Samsung: ಸ್ಯಾಮ್‌ಸಾಂಗ್ ಪ್ರೀಮಿಯಂ ಫೋನ್ ಮೇಲೆ ಭಾರೀ ರಿಯಾಯಿತಿ: ಬೆಲೆ ನೋಡಿದರೆ ತೊಗೊಳ್ಳೋದು ಗ್ಯಾರಂಟಿ
ಮಾರುಕಟ್ಟೆಗೆ ದಿನ ನಿತ್ಯವೂ ಒಂದಿಲ್ಲಾ ಒಂದು ಸ್ಮಾರ್ಟ್‌ಫೋನ್ ಲಾಂಚ್ ಆಗುತ್ತಲೇ ಇರುತ್ತವೆ. ಈ ಫೋನ್‌ಗಳು ತಮ್ಮ ವಿಶಿಷ್ಠ ಲಕ್ಷಣಗಳಿಂದ ಗ್ರಾಹಕರನ್ನು ಸೆಳೆಯುತ್ತವೆ. ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ದೇಶದ ಕಂಪನಿಗಳು ತಮ್ಮ ಛಾಪು ಮೂಡಿಸಿವೆ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣುವ ಹೆಸರು ಸ್ಯಾಮ್‌ಸಾಂಗ್.
ಸ್ಯಾಮ್‌ಸಾಂಗ್ ಮೊಬೈಲ್ ಲಾಂಚ್ ಆಗುತ್ತಿದೆ ಎಂದರೆ, ಭಾರತೀಯ ಗ್ರಾಹಕ ಎಚ್ಚರಿಕೆಯಿಂದ ನೋಡುತ್ತಾನೆ. ಈ ವೇಳೆ ಗ್ರಾಹಕ, ಅದರ ಫೀಚರ್ಸ್ ಹಾಗೂ ಬೆಲೆಯನ್ನು ನೋಡುತ್ತಾನೆ. ಅಲ್ಲದೆ ಇದರೊಂದಿಗೆ ಆಫರ್ ಏನಾದ್ರೂ ಇದೆಯಾ ಎಂದು ತಿಳಿದುಕೊಳ್ಳುತ್ತಾನೆ. ಈಗ ಸ್ಯಾಮ್‌ಸಾಂಗ್ ತನ್ನ ನೂತನ ಆಫರ್ ಒಂದನ್ನು ಬಿಟ್ಟಿದೆ. ತನ್ನ Samsung Galaxy S23 FE ಬೆಲೆಯನ್ನು ಕಡಿತ ಗೊಳಿಸಿದೆ.

ಭಾರೀ ಡಿಸ್ಕೌಂಟ್
Samsung Galaxy S23 FE ಲುಕ್ ಸಖತ್ ಆಗಿದೆ. ಈ ಫೋನ್ ತೆಗೆದುಕೊಳ್ಳುವ ಪ್ಲ್ಯಾನ್ ನಿಜಕ್ಕೂ ಗ್ರಾಹಕರಿಗೆ ಇದ್ದೇ ಇರುತ್ತದೆ. ಆದರೆ ಈಗ ಕಂಪನಿ ಗ್ರಾಹಕರಿಗೆ ಸಖತ್ ಖುಷಿ ಸುದ್ದಿ ನೀಡಿದೆ. ಈ ಸುದ್ದಿ ನಿಜಕ್ಕೂ ಗ್ರಾಹಕನ ಮುಖದಲ್ಲಿ ಮಂದಹಾಸ ಮೂಡಿಸುವುದು ಗ್ಯಾರಂಟಿ. ಲಾಂಚ್ ಪ್ರೈಸ್ ಗಿಂತಲೂ ಈ ಫೋನ್ ಭಾರೀ ಅಗ್ಗದ ಬೆಲೆಗೆ ಸಿಗುತ್ತಿದೆ. ಬಿಡುಗಡೆ ದರಕ್ಕಿಂತಲೂ ಶೇಕಡಾ 56 ಪ್ರತಿಶತ ಕಡಿಮೆ ಮಾಡಿದೆ.
ಪ್ರೀಮಿಯಂ ಫೋನ್ ಬೆಲೆ ಎಷ್ಟು?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್23 ಎಫ್‌ಇ 45 ಸಾವಿರ ರೂಪಾಯಿ ಕಡಿತಗೊಂಡು ಈಗ ಗ್ರಾಹಕರಿಗೆ 34,999 ರೂಪಾಯಿಗೆ ಸಿಗಲಿದೆ. ಇದು ಸ್ಯಾಮ್‌ಸಾಂಗ್‌ನ ಪ್ರೀಮಿಯಂ ಫೋನ್.
ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಸುಮಾರು 80 ಸಾವಿರ ರೂಪಾಯಿಗೆ ಬಿಡುಗಡೆ ಮಾಡಿತ್ತು. ಆದರೆ, ಈಗ ಈ ಸ್ಮಾರ್ಟ್‌ಫೋನ್ ಅದರ ಬಿಡುಗಡೆಯ ಬೆಲೆಗಿಂತ ಕಡಿಮೆಯಾಗಿದೆ. ಈ ಫೋನ್‌ನ ಜೊತೆಗೆ ನೀವು ಶಕ್ತಿಯುತ ಪ್ರೊಸೆಸರ್ ಮತ್ತು ಉನ್ನತ ದರ್ಜೆಯ ಪ್ರಮುಖ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್23 ಎಫ್‌ಇ ಅನ್ನು ಅಗ್ಗದ ಬೆಲೆಗೆ ಖರೀದಿಸಲು ಈ ಕೊಡುಗೆಯನ್ನು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ನೀಡುತ್ತಿದೆ. ನೀವು ಈಗ Samsung Galaxy S23 FE ಅನ್ನು ಖರೀದಿಸಿದರೆ, ನೀವು ಸುಮಾರು 45 ಸಾವಿರ ರೂಪಾಯಿಗಳ ದೊಡ್ಡ ಉಳಿತಾಯವನ್ನು ಮಾಡಬಹುದು. ಇದರಲ್ಲಿ ಲಭ್ಯವಿರುವ ಆಫರ್‌ಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ.
ಮತ್ತೇನು ಆಫರ್ ನೀಡಲಾಗುತ್ತಿದೆ
Samsung Galaxy S23 FE ಸಾಕಷ್ಟು ಅಗ್ಗವಾಗಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ 79,999 ನಲ್ಲಿ ಇತ್ತು. ಪ್ರಸ್ತುತ ಈ ಫೋನ್‌ನ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಕೊಡುಗೆಯ ನಂತರ, ನೀವು ಅದನ್ನು ನೇರವಾಗಿ ರೂ 34,999 ಗೆ ಖರೀದಿಸಬಹುದು. ಅಂದರೆ ನೀವು ಈ ಸಮಯದಲ್ಲಿ ಅದರ ಖರೀದಿಯಲ್ಲಿ 45000 ರೂಗಳನ್ನು ಉಳಿಸಬಹುದು. ಈ ಪ್ರೀಮಿಯಂ ಫೋನ್‌ನಲ್ಲಿ ಇಷ್ಟು ದೊಡ್ಡ ಕೊಡುಗೆ ನೀಡುತ್ತಿರುವುದು ಇದೇ ಮೊದಲು.
ಇದರ ಜೊತೆಗೆ ಗ್ರಾಹಕರಿಗೆ ಎಕ್ಸ್ ಚೇಂಜ್ ಆಫರ್ ಕೂಡ ನೀಡುತ್ತಿದೆ. Samsung Galaxy S23 FE ಖರೀದಿಯ ಮೇಲೆ ನೀವು ನಿಮ್ಮ ಹಳೆಯ ಫೋನ್ ಅನ್ನು ರೂ 32,800 ವರೆಗೆ ಎಕ್ಸ್ ಚೇಂಜ್ ಮಾಡಿಕೊಳ್ಳಬಹುದು. ಅಂದರೆ, ನೀವು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಮೌಲ್ಯವನ್ನು ಪಡೆದರೆ, ನೀವು ಈ ಪ್ರೀಮಿಯಂ ಫೋನ್ ಅನ್ನು ಕೇವಲ 4 ರಿಂದ 5 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು.
ಇನ್ನು ಫ್ಲಿಪ್ ಕಾರ್ಟ್ ಎಕ್ಸಿಸ್ ಕಾರ್ಡ್ ಹೊಂದಿದವರಿಗೆ, ಶೇಕಡಾ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್‌ಗಳ ಮೇಲೆ 1000 ರೂ.ಗಳ ವರೆಗೂ ಆಫರ್ ನೀಡಲಾಗುತ್ತಿದೆ.












Click it and Unblock the Notifications