ಮೊದಲ ಬಾರಿ ಸಚಿವರಾದ ಡಾ. ಅಶ್ವತ್ಥ್ ನಾರಾಯಣ ಪರಿಚಯ
Recommended Video
ಬೆಂಗಳೂರು, ಆಗಸ್ಟ್ 21 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಬೆಂಗಳೂರು ನಗರಕ್ಕೆ 4 ಸಚಿವ ಸ್ಥಾನಗಳು ಸಿಕ್ಕಿವೆ. ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥ್ ನಾರಾಯಣ ಮೊದಲ ಬಾರಿಗೆ ಸಚಿವರಾಗಿದ್ದಾರೆ.
50 ವರ್ಷದ ಡಾ. ಅಶ್ವತ್ಥ್ ನಾರಾಯಣ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಮೂರು ಬಾರಿ 2008, 2013 ಮತ್ತು 2019ರ ಚುನಾವಣೆಯಲ್ಲಿ ಸತತವಾಗಿ ಜಯಗಳಿಸುವ ಮೂಲಕ ಬೆಂಗಳೂರಿನ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದರು.
ಎಂ.ಬಿ.ಬಿ.ಎಸ್. ಅಧ್ಯಯನ ಮಾಡಿರುವ ಡಾ. ಅಶ್ವತ್ಥ್ ನಾರಾಯಣ ರಾಜಕೀಯಕ್ಕೆ ಬಂದರು. ವೈದ್ಯರಾಗಿರುವ ಅವರಿಗೆ ವೈದ್ಯಕೀಯ ಶಿಕ್ಷಣ ಅಥವ ಆರೋಗ್ಯ ಖಾತೆ ಸಿಗುವ ನಿರೀಕ್ಷೆ ಇದೆ. ಆಪರೇಷನ್ ಕಮಲದ ವಿಚಾರದಲ್ಲಿಯೂ ಇವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು.

2004ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ವಿಧಾನಸಭೆ ಡಾ. ಅಶ್ವತ್ಥ್ ನಾರಾಯಣ ಪ್ರವೇಶ ಬಯಸಿದ್ದರು. ಆದರೆ, ಕಾಂಗ್ರೆಸ್‌ನ ಎಂ. ಆರ್. ಸೀತಾರಾಮ್ ವಿರುದ್ಧ ಸೋಲು ಕಂಡಿದ್ದರು. 2008ರ ಚುನಾವಣೆಯಲ್ಲಿ ಗೆದ್ದರು, ಬಳಿಕ ಎರಡು ಚುನಾವಣೆಯಲ್ಲಿ ಸತತವಾಗಿ ಗೆಲುವು ಕಂಡಿದ್ದಾರೆ.
ಪಕ್ಷದ ಹೈಕಮಾಂಡ್ ಜೊತೆಗೂ ಡಾ. ಅಶ್ವತ್ಥ್ ನಾರಾಯಣ ಉತ್ತಮ ಸಂಬಂಧ ಹೊಂದಿದ್ದಾರೆ. ಬೆಂಗಳೂರು ನಗರದ ನಾಲ್ವರು ಶಾಸಕರಿಗೆ ಸಚಿವರಾಗುವ ಅವಕಾಶ ಸಿಕ್ಕಿದ್ದು, ಅದರಲ್ಲಿ ಡಾ. ಅಶ್ವತ್ಥ್ ನಾರಾಯಣ ಅವರು ಕೂಡಾ ಒಬ್ಬರು.












Click it and Unblock the Notifications