ
ಇವಲ್ಲದೆ ವಿವೋ ವಿ17 ಪ್ರೊ, ಒನ್ ಪ್ಲಸ್ 7ಟಿ, ರೆಡ್ಮಿ ಕೆ20 ಪ್ರೊ, ಒಪ್ಪೋ ಕೆ20 ಪ್ರೊ, ಓಪ್ಪೋ ರೆನೋ 2, ಒನ್ ಪ್ಲಸ್ 6ಟಿ, ಮಿ ನೋಟ್ 10, ಹಾನರ್ ವ್ಯೂ 20 ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದೆ.