ಪೌಷ್ಠಿಕಾಂಶದ ಕಣಜ ಸಿರಿಧಾನ್ಯಗಳನ್ನು ಬಳಸುವ ವಿಧಾನಗಳು
ಸಿರಿಧಾನ್ಯಗಳ ಕುರಿತು ಅರಿವು ಮೂಡಿಸಲು ಮತ್ತು ಅವುಗಳ ಮಹತ್ವವನ್ನು ಜನರಿಗೆ ತಿಳಿಸಲು ಹಾಗೂ ಸಿರಿಧಾನ್ಯಗಳ ಬೆಳೆಯನ್ನು ಉತ್ತೇಜಿಸಲು 2023ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಲಾಗಿದೆ. ದಿನನಿತ್ಯದ ವಿವಿಧ ಖಾದ್ಯಗಳಲ್ಲಿ ಸಿರಿಧಾನ್ಯಗಳ ಬಳಕೆ ಹೆಚ್ಚಾಗುತ್ತಿದೆ.
ಪ್ರಸ್ತುತ ಸಿರಿಧಾನ್ಯಗಳ ಬಳಕೆ ಮಾತ್ರವಲ್ಲ, ಅವುಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೃಷಿ ಇಲಾಖೆಯ ರೈತಸಿರಿ ಯೋಜನೆ ಮೂಲಕ ಸಿರಿಧಾನ್ಯ ಬೆಳೆಯುವ ರೈತರಿಗೆ ನೆರವು ನೀಡಲಾಗುತ್ತಿದೆ. ಹಿಂದೆ ಈ ಕಿರುಧಾನ್ಯಗಳು ಬಡವರು ಮತ್ತು ಹಳ್ಳಿಯ ಜನರಿಗೆ ಮಾತ್ರ ಎಂಬ ಮಾತಿತ್ತು. ಆದರೆ ಇಂದು ನಗರವಾಸಿಗಳು ಸಿರಿಧಾನ್ಯಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಸಿರಿಧಾನ್ಯಗಳೆಂದರೆ ರಾಗಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ ಮತ್ತು ಜೋಳಗಳ ಸಮೂಹ. ಇವುಗಳಿಗೆ ಸುಮಾರು 5 ಸಾವಿರ ವರ್ಷಗಳ ಬೇಸಾಯದ ಇತಿಹಾಸವಿದೆ. ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆಗಳಾಗುತ್ತಿವೆ.
ಅತೀ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ, ಶುಷ್ಕ, ಒಣ ಪರಿಸ್ಥಿತಿಗಳಲ್ಲಿ, ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಸಹ ಇವುಗಳನ್ನು ಬೆಳೆಯಬಹುದಾಗಿದೆ ಮತ್ತು ಇದಕ್ಕೆ ಕನಿಷ್ಠ ಕೃಷಿ ಪರಿಕರಗಳ ಬಳಕೆ ಸಾಕು. ನಾರು, ಕಬ್ಬಿಣಾಂಶಗಳು, ಕಾರ್ಬೊಹೈಡ್ರೆಟ್‍ಗಳು ಮತ್ತು ಕೊಬ್ಬಿನಾಂಶಗಳು ಬೇರೆ ಧಾನ್ಯಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ.
ಸಿರಿಧಾನ್ಯ ಪೌಷ್ಟಿಕತೆಗಳ ಕಣಜಗಳೇ ಆಗಿವೆ. ದಿನನಿತ್ಯದ ಆಹಾರ ಕ್ರಮದಲ್ಲಿ ಪೌಷ್ಠಿಕಾಂಶದ ಭದ್ರತೆಯನ್ನು ಇವು ಖಾತರಿಪಡಿಸುತ್ತವೆ. ಸದ್ಯ ಸಿರಿಧಾನ್ಯಗಳು ಎಲ್ಲರಿಗೂ ಅಚ್ಚುಮೆಚ್ಚಾಗಿವೆ. ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿ ಧಾನ್ಯಗಳನ್ನು ಬಳಕೆ ಮಾಡುತ್ತಿದ್ದಾರೆ. ಸಿರಿಧಾನ್ಯಗಳಿಂದ ತಯಾರಿಸಲಾದ ಅಡುಗೆಯ ಜೊತೆಗೆ ಚಕ್ಕುಲಿ, ಹಪ್ಪಳ, ಕೊಡಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ ಹೀಗೆ ಹಲವು ಸಿಹಿ ಮತ್ತು ಕುರುಕಲು ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.
ಸಿರಿ ಧಾನ್ಯಗಳನ್ನು ಬಳಸುವ ವಿಧಾನಗಳು; ಪೌಷ್ಠಿಕಾಂಶಗಳ ಸಿರಿಯಾದ ಈ ಸಿರಿಧಾನ್ಯಗಳಿಂದ ಈಗ ಹೋಟೆಲ್‌ಗಳಲ್ಲಿ ಖಾದ್ಯಗಳನ್ನು ತಯಾರಿಸಲಾಗುತ್ತಿದೆ, ಇವು ಜನಪ್ರಿಯವಾಗುತ್ತಿವೆ. ನಗರಗಳು, ಪಟ್ಟಣಗಳು ಮತ್ತು ಮಹಾನಗರಗಳ ಸಾವಯವ ಕೃಷಿಯ (ಆರ್ಗಾನಿಕ್ ಫಾರ್ಮಿಂಗ್) ಅಂಗಡಿಗಳಲ್ಲಿ ಹಲವು ಬಗೆ ಸಿರಿಧಾನ್ಯಗಳು ಸಿಗುತ್ತಿವೆ.
ಅನ್ನ, ರಾಗಿ, ಗೋಧಿ ಅಷ್ಟೇ ತಿಂದು ಗೊತ್ತಿರುವ ಜನರಿಗೆ ಈಗ ಸಿರಿಧಾನ್ಯಗಳನ್ನು ಸವಿಯುವ ಸಂಕ್ರಮಣ ಕಾಲ. ನವಣೆ, ಆರ್ಕ, ಸಾಮೆ, ಊದಲು, ಬರಗು, ಸಜ್ಜೆ, ಕೊರಲು ಹೆಸರೇ ಗೊತ್ತಿಲ್ಲದ ಜನ ಈಗ ಸಿರಿಧಾನ್ಯಗಳ ಖರೀದಿಯಲ್ಲಿ ತೊಡಗಿದ್ದಾರೆ.
ಅನೇಕ ನಗರಗಳಲ್ಲಿ ನಡೆಯುತ್ತಿರುವ ಸಿರಿಧಾನ್ಯ ಮೇಳಗಳಲ್ಲಿ ಜನವೋ ಜನ. ಸಿರಿಧಾನ್ಯ ಅಡುಗೆ ರೆಸಿಪಿ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ. ಸಿರಿಧಾನ್ಯಗಳು ಮಾಲ್‍ಗಳಿಗೂ ಲಗ್ಗೆ ಇಟ್ಟಿವೆ. ಧಾನ್ಯ ಮಾತ್ರವಲ್ಲ, ಹಿಟ್ಟು, ರವೆಗಳೂ ಸಿಗುತ್ತಿವೆ. ಇನ್ನು ಚಕ್ಕುಲಿ, ಹಪ್ಪಳ, ಕೋಡುಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ, ಬರ್ಫಿ ಎಲ್ಲಾ ಬಗೆಯ ಸಿಹಿ ಮತ್ತು ಕುರುಕಲು ತಿಂಡಿಗಳೂ ಸಿರಿಧಾನ್ಯಗಳಲ್ಲಿ ಇಂದು ದೊರಕುತ್ತಿವೆ.
ಒಂದು ಹೊತ್ತಿನ ಊಟಕ್ಕೆ ಅನ್ನದ ಬದಲು ಸಿರಿಧಾನ್ಯ ಬಳಸಿ ಮತ್ತು ವ್ಯತ್ಯಾಸವನ್ನು ಗಮನಿಸಬಹುದು. ಮನೆಯಲ್ಲಿ ದೋಸೆ ಹಿಟ್ಟು ತಯಾರಿಸುವಾಗ ಅಕ್ಕಿ ಬದಲಿಗೆ ಸಿರಿಧಾನ್ಯ ಬಳಸಿ. ಅಥವಾ ಅದನ್ನು ಅರ್ಧ ಕಿರುಧಾನ್ಯ ಮತ್ತು ಅಕ್ಕಿ ಮಿಶ್ರಣದಿಂದ ಪ್ರಯತ್ನಿಸಿ.
ಅಕ್ಕಿಗೆ ಬದಲಾಗಿ ಸಾಕಷ್ಟು ತರಕಾರಿಗಳು ಮತ್ತು ಕಿರುಧಾನ್ಯ ಬಳಸಿ ಪಲಾವ್ ತಯಾರಿಸಿ. ತಾಳೆ ಬೆಲ್ಲ ಅಥವಾ ಬೆಲ್ಲದೊಂದಿಗೆ ರಾಗಿ ಪಾಯಸ ಮಾಡಿ. ಉಪಹಾರಕ್ಕೆ ಓಟ್ಸ್ ಬದಲಿಗೆ ಸಿರಿಧಾನ್ಯ ಪ್ರಯತ್ನಿಸಿ. ಬರ್ಗರ್, ಸೂಪ್‍ಗಳನ್ನು ಸಹ ಸಿರಿಧಾನ್ಯಗಳಿಂದ ತಯಾರಿಸಿ ಸವಿಯಬಹುದು.
-
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಪಾರ್ಕಿಂಗ್ ಮತ್ತು ವರಾಂಡಾ ಯಾವ ದಿಕ್ಕಿನಲ್ಲಿ ಇರಬೇಕು? -
Gas Bill: ಹೋಟೆಲ್ ಬಿಲ್ನಲ್ಲಿ ಗ್ರಾಹಕರಿಗೆ 'ಗ್ಯಾಸ್ ಶುಲ್ಕ' ವಿಧಿಸುವಂತಿಲ್ಲ: ಕೇಂದ್ರದಿಂದ ಖಡಕ್ ಎಚ್ಚರಿಕೆ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?











Click it and Unblock the Notifications