ಲೋಕಸಭೆ ಫಲಿತಾಂಶ : ಒನ್ಇಂಡಿಯಾ ಕನ್ನಡದಲ್ಲಿ ಲೈವ್ ಅಪ್ಡೇಟ್ಸ್

ಎಕ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆ ಒಂದು ರೀತಿಯ ಫಲಿತಾಂಶವನ್ನು ನೀಡಿದ್ದರೂ, ಮೇ 23ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಯಾರಿಗೆ ಎಷ್ಟು ಕ್ಷೇತ್ರ ಸಿಗಲಿವೆ, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂಬ ಬಗ್ಗೆ ದೇಶದ ಜನತೆಗೆ, ಅದರಲ್ಲೂ ಕನ್ನಡಿಗರಿಗೆ ಕುತೂಹಲ ಇದ್ದೇ ಇದೆ.

ಲೋಕಸಭೆ ಫಲಿತಾಂಶವೆಂದರೆ ಬರೀ ಅಂಕಿಸಂಖ್ಯೆಗಳಲ್ಲ, ಅಲ್ಲಿ ಹಲವಾರು ರಾಜಕಾರಣಿಗಳ, ಪಕ್ಷಗಳ, ಅವರಿಗೆ ಮತ ಹಾಕಿದವರ ಮತಪ್ರಭುಗಳ ಪ್ರತಿಷ್ಠೆಯೂ ಅಡಕವಾಗಿದೆ. ಮುಂದಿನ ಐದು ವರ್ಷಗಳ ಕಾಲ ಭಾರತ ದೇಶದ ಭವಿಷ್ಯದ ಕುರಿತು ಮತದಾರ ಷರಾ ಬರೆದಿರುವ ಸಂಕೇತವೂ ಆಗಿದೆ. ದೇಶ ಸುಭಿಕ್ಷೆಯಲ್ಲಿ ಇರಲಿ ಎಂಬುದೇ ಜನರ ಆಶಯವೂ ಆಗಿರುತ್ತದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಇಡೀ ಭಾರತದಲ್ಲಿ ಯಾವ ಪಕ್ಷ ತನ್ನ ಧ್ವಜವನ್ನು ಫಟಫಟಿಸಲಿದೆ ಎಂಬ ಕುತೂಹಲ ಒಂದೆಡೆಯಾದರೆ, ಕರ್ನಾಟಕದಲ್ಲಿ ಈ ಫಲಿತಾಂಶ ಏನು ಪರಿಣಾಮ, ಪ್ರಭಾವ ಬೀರಲಿದೆ ಎಂಬ ಕುತೂಹಲವೂ ಮನೆಮಾಡಿದೆ. ಇದು ಸದ್ಯಕ್ಕೆ ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರದ ಏಳುಬೀಳಿನ ಪ್ರಶ್ನೆಯೂ ಆಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

Lok Sabha Election Results 2019 : Live updates on Oneindia Kannada

ಒನ್ಇಂಡಿಯಾ ಕನ್ನಡದಲ್ಲಿ ಲೈವ್ ಅಪ್ಡೇಟ್ಸ್

ಇಡೀ ವಿಶ್ವವೇ ಕಾತುರದಿಂದ ಕಾದಿರುವ ಈ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಳು, ಮುನ್ನಡೆ-ಹಿನ್ನಡೆಯ ವಿವರಗಳು, ಸೋಲು-ಗೆಲುವಿನ ಲೆಕ್ಕಾಚಾರಗಳು, ವಿಶ್ಲೇಷಣೆಗಳು, ಎಲ್ಲಾ ರಾಜ್ಯಗಳಲ್ಲಿ ಗೆದ್ದವರ, ಸೋತವರ ಪಟ್ಟಿ, ಕ್ಷೇತ್ರವಾರು ಮಾಹಿತಿಯನ್ನು, ತಾಜಾತಾಜಾ ಸುದ್ದಿಗಳನ್ನು ಕನ್ನಡಿಗರ ಎದಿರು ಒನ್ಇಂಡಿಯಾ ಕನ್ನಡ ನೀಡಲಿದೆ.

ಈ ಚುನಾವಣೆಯಲ್ಲಿ ಹಲವಾರು ರಾಜಕಾರಣಿಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ, ಪ್ರಚಾರದುದ್ದಕ್ಕೂ ವಿರೋಧಿಗಳ ಮೇಲೆ ಟೀಕಾಪ್ರಹಾರ ಮಾಡಿದ್ದಾರೆ. ಅವರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮೇ 23ರಂದು 8 ಗಂಟೆಯಾಗುತ್ತಿದ್ದಂತೆ ಎಲ್ಲರ ಬಂಡವಾಳಗಳು ಮತಪೆಟ್ಟಿಗೆ ತೆರೆಯುವ ಮೂಲಕ ಬಯಲಾಗಲಿದೆ. ಯಾರು ಮೀಸೆ ತಿರುವಲಿದ್ದಾರೆ, ಯಾವ ಜಟ್ಟಿಯ ಮೀಸೆ ಮಣ್ಣಾಗಲಿದೆ? ಈ ತಾಣವನ್ನು ನೋಡುತ್ತಿರಿ.

ಈ ಎಲ್ಲ ವಿವರಗಳು ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಲಭ್ಯವಾಗಲಿದೆ. ಓದುಗರು ತಮ್ಮ ಅಭಿಪ್ರಾಯವನ್ನು ವೆಬ್ ತಾಣದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಂಡಿಸಬಹುದು. ಜೊತೆಗೆ, ಫೋಟೋ ಗ್ಯಾಲರಿ, ಲೈವ್ ವಿಡಿಯೋಗಳು ಕೂಡ ಹರಿದುಬರಲಿವೆ, ಓದುಗರಿಗೆ, ವೀಕ್ಷಕರಿಗೆ ಸಮಗ್ರ ಮಾಹಿತಿ ನೀಡಲಿವೆ.

ಫಲಿತಾಂಶ ಹೊರಬೀಳುತ್ತಿದ್ದಂತೆ ವಿಶ್ಲೇಷಣೆಗಳು, ತಜ್ಞರ ಅಭಿಪ್ರಾಯಗಳು, ಓದುಗರ, ರಾಜಕಾರಣಿಗಳ ಅನಿಸಿಕೆಗಳು, ಟೀಕೆ-ಟಿಪ್ಪಣಿಗಳು ಕೂಡ ಒನ್ಇಂಡಿಯಾ ಕನ್ನಡ ಜಾಲತಾಣದಲ್ಲಿ ಪ್ರಕಟವಾಗಲಿವೆ. ಯಾವುದನ್ನೂ ಮಿಸ್ ಮಾಡಿಕೊಳ್ಳಬೇಡಿ, ಸೋಷಿಯಲ್ ಮೀಡಿಯಾದಲ್ಲಿ ಎಲ್ಲವನ್ನೂ ಹಂಚಿಕೊಳ್ಳಿ. ನಮ್ಮ ಯಶಸ್ಸಿನಲ್ಲಿ ನೀವೂ ಪಾಲುದಾರರಾಗಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+