• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Viral video: ಮಗು ಕೈಯಿಂದ ಮೊಬೈಲ್ ಕಸಿದುಕೊಂಡು ಕೊಡಲೊಲ್ಲೆ ಎಂದ ಮಂಕಿ

|
Google Oneindia Kannada News

ಸಾಮಾನ್ಯವಾಗಿ ಮಂಗಗಳು ಮನುಷ್ಯರನ್ನು ಆಹಾರಕ್ಕಾಗಿ ಕಾಡುವುದು ನೋಡಿದ್ದೇವೆ. ಕೈಯಲ್ಲಿದ್ದ ತಿನಿಸುಗಳನ್ನು ಅಥವಾ ಪಾನಿಯಗಳನ್ನು ಕಿತ್ತುಕೊಳ್ಳುವುದು ಸಾಮಾನ್ಯವಾಗಿರುವ ವಿಚಾರ. ಆದರೆ ಇಲ್ಲೊಂದು ಮಂಗ ಕೊಂಚ ಡಿಫ್ರೆಂಟ್. ಯಾಕೆಂದ್ರೆ ಈ ಮಂಗನಿಗೆ ಮೊಬೈಲ್ ಬೇಕಂತೆ. ಮಗು ಕೈಯಿಂದ ಮೊಬೈಲ್ ಕಸಿದುಕೊಂಡು ಕೊಡಲೊಲ್ಲೆ ಎಂದ ಮಂಗನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ದೃಶ್ಯವನ್ನು ಅಧಿಕ ಸಂಖ್ಯೆಯಲ್ಲಿ ಜನ ಪ್ರೀತಿಸಿದ್ದಾರೆ. ಮಂಗನ ವರ್ತನೆಯನ್ನು ಮೆಚ್ಚಿಕೊಂಡಿದ್ದಾರೆ. ಪ್ರಾಣಿ ಪ್ರಿಯರು ಈ ವಿಡಿಯೋವನ್ನು ಮೆಚ್ಚಿಕೊಂಡು ಶೇರ್ ಮಾಡಿದ್ದಾರೆ.

ನೀವು ಅಧಿಕ ಕೆಲಸ ಒತ್ತಡದಿಂದ ದಣಿದು ಸುಸ್ತಾಗಿದ್ದರೆ ಮತ್ತು ಕೆಲವು ತಮಾಷೆಯ ವೀಡಿಯೊಗಳಿಗಾಗಿ Instagram ನಲ್ಲಿ ಸುಮ್ಮನೆ ಸ್ಕ್ರೋಲಿಂಗ್ ಮಾಡುತ್ತಿದ್ದರೆ. ಈ ವಿಡಿಯೋ ನಿಮಗೆ ಖುಷಿ ಕೊಡಬಹುದು. ಏಕೆಂದರೆ ಕೋತಿ ಮತ್ತು ಹೆಣ್ಣು ಮಗುವಿನ ನಡುವಿನ ಈ ಉಲ್ಲಾಸದ ತಮಾಷೆ ಖಂಡಿತವಾಗಿಯೂ ನಿಮ್ಮ ದಣಿವು ಆರಿಸುತ್ತದೆ. ಕ್ಲಿಪ್ ಈಗಾಗಲೇ ಹಲವಾರು ನೆಟಿಜನ್‌ಗಳನ್ನು ನಗಿಸಿದೆ.

Instagram ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್, ಅಂಬೆಗಾಲಿಡುವ ಮಗು ಹಾಸಿಗೆಯ ಮೇಲೆ ಕುಳಿತು ಸ್ಮಾರ್ಟ್‌ಫೋನ್ ಅನ್ನು ಪರಿಶೀಲಿಸುವುದನ್ನು ತೋರಿಸುತ್ತದೆ. ವಿಡಿಯೋದಲ್ಲಿ ಮಗು ಫೋನ್‌ನೊಂದಿಗೆ ಆಟವಾಡುತ್ತಿರುವಂತೆ ತೋರುತ್ತಿದೆ. ಕೆಲವೇ ಸೆಕೆಂಡುಗಳಲ್ಲಿ ಮಂಗವೊಂದು ಹೆಣ್ಣು ಮಗುವಿನ ಬಳಿ ಬಂದು ಕುಳಿತುಕೊಳ್ಳುತ್ತದೆ. ಮಗುವಿನ ಕೈಯಿಂದ ಫೋನ್ ಕಸಿದುಕೊಳ್ಳುತ್ತದೆ. ಮಂಗನ ದಿಟ್ಟತನದಿಂದ ಸಿಟ್ಟಾದ ಧೈರ್ಯಶಾಲಿ ಮಗು ಮೊಬೈಲ್ ಅನ್ನು ಮಂಗನಿಂದ ಕಿತ್ತುಕೊಳ್ಳುತ್ತದೆ. ಆದಾಗ್ಯೂ, ಕೋತಿ ಅದನ್ನು ಹಿಂದಕ್ಕೆ ತೆಗೆದುಕೊಂಡು ತನ್ನ ತೋಳುಗಳಲ್ಲಿ ಬಿಗಿಯಾಗಿ ಹಿಡಿದುಕೊಳ್ಳುತ್ತದೆ.

ಈ ಘಟನೆ ಯಾವ ಸ್ಥಳದಲ್ಲಿ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ವಿಡಿಯೊವನ್ನು 1.42 ಲಕ್ಷ ಬಾರಿ ಇಷ್ಟಪಡಲಾಗಿದೆ ಮತ್ತು ಅನೇಕ ಕಾಮೆಂಟ್‌ಗಳನ್ನು ಸಂಗ್ರಹಿಸಲಾಗಿದೆ. ಕೋತಿಯ ತಮಾಷೆಯ ಪ್ರತಿಕ್ರಿಯೆಗೆ ಜನರಿಗೆ ನಗು ತಡೆಯಲಾಗಲಿಲ್ಲ. ಕೆಲವು ಬಳಕೆದಾರರು ಹುಡುಗಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಕೆಲವರು ಮನುಷ್ಯನಂತೆ ಮಂಗನಿಗೂ ಮೊಬೈಲ್ ಕಂಡರೆ ಬಲೂ ಪ್ರೀತಿ ಎಂದು ಕೊಂಡಾಡಿದ್ದಾರೆ.

ಜನರು ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ವೀಡಿಯೊಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಯಾಕೆಂದರೆ ಬಹುತೇಕ ಪ್ರಾಣಿಗಳು ಅರಿವಿಲ್ಲದೆ ಮಾಡುವ ಚೇಷ್ಟೆಗಳು ನೋಡುಗರ ಗಮನ ಸೆಳೆದು ಮನಸ್ಸಿಗೆ ಮುದ ನೀಡುತ್ತವೆ. ಆದರೂ ಕೋತಿಯಿಂದ ತನಗೆ ಆಗುವ ಹಾನಿಯ ಬಗ್ಗೆಮಗು ತಿಳಿದಿಲ್ಲ ಎಂದು ತಮಾಷೆಯ ವೀಡಿಯೊ ಸ್ಪಷ್ಟವಾಗಿ ತಿಳಿಸುತ್ತದೆ. ಆದರೆ ಅದೃಷ್ಟವಶಾತ್ ಕೋತಿ ಮಗುವಿಗೆ ಹಾನಿ ಮಾಡಲಿಲ್ಲ. ವಿಡಿಯೋದ ಕೊನೆಯಲ್ಲಿ ಕೋತಿಯೇ ಕೈಯಲ್ಲಿ ಫೋನ್ ಹಿಡಿದುಕೊಂಡಿರುವುದು ಕಂಡುಬಂದಿದೆ.

ಕಳೆದ ತಿಂಗಳು ಚಿಂಪಾಂಜಿಯೊಂದು ಮನುಷ್ಯರಂತೆ ಬಟ್ಟೆಯನ್ನು ತೊಳೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಚೀನಾದ ದಿನಾಲೂ ಮೃಗಾಲಯದದಿಂದ ಯುಹಾಯಿ ಎಂಬ ಚಿಂಪಾಂಜಿ ಬಟ್ಟೆ ತೊಳೆಯುವ ವಿಡಿಯಡಿಯೋ ವೈರಲ್ ಆಗಿತ್ತು. ಜಿಂಪಾಜಿ ನಿತ್ಯ ಅದರ ಪಾಲಕನಂತೆ ಬಟ್ಟೆ ತೊಳೆಯುವುದನ್ನು ನೋಡುತ್ತಿತ್ತು. ಆತ ಟೀ-ಶರ್ಟ್‌ಗೆ ಸೋಪ್ ಹಾಕಿ ಬ್ರಷ್‌ನಿಂದ ಉಜ್ಜುತ್ತಿದ್ದನ್ನು ಜಿಂಪಾಂಜಿ ಗಮನಿಸುತ್ತಿತ್ತು. ತಾನು ಕೂಡ ಪಾಲಕ ಇಟ್ಟಿದ್ದ ಬಟ್ಟೆ ಮತ್ತು ಸೋಪನ್ನು ಬಳಸಿ ಬಟ್ಟೆಯನ್ನು ಉಜ್ಜಿ ಬಟ್ಟೆಯನ್ನು ತೊಳದಿದೆ. ವಿಡಿಯೋ ಸಮಾಜಿಕ ಜಾಲತಾಣದದಲ್ಲಿ ಭಾರೀ ವೈರಲ್ ಆಗಿತ್ತು.

ಈ ಬಗ್ಗೆ ಹೇಳಿಕೆ ನೀಡಿದ್ದ ಪಾಲಕ, ನನಗೆ ಚಿಂಪಾಂಜಿಗೆ ಎಂದಿಗೂ ಬಟ್ಟೆ ತೊಳೆಯಲು ಕಲಿಸುವ ಉದ್ದೇಶವಿರಲಿಲ್ಲ. ಆದರೆ ಅದು ನನ್ನನ್ನು ನೋಡಿಯೇ ಅದನ್ನೆಲ್ಲಾ ಕಲಿತಿದೆ. ಬಳಿ ನನ್ನಂತೆ ಬಟ್ಟೆ ತೊಳೆಯುವುದನ್ನು ನೋಡಿ ನಾನೇ ಆಶ್ಚರ್ಯಗೊಂಡೆ. ಮಾತ್ರವಲ್ಲದೇ ಈ ಚಿಂಪಾಂಜಿ ಮನಷ್ಯರಂತೆ ತನ್ನ ಬೆರಳುಗಳಲ್ಲಿ ಹೃದಯದ ಸಿಂಬಲ್ ತೋರಿಸುತ್ತದೆ ಎಂದು ಪಾಲಕ ಹೇಳುವ ಮೂಲಕ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

English summary
People love watching videos of animals on social media. What we all love even more is the antics they perform almost unknowingly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion