ಊರಿನಿಂದ ಬರುವಾಗ 100 ರೂಪಾಯಿ ತಂದಿದ್ದವನ ಕೈಯಲ್ಲಿ ಈಗ 200 ಕೋಟಿ
ಬೆಂಗಳೂರು, ಜನವರಿ 04: ಸ್ವಯಂ ಆಗಿ ಬೆಳೆದವರ ಹೆಚ್ಚು ಸ್ಪೂರ್ತಿದಾಯಕವಾಗಿರುತ್ತವೆ. ಏಕೆಂದರೆ ಅಂತಹವರ ಜೀವನ ಕಥೆಯು ಮತ್ತೊಬ್ಬರಿಗೆ ಸ್ಫೂರ್ತಿಯಾಗುತ್ತದೆ. ಅಂತಹ ಒಂದು ಕಥೆಯು ಮಲಯ್ ದೇಬನಾಥ್ ಅವರದ್ದು.
ತನ್ನ ಶಾಲಾ ಶಿಕ್ಷಣದ ನಂತರ ಉತ್ತರ ಬಂಗಾಳದ ಒಂದು ಸಣ್ಣ ಹಳ್ಳಿಯಿಂದ ಬಂದ ಅವರು ತನ್ನ ಪರಿಶ್ರಮ ಮತ್ತು ದೃಢತೆಯಿಂದ ಕೇವಲ 100 ರೂಪಾಯಿಯಿಂದ 200 ಕೋಟಿ ವ್ಯಾಪಾರ ಸಾಮ್ರಾಜ್ಯವನ್ನು ನಿರ್ಮಿಸಿದರು.

ಮಲಯ್ ದೇಬನಾಥ್, ಅವರ ಅಕ್ಕ ಮತ್ತು ಅವರ ಇಬ್ಬರು ಕಿರಿಯ ಸಹೋದರರು ಇನ್ನೂ ಶಾಲೆಯಲ್ಲಿ ಓದುತ್ತಿದ್ದರು. ಅವರ ತಂದೆಗೆ ಸರಿಯಾದ ಕೆಲಸವಿಲ್ಲದೆ ಅವರ ಕುಟುಂಬವು ಕಡುಕಷ್ಟದ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಿತ್ತು.
ದೇಬನಾಥ್ ಅವರು ಶಾಲೆ ಓದುತ್ತಲೇ ಹಳ್ಳಿಯಲ್ಲಿ ಅವರ ಕುಟುಂಬವು ನಡೆಸುತ್ತಿದ್ದ ಸಣ್ಣ ಚಹಾ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು. ಅವರು ತನ್ನ 12 ನೇ ತರಗತಿ ಡಿಪ್ಲೊಮಾವನ್ನು ಗಳಿಸುವವರೆಗೂ ಇದು ಮೂರು ವರ್ಷಗಳ ಕಾಲ ಮುಂದುವರೆಯಿತು. ಬಳಿಕ ಅವರು ತನ್ನ ಅಧ್ಯಯನವನ್ನು ಬಿಟ್ಟು ತನ್ನ ತಾಯಿ ಕೊಟ್ಟ 100 ರೂಪಾಯಿ ಜೊತೆ ದೆಹಲಿಗೆ ಹೊರಟನು.
ದೆಹಲಿಯಲ್ಲಿ ಅವರು ಕ್ಯಾಟರರ್‌ಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಕೆಲಸ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಟೇಬಲ್ ಪಾಲಿಶ್ ಮಾಡುವುದಾಗಿತ್ತು. ಅವರ ಬಹುಪಾಲು ಸ್ನೇಹಿತರು ಒತ್ತಡದಿಂದ ಕೆಲಸದಿಂದ ತೊರೆದರು. ಆದರೆ ದೇಬನಾಥ್ ಅವರು ಮಾಲೀಕರ ಪ್ರೀತಿಯನ್ನು ಪಡೆದರು. ಒಂದು ವರ್ಷದ ನಂತರ ಅವರ ವೇತನವು 500 ರೂ.ನಿಂದ 3,000 ರೂ.ಗೆ ಏರಿತು. ದೇಬನಾಥ್ ತಮ್ಮ ವೇತನವನ್ನು ಮಾಸಿಕ ಮನೆಗೆ ಕಳುಹಿಸಲು 18 ಗಂಟೆಗಳ ಕೆಲಸವನ್ನು ಮಾಡುತ್ತಿದ್ದರು.
ಬಳಿಕ ಹೋಟೆಲ್ ಕೆಲಸ ಬಿಟ್ಟು ಅವರು ವೃತ್ತಿಜೀವನವನ್ನು ಬದಲಾಯಿಸಲು ನಿರ್ಧರಿಸಿದರು. ನಂತರ ದೆಹಲಿ ಮೂಲದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಶುರುಮಾಡಿದರು. ಅಲ್ಲದೆ, ಅವರು ಹೋಟೆಲ್ ನಿರ್ವಹಣೆಯಲ್ಲಿ ITDC (ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಕೋರ್ಸ್ ಅನ್ನು ಪೂರ್ಣಗೊಳಿಸಿದರು.
ಈವೆಂಟ್ ಕಂಪನಿಯಲ್ಲಿ ಕೆಲಸ ಮಾಡುವಾಗ ಅವರು ಹೆಚ್ಚು ಪ್ರಸಿದ್ಧಿ ಪಡೆದರು. ಹೊಸ ಕಾಂಟ್ಯಾಕ್ಟ್‌ಗಳನ್ನು ಪಡೆದರು. ಇದು ನಂತರ ಅವರ ಸ್ವಂತ ಅಡುಗೆ ಕಂಪನಿಯನ್ನು ಪ್ರಾರಂಭಿಸಲು ಸಹಾಯ ಮಾಡಿತು. ಅದೇ ದೇಬನಾಥ್ ಕ್ಯಾಟರರ್ಸ್ ಮತ್ತು ಡೆಕೊರೇಟರ್ಸ್ ಆಗಿ ಇದು ಯಶಸ್ಸನ್ನು ಸಾಧಿಸಿತು.
ಪ್ರಸ್ತುತ, ಅವರು ದೆಹಲಿ, ಪುಣೆ, ಜೈಪುರ, ಅಜ್ಮೀರ್ ಮತ್ತು ಗ್ವಾಲಿಯರ್ ಸೇರಿದಂತೆ 35 ಕ್ಕೂ ಹೆಚ್ಚು ಸೇನಾ ಮೆಸ್ ಸೌಲಭ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಯಶಸ್ವಿ ವ್ಯಾಪಾರದಿಂದಾಗಿ ಉತ್ತರ ಬಂಗಾಳದ ಚಹಾ ತೋಟಗಳು ಸೇರಿದಂತೆ ಸುಮಾರು 200 ಕೋಟಿ ರೂ. ಮಾರುಕಟ್ಟೆ ಮೌಲ್ಯವಿದೆ. ಹೀಗೆ ಅವರ ಅಚಲವಾದ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದಾಗಿ ಅವರ ಜೀವನವು ಯಶಸ್ಸಿನ ಉತ್ತುಂಗಕ್ಕೆ ಏರಿತು.












Click it and Unblock the Notifications