Low BP & Heart Attack: ಕಡಿಮೆ ರಕ್ತದೊತ್ತಡ ಲಕ್ಷಣಗಳು, ನಿವಾರಣೆ

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಡಿಮೆ ರಕ್ತದೊತ್ತಡ (Low BP)ದ ಪರಿಣಾಮ ಹೃದಯಾಘಾತ ಆಗಿದೆ ಎಂದು ಪ್ರಾಥಮಿಕ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆ ಸ್ಪಷ್ಟ ಮಾಹಿತಿ ಸಿಗಲಿದೆ. ಕಡಿಮೆ ರಕ್ತದೊತ್ತಡ ಹೃದಯಾಘಾತಕ್ಕೆ ಕಾರಣವಾಗುತ್ತಾ? ಈ ಬಗ್ಗೆ ವೈದ್ಯರು ಹೇಳೋದೇನು? ಲೋ ಬಿಪಿ ನಿಯಂತ್ರಣ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.

ಆರೋಗ್ಯವಂತ ಪುರುಷ ಹಾಗೂ ಮಹಿಳೆಯರಲ್ಲಿ ರಕ್ತದ ಒತ್ತಡವು 120/80 ಮಿಲಿಮೀಟರ್‌ ಇರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಅಲ್ಪ ಬದಲಾವಣೆ ಇರುತ್ತದೆ. ಆದರೆ ರಕ್ತದ ಒತ್ತಡವು 90/60 ಗಿಂತಲೂ ಕಡಿಮೆಯಾದಾಗ ಅದನ್ನು ಕಡಿಮೆ ರಕ್ತದ ಒತ್ತಡ ಎನ್ನುತ್ತೇವೆ.

managing-low-blood-pressure

ಕಡಿಮೆ ರಕ್ತದೊತ್ತಡ (Low BP) ಸಾಮಾನ್ಯವಾಗಿ ಯಾವುದೇ ರೋಗ ಲಕ್ಷಣ ಹೊಂದಿರುವುದಿಲ್ಲ. ಇದು ಎಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುವುದು ಅಸಾಧ್ಯ. 50ನೇ ವಯಸ್ಸಿನ ನಂತರ ಶೇಕಡಾ 5 ರಷ್ಟು ಮಂದಿ ಕಡಿಮೆ ರಕ್ತದೊತ್ತಡದ ಸಮಸ್ಯೆ ಹೊಂದಿರುತ್ತಾರೆ, 70 ವರ್ಷದ ಬಳಿಕ ಶೇಕಡಾ 30ರಷ್ಟು ಮಂದಿಯಲ್ಲಿ ಇದು ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನ ತಿಳಿಸಿದೆ.

ಆದರೂ ಇಂದಿನ ಕಾಲದಲ್ಲಿ ಆಹಾರ ಕ್ರಮ, ಒತ್ತಡದ ಜೀವನ ಶೈಲಿಯಿಂದ ಕಡಿಮೆ ಯುವ ಜನತೆಯಲ್ಲೂ ಕಡಿಮೆ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿರ್ಲಕ್ಷಿಸಿದರೆ ಹೃದಯಾಘಾತ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. "ರಕ್ತದೊತ್ತಡದ ಮಟ್ಟವು ತುಂಬಾ ಕಡಿಮೆಯಾದರೆ, ಪ್ರಮುಖ ಅಂಗಗಳು ರಕ್ತವನ್ನು ತ್ವರಿತವಾಗಿ ಸ್ವೀಕರಿಸುವುದಿಲ್ಲ, ಮತ್ತು ಆಮ್ಲಜನಕವನ್ನು ಒಳಗೊಂಡಂತೆ ಪ್ರಮುಖ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ" ಇದರಿಂದ ಆಘಾತ, ಕೋಮಾ ಮತ್ತು ಸಾವಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ಕಡಿಮೆ ರಕ್ತದೊತ್ತಡದ ಲಕ್ಷಣಗಳು

ತಲೆ ತಿರುಗುವುದು
ಮೂರ್ಛೆ ಹೋಗುವುದು
ವಾಕರಿಕೆ ಅಥವಾ ವಾಂತಿ
ಅಸ್ಪಷ್ಟ ದೃಷ್ಟಿ
ಆಯಾಸ ಅಥವಾ ದೌರ್ಬಲ್ಯ
ವೇಗವಾಗಿ ಉಸಿರಾಡುವುದು

ಇದು ಕಡಿಮೆ ರಕ್ತದೊತ್ತಡದ ಸಾಮಾನ್ಯ ಲಕ್ಷಣಗಳಾಗಿವೆ. ಇದನ್ನು ನೀವು ನಿರ್ಲಕ್ಷ್ಯ ಮಾಡಿದಲ್ಲಿ ಮುಂದೆ ಸಮಸ್ಯೆ ಗಂಭೀರವಾಗುವ ಅಪಾಯ ಇದೆ.

ಹೈಪೊಟೆನ್ಷನ್ (Low BP) ಚಿಕಿತ್ಸೆ ಏನು?

"ಸಾಮಾನ್ಯಕ್ಕಿಂತ ಕಡಿಮೆಯಿರುವ [ರಕ್ತದೊತ್ತಡ] ಸಂಖ್ಯೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೆ ಚಿಕಿತ್ಸೆಯ ಅಗತ್ಯವಿಲ್ಲ" ಎಂದು ವೈದ್ಯರು ಹೇಳುತ್ತಾರೆ. "ಕಡಿಮೆ ರಕ್ತದೊತ್ತಡಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಇದ್ದಲ್ಲಿ ಅಥವಾ ಕಡಿಮೆ ರಕ್ತದೊತ್ತಡವು ಔಷಧಿಗಳ ಮಿತಿಮೀರಿದ, ವ್ಯವಸ್ಥಿತ ಸೋಂಕು, ಆಘಾತ ಅಥವಾ ದೇಹದ ಅಂಗ ವೈಫಲ್ಯದ ಪರಿಣಾಮವಾಗಿದ್ದರೆ ಚಿಕಿತ್ಸೆಯ ಅಗತ್ಯವಿದೆ" ಎನ್ನಲಾಗಿದೆ.

ಕಡಿಮೆ ರಕ್ತದೊತ್ತಡಕ್ಕೆ ಚಿಕಿತ್ಸೆಗಳು:

ಹೆಚ್ಚು ನೀರು ಕುಡಿಯುವುದು
ನೀರಿನ ಅಂಶ ಹೆಚ್ಚಿರುವ ದ್ರವ, ಆಹಾರ ಸೇವಿಸುವುದು. ದೇಹ ನಿರ್ಜಲೀಕರಣ ಆಗುವುದನ್ನು ತಪ್ಪಿಸಬೇಕು.
ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು.
ಚೆನ್ನಾಗಿ ನಿದ್ದೆ ಮಾಡುವುದು.
ರಕ್ತದೊತ್ತಡ ಹೆಚ್ಚಿಸಲು ಔಷಧಿ ತೆಗೆದುಕೊಳ್ಳುವುದು
ರಕ್ತಹೀನತೆ ಅಥವಾ ಥೈರಾಯ್ಡ್ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯುವುದು
ಕಂಪ್ರೆಷನ್ ಸಾಕ್ಸ್ ಅಥವಾ ಸ್ಟಾಕಿಂಗ್ಸ್ ಧರಿಸುವುದು
ಮಸಾಲೆ ಹೆಚ್ಚಿರುವ ಆಹಾರ ಸೇವನೆ ಕಡಿಮೆ ಮಾಡುವುದು.
ಪದೇ ಪದೇ ರಕ್ತದೊತ್ತಡ ಆದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+