Get Updates
Get notified of breaking news, exclusive insights, and must-see stories!

By Election Exit Poll: ಮಧ್ಯಪ್ರದೇಶದಲ್ಲಿ ಬಿಜೆಪಿ ರಾಜ್ಯಭಾರ ಸುಗಮ

ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭೆಯ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 16-18 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಟೈಮ್ಸ್ ನೌ- ಸಿ ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ. ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್ 11 ಸೀಟುಗಳಲ್ಲಿ ಮಾತ್ರವೇ ಜಯ ಸಾಧಿಸಲಿದೆ.

ಮಧ್ಯಪ್ರದೇಶದಲ್ಲಿ 28 ಕ್ಷೇತ್ರಗಳಿಗೆ ಮಂಗಳವಾರ ಉಪ ಚುನಾವಣೆ ನಡೆದಿತ್ತು. ಚುನಾವಣೆಯ ಫಲಿತಾಂಶ ನವೆಂಬರ್ 10ರಂದು ಪ್ರಕಟವಾಗಲಿದೆ.

ಬಿಜೆಪಿಯು ಉಪ ಚುನಾವಣೆಯಲ್ಲಿ ಶೇ 46ರಷ್ಟು ಮತ ಹಂಚಿಕೆಯನ್ನು ಪಡೆದುಕೊಳ್ಳಲಿದೆ ಎಂದೂ ಎಕ್ಸಿಟ್ ಪೋಲ್ ಹೇಳಿದೆ. ಕಾಂಗ್ರೆಸ್ ಶೇ 43ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. ಶೇ ಆರರಷ್ಟು ಮತಗಳಷ್ಟು ಪಡೆಯಲಿರುವ ಬಹುಜನ ಸಮಾಜ ಪಕ್ಷವು ಒಂದು ಸೀಟುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಟೈಮ್ಸ್ ನೌ ಸಮೀಕ್ಷೆ ತಿಳಿಸಿದೆ.

 Madhya Pradesh By Election Exit Poll 2020: Times Now-C Voter Project BJP 16-18 Seats

ಕಾಂಗ್ರೆಸ್‌ನ ಕಮಲ್ ನಾಥ್ ನೇತೃತ್ವದ ಸರ್ಕಾರವನ್ನು ಉರುಳಿಸಿದ್ದ 25 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮೂಲಕ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅದರ ಜತೆಗೆ ಮೂವರು ಹಾಲಿ ಶಾಸಕರು ಮೃತಪಟ್ಟಿದ್ದರು. ಇದರಿಂದ ಮಧ್ಯಪ್ರದೇಶದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳು ತೆರವಾಗಿದ್ದವು.

ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ 107 ಶಾಸಕರನ್ನು ಹೊಂದಿದ್ದು, 230 ಸದಸ್ಯರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಬೇಕಾದ 116ರ ಮ್ಯಾಜಿಕ್ ಸಂಖ್ಯೆ ತಲುಪಲು ಇನ್ನೂ 9 ಸೀಟುಗಳು ಬೇಕಾಗಲಿವೆ. ಕಾಂಗ್ರೆಸ್‌ನ ಸಂಖ್ಯೆ 87ಕ್ಕೆ ಕುಸಿದಿದೆ. ಈಗ ಸಮೀಕ್ಷೆ ಹೇಳಿರುವಂತೆ ಬಿಜೆಪಿ 16-18 ಸೀಟುಗಳನ್ನು ಪಡೆದರೆ ಸರ್ಕಾರ ಸುಭದ್ರವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+