ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ

|
Google Oneindia Kannada News

ಪಿಡಿಪಿ ಅಧ್ಯಕ್ಷೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ. ಜಮ್ಮು ಮತ್ತು ಕಾಶ್ಮೀರದ 13ನೇ ಮುಖ್ಯಮಂತ್ರಿಯಾಗಿ ನಿರ್ವಹಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳಾ ಮುಖ್ಯಮಂತ್ರಿಗಳಲ್ಲಿ ಮೆಹಬೂಬಾ ಮಫ್ತಿ ಎರಡನೆಯವರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೇ 22, 1959 ರಂದು ಜನಿಸಿದ ಮೆಹಬೂಬಾ ಮಫ್ತಿ ಅವರಿಗೆ 59 ವರ್ಷ. ತಂದೆ ಮಫ್ತಿ ಮೊಹಮ್ಮದ್ ಸಯೀದ್. ಶಾಸಕರಾಗಿ, ಸಂಸದರಾಗಿ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಮೆಹಬೂಬಾ ಮಫ್ತಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಸುಶಿಕ್ಷಿತ ರಾಜಕಾರಣಿ ಅರವಿಂದ್ ಕೇಜ್ರಿವಾಲ್ ಪರಿಚಯಸುಶಿಕ್ಷಿತ ರಾಜಕಾರಣಿ ಅರವಿಂದ್ ಕೇಜ್ರಿವಾಲ್ ಪರಿಚಯ

ಮೆಹಬೂಬಾ ಮಫ್ತಿ ಅವರು ತಂದೆಯ ಸಂಬಂಧಿಕರಾದ ಜಾವೇದ್ ಇಕ್ಬಾಲ್ ಅವರನ್ನು ವಿವಾಹವಾದರು. ಈ ವಿವಾಹ ವಿಚ್ಚೇಧನದಿಂದ ಅಂತ್ಯಗೊಂಡಿತು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಒಬ್ಬರು ಲಂಡನ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬರು ಹಿಂದಿ ಚಿತ್ರರಂಗದಲ್ಲಿದ್ದಾರೆ.

ಮೆಹಬೂಬಾ ಮಫ್ತಿ ಅವರು 4 ಏಪ್ರಿಲ್ 2016 ರಿಂದ 19 ಜೂನ್ 2018ರ ತನಕ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಜೆಪಿ ಪಿಡಿಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಸಂಸದರಾಗಿ ಆಯ್ಕೆಯಾಗಿದ್ದರು

ಸಂಸದರಾಗಿ ಆಯ್ಕೆಯಾಗಿದ್ದರು

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಅಧ್ಯಕ್ಷೆಯಾಗಿರುವ ಮೆಹಬೂಬಾ ಮಫ್ತಿ ಅನಂತನಾಗ್ ಕ್ಷೇತ್ರದಿಂದ 16ನೇ ಲೋಕಸಭೆಗೆ ಆಯ್ಕೆಯಾಗಿದ್ದರು. 2004 ರಿಂದ 2009ರ ತನಕ ಲೋಕಸಭಾ ಸದಸ್ಯರಾಗಿದ್ದರು. 2009ರ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧಿಸಿರಲಿಲ್ಲ. 1996ರಲ್ಲಿ ಜಮ್ಮು ಮತ್ತು ಕಾಶ್ಮೀರದ ಚುನಾವಣೆ ನಡೆದಾಗ ಮೆಹಬೂಬಾ ಮಫ್ತಿ ಅವರು ಪ್ರಮುಖ ಅಭ್ಯರ್ಥಿಯಾಗಿದ್ದರು. ಬಿಜವಾರ ಕ್ಷೇತ್ರದಿಂದ ಅವರು ಕಾಂಗ್ರೆಸ್ ಟಿಕೆಟ್ ಮೂಲಕ ಗೆದ್ದು ಬಂದಿದ್ದರು.

ಪ್ರತಿಪಕ್ಷದ ನಾಯಕಿಯಾಗಿ ಕೆಲಸ

ಪ್ರತಿಪಕ್ಷದ ನಾಯಕಿಯಾಗಿ ಕೆಲಸ

ಕಾಂಗ್ರೆಸ್‌ ಟಿಕೆಟ್ ಮೂಲಕ ಗೆದ್ದ ಬಳಿಕ ಮೆಹಬೂಬಾ ಮಫ್ತಿ ಜಮ್ಮು ಮತ್ತು ಕಾಶ್ಮೀರದ ಪ್ರತಿಪಕ್ಷದ ನಾಯಕಿಯಾದರು. ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಸರ್ಕಾರದ ವಿರುದ್ಧ ಹಲವು ಹೋರಾಟಗಳನ್ನು ಯಶಸ್ವಿಯಾಗಿ ಮಾಡಿದರು.

ಪಿಡಿಪಿ ಪಕ್ಷ ಸ್ಥಾಪನೆ

ಪಿಡಿಪಿ ಪಕ್ಷ ಸ್ಥಾಪನೆ

ಜಮ್ಮು ಮತ್ತು ಕಾಶ್ಮೀರದಿಂದ ಬಂದು ದೇಶಾದ್ಯಂತ ಪರಿಚಿತರಾದ ಕೆಲವು ರಾಜಕಾರಣಿಗಳಲ್ಲಿ ಮೆಹಬೂಬಾ ಮಫ್ತಿ ಅವರು ಒಬ್ಬರು. 1999ರಲ್ಲಿ ಮಫ್ತಿ ಮೊಹಮ್ಮದ್ ಸಯೀದ್ ಕಾಂಗ್ರೆಸ್‌ನಿಂದ ಹೊರಬಂದು ಪಿಡಿಪಿ ಪಕ್ಷ ಸ್ಥಾಪನೆ ಮಾಡಿದರು. ಆಗ ಮೆಹಬೂಬಾ ಮಫ್ತಿ ಅವರು ಪಕ್ಷದ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು.

ಮುಖ್ಯಮಂತ್ರಿಯಾದರು

ಮುಖ್ಯಮಂತ್ರಿಯಾದರು

2016ರಲ್ಲಿ ಮಫ್ತಿ ಮೊಹಮ್ಮದ್ ಸಯೀದ್ ಅವರ ನಿಧನದ ಬಳಿಕ ಪಿಡಿಪಿಯನ್ನು ಮುನ್ನಡೆಸುವ ಹೊಣೆಯನ್ನು ಮೆಹಬೂಬಾ ಮಫ್ತಿ ಹೊತ್ತುಕೊಂಡರು. ಬಿಜೆಪಿ ಬೆಂಬಲ ಪಡೆದು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರವನ್ನು ರಚನೆ ಮಾಡಿದರು, ಮುಖ್ಯಮಂತ್ರಿಯಾದರು.

2016ರ ಜೂನ್ 25ರಂದು ನಡೆದ ಅನಂತನಾಗ್ ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕಾಶ್ಮೀರ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಇವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

English summary
Mehabooba Mefti Peoples Democratic Party (PDP) leader and Former Jammu and Kashmir Chief Minister. Mehabooba Mefti first women Chief Minister of the Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X