Anand Singh Profile: ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆ ಗೆಲ್ಲುವ ನಾಯಕ ಆನಂದ್ ಸಿಂಗ್ ಪರಿಚಯ
ಸಚಿವ ಆನಂದ್ ಸಿಂಗ್ ಅವರ ವಯಸ್ಸು, ಜೀವನ ಚರಿತ್ರೆ, ಕುಟುಂಬ, ರಾಜಕೀಯ ವೃತ್ತಿ, ಶಿಕ್ಷಣ, ಆಸ್ತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇತ್ತೀಚಿನ ಸುದ್ದಿಗಳ ವಿವರ ಇಲ್ಲಿದೆ.
ಉತ್ತರ ಕರ್ನಾಟಕದ ಏಳಿಗೆಗೆ ಶ್ರಮಿಸಿದ ಸಕ್ರಿಯ ರಾಜಕಾರಣಿ ಆನಂದ್ ಸಿಂಗ್. ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣರಾದವರು ಆನಂದ್ ಸಿಂಗ್. ಹೊಸಪೇಟೆಯ ವಿಯಜನಗರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಆನಂದ್ ಸಿಂದ್ ಸದ್ಯ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದಾರೆ.
ಉದ್ಯಮಿಯಾಗಿ ಜನರಿಗೆ ಸಹಾಯ ಮಾಡುತ್ತಿದ್ದ ಆನಂದ್ ಸಿಂಗ್ ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ಗಣಿ ಉದ್ಯಮಿಯಾಗಿದ್ದ ಆನಂದ್ ಸಿಂಗ್ ರಾಜಕೀಯಕ್ಕೆ ಕರೆತಂದಿದ್ದು ಜನಾರ್ದನ ರೆಡ್ಡಿ. ಆನಂದ್ ಸಿಂಗ್ ಪಕ್ಷದ ಚಿನ್ಹೆ ಹೊರತುಪಡಿಸಿ ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆ ಗೆಲ್ಲುವ ನಾಯಕ. ಮಾತ್ರವಲ್ಲದೆ ರಾಜ್ಯದ 31ನೇ ಜಿಲ್ಲೆ ವಿಜಯನಗರ ಅಸ್ತಿತ್ವಕ್ಕೆ ಬರಲು ಹೋರಾಡಿದ ನಾಯಕರಾಗಿದ್ದಾರೆ.

ವೈಯಕ್ತಿಕ ಜೀವನ
ಸಚಿವ ಬಿಎಸ್ ಆನಂದ್ ಸಿಂಗ್ ಹೊಸಪೇಟೆ ತಾಲೂಕಿನ ಕಂಪ್ಲಿಯ ಶಂಕರ್‌ಸಿಂಗ್ ಕ್ಯಾಂಪ್‌ನಲ್ಲಿ 1966ರಲ್ಲಿ ಅಕ್ಟೋಬರ್ 03 ರಂದು ಜನಿಸಿದರು. ಇವರು ಬಿ. ಎಸ್. ಪೃಥ್ವಿರಾಜ್ ಸಿಂಗ್ ಹಾಗೂ ಶ್ರೀಮತಿ ಸುನಿತಾ ಬಾಯಿ ಅವರ ಪುತ್ರ. ಮೂಲತ: ಸಾರಿಗೆ, ಗಣಿ, ಹೋಟೆಲ್ ಉದ್ಯಮಿದಾರರಾಗಿದ್ದರು. ರಜಪೂರ್ ಸಮುದಾಯದವರಾದ ಆನಂದ್ ಸಿಂಗ್ ಪತ್ನಿ ಲಕ್ಷ್ಮಿ ಸಿಂಗ್, ಮಗಳು ಕುಮಾರಿ ವೈಷ್ಣವಿ ಸಿಂಗ್, ಮಗ ಸಿದ್ಧಾರ್ಥ ಸಿಂಗ್ ಹಾಗೂ ಇನ್ನೋರ್ವ ಮಗಳು ಯಶಸ್ವಿನಿ ಸಿಂಗ್ ಜೊತೆಗ ಸಂತೋಷದ ಜೀವನ ನಡೆಸುತ್ತಿದ್ದಾರೆ.

ರಾಜಕೀಯ ಅನುಭವ
ಆನಂದ್ ಸಿಂಗ್ ಹೊಸಪೇಟೆಯ ವಿಜಯನಗರ ಕ್ಷೇತ್ರದಲ್ಲಿ 2008, 2013, 2018 ಮತ್ತು 2019 ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ ಅವರು 52,418 ಮತಗಳನ್ನು ಪಡೆದು ಗೆಲುವು ಸಾಧಿಸಿದರು. 2013ರಲ್ಲಿ ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು ಜಯ ಸಾಧಿಸಿದರು.
ಆದರೆ 2018ರಲ್ಲಿ ಕಾಂಗ್ರೆಸ್ ಸೇರಿದ ಆನಂದ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಮತದಾರರು ಆನಂದ್ ಸಿಂಗ ಅವರನ್ನು ಕೈ ಬಿಡಲಿಲ್ಲ. ಬಳಿಕ 2019ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮತ್ತೆ ಸಚಿವ ಸ್ಥಾನ ಪಡೆದುಕೊಂಡರು.
2008 ರ ಸರ್ಕಾರದಲ್ಲಿ ಪ್ರವಾಸೋದ್ಯಮ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2019 ರ ಸರ್ಕಾರದಲ್ಲಿ ಮೂಲಭೂತ ಸೌಕರ್ಯ, ಹಜ್ & ವಕ್ಫ್ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಸದ್ಯ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರವಾಸೋದ್ಯಮ, ಪರಿಸರ & ಜೀವಿಶಾಸ್ತ್ರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಆಗಿದ್ದಾರೆ.

ಆನಂದ್ ಸಿಂಗ್ ರಾಜಕೀಯ ಪ್ರವೇಶ ಆಕಸ್ಮಿಕ
ಆನಂದ್ ಸಿಂಗ್ ಯಾವ ಫಲಪೇಕ್ಷಗಳಿಲ್ಲದೆ ಬಸ್ ಉದ್ಯಮಿಯಾಗಿ ನೂರಾರು ಜನರಿಗೆ ಹೃದಯ, ಕಣ್ಣು ಇತರೆ ಶಸ್ತ್ರ ಚಿಕಿತ್ಸೆಗಳಿಗೆ ಸಹಾಯ ಮಾಡುತ್ತಿದ್ದರು. ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬರಬೇಕಾಯಿತು. ಈಗ ಸಚಿವರಾಗುವ ಅವಕಾಶ ಸಿಕ್ಕಿದೆ. ಅದು ಒಂದು ಕಾಲಘಟ್ಟ ರೆಡ್ಡಿ ಬ್ರದರ್ಸ್ ಅಂದರೇ ಇಡೀ ರಾಜ್ಯವೇ ಬಳ್ಳಾರಿಯತ್ತ ಮುಖ ಮಾಡಿ ನೋಡುವಂತಹ ಕಾಲವಾಗಿತ್ತು. ರೆಡ್ಡಿಯವರ ವರ್ಚಸ್ಸು ಸರ್ಕಾರವನ್ನೇ ಅಲುಗಾಡಿಸುವಂತಹದ್ದು. ಆ ದಿನಗಳು ಹಾಗಿತ್ತು.
ಆನಂದ್ ಸಿಂಗ್ ಸಮಾರು ವರ್ಷಗಳಿಂದ ಜನರ ಸೇವೆ ಮಾಡುತ್ತಿರುವುದನ್ನು ರೆಡ್ಡಿ ಬ್ರದರ್ಸ್ ಗಮನಿಸಿದ್ದರು. ಖುದ್ಧಾಗಿ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ಮನೆ ಬಾಗಿಲಿಗೆ ಬಂದು ಆನಂದ್ ಸಿಂಗ್‌ರನ್ನು ಬಿಜೆಪಿ ಪಕ್ಷಕ್ಕೆ ಆಹ್ವಾನಿಸಿದ್ದರು. ಆನಂದ್ ಸಿಂಗ್ ಕೆಲವು ಕಾಲ ಸಮಯ ತೆಗೆದುಕೊಂಡು ತದನಂತರ ಒಪ್ಪಿದ್ದರು. 2008ರಲ್ಲಿ ಮೊದಲ ಬಾರಿಗೆ ವಿಧಾಸಭೆಗೆ ಪ್ರವೇಶ ಮಾಡಿದರು.

ಆನಂದ್ ಸಿಂಗ್ ಸಮಾಜಸೇವೆ
ಆನಂದ್ ಸಿಂಗ್ ಮೂಲತಃ ಬಸ್ ಉದ್ಯಮಿಯಾಗಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿದರು. ತಮ್ಮ ತಂದೆಯವರ ಮೈನಿಂಗ್ ಇದ್ದರು ಅತ್ತಕಡೆ ಹೋಗದೇ ಸ್ವಂತ ಉದ್ಯಮಿಯಾಗಬೇಕೆಂದು ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳದ್ಯಾಂತ ಬಸ್‌ಗಳನ್ನು ಓಡಿಸಿದರು. ನಂತರ ತಂದೆ ಪೃಥ್ವಿರಾಜ್ ಸಿಂಗ್ ವಯಸ್ಸಾಗಿದ್ದಕ್ಕೆ ಗಣಿ ಉದ್ಯಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು.
ಮೊದಲು ಉದ್ಯಮಿಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹೊಸಪೇಟೆ ನಗರದ್ಯಾಂತ ಉಚಿತವಾಗಿ ಪ್ರತಿ ವಾರ್ಡಗಳಿಗೆ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಪೂರೈಕೆ ಮಾಡುತ್ತಿದ್ದರು. ರಾಜ್ಯದ ಯಾವ ಮೂಲೆಯಲ್ಲಿಯೂ ಶಸ್ತ್ರ ಚಿಕಿತ್ಸೆ ಮಾಡಿದರೆ ಕಣ್ಣು ಬರುತ್ತವೆ ಎಂದು ತಿಳಿದರೆ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದರು. ತಮ್ಮ ವೈಯಕ್ತಿಕ ಹಣದಿಂದ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದ್ದಾರೆ. ನಾರಾಯಣ ಹೃದಲಾಯದಲ್ಲಿ ಹೃದಯ ಚಿಕಿತ್ಸೆಯನ್ನು ನೂರಾರು ಜನರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.
ಆನಂದ್ ಸಿಂಗ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸೇರುವುದರ ಮೂಲಕ ಮೂರನೇ ಬಾರಿಗೆ ಸಚಿವರಾಗಿದ್ದಾರೆ. ಅವಿಭಜಿತ ಬಳ್ಳಾರಿ ಜಿಲ್ಲೆಯ ನೂತನ ವಿಜಯನಗರ ಜಿಲ್ಲೆಗೆ ಸಚಿವನಾಗುವ ಮೂಲಕ ಪ್ರಾಬಲ್ಯವನ್ನು ಪಡೆದಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಗುಡ್ ಬೈ ಹೇಳಿದ್ದ ಆನಂದ್ ಸಿಂಗ್
ವಿಜಯನಗರ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು. ಆದರೆ ಬದಲಾದ ರಾಜಕಾರಣದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೊದಲು ರಾಜೀನಾಮೆ ನೀಡಿದ್ದು ಆನಂದ್ ಸಿಂಗ್. ಬಳಿಕ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ಕೊಟ್ಟರು.
ಜೆಡಿಎಸ್-ಕಾಂಗ್ರೆಸ್ ಸರ್ಕಾರವಿದ್ದಾಗ ರಾಜೀನಾಮೆ ನೀಡಿದ ಶಾಸಕರು ಮುಂಬೈ ಹೋಟೆಲ್‌ನಲ್ಲಿದ್ದರು. ಆದರೆ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರಕ್ಕೆ ಮರಳಿದರು. ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 2019ರ ನವೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಆನಂದ್ ಸಿಂಗ್ ಪುನಃ ಗೆದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಲ್ಲಿ ಮೊದಲಿಗರಾಗಿದ್ದರಿಂದ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿತು.
4 ಬಾರಿ ಶಾಸಕರಾಗಿರುವ ಆನಂದ್ ಸಿಂಗ್ 3 ಬಾರಿ ಸಚಿವರಾಗಿದ್ದಾರೆ. ಈ ಹಿಂದೆ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಕೆಲಸ ಮಾಡಿದ್ದರು. ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರಾದರು. ನಂತರ ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ಧಿ, ಹಜ್ ಖಾತೆ ಸಚಿವರಾದರು. ಯಡಿಯೂರಪ್ಪ ಸಂಪುಟದಲ್ಲಿ ಆನಂದ್ ಸಿಂಗ್ ಖಾತೆಗಳನ್ನು ಮೂರು ಸಲ ಬದಲಿಸಲಾಯಿತು.
2019ರಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಈಗಲ್ಟನ್ ರೆಸಾರ್ಟ್‌ನಲ್ಲಿ ಹೊಡೆದಾಟ ನಡೆದಿತ್ತು. ಹೊಡೆದಾಟದಿಂದ ಗಾಯಗೊಂಡಿದ್ದ ಆನಂದ್ ಸಿಂಗ್ ಆಸ್ಪತ್ರೆಯಲ್ಲಿ ಕೆಲ ದಿನ ಚಿಕಿತ್ಸೆ ಪಡೆದಿದ್ದರು.

ಈಡೇರಿದ ವಿಜಯನಗರ ಜಿಲ್ಲೆ ಮಾಡುವ ಕನಸು
ವಿಜಯನಗರ ಜಿಲ್ಲೆ ಮಾಡುವುದು ಅವರ ಪ್ರಮುಖ ಉದ್ದೇಶವಾಗಿತ್ತು. ಅಂದುಕೊಂಡಂತೆ ಅಕ್ಟೋಬರ್ 2ರಂದು ಚಾಲನೆ ವಿಜಯನಗರವನ್ನು ಜಿಲ್ಲೆಯಾಗಿ ಮಾಡಿದರು. ಬಿಜೆಪಿ ಸರ್ಕಾರದಲ್ಲಿ ಸಚಿವರಾದ ಮೇಲೆ ವಿಜಯನಗರ ಜಿಲ್ಲೆ ಮಾಡುವ ಕನಸು ಈಡೇರಿತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ವಿಜಯನಗರವನ್ನು ಜಿಲ್ಲೆಯಾಗಿ ಅಕ್ಟೋಬರ್ 2ರಂದು ಚಾಲನೆ ನೀಡಿದರು.

ವಿಜಯನಗರ ಕ್ಷೇತ್ರದ ಮತದಾರರ ಸಂಖ್ಯೆ
ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಪ್ರಾಚೀನ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಹಂಪೆ ಎಂದು ಕರೆಯಲ್ಪಡುವ ಈ ನಗರದ ಮಧ್ಯಭಾಗದಲ್ಲಿ ಪವಿತ್ರ ವಿರೂಪಾಕ್ಷ ದೇವಾಲಯವಿದೆ. ಸುತ್ತಲೂ ಇತರ ಪವಿತ್ರ ಐತಿಹಾಸಿಕ ಸ್ಥಳಗಳು ಸಹ ಇವೆ.
ಮತದಾರರ ಸಂಖ್ಯೆ ನೋಡುವುದಾದರೇ, ವಿಜಯನಗರ ಅಸೆಂಬ್ಲಿಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತದಾರರು ಸುಮಾರು 48,293 ಆಗಿದ್ದು, ಪರಿಶಿಷ್ಟ ಪಂಗಡ (ಎಸ್‌ಟಿ) ಮತದಾರರು ಸುಮಾರು 38,540 ಇದ್ದಾರೆ. ಮುಸ್ಲಿಂ ಮತದಾರರು ಸುಮಾರು 49,592 ಇದ್ದು, ಇದರ ಜೊತೆಗೆ ಕುಎಉಬರು, ಲಿಂಗಾಯತರು, ಬ್ರಾಹ್ಮಣರು ಸೇರಿಕೊಂಡಿದ್ದಾರೆ. ಗ್ರಾಮೀಣ ಮತದಾರರು ಸುಮಾರು 54,859 ಇದ್ದರೇ, ನಗರ ಪ್ರದೇಶದ ಮತದಾರರು ಸುಮಾರು 1,81,319 ಇದೆ.

2023 ವಿಧಾನಸಭೆ ಚುನಾವಣೆ
ಹೊಸ ಜಿಲ್ಲೆಯಾಗಿ ರೂಪಗೊಂಡ ಬಳಿಕ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಭರ್ಜರಿ ಪೈಪೋಟಿ ಇದ್ದರೆ, ಬಿಜೆಪಿಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ದೊರೆಯುವುದೋ ಇಲ್ಲವೋ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಜಾತಿ ಲೆಕ್ಕಾಚಾರದ ಮೇಲೆ ಎಲ್ಲಾ ಪಕ್ಷಗಳ ಕಣ್ಣಿದೆ.
ವಿಜಯನಗರ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆಯೇ ಎಂಬುದು ಇನ್ನು ಅಂತಿಮವಾಗಿಲ್ಲ. ವಿಜಯನಗರ ಎಂದರೆ ಆನಂದ್ ಸಿಂಗ್ ಎನ್ನುತ್ತಿದ್ದವರಿಗೆ ಈಗ ಬಿಜೆಪಿ ನಾಯಕಿ ರಾಣಿ ಸಂಯುಕ್ತಾ ಹೆಸರು ಕೇಳಿಬರುತ್ತಿದೆ.
2019ರ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಆನಂದ್ ಸಿಂಗ್, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ವಿರುದ್ಧ 30, 125 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯ ಸಮಯದಲ್ಲಿ ಆನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆಯಾಗಿ ಗೆದ್ದಿದ್ದರು, ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದು ಮತ್ತೆ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications