ಯುಕೆ ಚೈನೀಸ್ ಸೂಪ್‌ನಲ್ಲಿ ಜೀವಂತ ಇಲಿ ಪತ್ತೆ: ವಿಡಿಯೋ ವೈರಲ್
ಚೈನೀಸ್ ಸೂಪ್‌ನಲ್ಲಿ ಜೀವಂತ ಇಲಿಯನ್ನು ಕಂಡು ಯುಕೆ ನಿವಾಸಿ ಶಾಕ್ ಆದ ಘಟನೆ ನಡೆದಿದೆ. ಸ್ಯಾಮ್ ಹೇವರ್ಡ್ ಎಂಬ ಗ್ರಾಹಕ ಚೈನೀಸ್ ಟೇಕ್‌ಅವೇ ಸೂಪ್‌ನಲ್ಲಿ ಇಲಿಯನ್ನು ಕಂಡು ದಿಗ್ಭ್ರಮೆಗೊಂಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಶ್ರೂಮ್ ನೂಡಲ್ ಸೂಪ್ ಅನ್ನು ಸ್ಯಾಮ್ ಹೇವರ್ಡ್ ತನ್ನ ಗೆಳತಿ ಮನೆಗೆ ಹೋದಾಗ ಆರ್ಡರ್ ಮಾಡಲಾಗಿತ್ತು. ಈ ವೇಳೆ ಇಬ್ಬರು ತನ್ನ ಭೋಜನವನ್ನು ಆನಂದಿಸಲು ಪ್ರಾರಂಭಿಸಿದ್ದಾರೆ. ಇದೇ ಸಮಯದಲ್ಲಿ ಸೂಪ್‌ನಲ್ಲಿ ದೊಡ್ಡದಾಗಿ ಎನೋ ಕಂಡು ಬಂದಿದೆ. ಆರಂಭದಲ್ಲಿ ಅದನ್ನು ಅಣಬೆ ಎಂದು ತಿಳಿದಿದ್ದ ಅವರು ಹತ್ತಿರದಿಂದ ನೋಡಿದಾಗ ಅದು ಇಲಿ ಎಂದು ಪತ್ತೆ ಮಾಡಿದ್ದಾರೆ.

ಸ್ವಲ್ಪ ಹೊತ್ತು ಇಲಿ ಸೂಪ್‌ನಲ್ಲಿ ಒದ್ದಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸೂಕ್ಷ್ಮವಾಗಿ ನೋಡಿದಾಗ ಅದು ಬಾಲವನ್ನು ಹೊಂದಿದ್ದು ಗಮನಿಸಿದ್ದಾರೆ.
ಈ ದೃಶ್ಯದಿಂದ ದಿಗ್ಭ್ರಮೆಗೊಂಡ ಹೇವರ್ಡ್ ದೃಶ್ಯವನ್ನು ಸೆರೆಹಿಡಿದಿದ್ದಾರೆ. ತಕ್ಷಣವೇ ತನ್ನ ಗೆಳತಿ ಆಹಾರವನ್ನು ಆರ್ಡರ್ ಮಾಡಿದ ರೆಸ್ಟೋರೆಂಟ್ ಅನ್ನು ಸಂಪರ್ಕಿಸಿದ್ದಾಳೆ.
"ನಾನು ಆಹಾರವನ್ನು ತಿನ್ನಲು ಪ್ರಾರಂಭಿಸಿದೆ. ಸುಮಾರು ಮುಕ್ಕಾಲು ಭಾಗ ಆಹಾರವನ್ನು ನಾನು ತಿಂದಿದ್ದೆ. ನಾನು ಅದನ್ನು 'ದೊಡ್ಡ ಅಣಬೆ, ಅಲ್ಲವೇ?' ಅಂದುಕೊಂಡಿದ್ದೆ. ಅದನ್ನು ಪತ್ತೆ ಮಾಡಲು ನಾನೇನೂ ಪ್ರಾಣಿ ಪರಿಣಿತನಲ್ಲ, ಆದರೆ ಅದು ಜೀವಂತವಾಗಿತ್ತು. ಅದರ ಬಾಲವನ್ನು ನಾನು ಮೊದಲು ನೋಡಿದೆ. ಇದನ್ನು ಕಂಡು ನಾನು ಶಾಕ್ ಆದೆನು" ಎಂದು ಸ್ಯಾಮ್ ಹೇವರ್ಡ್ ಹೇಳಿಕೊಂಡಿದ್ದಾರೆ.
ಆದರೆ ರೆಸ್ಟೋರೆಂಟ್ ಘಟನೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ. ಹಣವನ್ನು ವಾಪಸ್ ನೀಡಲೂ ನಿರಾಕರಿಸಿತು. ಹೇವಾರ್ಡ್‌ನ ಗೆಳತಿ ಎಮಿಲಿ ನಗದು ರೂಪದಲ್ಲಿ ಪಾವತಿಸಿದ್ದರಿಂದ ಮತ್ತು ರಸೀದಿಯನ್ನು ಉಳಿಸಿಕೊಳ್ಳದ ಕಾರಣ, ಅವರು ತಮ್ಮ ಖರೀದಿಯ ಪುರಾವೆಯನ್ನು ನೀಡಲು ಸಾಧ್ಯವಾಗಲಿಲ್ಲ. ಎರಡು ದಶಕಗಳಿಂದ ರೆಸ್ಟೋರೆಂಟ್‌ನ ನಿಷ್ಠಾವಂತ ಗ್ರಾಹಕರಾಗಿದ್ದ ಹೇವಾರ್ಡ್ ಅವರ ಪ್ರತಿಕ್ರಿಯೆಯ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು.
ನನಗೆ ಬೇಕಾಗಿರುವುದು ಅವರು ಕ್ಷಮೆಯಾಚಿಸುವುದು ಮಾತ್ರ. ಆದರೆ ಅದನ್ನು ಅವರು ಮಾಡಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
ಚಿಕನ್‌ನಲ್ಲಿ ಸತ್ತ ಇಲಿ ಮಾಂಸ ಪತ್ತೆ
ಇತ್ತೀಚೆಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧಗಳ ಆಡಳಿತ (ಎಫ್‌ಡಿಎ) ಇಲಾಖೆ ಪಾಪಾ ಪಂಚೋ ದಾ ಡಾಬಾವನ್ನು (Papa Pancho Da Dhaba) ತಪಾಸಣೆ ನಡೆಸಿ ಬಂದ್ ಮಾಡಲು ಆದೇಶ ನೀಡಿತ್ತು. ಇದಕ್ಕೆ ಕಾರಣ ಚಿಕನ್‌ನಲ್ಲಿ ಸತ್ತ ಇಲಿ ಪತ್ತೆಯಾಗಿರುವುದು. ಇತ್ತೀಚೆಗೆ ಅನುರಾಗ್ ಸಿಂಗ್ ಮತ್ತು ಅವರ ಸ್ನೇಹಿತ ಅಮೀನ್ ಅವರು ಪಂಜಾಬಿ ಆಹಾರಕ್ಕಾಗಿ ಬಾಂದ್ರಾದ ರೆಸ್ಟೋರೆಂಟ್‌ಗೆ ಹೋಗಿದ್ದರು. ಇಬ್ಬರು ಎರಡು ಭಕ್ಷ್ಯಗಳು ಆರ್ಡರ್ ಮಾಡಿದ್ದರು. ಒಂದು ಮಟನ್ ಮತ್ತೊಂದು ಚಿಕನ್ ಆಧಾರಿತ ಭಕ್ಷ್ಯವನ್ನು ಆರ್ಡರ್ ಮಾಡಿದ್ದರು.
ಸ್ವಲ್ಪ ವಿಚಿತ್ರವಾದ ರುಚಿಯನ್ನು ಕೋಳಿ ಮಾಂಸ ಹೊಂದಿತ್ತು. ಆದರೆ ಕೋಳಿ ಕರಿಯಲ್ಲಿನ ಮಾಂಸದಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ಇದನ್ನು ಕಂಡು ಅನುರಾಗ್ ಬಾಣಸಿಗರ ಮೇಲೆ ಆಕ್ರೋಶಗೊಂಡರು. ಆದರೂ ರೆಸ್ಟೋರೆಂಟ್ ಮಾಲೀಕ ತಪ್ಪನ್ನು ಮರೆ ಮಾಚಲು ಪ್ರಯತ್ನಿಸಿದಾಗ ಅನುರಾಗ್ ದೂರು ನೀಡಲು ಮುಂದಾಗಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications