• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಮಾತ್ರವಲ್ಲ, ಬೇರೆ ಪಕ್ಷದವರಿಗೂ ಮೋದಿಯೇ ಪ್ರಧಾನಿಯಾಗಬೇಕೆಂಬ ಆಸೆ!

|

ನವದೆಹಲಿ, ಮೇ 21: ಚುನಾವಣೆ ಬಳಿಕ ಯಾರನ್ನು ಮುಂದಿನ ಪ್ರಧಾನಿಯನ್ನಾಗಿ ಬಯಸುತ್ತೀರಾ? ಈ ಪ್ರಶ್ನೆಗೆ ಒಂದೊಂದು ಪಕ್ಷದ ಬೆಂಬಲಿಗರಿಂದ ಒಂದೊಂದು ರೀತಿಯ ಉತ್ತರ ಬರಬಹುದು.

ಬಿಜೆಪಿಯೇತರ ಸರ್ಕಾರ ರಚಿಸುವ ಉತ್ಸಾಹದಲ್ಲಿರುವ ವಿರೋಧಪಕ್ಷಗಳ ಮೈತ್ರಿಕೂಟದಲ್ಲಿ ಹತ್ತಾರು ಹೆಸರುಗಳಿವೆ. ಇಲ್ಲಿನ ಎಲ್ಲ ಪಕ್ಷಗಳ ನಾಯಕರೂ ತಾವೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ಟಿಡಿಪಿಯ ಚಂದ್ರಬಾಬು ನಾಯ್ಡು, ಎನ್‌ಸಿಪಿಯ ಶರದ್ ಪವಾರ್, ಎಸ್‌ಪಿಯ ಅಖಿಲೇಶ್ ಯಾದವ್, ಬಿಎಸ್‌ಪಿ ಮಾಯಾವತಿ, ಟಿಎಂಸಿಯ ಮಮತಾ ಬ್ಯಾನರ್ಜಿ, ಕಾಂಗ್ರೆಸ್‌ನ ರಾಹುಲ್ ಗಾಂಧಿ- ಹೀಗೆ ಅನೇಕ ಹೆಸರುಗಳು ಚಾಲ್ತಿಯಲ್ಲಿವೆ.

ಎರಡನೇ ಸಲಕ್ಕೂ ಮೋದಿಗೆ ಗಾದಿ ಸಿಕ್ಕರೆ ಮೊದಲ ಅವಧಿಯ ತಪ್ಪುಗಳು ಸರಿ ಹೋಗಬಹುದೇ?

ಬಿಜೆಪಿ ನೇತೃತ್ವದ ಎನ್‌ಡಿಎಯಲ್ಲಿ ನರೇಂದ್ರ ಮೋದಿ ಅವರ ಹೆಸರೇ ಮುಂಚೂಣಿಯಲ್ಲಿದೆ. ನಿತಿನ್ ಗಡ್ಕರಿ ಮತ್ತು ಮಿತ್ರಪಕ್ಷ ಜೆಡಿಯುದ ನಿತೀಶ್ ಕುಮಾರ್ ಅವರ ಹೆಸರು ಅಲ್ಲಲ್ಲಿ ಹೇಳಿಬಂದರೂ ಅದು ನರೇಂದ್ರ ಮೋದಿ ಅವರ ಪ್ರಭಾವಳಿಯಲ್ಲಿ ನಿಲ್ಲಲಾರದು ಎನ್ನುವುದು ಹೆಚ್ಚಿನವರ ಅಭಿಪ್ರಾಯ.

ಮುಖ್ಯವಾಗಿ ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ಮತ ಯಾಚನೆ ಮಾಡಿರುವುದೇ ಮೋದಿ ಅವರ ಹೆಸರಿನಲ್ಲಿ. ಮೋದಿ ಅವರು ಮತ್ತೆ ಪ್ರಧಾನಿಯಾಗಲು ತಮಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿಗಳು ಬಹಿರಂಗವಾಗಿಯೇ ಮತ ಕೇಳಿದ್ದಾರೆ. ಅನೇಕ ಕಡೆ 'ಮೋದಿ ಅವರಿಗೇ ಮತ ಕೊಡಿ' ಎಂದಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಜನರ ಮನಸ್ಸಿನಲ್ಲಿ ಆಳವಾಗಿ ಇದೆ. ಈ ಕಾರಣಕ್ಕಾಗಿ ಅವರನ್ನು ಭಾವನಾತ್ಮಕವಾಗಿ ಸೆಳೆದುಕೊಳ್ಳಲು ಈ ತಂತ್ರ ನೆರವಾಗಿದೆ ಎಂದು ಪರಿಗಣಿಸಬಹುದು. ಆದರೆ, ಪ್ರಧಾನಿ ಸ್ಥಾನಕ್ಕೆ ಮೋದಿ ಅವರೇ ಸೂಕ್ತ ಎನ್ನುವುದು ಬಿಜೆಪಿ ಮಾತ್ರವಲ್ಲ, ಅದರ ಮಿತ್ರಪಕ್ಷಗಳ ಭಾವನೆಯೂ ಹೌದು.

ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲು? ಚಿಂತಾಮಣಿ-5ಡಾಟ್ಸ್ ಸಮೀಕ್ಷೆ

ಸಿಎಸ್‌ಡಿಎಸ್-ಲೋಕನೀತಿಗಳು ನಡೆಸಿರುವ ಸಮೀಕ್ಷೆ ಪ್ರಕಾರ ಬಿಜೆಪಿಯಲ್ಲದೆ ಇತರೆ ಪಕ್ಷಗಳೂ ಪ್ರಧಾನಿಯನ್ನಾಗಿ ಮೋದಿ ಅವರನ್ನೇ ಮತ್ತೆ ಕಾಣಲು ಬಯಸಿದೆ ಎಂದು 'ದಿ ಹಿಂದೂ' ವರದಿ ತಿಳಿಸಿದೆ.

ಪ್ರಧಾನಿ ಹುದ್ದೆಗೆ ಯಾರನ್ನು ಆಯ್ಕೆ ಮಾಡುತ್ತೀರಿ?

ಪ್ರಧಾನಿ ಹುದ್ದೆಗೆ ಯಾರನ್ನು ಆಯ್ಕೆ ಮಾಡುತ್ತೀರಿ?

ಮುಂದಿನ ಪ್ರಧಾನಿ ಯಾರಾಗಬೇಕು ಎಂದು ಬಯಸುತ್ತೀರಿ ಎಂಬ ಪ್ರಶ್ನೆಗೆ ಮೋದಿ ಅವರೇ ಪ್ರಧಾನಿಯಾಗುವುದನ್ನು ಇಚ್ಛಿಸುತ್ತೀರಾ ಎಂಬ ಆಯ್ಕೆಗೆ, ಬಿಜೆಪಿ ಮಾತ್ರವಲ್ಲ ಇತರೆ ವಿರೋಧಪಕ್ಷಗಳ ಮತದಾರರು ಕೂಡ ಸಮ್ಮತಿ ಸೂಚಿಸಿದ್ದಾರೆ. ಶೇ 87ರಷ್ಟು ಬಿಜೆಪಿ ಮತದಾರರು ಮೋದಿ ಹೆಸರನ್ನು ಸೂಚಿಸಿದ್ದಾರೆ. ಬಿಜೆಪಿ ಮಿತ್ರಪಕ್ಷಗಳ ಮತದಾರರು ಶೇ 73ರಷ್ಟು ಬೆಂಬಲ ನೀಡಿದ್ದಾರೆ. ಇನ್ನು ಶೇ 7ರಷ್ಟು ಕಾಂಗ್ರೆಸ್‌ನ ಮತದಾರರು ಕೂಡ ಮೋದಿಗೆ ಜೈ ಎಂದಿದ್ದಾರೆ. ಬಿಎಸ್‌ಪಿ, ಎಡಪಕ್ಷ, ಕಾಂಗ್ರೆಸ್ ಮಿತ್ರಪಕ್ಷಗಳು ಹಾಗೂ ಇತರೆ ಪಕ್ಷಗಳ ಮತದಾರರು ಕೂಡ ಮೋದಿ ಕಡೆಗೆ ಹೆಚ್ಚಿನ ಒಲವು ತೋರಿಸಿದ್ದಾರೆ. 2014ರ ಚುನಾವಣೆಗೆ ಹೋಲಿಸಿದರೆ ಈ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.

ಮೋದಿ ಹೆಸರಿಗಾಗಿ ಮತದಾನ

ಮೋದಿ ಹೆಸರಿಗಾಗಿ ಮತದಾನ

ಈ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿಯೇ ನಡೆದಿದೆ ಎಂಬುದನ್ನು ಸಮೀಕ್ಷೆಯ ಫಲಿತಾಂಶಗಳು ತಿಳಿಸುತ್ತವೆ. ಇದರ ಅರ್ಥ ರಾಜಕೀಯ ಪಕ್ಷ ಅಥವಾ ಸ್ಥಳೀಯ ಅಭ್ಯರ್ಥಿಗಳು ಮುಖ್ಯವಾಗಿಲ್ಲ ಎಂದಲ್ಲ. ಶೇ 46ರಷ್ಟು ಮಂದಿ ಪಕ್ಷ ಹಾಗೂ ಶೇ 31ರಷ್ಟು ಜನರು ಅಭ್ಯರ್ಥಿಯನ್ನು ಪ್ರಧಾನವಾಗಿರಿಸಿಕೊಂಡಿದ್ದಾರೆ. ಆದರೆ, ಹೆಚ್ಚಿನ ಮತದಾರರು ಚುನಾವಣೆಯಲ್ಲಿ ನಾಯಕತ್ವ ವಹಿಸಿದ ವ್ಯಕ್ತಿಗಳ ಆಯ್ಕೆ ವಿಚಾರಕ್ಕೆ ಬಂದಾಗ ಮೋದಿ ಅವರೆಡೆಗೇ ಒಲವು ಪ್ರದರ್ಶಿಸಿದ್ದಾರೆ.

ಬಿಜೆಪಿಯ ಪ್ರತಿ ಮೂವರಲ್ಲಿ ಒಬ್ಬರು (ಶೇ 29) ಹಾಗೂ ಬಿಜೆಪಿ ಮಿತ್ರಪಕ್ಷಗಳ ನಾಲ್ವರಲ್ಲಿ ಒಬ್ಬರು (ಶೇ 25) ಮತದಾರರು ಬಿಜೆಪಿ ಅಥವಾ ಸ್ಥಳೀಯ ಅಭ್ಯರ್ಥಿಯ ಬದಲು ಮೋದಿ ಅವರನ್ನು ನೋಡಿ ಮತ ಚಲಾಯಿಸಿದ್ದಾರೆ. ಶೇ 44ರಷ್ಟು ಕಾಂಗ್ರೆಸ್‌ನ ಮಿತ್ರಪಕ್ಷಗಳ ಮತದಾರರಿಗೆ ಅಭ್ಯರ್ಥಿಯೇ ಹೆಚ್ಚು ಮುಖ್ಯವಾಗಿದ್ದಾರೆ. ಪಕ್ಷ ಆಧಾರಿತ ಮತದಾನಕ್ಕೆ ಎಡಪಕ್ಷಗಳಲ್ಲಿ (ಶೇ 55) ಮತ್ತು ಕಾಂಗ್ರೆಸ್ (ಶೇ 54) ಮತದಾರರು ಆದ್ಯತೆ ನೀಡಿದ್ದಾರೆ.

ಇಂಡಿಯಾ ಟುಡೇ ಸಮೀಕ್ಷೆ: HMT ಕ್ಷೇತ್ರದಲ್ಲಿ ಜೆಡಿಎಸ್ ಗೆ ಕೈಕೊಟ್ಟ ಮಂಡ್ಯ

ಪಕ್ಷ, ಅಭ್ಯರ್ಥಿ ಆಧಾರಿತ ಮತದಾನ

ಪಕ್ಷ, ಅಭ್ಯರ್ಥಿ ಆಧಾರಿತ ಮತದಾನ

ಒಡಿಶಾ, ತಮಿಳುನಾಡು, ಮೇಘಾಲಯ ಮತ್ತು ಮಣಿಪುರದಲ್ಲಿ ನಡೆದ ರಾಜ್ಯವಾರು ವಿಶ್ಲೇಷಣೆಗಳ ಪ್ರಕಾರ ಜನರ ಮತದಾನದ ಆಯ್ಕೆಗೆ ಅನುಗುಣವಾಗಿ ಸ್ಥಳೀಯ ಅಭ್ಯರ್ಥಿಗಳನ್ನು ನಿರ್ಧರಿಸಲಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪಶ್ಚಿಮ ಬಂಗಾಳ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಪಕ್ಷ ಆಧಾರಿತ ಮತದಾನ ಹೆಚ್ಚಾಗಿ ನಡೆದಿದೆ.

ಹಿಂದಿ ಭಾಷಿಕರು ಹೆಚ್ಚಿರುವ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಹರಿಯಾಣ, ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಗಮನದಲ್ಲಿಟ್ಟುಕೊಂಡೇ ಮತದಾನ ಮಾಡಲು ಆದ್ಯತೆ ನೀಡಲಾಗಿದೆ.

ಮೋದಿ ಅಥವಾ ರಾಹುಲ್- ಯಾರಿಗೆ ಒಲವು?

ಮೋದಿ ಅಥವಾ ರಾಹುಲ್- ಯಾರಿಗೆ ಒಲವು?

ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಮತದಾರರು 2014ರಲ್ಲಿ ರಾಹುಲ್ ಗಾಂಧಿಗೆ ಹೆಚ್ಚು ಆದ್ಯತೆ ನೀಡಿದ್ದರು. ಆದರೆ, ಈ ಬಾರಿ ಅದರ ಚಿತ್ರಣ ಬದಲಾಗಿದೆ. ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅವರ ನಡುವೆ ಯಾರನ್ನು ಆಯ್ಕೆ ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಮತದಾರರು ನೀಡಿರುವ ಉತ್ತರ ಅಚ್ಚರಿ ಮೂಡಿಸುತ್ತದೆ.

ಒಟ್ಟಾರೆ ಮತದಾರರಲ್ಲಿ ಮೋದಿ ಅವರ ಕುರಿತಾದ ಒಲವು ಹೆಚ್ಚಾಗಿದೆ. ಆದರೆ, ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ರಾಹುಲ್ ಗಾಂಧಿ ಅವರ ಹೆಸರನ್ನು ಪ್ರತಿಪಾದಿಸಿದ್ದಾರೆ. ಇದೇ ರೀತಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಕೂಡ ಮೋದಿ ಅವರನ್ನು ಆಯ್ಕೆ ಮಾಡಿದ್ದಾರೆ.

ಮೋದಿ ಮೇಲೆ ಪ್ರೀತಿ, ಸಂಸದರ ಮೇಲೆ ಸಿಟ್ಟು

ಮೋದಿ ಮೇಲೆ ಪ್ರೀತಿ, ಸಂಸದರ ಮೇಲೆ ಸಿಟ್ಟು

ಮೋದಿ ಅವರನ್ನು ಎನ್‌ಡಿಎ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಸ್ಥಳೀಯ ಹಾಗೂ ಕ್ಷೇತ್ರಮಟ್ಟದ ಬಿಜೆಪಿ ವಿರೋಧಿ ಭಾವನೆಯನ್ನು ತಗ್ಗಿಸಲು ಪಕ್ಷಕ್ಕೆ ಸಾಕಷ್ಟು ನೆರವಾಗಿದೆ.

ಹಾಲಿ ಬಿಜೆಪಿ ಸಂಸದರ ವಿರುದ್ಧ ಬಿಜೆಪಿ ಮತದಾರರು ಅಸಮಾಧಾನ ಹೊಂದಿರುವಲ್ಲಿ ಮೋದಿ ಅವರ ಪ್ರಭಾವಳಿ ನಿಚ್ಚಳವಾಗಿದೆ. ಇಂತಹ ಕ್ಷೇತ್ರಗಳಲ್ಲಿ ಶೇ 43ರಷ್ಟು ಬಿಜೆಪಿ ಮತದಾರರು ತಾವು ಪಕ್ಷ ಅಥವಾ ಅಭ್ಯರ್ಥಿಯನ್ನು ನೋಡಿಲ್ಲ, ಬದಲಾಗಿ ಪ್ರಧಾನಿ ಮೋದಿ ಅವರನ್ನು ಪರಿಗಣಿಸಿ ಮತ ಹಾಕಿದ್ದೇವೆ ಎಂದಿದ್ದಾರೆ.

ಹಿಂದಿ ಭಾಷಿಕರಿಗೆ ಪ್ರಧಾನಿ ಅಭ್ಯರ್ಥಿಯೇ ಮುಖ್ಯ

ಹಿಂದಿ ಭಾಷಿಕರಿಗೆ ಪ್ರಧಾನಿ ಅಭ್ಯರ್ಥಿಯೇ ಮುಖ್ಯ

ಈ ಸಮೀಕ್ಷೆಯಲ್ಲಿ ಪಕ್ಷ ಅಥವಾ ಅಭ್ಯರ್ಥಿಗಿಂತ ಪ್ರಧಾನಿ ಮೋದಿ ಅವರ ಅಭ್ಯರ್ಥಿತನದ ಆಧಾರದಲ್ಲಿ ಶೇ 36ರಷ್ಟು ಬಿಜೆಪಿ ಮತದಾರರು ಮಾತ್ರ ತಮ್ಮ ಸಂಸದರ ಕಾರ್ಯವೈಖರಿ ಬಗ್ಗೆ ಸಮಾಧಾನ ಹೊಂದಿದ್ದಾರೆ. ತಮ್ಮ ಸಂಸದರ ಬಗ್ಗೆ ಅಸಮಾಧಾನ ಹೊಂದಿರುವ ಮತದಾರರಲ್ಲಿ ಬಿಜೆಪಿಗೆ ಮತ ಚಲಾಯಿಸಲು ಮೋದಿ ಅವರೇ ಕಾರಣ ಎಂದು ಶೇ 53ರಷ್ಟು ಮಂದಿ ಹೇಳಿದ್ದಾರೆ.

ಇದೇ ರೀತಿಯ ಪರಿಣಾಮವು ಬಿಜೆಪಿ ಸಂಸದರ ವಿರುದ್ಧ ಪಕ್ಷದ ಮತದಾರರು ಅಸಮಾಧಾನ ಹೊಂದಿರುವ ಹಾಗೂ ಆ ಸಂಸದರಿಗೆ ಈ ಬಾರಿ ಟಿಕೆಟ್ ನೀಡದೆಯೇ ಇರುವ ಕ್ಷೇತ್ರಗಳಲ್ಲಿ ಕಾಣಿಸುವುದಿಲ್ಲ. ಹಿಂದಿ ಭಾಷಿಕರಿರುವ ಪ್ರದೇಶಗಳಲ್ಲಿನ ಹಾಲಿ ಬಿಜೆಪಿ ಸಂಸದರ ಕಾರ್ಯವೈಖರಿ ಬಗ್ಗೆ ಅತೃಪ್ತಿ ಹೊಂದಿರುವಲ್ಲಿ ಪ್ರಧಾನಿ ಅಭ್ಯರ್ಥಿಯೇ ಅತಿ ಮುಖ್ಯವಾದ ಆದ್ಯತೆಯಾಗಿ ಬಿಜೆಪಿ ಮತದಾರರಿಗೆ ಕಂಡುಬಂದಿದೆ. ಇತ್ತೀಚೆಗೆ ಬಿಜೆಪಿ ಸರ್ಕಾರ ಉರುಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿಯೂ ಇದೇ ಅಭಿಪ್ರಾಯವಿದೆ.

English summary
Lok Sabha Elections 2019: CSDS-Lokniti pre-poll survey most of the voters preferred vote on PM candidature rather than Party or local candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X